Homeಮುಖಪುಟಎನ್‌ಸಿಪಿ ಇಬ್ಬಾಗ: ಜನರು ಈ ಆಟವನ್ನು ಸಹಿಸುವುದಿಲ್ಲ, ಶರದ್ ಪವಾರ್ ಜೊತೆ ನಾವಿದ್ದೇವೆ ಎಂದ ಸಂಜಯ್...

ಎನ್‌ಸಿಪಿ ಇಬ್ಬಾಗ: ಜನರು ಈ ಆಟವನ್ನು ಸಹಿಸುವುದಿಲ್ಲ, ಶರದ್ ಪವಾರ್ ಜೊತೆ ನಾವಿದ್ದೇವೆ ಎಂದ ಸಂಜಯ್ ರಾವತ್

- Advertisement -
- Advertisement -

”ಬಿಜೆಪಿ ಯಾರನ್ನೆಲ್ಲಾ ಜೈಲಿಗೆ ಕಳಿಸುತ್ತಿತ್ತೋ ಅವರೆಲ್ಲರೂ ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ” ಎಂದು ಮಹಾರಾಷ್ಟ್ರ ರಾಜಕೀಯದಲ್ಲಿ ನಡೆದ ಕ್ಷಿಪ್ರ ಬೆಳವಣಿಗೆ ಬಗ್ಗೆ ಉದ್ಧವ್ ಬಣದ ಶಿವಸೇನೆ ನಾಯಕ ಸಂಜಯ್ ರಾವತ್ ಕಿಡಿಕಾರಿದ್ದಾರೆ.

ಎನ್​ಸಿಪಿಯಿಂದ ಬಂಡಾಯವೆದ್ದು ಅಜಿತ್ ಪವಾರ್ ನೇತೃತ್ವದಲ್ಲಿ ಹಲವರು ಏಕನಾಥ್ ಶಿಂದೆ ಸರ್ಕಾರವನ್ನು ಸೇರಿದ್ದಾರೆ. ಹಾಗೆಯೇ ಅಜಿತ್ ಪವಾರ್ ಅವರು ಉಪ ಮುಖ್ಯಮಂತ್ರಿವಾಗಿ ಪ್ರಮಾಣವಚನವನ್ನೂ ಸ್ವೀಕರಿಸಿದ್ದಾರೆ. ಇನ್ನುಳಿದವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಂಜಯ್ ರಾವತ್, ”ಜನರು ಈ ಆಟವನ್ನು ಹೆಚ್ಚು ದಿನ ಸಹಿಸುವುದಿಲ್ಲ, ಶರದ್ ಪವಾರ್ ಅವರೊಂದಿಗೆ ಮಾತನಾಡಿದ್ದೇನೆ, ಅವರು ಬಲಿಷ್ಠರಿದ್ದಾರೆ. ಜನರ ಬೆಂಬಲವೂ ಅವರ ಮೇಲಿದೆ. ಉದ್ಧವ್ ಠಾಕ್ರೆ ಅವರೊಂದಿಗೆ ಮತ್ತೆ ಎಲ್ಲವನ್ನೂ ಪುನರ್ ನಿರ್ಮಿಸುತ್ತಾರೆ” ಎಂದು ಟ್ವೀಟ್ ಮಾಡಿದ್ದಾರೆ.

”ಬಿಜೆಪಿ ಯಾರನ್ನೆಲ್ಲಾ ಜೈಲಿಗೆ ಕಳಿಸುತ್ತಿತ್ತೋ ಅವರೆಲ್ಲರೂ ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ” ಎಂದು ಹೇಳಿದ್ದಾರೆ.

”ಬ್ರೇಕಿಂಗ್ : ಮಹಾರಾಷ್ಟ್ರ ಸಂಪುಟದಲ್ಲಿ 9 ಎನ್ ಸಿಪಿ ಸಚಿವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಸಾಮಾನ್ಯ ಅಂಶ? ಬಹುತೇಕ ಎಲ್ಲರ ವಿರುದ್ಧವೂ ಗಂಭೀರವಾದ ಜಾರಿ ವಿಚಾರಣೆಗಳು ಬಾಕಿ ಇವೆ!” ಎಂದು ರಾವತ್ ಟ್ವೀಟ್ ಮಾಡಿದ್ದಾರೆ.

ಎನ್‌ಸಿಪಿಯಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆ ಶಿವಸೇನಾ (ಯುಬಿಟಿ) ನಾಯಕಿ ಪ್ರಿಯಾಂಕಾ ಚತುರ್ವೇದಿ ಪ್ರತಿಕ್ರಿಯಿಸಿದ್ದು, ”ಮಹಾರಾಷ್ಟ್ರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಶಾಸಕರಲ್ಲಿ ಭ್ರಷ್ಟರೂ ಇದ್ದಾರೆ” ಎಂದು ತಿವಿದಿದ್ದಾರೆ.

ಅಜಿತ್ ಪವಾರ್ ಅವರು ಏಕನಾಥ್ ಶಿಂದೆ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ ಉಪಮುಖ್ಯಮಂತ್ರಿಯಾಗಿ ಸೇರ್ಪಡೆಗೊಂಡರು. ಅವರು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರೊಂದಿಗೆ ಅಧಿಕಾರ ಹಂಚಿಕೊಂಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮುಸ್ಲಿಮರ ಬಗ್ಗೆ ಅವಹೇಳನಾಕಾರಿಯಾಗಿ ಅನಿಮೇಟೆಡ್ ವೀಡಿಯೊ ಹಂಚಿಕೊಂಡ ಬಿಜೆಪಿ: ತರಾಟೆಗೆ ತೆಗದುಕೊಂಡ ಎಕ್ಸ್‌ ಬಳಕೆದಾರರು

0
ಮುಸ್ಲಿಮರ ಬಗ್ಗೆ ಕೆಟ್ಟದಾಗಿ ಬಿಂಬಿಸುವ ಅನಿಮೇಟೆಡ್ ವೀಡಿಯೊವೊಂದನ್ನು ಬಿಜೆಪಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ. ಎಚ್ಚರ..ಎಚ್ಚರ..ಎಚ್ಚರ.. ಎಂಬ ತಲೆ ಬರಹದಲ್ಲಿ ಬಿಜೆಪಿ ವಿಡಿಯೋವನ್ನು ಹಂಚಿಕೊಂಡಿದ್ದು, ಇದರಲ್ಲಿ ರಾಹುಲ್‌...