ಗುರುವಾರ ಬೆಳಿಗ್ಗೆ, 16 ವರ್ಷದ ದಲಿತ ಯುವತಿಯೊಬ್ಬಳನ್ನು ಒಬ್ಬ ಅಪ್ರಾಪ್ತ ವಯಸ್ಕ ಸೇರಿದಂತೆ ಇಬ್ಬರು ಅತ್ಯಾಚಾರ ಮಾಡಿದ್ದಾರೆ. ಆರೋಪಿಗಳು ಇಬ್ಬರೂ ಸಿಕ್ಕಿಬಿದ್ದಿದ್ದಾರೆ.
ಹುಡುಗಿಯ ಕುಟುಂಬದ ಪ್ರಕಾರ, “ಆಕೆಯ ತಂದೆ ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ತಾಯಿಯನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಅವರು ತಮ್ಮ ಮೂವರು ಮಕ್ಕಳಿಗೆ ಮನೆಯಲ್ಲಿಯೇ ಇರಬೇಕೆಂದು ಹೇಳಿದ್ದರು. ಒಂದೂವರೆ ಗಂಟೆ ನಂತರ, ಅವರು ಹಿಂತಿರುಗದಿದ್ದಾಗ, ಹುಡುಗಿ ತನ್ನ ಮನೆಯಿಂದ ಸುಮಾರು ಒಂದು ಕಿ.ಮೀ ದೂರದಲ್ಲಿರುವ ಆಸ್ಪತ್ರೆಗೆ ಹೋಗಲು ನಿರ್ಧರಿಸಿದಳು. ಬಾಲಕಿ ಆಸ್ಪತ್ರೆಗೆ ಹೋಗುತ್ತಿದ್ದವಳು ಕತ್ತಲೆಗೆ ಹೆದರಿ ಮನೆಗೆ ಮರಳಲು ಪ್ರಾರಂಭಿಸಿದಳು. ಹಿಂದಿರುಗುವಾಗ, ಅರಣ್ಯ ಇಲಾಖೆಯ ಅತಿಥಿಗೃಹವಿದ್ದು, ಅಲ್ಲಿ ಇಬ್ಬರು ಆರೋಪಿಗಳು ನಿರ್ಜನ ರಸ್ತೆಯಲ್ಲಿ ಓಡಾಡುತ್ತಿದ್ದರು. ಅವರು ಬಾಲಕಿಯನ್ನು ಬಲವಂತಪಡಿಸಿದರು. ಆಕೆ ಅದನ್ನು ವಿರೋಧಿಸಿದಾಗ ಇಟ್ಟಿಗೆಯಿಂದ ಹೊಡೆಯಲು ಪ್ರಯತ್ನಿಸಿದರು. ಆದಾಗ್ಯೂ, ಅವರು ಅವಳನ್ನು ತಮ್ಮ ಬೆಲ್ಟ್‌ಗಳಿಂದ ಹೊಡೆದರು. ಅವರು ಅವಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಮುಂಜಾನೆ 3 ರ ಸುಮಾರಿಗೆ ಅವರು ಅವಳನ್ನು ಬಿಡುತ್ತಾರೆ. ಮರುದಿನ, ಯುವತಿ ಈ ಘಟನೆಯನ್ನು ತನ್ನ ತಾಯಿಗೆ ವಿವರಿಸಿದ ನಂತರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ” ಎಂದು ಜಲಾನ್ ಎಸ್‌ಪಿ ಯಶ್ ವೀರ್ ಸಿಂಗ್ ದಿ ಇಂಡಿಯನ್ ಎಕ್ಸ್ ಪ್ರೆಸ್‌ಗೆ ತಿಳಿಸಿದರು.
ಇದನ್ನೂ ಓದಿ: ಉತ್ತರ ಪ್ರದೇಶ: ಅಧಿಕಾರಿಗಳ ಎದುರೇ ಗುಂಡು ಹಾರಿಸಿ ಹತ್ಯೆಗೈದ ಬಿಜೆಪಿ ಶಾಸಕನ ಆಪ್ತ!
ಪೊಲೀಸರ ಪ್ರಕಾರ, ಆರೋಪಿಗಳಲ್ಲಿ ಒಬ್ಬ ಇನ್ನೊಬ್ಬನ ಹೆಸರನ್ನು ಕರೆದಿದ್ದರಿಂದ ಅವರು ಪ್ರಕರಣವನ್ನು ಭೇದಿಸಲು ಸಾಧ್ಯವಾಯಿತು. ಅದು ಯುವತಿಗೆ ನೆನಪಿದೆ. “ನಾವು ಶೀಘ್ರದಲ್ಲೇ ಫೇಸ್‌ಬುಕ್‌ನಲ್ಲಿ ಆ ಹೆಸರಿನ ಎಲ್ಲರನ್ನೂ ಹುಡುಕಿದೆವು. ಆಗ ಯುವತಿ ತನ್ನ ಫೇಸ್‌ಬುಕ್ ಪ್ರೊಫೈಲ್‌ನಿಂದ ಆರೋಪಿಗಳಲ್ಲಿ ಒಬ್ಬನನ್ನು ಗುರುತಿಸಿದ್ದಾಳೆ. ನಾವು ಒಬ್ಬ ಅಪ್ರಾಪ್ತ ಆರೋಪಿಯನ್ನು ರೈಲ್ವೆ ನಿಲ್ದಾಣದಿಂದ ಬಂಧಿಸಿದ್ದೇವೆ. ಇತರ ಆರೋಪಿಯನ್ನು ಕೂಡ ಶೀಘ್ರದಲ್ಲೇ ಬಂಧಿಸಲಾಗಿದೆ” ಎಂದು ಎಸ್‌ಪಿ ಹೇಳಿದರು.
ಇದನ್ನೂ ಓದಿ: ಹತ್ರಾಸ್ ಗ್ಯಾಂಗ್ ರೇಪ್: ಉತ್ತರ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ವಕೀಲರ ಒತ್ತಾಯ
ಸ್ಥಳೀಯ ಸ್ಟೇಷನ್ ಹೌಸ್ ಆಫೀಸರ್ ಪ್ರಕಾರ, ಆರೋಪಿಗಳಲ್ಲಿ ಒಬ್ಬ ಇ-ರಿಕ್ಷಾ ಚಾಲಕ ಆಗಾಗ್ಗೆ ಯುವತಿಯನ್ನು ಕರೆದೊಯ್ಯುತ್ತಿದ್ದನು ಎಂದು ಹೇಳಿದ್ದಾರೆ.
ಯುವತಿಯ ವೈದ್ಯಕೀಯ ವರದಿಯ ಪ್ರಕಾರ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ನಡೆದಿರುವುದು ಖಚಿತವಾಗಿದೆ ಎಂದು ಎಸ್‌ಪಿ ಹೇಳಿದರು.
ಐಪಿಸಿ ಸೆಕ್ಷನ್ 376 ಡಿ (ಸಾಮೂಹಿಕ ಅತ್ಯಾಚಾರ), ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆ ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಇಬ್ಬರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಇದನ್ನೂ ಓದಿ: ಯುಪಿ ಉಪಚುನಾವಣೆ: ಹೆಚ್ಚುತ್ತಿರುವ ಅಪರಾಧಗಳ ನೆರಳಲ್ಲಿ ಮತದಾರರು ಯಾರ ಕೈಹಿಡಿಯಲಿದ್ದಾರೆ?


