Homeಮುಖಪುಟಉತ್ತರಾಖಂಡ: ಶಾಲೆಯಲ್ಲಿ ದಲಿತ ಮಹಿಳೆ ಅಡಿಗೆ ಮಾಡಿದ ಕಾರಣಕ್ಕೆ ಊಟ ನಿರಾಕರಿಸಿದ ಸವರ್ಣಿಯ ಮಕ್ಕಳು

ಉತ್ತರಾಖಂಡ: ಶಾಲೆಯಲ್ಲಿ ದಲಿತ ಮಹಿಳೆ ಅಡಿಗೆ ಮಾಡಿದ ಕಾರಣಕ್ಕೆ ಊಟ ನಿರಾಕರಿಸಿದ ಸವರ್ಣಿಯ ಮಕ್ಕಳು

- Advertisement -
- Advertisement -

ಉತ್ತರಾಖಂಡದ ಚಂಪಾವತ್ ಜಿಲ್ಲೆಯ ಸುಖಿಧಾಂಗ್ ಗ್ರಾಮದ ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಅಡುಗೆಯವರಾಗಿ ಕೆಲಸಕ್ಕೆ ಸೇರಿದ್ದು, ಆಕೆ ದಲಿತ ಸಮುದಾಯದವರು ಎಂದು ‘ಮೇಲ್ಜಾತಿ’ಗೆ ಸೇರಿದ ಹಲವಾರು ವಿದ್ಯಾರ್ಥಿಗಳು ಅವರು ತಯಾರಿಸಿದ ಆಹಾರವನ್ನು ತಿನ್ನಲು ನಿರಾಕರಿಸಿರುವ ಘಟನೆ ನಡೆದಿದೆ.

ನವೆಂಬರ್ 25 ರಂದು ದಲಿತ ಸಮುದಾಯದ ಸುನಿತಾ ಅವರಿಗೆ ’ಭೋಜನ್ ಮಾತಾ’ (ಅಡುಗೆಯವರು) ಆಗಿ ಕೆಲಸ ಪಡೆದರು. ಆಕೆಗೆ ಮಾಸಿಕ ವೇತನವು 3,000 ರೂಪಾಯಿ ಆಗಿದೆ. ತನ್ನ ಇಬ್ಬರು ಮಕ್ಕಳು ಮತ್ತು ಅನಾರೋಗ್ಯಕ್ಕೆ ತುತ್ತಾಗಿರುವ ನಿರುದ್ಯೋಗಿ ಪತಿಯನ್ನು ಪೋಷಿಸಲು ಈ ಕೆಲಸ ತುಂಬಾ ಮುಖ್ಯವಾಗಿತ್ತು ಎನ್ನುತ್ತಾರೆ.

ಸುನೀತಾ ಅವರು ಡಿಸೆಂಬರ್ 14 ರಂದು ಶಾಲೆಯಲ್ಲಿ ಅಡುಗೆ ಮಾಡಿದ ತೊಂದರೆಗಳು ಆರಂಭವಾಗಿವೆ. ಈ ಮೇಲ್ಜಾತಿ’ಗೆ ವಿದ್ಯಾರ್ಥಿಗಳ ಪೋಷಕರು ಸುನೀತಾ ತಮ್ಮ ಮಕ್ಕಳಿಗೆ ಅಡುಗೆ ಮಾಡಿದ್ದರಿಂದ ಆಕ್ರೋಶಗೊಂಡಿದ್ದಾರೆ. ಮಾತ್ರವಲ್ಲದೆ ಅವರ ನೇಮಕಾತಿಯನ್ನು ಪ್ರಶ್ನಿಸಿದ್ದಾರೆ. ಶಾಲೆಯಲ್ಲಿ ತಯಾರಿಸಿದ ಊಟವನ್ನು ತಿನ್ನುವುದರಿಂದ ತಪ್ಪಿಸಲು ವಿದ್ಯಾರ್ಥಿಗಳು ಪ್ರತಿದಿನ ತಾವೇ ಊಟ ತರಲು ಪ್ರಾರಂಭಿಸಿದ್ದಾರೆ.

ಶಾಲೆಯಲ್ಲಿ 230 ವಿದ್ಯಾರ್ಥಿಗಳಿದ್ದು, ಕಿರಿಯ ತರಗತಿಗಳಲ್ಲಿ ಓದುತ್ತಿರುವ 66 ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟವನ್ನು ನೀಡಲಾಗುತ್ತದೆ.

ಇದನ್ನೂ ಓದಿ: ಕೆ.ಆರ್ ಪೇಟೆ: ದಲಿತರ ಮೇಲೆ ದೌರ್ಜನ್ಯ – ದೂರು ನೀಡಿದ್ದಕ್ಕೆ ಅಂಗಡಿ ಮುಚ್ಚಿ ಸವರ್ಣೀಯರಿಂದ ಸಾಮಾಜಿಕ ಬಹಿಷ್ಕಾರ

“ಡಿಸೆಂಬರ್ 13 ರಂದು ನಾನು ಶಾಲೆಗೆ ಸೇರಿದಾಗ, ಎಲ್ಲಾ ವಿದ್ಯಾರ್ಥಿಗಳು ಯಾವುದೇ ತೊಂದರೆಯಿಲ್ಲದೆ ಊಟವನ್ನು ಸೇವಿಸಿದ್ದರು. ಆದರೆ, ಮರುದಿನ ಅವರು ನಾನು ತಯಾರಿಸಿದ ಆಹಾರವನ್ನು ತಿನ್ನಲು ಮಕ್ಕಳು ನಿರಾಕರಿಸಿದಾಗ ನನಗೆ ಆಘಾತವಾಯಿತು. ಊಟ ಮಾಡಬೇಡಿ ಎಂದು ವಿದ್ಯಾರ್ಥಿಗಳಿಗೆ ಪೋಷಕರು ಹೇಳಿದ್ದಾರೆ. ನಾನು ದಲಿತ ಸಮುದಾಯದವಳು ಎಂಬ ಕಾರಣಕ್ಕೆ ಮಕ್ಕಳಿಗೆ ಅಡುಗೆ ಮಾಡಬೇಡಿ ಎಂದು ಹೇಳಲಾಗಿತ್ತು. ಇದು ತುಂಬಾ ಅವಮಾನಕರವಾಗಿತ್ತು. ನಾನು ನ್ಯಾಯ ಕೇಳೀ ಮತ್ತೆ ಎಲ್ಲಿಗೂ ಹೋಗುವುದಿಲ್ಲ” ಎಂದು ಸುನೀತಾ ನೋವು ತೋಡಿಕೊಂಡಿದ್ದಾರೆ.

ಡಿಸೆಂಬರ್ 14 ರಂದು, ಸುನೀತಾ ವಿದ್ಯಾರ್ಥಿಗಳಿಗೆ ಅಡುಗೆ ಮಾಡದಂತೆ ತಡೆಯಲು ಪೋಷಕರು, ಬಹುತೇಕ ಗ್ರಾಮಸ್ಥರು ಶಾಲೆಗೆ ಆಗಮಿಸಿ ಶಿಕ್ಷಕರ ಮೇಲೆ ಒತ್ತಡ ಹೇರಿದ್ದರು.

ಪ್ರಕರಣದ ಗಂಭೀರತೆಯನ್ನು ಮನಗಂಡ ಚಂಪಾವತ್ ಜಿಲ್ಲಾ ಶಿಕ್ಷಣಾಧಿಕಾರಿ ಆರ್.ಸಿ. ಪುರೋಹಿತ್ ಶಾಲೆಗೆ ಆಗಮಿಸಿ ವಿದ್ಯಾರ್ಥಿಗಳು ಮತ್ತು ಶಾಲೆಯ ಸಿಬ್ಬಂದಿಯೊಂದಿಗೆ ಮಾತನಾಡಿ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ.

ಚಂಪಾವತ್ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿನೀತ್ ತೋಮರ್ ಮಾತನಾಡಿ, ‘ಶಾಲೆಯಲ್ಲಿ ದಲಿತ ಅಡುಗೆಯವರು ಮಾಡಿದ ಊಟ ಮಾಡುವುದಕ್ಕೆ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಆಕ್ಷೇಪ ವ್ಯಕ್ತಪಡಿಸಿರುವ ವರದಿಗಳ ಬಗ್ಗೆ ಹಾಗೂ ನೇಮಕಾತಿ ಅಕ್ರಮಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಜಿಲ್ಲಾ ಶಿಕ್ಷಣ ಇಲಾಖೆಗೆ ಸೂಚಿಸಲಾಗಿದೆ’ ಎಂದು ಹೇಳಿದ್ದಾರೆ.

ಸ್ಥಳೀಯ ‘ಮೇಲ್ಜಾತಿ’ ಗ್ರಾಮಸ್ಥರಿಂದ ಅವಮಾನಕ್ಕೊಳಗಾದ ನಂತರ ದಲಿತ ಮಹಿಳೆ ಸುನೀತಾ ಅವರು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. “ಮೇಲ್ವರ್ಗದ ಹಳ್ಳಿಗರು ಶಕ್ತಿಶಾಲಿಗಳಾಗಿದ್ದು, ನನಗೆ ಶಾಲೆಯಲ್ಲಿ ಕೆಲಸ ಮಾಡಲು ಬಿಡುವುದಿಲ್ಲ. ನನ್ನ ನೇಮಕಾತಿಯನ್ನು ಅಸಿಂಧುಗೊಳಿಸಿ ಮೇಲ್ಜಾತಿಯ ಮಹಿಳೆಗೆ ಕೆಲಸ ಕೊಟ್ಟರೂ ಆಶ್ಚರ್ಯವಿಲ್ಲ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಉತ್ತರಾಖಂಡದಲ್ಲಿ, ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಊಟದ ಯೋಜನೆಗಾಗಿ, ಮಹಿಳೆಯರನ್ನು ಅಡುಗೆ ಮಾಡಲು ನೇಮಿಸಲಾಗುತ್ತದೆ ಮತ್ತು ಅವರನ್ನು “ಭೋಜನ್ ಮಾತಾಗಳು” ಎಂದು ಕರೆಯಲಾಗುತ್ತದೆ.


ಇದನ್ನೂ ಓದಿ: ಸಾರ್ವಜನಿಕ ರಸ್ತೆ ಬಳಸಿದ್ದಕ್ಕೆ ದಲಿತ ಯುವಕನ ಮೇಲೆ ತೀವ್ರ ಹಲ್ಲೆ: ಕ್ರೂರ ಅಸ್ಪೃಶ್ಯತೆ ಆಚರಣೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನಿಂದನೆ ಸಾರ್ವಜನಿಕವಾಗಿ ನಡೆದಿದ್ದರೆ ಮಾತ್ರ ಎಸ್ಸಿ-ಎಸ್ಟಿ ಕಾಯ್ದೆಯಡಿ ಅಪರಾಧವಾಗುತ್ತದೆ: ಸುಪ್ರೀಂ ಕೋರ್ಟ್‌

0
ಸಾರ್ವಜನಿಕವಾಗಿ ಉದ್ದೇಶಪೂರ್ವಕ ಅವಮಾನ ಅಥವಾ ನಿಂದನೆ ಮಾಡಿದರೆ  ಮಾತ್ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯಿದೆಯಡಿಯಲ್ಲಿ ಅಪರಾಧವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಎಸ್ಸಿ-ಎಸ್ಟಿ ಕಾಯ್ದೆಯಡಿ ಅಪರಾಧವಾಗಬೇಕಿದ್ದರೆ 'ನಿಂದನೆಯು...