Homeರಾಷ್ಟ್ರೀಯ‘ನಿಮ್ಮ ನೋವು ನಮ್ಮದೂ ಕೂಡಾ’: ಬಹುಸಂಖ್ಯಾತ ಹಿಂದೂಗಳ ಪರವಾಗಿ ಭಾರತೀಯ ಮುಸ್ಲಿಮರನ್ನು ಬೆಂಬಲಿಸಿದ ಸಂಗೀತಗಾರ ವಿಶಾಲ್...

‘ನಿಮ್ಮ ನೋವು ನಮ್ಮದೂ ಕೂಡಾ’: ಬಹುಸಂಖ್ಯಾತ ಹಿಂದೂಗಳ ಪರವಾಗಿ ಭಾರತೀಯ ಮುಸ್ಲಿಮರನ್ನು ಬೆಂಬಲಿಸಿದ ಸಂಗೀತಗಾರ ವಿಶಾಲ್ ದದ್ಲಾನಿ

- Advertisement -
- Advertisement -

ಬಿಜೆಪಿಯ ಮಾಜಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್ ಅವರನ್ನು ಅವಹೇಳನ ಮಾಡಿರುವ ಕುರಿತು ನಡೆಯುತ್ತಿರುವ ವಿವಾದಗಳ ನಡುವೆ, ಭಾರತದ ಮುಸ್ಲಿಮರ ಪರವಾಗಿ ಮಾತನಾಡಿದ್ದಕ್ಕಾಗಿ ಸಂಗೀತಗಾರ ವಿಶಾಲ್ ದದ್ಲಾನಿ ಅವರನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಗುರುವಾರ ಶ್ಲಾಘಿಸಿದ್ದಾರೆ.

ಸಂಗೀತಗಾರ ವಿಶಾಲ್ ದಾದ್ಲಾನಿ ಅವರು ಟ್ವೀಟರ್‌‌ನಲ್ಲಿ, “ಬಹುಸಂಖ್ಯಾತ ಭಾರತೀಯ ಹಿಂದೂಗಳ ಪರವಾಗಿ ನಾನು ಭಾರತೀಯ ಮುಸ್ಲಿಮರಿಗೆ ಇದನ್ನು ಹೇಳಲು ಬಯಸುತ್ತೇನೆ. ನಿಮ್ಮನ್ನು ನೋಡಿಕೊಳ್ಳಲಾಗಿದೆ, ಕೇಳಿಸಿಕೊಳ್ಳಲಾಗಿದೆ, ಪ್ರೀತಿಸಲಾಗಿದೆ ಮತ್ತು ಸಲಹಲಾಗಿದೆ. ನಿಮ್ಮ ನೋವು ನಮ್ಮ ನೋವೇ ಆಗಿದೆ. ನಿಮ್ಮ ದೇಶಭಕ್ತಿ ಪ್ರಶ್ನಾರ್ಹವಲ್ಲ. ನಿಮ್ಮ ಗುರುತು ಭಾರತಕ್ಕೆ ಅಥವಾ ಬೇರೆ ಯಾವುದೇ ಧರ್ಮಕ್ಕೆ ಬೆದರಿಕೆಯಲ್ಲ. ನಾವು ಒಂದು ರಾಷ್ಟ್ರವಾಗಿದ್ದು, ಒಂದು ಕುಟುಂಬವಾಗಿದ್ದೇವೆ” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಇದಕ್ಕೆ ಪ್ರತಿಕ್ರಿಯಿಸಿರುವ ಸಂಸದ ಶಶಿ ತರೂರ್‌‌, ವಿಶಾಲ್ ದದ್ಲಾನಿ ಅವರ ಭಾವನೆಗಳನ್ನು ನಾನು ಆತ್ಮೀಯವಾಗಿ ಪ್ರತಿಧ್ವನಿಸುತ್ತೇನೆ ಎಂದು ಹೇಳಿದ್ದು, “ಮೌನವಾಗಿರುವ ದೊಡ್ಡ ಬಹುಸಂಖ್ಯಾತರ ಪರವಾಗಿ ಮಾಡಿದ್ದಕ್ಕೆ ಶಭಾಷ್‌” ಎಂದು ಹೇಳಿದ್ದಾರೆ.

ದದ್ಲಾನಿ ಅವರು ಅದೇ ವಿಚಾರವಾಗಿ ಮತ್ತೊಂದು ಟ್ವೀಟ್ ಕೂಡಾ ಮಾಡಿದ್ದು, ನಮ್ಮನ್ನು ವಿಭಜಿಸಲು ಪ್ರಯತ್ನಿಸುತ್ತಿರುವವರನ್ನು ಗೆಲ್ಲಲು ಬಿಡಬೇಡಿ ಎಂದು ಎಲ್ಲಾ ಭಾರತೀಯರನ್ನು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: “ವಿವೇಕಾನಂದರು ಮುಸ್ಲಿಂ ದೇಹಶಕ್ತಿಯಿಂದ, ಹಿಂದೂ ಬುದ್ಧಿಶಕ್ತಿಯಿಂದ ದೇಶ ಕಟ್ಟಿ ಅಂದವುರೆ ಸಾ”

ಟ್ವೀಟ್‌ನಲ್ಲಿ ಅವರು, “ನಾನು ಇದನ್ನು ಎಲ್ಲಾ ಭಾರತೀಯರಿಗೆ ಹೇಳಲು ಬಯಸುತ್ತೇನೆ. ಭಾರತೀಯ ರಾಜಕೀಯದ ಕೊಳಕು ಸ್ವಭಾವದ ಬಗ್ಗೆ ನಾನು ನಿಜವಾಗಿಯೂ ವಿಷಾದಿಸುತ್ತೇನೆ. ನಾವು ಪ್ರತಿಯೊಬ್ಬರೂ ಏಕಾಂಗಿಯಾಗಿ ನಿಲ್ಲುವವರೆಗೆ ಅದು ನಮ್ಮನ್ನು ಸಣ್ಣ ಮತ್ತು ಸಣ್ಣ ಗುಂಪುಗಳಾಗಿ ವಿಭಜಿಸುತ್ತದೆ” ಎಂದು ಅವರು ಹೇಳಿದ್ದಾರೆ.

“ವಿಭಜನೆ ಮಾಡುವವರು ವೈಯಕ್ತಿಕ ಲಾಭಕ್ಕಾಗಿ ಇದನ್ನು ಮಾಡುತ್ತಿದ್ದಾರೆಯೆ ಹೊರತು, ಜನರಿಗಾಗಿ ಅಲ್ಲ, ಅವರನ್ನು ಗೆಲ್ಲಲು ಬಿಡಬೇಡಿ” ಎಂದು ಅವರು ಹೇಳಿದ್ದಾರೆ.

ಇರಾನ್, ಇರಾಕ್, ಕುವೈತ್, ಕತಾರ್, ಸೌದಿ ಅರೇಬಿಯಾ, ಒಮಾನ್, ಯುಎಇ ಸೇರಿದಂತೆ ಕನಿಷ್ಠ 15 ರಾಷ್ಟ್ರಗಳಿಂದ ತೀವ್ರ ಪ್ರತಿಕ್ರಿಯೆಗಳು ಮತ್ತು ಅಧಿಕೃತ ಪ್ರತಿಭಟನೆಗಳನ್ನು ಉಂಟುಮಾಡಿದ ನೂಪುರ್ ಶರ್ಮಾ ಅವರು ಹೇಳಿಕೆಯ ಬಗ್ಗೆ ಬಿಜೆಪಿ ಕ್ರಮ ಕೈಗೊಂಡಿದ್ದು, ಪಕ್ಷದಿಂದ ಅಮಾನತುಗೊಳಿಸಿದೆ.

ಇದನ್ನೂ ಓದಿ: ದನ ಸಾಗಿಸುತ್ತಿದ್ದ ಮುಸ್ಲಿಂ ವ್ಯಕ್ತಿಯನ್ನು ಹೊಡೆದು ಕೊಂದಿದ್ದು ಮತ್ತು ಕಾಶ್ಮೀರ ನರಮೇಧಕ್ಕೂ ಯಾವುದೇ ವ್ಯತ್ಯಾಸ ಇಲ್ಲ: ಖ್ಯಾತ ನಟಿ ಸಾಯಿ ಪಲ್ಲವಿ

ನೂಪುರ್ ಶರ್ಮಾ ವಿರುದ್ಧ ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಲ್ಲಿ ಹಲವಾರು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಪ್ರವಾದಿ ಮುಹಮ್ಮದ್ ಅವರ ಕುರಿತು ಹೇಳಿಕೆ ನೀಡಿದ ಮತ್ತೊಬ್ಬ ವಕ್ತಾರ ನವೀನ್ ಜಿಂದಾಲ್ ಅವರನ್ನೂ ಬಿಜೆಪಿ ವಜಾಗೊಳಿಸಿದೆ. ಈ ಮಧ್ಯೆ, ನೂಪುರ್ ಶರ್ಮಾ ಅವರು ತಮ್ಮ ಹೇಳಿಕೆಯನ್ನು ದಾಖಲಿಸಲು ಮಹಾರಾಷ್ಟ್ರ ಪೊಲೀಸರ ಮುಂದೆ ಹಾಜರಾಗಲು ನಾಲ್ಕು ವಾರಗಳ ಕಾಲಾವಕಾಶ ಕೋರಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರೋಹಿತ್ ವೇಮುಲಾ ಪ್ರಕರಣ: ಪೊಲೀಸರ ವರದಿ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ; ಪ್ರತಿಕ್ರಿಯಿಸಿದ ಕುಟುಂಬ

0
ಹೈದರಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತೆಲಂಗಾಣ ಪೊಲೀಸರು ಮುಕ್ತಾಯದ ವರದಿಯನ್ನು ಸಲ್ಲಿಸಿದ್ದಾರೆ. ಇದಲ್ಲದೆ ವರದಿಯಲ್ಲಿ ರೋಹಿತ್‌ ವೇಮುಲಾ 'ದಲಿತ ಅಲ್ಲ', ತನ್ನ “ನಿಜವಾದ ಜಾತಿಯ ಗುರುತು”...