Homeಚಳವಳಿವಿಶಾಖಪಟ್ಟಣಂ ಉಕ್ಕು ಕಾರ್ಖಾನೆ ಖಾಸಗೀಕರಣದ ವಿರುದ್ದ ಜೈಲ್‌ ಭರೋ ಚಳವಳಿ

ವಿಶಾಖಪಟ್ಟಣಂ ಉಕ್ಕು ಕಾರ್ಖಾನೆ ಖಾಸಗೀಕರಣದ ವಿರುದ್ದ ಜೈಲ್‌ ಭರೋ ಚಳವಳಿ

- Advertisement -
- Advertisement -

ವಿಶಾಖಪಟ್ಟಣಂ ಉಕ್ಕು ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವ ಒಕ್ಕೂಟ ಸರ್ಕಾರದ ನಿರ್ಧಾರಗಳ ವಿರುದ್ಧ ಕಳೆದ ಒಂದು ವರ್ಷದಿಂದ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ, ಜಗನ್‌ಮೋಹನ್ ರೆಡ್ಡಿಯವರ ವೈಎಸ್‌ಆರ್ ಕಾಂಗ್ರೆಸ್ ಸರ್ಕಾರ ಈ ನಿರ್ಧಾರವನ್ನು ವಿರೋಧಿಸಿ, ಪ್ರತಿಭಟನಾಕಾರರಿಗೆ ಬೆಂಬಲಿಸಿದ್ದಾರೆ. ಈ ಹೋರಾಟವು ಭಾನುವಾರಕ್ಕೆ (ಫೆ.13) ಒಂದು ವರ್ಷವನ್ನು ಪೂರೈಸಲಿದ್ದು, ಅದರ ಭಾಗವಾಗಿ ಶನಿವಾರ ಬೃಹತ್ ಪ್ರತಿಭಟನೆಗಳು ಮತ್ತು ಭಾನುವಾರ ಜೈಲ್ ಭರೋ ಹೋರಾಟವನ್ನು ನಡೆಸಲು ನಿರ್ಧರಿಸಲಾಗಿದೆ.

ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕ, ವಿಶಾಖಪಟ್ಟಣಂ ಸಂಸದ ಎಂವಿವಿ ಸತ್ಯನಾರಾಯಣ ಅವರು ಸೋಮವಾರ ಲೋಕಸಭೆಯಲ್ಲಿ ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್ ಖಾಸಗೀಕರಣದ ವಿಷಯವನ್ನು ಪ್ರಸ್ತಾಪಿಸಿದ್ದು, “ವೈಜಾಗ್‌ ಸ್ಟೀಲ್ ಪ್ಲಾಂಟ್ ತೆಲುಗು ಜನರ ಸ್ವಾಭಿಮಾನವಾಗಿದೆ. ವಿಶಾಖ ಉಕ್ಕು-ಆಂಧ್ರ ಹಕ್ಕು ಎಂಬ ಘೋಷಣೆಯೊಂದಿಗೆ ಆಂಧ್ರ ಜನರ ಬಹುಕಾಲದ ಕನಸು 1982ರಲ್ಲಿ ವಿಶಾಖ ಉಕ್ಕು ಉದ್ಯಮದ ಸ್ಥಾಪನೆಯಿಂದ ನನಸಾಗಿದೆ. ಆ ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವ ನಿರ್ಧಾರವನ್ನು ಒಕ್ಕೂಟ ಸರ್ಕಾರ ಹಿಂಪಡೆಯಬೇಕು” ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಕೋವಿಡ್‌ ಅವಧಿಯಲ್ಲಿ ಮೋದಿಯ ವಾರಣಾಸಿ ಕಂಡ ಸಾವು ನೋವು: ಬೆಚ್ಚಿಬೀಳಿಸುವ ವರದಿ ಬಹಿರಂಗ

ಆದರೆ, ಆಂಧ್ರ ಜನರ ಪ್ರತಿಭಟನೆ ಮತ್ತು ಆಂಧ್ರ ಸರ್ಕಾರ ಹಾಗೂ ಸಂಸದರ ಒತ್ತಾಯದ ವಿಚಾರವಾಗಿ ಒಕ್ಕೂಟ ಸರ್ಕಾರ ಯಾವುದೇ ರೀತಿಯ ಸ್ಪಂದನೆಯನ್ನಾಗಿಲೀ, ಪ್ರತಿಕ್ರಿಯೆಯನ್ನಾಗಲೀ ನೀಡಿಲ್ಲ.

ಈ ಹಿನ್ನೆಲೆಯಲ್ಲಿ, ಎರಡು ದಿನಗಳ ತೀವ್ರ ಆಂದೋಲನ ನಡೆಸಲು ಆಂಧ್ರದ ಸಂಘಟನೆಗಳು ನಿರ್ಧರಿಸಿವೆ. ಈ ಆಂದೋಲನದಲ್ಲಿ ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆಯಿದೆ. ಒಕ್ಕೂಟ ಸರ್ಕಾರವು ವೈಜಾಗ್‌ ಸ್ಟೀಲ್‌ ಪ್ಲಾಂಟ್‌ ಅನ್ನು ಮಾರಾಟ ಮಾಡುವ ನಿರ್ಧಾರವನ್ನು ಹಿಂಪಡೆಯುವವರೆಗೆ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಸಿಐಟಿಯು ರಾಜ್ಯ ಅಧ್ಯಕ್ಷ ಸಿ.ಎಚ್. ನರಸಿಂಗ ರಾವ್ ಹೇಳಿದ್ದಾರೆ.

“ಈ ಪ್ರಮುಖ ಉದ್ಯಮವನ್ನು ದಕ್ಷಿಣ ಕೊರಿಯಾದ ಪೋಸ್ಕೋ ಕಂಪನಿಗೆ ಮಾರಾಟ ಮಾಡಲು ಬಿಜೆಪಿ ಸರ್ಕಾರ ಪಿತೂರಿ ನಡೆಸುತ್ತಿದೆ. ಕೊರಿಯಾದ ಪ್ರಮುಖ ಖಾಸಗೀ ಕಂಪನಿಗಳು ರೋಬೋಟ್‌ಗಳನ್ನು ಬಳಸುತ್ತಿದ್ದಾರೆ. ಅವರು ಕಡಿಮೆ ಮಾನವಶಕ್ತಿಯನ್ನು ಬಳಸುತ್ತಿದ್ದಾರೆ” ಎಂದು ನರಸಿಂಗ ರಾವ್ ಆರೋಪಿಸಿದ್ದಾರೆ.

“ಖಾಸಗಿ ಕಂಪನಿಗಳಲ್ಲಿ ಯಾವುದೇ ಸಾಮಾಜಿಕ ನ್ಯಾಯ ಇರುವುದಿಲ್ಲ. ಇದರಿಂದ ಈ ಭಾಗದ ಅಭಿವೃದ್ಧಿ ಕುಂಠಿತವಾಗಲಿದೆ. ಭೂಮಿ ಕಳೆದುಕೊಂಡ ಜನರು ತುಂಬಾ ತೊಂದರೆ ಅನುಭವಿಸುತ್ತಾರೆ. ಇಲ್ಲಿನ ಜನರಿಗೆ ಖಾಸಗೀಕರಣದ ವಿರುದ್ಧ ಹೋರಾಟ ಮಾಡದೆ ಬೇರೆ ದಾರಿ ಇಲ್ಲ. ಕಾಯಂ ನೌಕರರೊಂದಿಗೆ ಅಧಿಕಾರಿಗಳ ಸಂಘಗಳು, ಗುತ್ತಿಗೆ ಕಾರ್ಮಿಕ ಸಂಘಟನೆಗಳನ್ನು ಒಗ್ಗೂಡಿಸಿ ‘ವಿಶಾಖ ಉಕ್ಕು ಪರಿರಕ್ಷಣಾ ಹೋರಾಟ ಸಮಿತಿ’ ರಚಿಸಲಾಗಿದೆ. ಈ ಸಮಿತಿಯಲ್ಲಿ ಬಿಜೆಪಿಯ ಅಂಗಸಂಸ್ಥೆಯಾದ ಬಿಎಂಎಸ್ ಕೂಡ ಇದೆ. ವೈಜಾಗ್ ಸ್ಟೀಲ್ ಪ್ಲಾಂಟ್ ಅನ್ನು ಮಾರಾಟ ಮಾಡಲು ನಾವು ಬಿಡುವುದಿಲ್ಲ ಎಂಬುದು ನಮ್ಮ ಏಕೈಕ ಅಜೆಂಡಾವಾಗಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:ಮಮತಾ ಬ್ಯಾನರ್ಜಿ-ಅಭಿಷೇಕ್ ಬ್ಯಾನರ್ಜಿ ನಡುವೆ ಬಿರುಕು : ಮಧ್ಯದಲ್ಲಿ ಸಿಕ್ಕಿಕೊಂಡ ಪ್ರಶಾಂತ್ ಕಿಶೋರ್! 

ವೈಜಾಗ್ ಸ್ಟೀಲ್ ಪ್ಲಾಂಟ್‌ನಲ್ಲಿ ಸರ್ಕಾರಿ ಷೇರುಗಳನ್ನು 100% ಖಾಸಗೀಕರಣಗೊಳಿಸಲು ಬಿಜೆಪಿ ಸರ್ಕಾರ ನಿರ್ಧರಿಸಿದ್ದು, ಅಂದಿನಿಂದ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಜೆಪಿ ಸರ್ಕಾರ 2ನೇ ಬಾರಿಗೆ ಆಡಳಿತಕ್ಕೆ ಬಂದ ನಂತರ ಪ್ರಮುಖ ಖಾಸಗೀ ಕೈಗಾರಿಕೆಗಳಿಗೆ ಆದ್ಯತೆ ನೀಡಲು ಆಕ್ರಮಣಕಾರಿಯಾಗಿ ಮುಂದುವರಿಯುತ್ತಿದೆ. ಆದರೆ, ವೈಜಾಗ್ ಸ್ಟೀಲ್ ಪ್ಲಾಂಟ್‌ನ ಖಾಸಗೀಕರಣದ ವಿರುದ್ಧ ಬೃಹತ್‌ ಹೋರಾಟ ನಡೆಯುತ್ತಿದೆ” ಎಂದು ಅವರು ತಿಳಿಸಿದ್ದಾರೆ.

ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್ ಕಾರ್ಖಾನೆಯು ಆಂಧ್ರಪ್ರದೇಶದ ಕೈಗಾರಿಕಾ ಕಿರೀಟದಲ್ಲಿರುವ ರತ್ನವಾಗಿದೆ. 32 ಜನರ ಜೀವ ತ್ಯಾಗದಿಂದ ಇದನ್ನು ಸ್ಥಾಪಿಸಲಾಗಿದೆ. ಭಾರತದ ಸಮುದ್ರ ತೀರದಲ್ಲಿರುವ ಏಕೈಕ ಸ್ಟೀಲ್ ಪ್ಲಾಂಟ್ ಇದು. ರೈತರ ತ್ಯಾಗದಿಂದ 22,000 ಎಕರೆ ಭೂಮಿಯಲ್ಲಿ ಸ್ಥಾಪನೆಯಾಗಿದೆ. ಈ ಕಾರ್ಖಾನೆ ವರ್ಷಕ್ಕೆ ಉತ್ತಮ ಗುಣಮಟ್ಟದ 60 ಲಕ್ಷ ಟನ್ ಉಕ್ಕನ್ನು ಉತ್ಪಾದಿಸುತ್ತದೆ. ಕಳೆದ ಒಂಬತ್ತು ತಿಂಗಳ ಅವಧಿಯಲ್ಲಿ 20,000 ಕೋಟಿ ರೂ. ವಹಿವಾಟು ನಡೆಸಿ 700 ಕೋಟಿ ರೂ. ಲಾಭ ಗಳಿಸಿದೆ. ಇಲ್ಲಿ ಸುಮಾರು 32,000 ಮಂದಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ವೈಜಾಗ್ ಸ್ಟೀಲ್ ಪ್ಲಾಂಟ್‌ನ ಏಕೈಕ ಸಮಸ್ಯೆ ಎಂದರೆ ಅದು ಯಾವುದೇ ಕಬ್ಬಿಣದ ಗಣಿಗಳನ್ನು ಹೊಂದಿರದ ಕಾರಣ ಕಬ್ಬಿಣದ ಅದಿರಿನ ಮೇಲೆ ವರ್ಷಕ್ಕೆ ಸುಮಾರು 3,000 ಕೋಟಿ ರೂಪಾಯಿ ಹೆಚ್ಚುವರಿ ವೆಚ್ಚವಾಗುತ್ತಿದೆ ಎಂದು ಹೇಳಿರುವ ಸಿಐಟಿಯು ನಾಯಕ, “ಒಕ್ಕೂಟ ಸರ್ಕಾರವು ಎಲ್ಲಾ ಖಾಸಗಿ ಮತ್ತು ಸಾರ್ವಜನಿಕ ಉಕ್ಕಿನ ಕಾರ್ಖಾನೆಗಳಿಗೆ ಸ್ವಂತ ಗಣಿಗಳನ್ನು ನೀಡಿದೆ. ಅಲ್ಲದೆ, ಯಾವುದೇ ಉದ್ಯಮವನ್ನು ಹೊಂದಿರದ ಗಾಲಿ ಜನಾರ್ದನ ರೆಡ್ಡಿಗೆ ಮತ್ತು ಪೋಸ್ಕೋ ಕಂಪನಿಗೂ ಸಹ ಗಣಿಗಳನ್ನು ಮಂಜೂರು ಮಾಡಿದೆ. ಆದರೆ, ವೈಜಾಗ್ ಸ್ಟೀಲ್ ಪ್ಲಾಂಟ್‌ಗೆ ಮಾತ್ರ ಯಾವುದೇ ಗಣಿಗಳನ್ನು ನೀಡಲಿಲ್ಲ. ಏಕೆಂದರೆ, ಇದನ್ನು ಖಾಸಗಿ ಕಾರ್ಪೊರೇಟ್‌ಗಳಿಗೆ ಮಾರಾಟ ಮಾಡುವ ಹುನ್ನಾರವನ್ನು ಸರ್ಕಾರ ಹೊಂದಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹಿಜಾಬ್‌ಗೆ ಬೆಂಬಲ; ರಾಜ್ಯ ಸರ್ಕಾರವನ್ನು ‘ಸರ್ವಾಧಿಕಾರಿ’ ಎಂದ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಲೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ: ಯೋಗೇಂದ್ರ ಯಾದವ್‌ | Naanu Gauri

ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ: ಯೋಗೇಂದ್ರ ಯಾದವ್‌

0
ದೇಶದ ತುಂಬ ಹರಡಿರುವ ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ ಎಂದು ಸ್ವರಾಜ್ ಪಕ್ಷದ ಮುಖ್ಯಸ್ಥ, ರೈತ ಹೋರಾಟಗಾರ ಯೋಗೇಂದ್ರ ಯಾದವ್‌ ಬುಧವಾರ ಬೆಂಗಳೂರಿನಲ್ಲಿ ಹೇಳಿದ್ದಾರೆ. ಅವರು ‘ಕರ್ನಾಟಕದ ಜನ ಯಾಕೆ...