Homeಮುಖಪುಟಸಂಸತ್ತಿನಲ್ಲಿ ಸಾಮೂಹಿಕ ಅಮಾನತು: ಹತ್ತಿಕ್ಕಲ್ಪಟ್ಟ 33 ಕೋಟಿಗೂ ಅಧಿಕ ಜನತೆಯ ಧ್ವನಿ

ಸಂಸತ್ತಿನಲ್ಲಿ ಸಾಮೂಹಿಕ ಅಮಾನತು: ಹತ್ತಿಕ್ಕಲ್ಪಟ್ಟ 33 ಕೋಟಿಗೂ ಅಧಿಕ ಜನತೆಯ ಧ್ವನಿ

- Advertisement -
- Advertisement -

ಸಂಸತ್ತಿನ ಚಳಿಗಾಲದ ಅಧಿವೇಶನದ ವೇಳೆ ಡಿ.13ರಂದು ನಡೆದ ಸಂಸತ್ತಿನ ಭದ್ರತಾ ಲೋಪದ ಕುರಿತು ಗೃಹ ಸಚಿವರ ಹೇಳಿಕೆಗೆ ಆಗ್ರಹಿಸಿ ಪ್ರತಿಭಟಿಸಿದ್ದ 146 ಸಂಸದರನ್ನು ಅಮಾನತುಗೊಳಿಸಲಾಗಿದೆ. ಭಾರತದ ಸಂಸತ್ತಿನ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ನಡೆದ ಈ ಬೆಳವಣಿಗೆ ದೇಶಾದ್ಯಂತ ಕೋಟ್ಯಾಂತರ ಮತದಾರರ ಧ್ವನಿಯನ್ನು ಹತ್ತಿಕ್ಕಿದೆ ಮತ್ತು ಕೆಲ ಪಕ್ಷಗಳು ಸಂಸತ್ತಿನಲ್ಲಿ ಸಂಸದರಿಲ್ಲದೆ ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿದೆ. ಉಭಯ ಸದನಗಳಲ್ಲಿ ನಡೆದ ಸಂಸದರ ಅಮಾನತಿನಿಂದ  33 ಕೋಟಿಗೂ ಅಧಿಕ ಮಂದಿ ತಮ್ಮ ಧ್ವನಿಯನ್ನು ಕಳೆದುಕೊಂಡಿದ್ದಾರೆ ಎನ್ನುವುದನ್ನು ಅಂಕಿ-ಅಂಶಗಳು ಬಹಿರಂಗಪಡಿಸಿದೆ.

ಗೃಹಸಚಿವರು ಉತ್ತರ ನೀಡುವಂತೆ ಪಟ್ಟು ಹಿಡಿದ ಕಾರಣಕ್ಕೆ ಸಂಸದರನ್ನು ಅಮಾನತುಗೊಳಿಸಿದಾಗ, ಉತ್ತರದಾಯಿತ್ವದ ಪ್ರಶ್ನೆ ಮೂಡುತ್ತದೆ ಮತ್ತು ಪ್ರಜಾಪ್ರಭುತ್ವದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸಂಸದರು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ತಮ್ಮ ಕ್ಷೇತ್ರದ ಮತದಾರರ ಧ್ವನಿಯಾಗಿದ್ದಾರೆ ಮತ್ತು ಜನರನ್ನು  ಪ್ರತಿಬಿಂಬಿಸುತ್ತಾರೆ.

ಲೋಕಸಭೆಯಲ್ಲಿ ಒಟ್ಟು  99 ಸಂಸದರನ್ನು ಅಮಾನತು ಮಾಡಲಾಗಿದೆ. ಇದರಿಂದಾಗಿ  99 ಕ್ಷೇತ್ರಗಳ 15,30,89,870 (15.3 ಕೋಟಿ) ಮತದಾರರು ಲೋಕಸಭೆಯಲ್ಲಿ ಧ್ವನಿಯನ್ನು ಕಳೆದುಕೊಂಡಂತಾಗಿದೆ.

ಲೋಕಸಭೆಯಿಂದ ಅಮಾನತುಗೊಂಡ ಸಂಸದರು ಮತ್ತು ಅವರು ಪ್ರತಿನಿಧಿಸುವ ಮತದಾರರ ಸಂಖ್ಯೆ

 

 

 

ರಾಜ್ಯಸಭೆಯಲ್ಲೂ ಇದೇ ರೀತಿಯಾಗಿ ಪರಿಸ್ಥಿತಿ ಉಂಟಾಗಿದೆ. ರಾಜ್ಯಸಭೆಯಿಂದ 45 ಸಂಸದರನ್ನು ಅಮಾನತು ಮಾಡಲಾಗಿದೆ. ಈ ಮೂಲಕ ರಾಜ್ಯಸಭೆಯಲ್ಲಿ ಕೋಟ್ಯಾಂತರ ಮತದಾರರ ಧ್ವನಿಯನ್ನು ಹತ್ತಿಕ್ಕಲಾಗಿದೆ. ಈ ಲೆಕ್ಕಾಚಾರದ ಮೂಲಕ 18,43,83,909 (18.43 ಕೋಟಿ) ಮತದಾರರ ಧ್ವನಿಯನ್ನು ರಾಜ್ಯಸಭೆಯಿಂದ ಹತ್ತಿಕ್ಕಲಾಗಿದೆ.

ರಾಜ್ಯಸಭೆಯಿಂದ ಅಮಾನತುಗೊಂಡ ಸಂಸದರು ಮತ್ತು ಪ್ರತಿನಿಧಿಸುವ ಜನರ ಸಂಖ್ಯೆ

 

 

ಸಂಸತ್ತಿನ ಉಳಿದ ಅವಧಿಗೆ ಸಂಸದರನ್ನು ಅಮಾನತುಗೊಳಿಸಿರುವುದು ಸಂಸತ್ತಿನ ಉಭಯ ಸದನಗಳಲ್ಲಿ ಪ್ರಮುಖ ವಿರೋಧ ಪಕ್ಷಗಳ ಉಪಸ್ಥಿತಿಯ ಮೇಲೆ ತೀವ್ರ ಪರಿಣಾಮ ಬೀರಿದೆ. ಲೋಕಸಭೆಯಲ್ಲಿ ಕಾಂಗ್ರೆಸ್‌ನ ಬಲ 10%ಕ್ಕಿಂತ ಕಡಿಮೆಯಾಗಿದೆ. ಇತರ ಪಕ್ಷಗಳಾದ ಡಿಎಂಕೆ, ಟಿಎಂಸಿ ಮತ್ತು ಜೆಡಿಯು ತಮ್ಮ ಬಲ 60%ಕ್ಕಿಂತ ಕಡಿಮೆಯಾಗಿದೆ. ಕೆಲವು ಸಣ್ಣ ಪಕ್ಷಗಳು ಸಂಸತ್ತಿನ ತಮ್ಮ ಪ್ರತಿನಿಧಿಗಳನ್ನು ಸಂಪೂರ್ಣವಾಗಿ ಕಳೆದುಕೊಂಡಿವೆ.

ರಾಜ್ಯಸಭೆಯಲ್ಲೂ ಪ್ರಮುಖ ವಿರೋಧ ಪಕ್ಷಗಳ ಬಲ ಕ್ಷೀಣಿಸಿದೆ. ಕಾಂಗ್ರೆಸ್ ತನ್ನ ಒಟ್ಟು ಬಲದಲ್ಲಿ ನಾಲ್ಕರಷ್ಟು ಕುಸಿದಿದೆ. ಟಿಎಂಸಿ ಮತ್ತು ಡಿಎಂಕೆ ಒಟ್ಟು ಸಂಸದರಲ್ಲಿ ಅರ್ಧದಷ್ಟು ಸಂಸದರನ್ನು ಕಳೆದುಕೊಂಡಿದೆ. ಈ ಸಂಸದರು ಕೇಳಿರುವ  71 ಪ್ರಶ್ನೆಗಳನ್ನು ಅಳಿಸಲಾಗಿದೆ ಅಥವಾ ರದ್ದುಗೊಳಿಸಲಾಗಿದೆ ಎಂದು ಸಿವಿಲ್‌ ಸೊಸೈಟಿ ವಾಚ್‌ಡಾಗ್ ಸಂಸ್ಥೆ ಮಾಧ್ಯಮ್ ತಿಳಿಸಿದೆ.

ಲೋಕಸಭೆಯಲ್ಲಿ ಒಟ್ಟು 27 ಪ್ರಶ್ನೆಗಳನ್ನು ಅಳಿಸಲಾಗಿದೆ, ರಾಜ್ಯಸಭೆಯಲ್ಲಿ 44 ಪ್ರಶ್ನೆಗಳನ್ನು ರದ್ದುಗೊಳಿಸಲಾಗಿದೆ. ಈ ಪ್ರಶ್ನೆಗಳಿಗೆ ಉತ್ತರಿಸದೆ ಸರ್ಕಾರ ತಪ್ಪಿಸಿಕೊಂಡಿದೆ. ಸಂಸದರು ತಮ್ಮ ಅಮಾನತಿಗೆ ಮುಂಚೆಯೇ ಈ ಪ್ರಶ್ನೆಗಳ ನೋಟಿಸ್‌ಗಳನ್ನು ಸಲ್ಲಿಸಿದ್ದಾರೆ ಎಂಬುದನ್ನು ಗಮನಿಸಬೇಕಿದೆ.

ಮುಖ್ಯವಾಗಿ ಸಂಸದರು ಈ ಪ್ರಶ್ನೆಗಳನ್ನು ತಮಗಾಗಿ ಕೇಳುವುದಿಲ್ಲ. ಅವರು ಈ ಪ್ರಶ್ನೆಗಳನ್ನು ಮತದಾರರಿಗಾಗಿ, ಮತದಾರರ ಪರವಾಗಿ ಕೇಳುತ್ತಾರೆ. ಈ ಪ್ರಶ್ನೆಗಳಿಗೆ ಪ್ರತಿಕ್ರಿಯೆಯಾಗಿ ನೀಡಲಾದ ಮಾಹಿತಿಯು ಸಾರ್ವಜನಿಕ ಮಾಹಿತಿಯಾಗಿದೆ ಮತ್ತು ಸಂಸದರ ಖಾಸಗಿ ಬಳಕೆಗಾಗಿ ಅಲ್ಲ. ಪ್ರಶ್ನೆಗಳನ್ನು ಅಳಿಸುವುದು ಅಥವಾ ರದ್ದುಗೊಳಿಸುವುದರಿಂದ ಜನರು ಈ ಮಾಹಿತಿಯನ್ನು ಪಡೆಯುವುದರಿಂದ ವಂಚಿತರಾಗುತ್ತಾರೆ.

ಇದನ್ನು ಓದಿ: ಚುನಾವಣಾ ಆಯುಕ್ತರ ನೇಮಕಾತಿ ಕುರಿತ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ರೋಹಿತ್ ವೇಮುಲಾ ಕಾಯ್ದೆ’ ಜಾರಿ: ಕೆ.ಸಿ ವೇಣುಗೋಪಾಲ್

0
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ಮತ್ತು ಕೋಮು ದೌರ್ಜನ್ಯ ತಡೆಯಲು 'ರೋಹಿತ್ ವೇಮುಲಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭರವಸೆ ನೀಡಿದ್ದಾರೆ. ಸಾಮಾಜಿಕ ಮತ್ತು...