Homeಮುಖಪುಟಮಣಿಪುರದಲ್ಲಿ ಮುಂದುವರೆದ ಹಿಂಸಾಚಾರ: ಬಂಡುಕೋರರೊಂದಿಗೆ ಗುಂಡಿನ ಚಕಮಕಿ; ಇಬ್ಬರು ಗ್ರಾಮದ ಸ್ವಯಂಸೇವಕರ ಸಾವು

ಮಣಿಪುರದಲ್ಲಿ ಮುಂದುವರೆದ ಹಿಂಸಾಚಾರ: ಬಂಡುಕೋರರೊಂದಿಗೆ ಗುಂಡಿನ ಚಕಮಕಿ; ಇಬ್ಬರು ಗ್ರಾಮದ ಸ್ವಯಂಸೇವಕರ ಸಾವು

- Advertisement -
- Advertisement -

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಮುಂದುವರೆದಿದ್ದು, ಇಂದು ಬಿಷ್ಣುಪುರ ಜಿಲ್ಲೆಯಲ್ಲಿ ಬಂಡುಕೋರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಗ್ರಾಮದ ಸ್ವಯಂಸೇವಕರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರ ಮುಂಜಾನೆ ಬೋಯ್ದುಮಂತಬಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮ ಸ್ವಯಂಸೇವಕರು ತಾತ್ಕಾಲಿಕ ಬಂಕರ್‌ನಲ್ಲಿ ಕಾವಲು ಕಾಯುತ್ತಿದ್ದರು ಈ ವೇಳೆ ಬಂಡುಕೋರರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಭಾರೀ ಗುಂಡಿನ ಚಕಮಕಿ ನಡೆಯುತ್ತಿದ್ದು, ಪ್ರಾಣಹಾನಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿ ಹೇಳಿದ್ದಾರೆ.

ಮೇ 3ರಿಂದ ಮಣಿಪುರದಲ್ಲಿ ಮೈತಿ ಮತ್ತು ಕುಕಿಗಳ ಸಮುದಾಯಗಳ ನಡುವಿನ ಜನಾಂಗೀಯ ಸಂಘರ್ಷ ಹಿಂಸಾಚಾರಕ್ಕೆ ತಿರುಗಿದೆ. ಈ ಹಿಂಸಾಚಾರದಿಂದ 100 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಮತ್ತು 50ಸಾವಿರ ಜನರನ್ನು ಸ್ಥಳಾಂತರಗೊಂಡಿದ್ದಾರೆ. ಪರಿಶಿಷ್ಟ ಪಂಗಡದ ವರ್ಗಕ್ಕೆ ಸೇರಿಸಬೇಕೆಂಬ ಬಹುಸಂಖ್ಯಾತ ಮೈತಿ ಸಮುದಾಯದವರ ಬೇಡಿಕೆಯನ್ನು ವಿರೋಧಿಸಿ ಸಾವಿರಾರು ಜನರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ ನಂತರ ಹಿಂಸಾಚಾರ ಭುಗಿಲೆದ್ದಿತು.

ಇದನ್ನೂ ಓದಿ: ಪ್ರಚಾರದಾಹಿ, ಅಧಿಕಾರದಾಹಿ ಪ್ರಧಾನಿ: ಮಣಿಪುರ ವಿಚಾರಕ್ಕೆ ಮೋದಿ ವಿರುದ್ಧ ನಟ ಕಿಶೋರ್ ವಾಗ್ದಾಳಿ

ಇಂದು ಮತ್ತೆ ಗುಂಡಿನ ಚಕಮಕಿಯಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. ಇತ್ತಿಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಣಿಪುರದ ಮೊಯಿರಾಂಗ್‌ನಲ್ಲಿರುವ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿದರು.

ಈ ಬಗ್ಗೆ ಇನ್ಸ್ಟಾಗ್ರಾಮ್‌ ಹೀಗೆ ಬರೆದುಕೊಂಡಿದ್ದಾರೆ- ”ಮಣಿಪುರದ ನಮ್ಮ ಸಹೋದರ ಸಹೋದರಿಯರನ್ನು ನೋಡಿದೆ. ಅವರ ನೋವನ್ನು ಕೇಳಿದೆ ಮತ್ತು ಅನುಭವಿಸಿದೆ.”

 

View this post on Instagram

 

A post shared by Rahul Gandhi (@rahulgandhi)

ಪರಿಹಾರ ಶಿಬಿರದ ಮಹಿಳೆಯರನ್ನು ಮಾತನಾಡಿಸಿದ ನಂತರ ಟ್ವೀಟ್ ಮಾಡಿದ ಅವರು, ”ಮಣಿಪುರಕ್ಕೆ ಚಿಕಿತ್ಸೆ ಅಗತ್ಯವಿದೆ. ಶಾಂತಿ ಮಾತ್ರ ನಮ್ಮ ಆದ್ಯತೆಯಾಗಬೇಕು” ಎಂದು ಬರೆದಿದ್ದಾರೆ.

ಮಣಿಪುರ ಹೊತ್ತಿಯುರಿಯುತ್ತಿದ್ದರೂ  ಪ್ರಧಾನಿ ಮೋದಿ ಮಾತ್ರ ಒಂದೇ ಒಂದು ಮಾತನ್ನೂ ಆಡಿಲ್ಲ ಇದಕ್ಕೆ ವಿರೋಧ ಪಕ್ಷಗಳು ಸಾಕಷ್ಟು ಟೀಕೆ ಮಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read