Homeಮುಖಪುಟಟಿವಿ ನೇರಪ್ರಸಾರ ಕಾರ್ಯಕ್ರಮದಲ್ಲಿ BJP ನಾಯಕನ ಮೇಲೆ BRS ಶಾಸಕನಿಂದ ಹಲ್ಲೆ

ಟಿವಿ ನೇರಪ್ರಸಾರ ಕಾರ್ಯಕ್ರಮದಲ್ಲಿ BJP ನಾಯಕನ ಮೇಲೆ BRS ಶಾಸಕನಿಂದ ಹಲ್ಲೆ

- Advertisement -
- Advertisement -

ನವೆಂಬರ್ 30 ರಂದು ನಡೆಯಲಿರುವ ತೆಲಂಗಾಣ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ತೆಲುಗು ಸುದ್ದಿ ವಾಹಿನಿಯೊಂದು ನಡೆಸಿದ ಚರ್ಚೆಯ ನೇರಪ್ರಸಾರ ಕಾರ್ಯಕ್ರಮದಲ್ಲಿ ಆಡಳಿತಾರೂಢ ಬಿಆರ್‌ಎಸ್ ಶಾಸಕರೊಬ್ಬರು, ಬಿಜೆಪಿ ಮುಖಂಡನ ಮೇಲೆ ಬಹಿರಂಗ ಹಲ್ಲೆ ನಡೆಸಿದ ಪ್ರಕರಣ ವರದಿಯಾಗಿದೆ. ಈ ವೇಳೆ ಪೊಲೀಸರು ಮತ್ತು ಇತರರು ಮಧ್ಯಪ್ರವೇಶಿಸಿದ ವಿಡಿಯೋ ಇದೀಗ ವೈರಲ್ ಆಗಿದೆ.

ಹೈದರಾಬಾದ್ ನ ಕುತುಬಲ್ಲಾಪುರ ಕ್ಷೇತ್ರದ ಬಿಆರ್‌ಎಸ್ ಶಾಸಕ ಕೆ.ಪಿ.ವಿವೇಕಾನಂದ, ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕುನಾ ಶ್ರೀಶೈಲಂ ಗೌಡ್ ಮೇಲೆ ಹಲ್ಲೆ ನಡೆಸಿದ್ದಾಗಿ ಕೇಂದ್ರ ಸಚಿವ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಜಿ.ಕಿಶನ್ ರೆಡ್ಡಿ ಆರೋಪಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಕೇಳಿದ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದೇ ತಾಳ್ಮೆ ಕಳೆದುಕೊಂಡ ಶಾಸಕರು ಹಲ್ಲೆ ನಡೆಸಿದ್ದಾಗಿ ಅವರು ಹೇಳಿದ್ದಾರೆ.

ಕುನಾ ಶ್ರೀಶೈಲಂ ಗೌಡ್ ಅವರ ಕತ್ತಿನ ಪಟ್ಟಿ ಹಿಡಿದು ವಿವೇಕಾನಂದ ಹಲ್ಲೆ ನಡೆಸಿದ ಕ್ರಮ ಅಂಜುಬುರುಕತನದ್ದು ಎಂದು ಅವರು ಹೇಳಿದ್ದಾರೆ. ಈ ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸದಿದ್ದರೆ, ಕಾನೂನಾತ್ಮಕ ಹೋರಾಟ ಆರಂಭಿಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

“ಚರ್ಚೆಯಲ್ಲಿ ಇಬ್ಬರೂ ಸಭ್ಯತೆಯನ್ನು ಪಾಲಿಸಬೇಕಾದದ್ದು ಅಗತ್ಯವಾದರೂ, ಬಿಜೆಪಿ ಮುಖಂಡ ಶಾಸಕರ ತಂದೆಯ ಹೆಸರನ್ನು ಎತ್ತಿಕೊಂಡರು” ಎಂದು ಬಿಆರ್‌ಎಸ್ ವಕ್ತಾರ ಶ್ರವಣ್ ದಸೋಜು ಪ್ರತಿಕ್ರಿಯಿಸಿದ್ದಾರೆ.

ಗೌಡ್ ಅವರು ವಿವೇಕಾನಂದ ಅವರ ಮೇಲೆ ವಾಗ್ದಾಳಿ ನಡೆಸುವ ವೇಳೆ ಅವರ ತಂದೆ-ತಾಯಿಯ ಹೆಸರು ಬಳಕೆ ಮಾಡಬಾರದಿತ್ತು ಹಾಗೂ ಶಾಸಕರು ಕೂಡಾ ಎದುರಾಳಿಯ ಮೇಲೆ ದಾಳಿ ಮಾಡಬಾರದಿತ್ತು. ಇಬ್ಬರೂ ಸಂಯಮ ಹೊಂದಿರಬೇಕಿತ್ತು” ಎಂದು ಸ್ಪಷ್ಟಪಡಿಸಿದ್ದಾರೆ.

ಘಟನೆ ಕುರಿತು ಬಿಆರ್‌ಎಸ್ ವಕ್ತಾರ ಶ್ರವಣ್ ದಾಸೋಜು ಅವರು ಗೌಡ್ ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ”ಬಿಆರ್‌ಎಸ್ ಶಾಸಕರ ತಂದೆಯ ಬಗ್ಗೆ ಗೌಡ್ ಉಲ್ಲೇಖಿಸಿದ್ದಾರೆ. ಇಬ್ಬರೂ ಚರ್ಚೆಯ ಸಮಯದಲ್ಲಿ ಸಭ್ಯತೆ ಮತ್ತು ಸೌಜನ್ಯವನ್ನು ಕಾಪಾಡಿಕೊಳ್ಳಬೇಕಾಗಿತ್ತು.ವಿವೇಕಾನಂದರು ಹಾಲಿ ಶಾಸಕರಾಗಿದ್ದರೆ, ಶ್ರೀಶೈಲಂ ಗೌಡ್ ಮೊದಲು ಶಾಸಕರಾಗಿದ್ದರು ಎಂದು ಅವರು ಹೇಳಿದರು.

ಇಬ್ಬರೂ ಸಭ್ಯತೆ, ಸಭ್ಯತೆಯನ್ನು ಕಾಪಾಡಿಕೊಂಡಿರಬೇಕು” ಮತ್ತು ಸಂಯಮದಿಂದಿರಬೇಕು. ಗೌಡ್ ಅವರು ವಿವೇಕಾನಂದರ ಪೋಷಕರ ಬಗ್ಗೆ ಮಾತನಾಡುವ ಬದಲು ಚರ್ಚೆಯ ಕುರಿತು ಮಾತನಾಡಬೇಕಿತ್ತು. ಇಬ್ಬರೂ ಸಂವೇದನಾಶೀಲರಾಗಿ ನಡೆದುಕೊಳ್ಳಬೇಕಿತ್ತು ಏಕೆಂದರೆ ಇಡೀ ಜಗತ್ತು ತಮ್ಮನ್ನು ಗಮನಿಸುತ್ತಿದೆ ಎಂದು ಅರಿತುಕೊಳ್ಳಬಹುದಿತ್ತು ಎಂದು ದಾಸೋಜು ಹೇಳಿದರು.

ಇದನ್ನೂ ಓದಿ: 477 ಕೇಬಲ್ ಟಿವಿ ಆಪರೇಟರ್‌ಗಳ ನೋಂದಣಿ ರದ್ದುಗೊಳಿಸಿದ ಸಚಿವಾಲಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಜ್ರಿವಾಲ್ ಪಿಎ ಹಲ್ಲೆ ಪ್ರಕರಣ: ಸ್ವಾತಿ ಮುಖದ ಮೇಲೆ ಆಂತರಿಕ ಗಾಯ; ಹೇಳಿಕೆ ಪಡೆದ...

0
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಪ್ತ ಸಹಾಯಕ ಬಿಭವ್ ಕುಮಾರ್‌ನಿಂದ ಹಲ್ಲೆಗೆ ಒಳಗಾಗಿರುವ, ದೆಹಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ, ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮುಖದ ಮೇಲೆ ಆಂತರಿಕ ಗಾಯಗಳಾಗಿರುವುದು ವೈದ್ಯಕೀಯ...