HomeಮುಖಪುಟAIDMK ಪಕ್ಷದ ಉನ್ನತ ಹುದ್ದೆಗಾಗಿ ಕೋರ್ಟ್ ಮೆಟ್ಟಿಲೇರಿದ ವಿ.ಕೆ ಶಶಿಕಲಾ

AIDMK ಪಕ್ಷದ ಉನ್ನತ ಹುದ್ದೆಗಾಗಿ ಕೋರ್ಟ್ ಮೆಟ್ಟಿಲೇರಿದ ವಿ.ಕೆ ಶಶಿಕಲಾ

- Advertisement -
- Advertisement -

ಅಕ್ರಮ ಆಸ್ತಿ ಗಳಿಕೆಯ ಪ್ರಕರಣದಲ್ಲಿ ಜೈಲಿನಲ್ಲಿದ್ದ ದಿ. ಜಯಲಲಿತಾ ಆಪ್ತೆ ವಿ.ಕೆ ಶಶಿಕಲಾ ಕಳೆದ ತಿಂಗಳು ಬಿಡುಗಡೆಯಾಗಿದ್ದು, ಈಗ ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇಟ್ರ ಕಳಗಂ (AIDMK) ಪಕ್ಷದ ಉನ್ನತ ಹುದ್ದೆಗಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ.

ಜೈಲಿಗೆ ತೆರಳುವ ಮೊದಲು, ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ತನ್ನ ಬೆಂಬಲಿಗ ಪಳಿನಿಸ್ವಾಮಿ (ಇಪಿಎಸ್) ಅವರನ್ನು ಆಯ್ಕೆ ಮಾಡಿದ್ದರು ಆದರೆ ಅವರ ಅನುಪಸ್ಥಿತಿಯಲ್ಲಿ ಇಪಿಎಸ್, ಶಶಿಕಲಾ ಅವರ ನಾಯಕತ್ವದ ವಿರುದ್ಧ ದಂಗೆ ಎದ್ದಿದ್ದ ಪನ್ನೀರ್‌ಸೆಲ್ವಂ (ಒಪಿಎಸ್) ಜೊತೆ ಹೊಂದಾಣಿಕೆ ಮಾಡಿಕೊಂಡರು. ಇಪಿಎಸ್ ಮತ್ತು ಒಪಿಎಸ್ ಇಬ್ಬರೂ ಸೇರಿ ಶಶಿಕಲಾರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮತ್ತು ಪಕ್ಷದಿಂದ ಉಚ್ಛಾಟಿಸಿದ್ದರು.) ಪಕ್ಷದಲ್ಲಿ ತನಗೆ ಉನ್ನತ ಹುದ್ದೆ ನೀಡಬೇಕು ಎಂದು ಶಶಿಕಲಾ ಕೋರ್ಟ್ ಮೆಟ್ಟಿಲೇರಿದ್ದಾರೆ.

ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಶಶಿಕಲಾ ಅವರನ್ನು ವಜಾಗೊಳಿಸಲಾಗಿತ್ತು. ಇದಕ್ಕಾಗಿ ಇ ಪಳನಿಸಾಮಿ ಮತ್ತು ಒ ಪನ್ನೀರ್‌ಸೆಲ್ವಂ ಪಕ್ಷದ ಜನರಲ್ ಕೌನ್ಸಿಲ್ ಸಭೆ ಕರೆದಿದ್ದರು. ಇದರ ವಿರುದ್ಧ 2017 ರಲ್ಲಿ ಚೆನ್ನೈ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈಗ ಇದರ ತುರ್ತು ವಿಚಾರಣೆ ಮಾಡುವಂತೆ ಕೋರಿ ಮತ್ತೊಂದು ಹೊಸ ಅರ್ಜಿಯನ್ನು ಸಲ್ಲಿಸಿದ್ದಾರೆ. ಮಾರ್ಚ್ 15 ರಂದು ಈ ಪ್ರಕರಣದ ವಿಚಾರಣೆ ನಡೆಯಲಿದೆ.

ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆಪ್ತ ಸಹಾಯಕರಾದ 66 ವರ್ಷದ ಶಶಿಕಲಾ, ಜಯಲಲಿತಾ ಅವರ ಮರಣದ ನಂತರ ಪಕ್ಷದ ಮುಖ್ಯಸ್ಥರಾದರು. ಆದರೆ ಭ್ರಷ್ಟಾಚಾರ ಪ್ರಕರಣದಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆಗೆ ಒಳಗಾದರು, ಇದರಿಂದ ಮುಖ್ಯಮಂತ್ರಿ ಹುದ್ದೆ ಕೈತಪ್ಪಿ ಹೋಗಿತ್ತು.

ಇದನ್ನೂ ಓದಿ: ಪೆರಿಯಾರ್ ನೆಲದಲ್ಲಿ ನಡೆಯದ ಬಿಜೆಪಿ ಪ್ರಯೋಗ; ಮಾಜಿ ಐಎಎಸ್ ಸಸಿಕಾಂತ್ ಸೆಂಥಿಲ್ ಸಂದರ್ಶನ

ಜೈಲಿಗೆ ತೆರಳುವ ಮೊದಲು, ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ತನ್ನ ಬೆಂಬಲಿಗ ಪಳಿನಿಸ್ವಾಮಿ (ಇಪಿಎಸ್) ಅವರನ್ನು ಆಯ್ಕೆ ಮಾಡಿದ್ದರು ಆದರೆ ಅವರ ಅನುಪಸ್ಥಿತಿಯಲ್ಲಿ ಇಪಿಎಸ್, ಶಶಿಕಲಾ ಅವರ ನಾಯಕತ್ವದ ವಿರುದ್ಧ ದಂಗೆ ಎದ್ದಿದ್ದ ಪನ್ನೀರ್‌ಸೆಲ್ವಂ (ಒಪಿಎಸ್) ಜೊತೆ ಹೊಂದಾಣಿಕೆ ಮಾಡಿಕೊಂಡರು. ಇಪಿಎಸ್ ಮತ್ತು ಒಪಿಎಸ್ ಇಬ್ಬರೂ ಸೇರಿ ಶಶಿಕಲಾರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮತ್ತು ಪಕ್ಷದಿಂದ ಉಚ್ಛಾಟಿಸಿದ್ದರು.

ಈಗ ಶಶಿಕಲಾ ಜೈಲಿನಿಂದ ಮರಳಿ ಬಂದಿದ್ದು, ತಮಿಳುನಾಡು ರಾಜಕೀಯದಲ್ಲಿ ಪ್ರಮುಖ ಪಾತ್ರವಹಿಸಬಹುದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇನ್ನೇನು ತಮಿಳುನಾಡಿನ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಲಿದ್ದು, ಕೆಲವೆ ತಿಂಗಳಿನಲ್ಲಿ ಮತದಾನ ನಡೆಯಲಿದೆ. ಹಾಗಾಗಿ ತಮಿಳುನಾಡಿನಲ್ಲಿ ರಾಜಕೀಯ ಮಹತ್ವವುಳ್ಳ ಹಲವು ಘಟನೆಗಳು ಸಂಭವಿಸುತ್ತಿವೆ.

ವರ್ಚಸ್ವಿ ಮತ್ತು ಶಕ್ತಿಯುತ ಜಯಲಲಿತಾ ಅವರ ಮರಣದ ನಂತರ ತನ್ನ ನಾಯಕತ್ವದ ನಿರ್ವಾತದಿಂದ ಎಂದೂ ಚೇತರಿಸಿಕೊಳ್ಳದ ಪಕ್ಷದಲ್ಲಿ ಈಗ ಶಶಿಕಲಾ ಕುತೂಹಲ, ಪ್ರಕ್ಷುಬ್ಧತೆ, ಗೊಂದಲಗಳ ಹೆಚ್ಚಳಕ್ಕೆ ಕಾರಣರಾಗಿದ್ದಾರೆ.

ಮುಖ್ಯಮಂತ್ರಿ ಜನವರಿಯಲ್ಲಿ ಬಿಜೆಪಿ ನಾಯಕತ್ವದ ಸಭೆಯ ನಂತರ, ಶಶಿಕಲಾ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಘೋಷಿಸಿದ್ದರು. ಆದರೆ ಶಶಿಕಲಾ ಹಿಂದಿರುಗಿದಾಗಿನಿಂದ, ತನ್ನ ಮಾಜಿ ಮಾರ್ಗದರ್ಶಕಿ ಶಶಿಕಲಾ ಕುರಿತು ಯಾವ ಟೀಕೆ ಮಾಡದೇ ಮೌನವಾಗಿದ್ದಾರೆ. ಆದರೆ ಶಶಿಕಲಾ ಸೋದರಳಿಯ ಟಿಟಿವಿ ದಿನಕರನ್ ಅವರನ್ನು ಮಾತ್ರ ಗುರಿಯಾಗಿಸಿ ಸಿಎಂ ಇಪಿಎಸ್ ಟೀಕೆ ಮಾಡುತ್ತಿದ್ದಾರೆ. ಜಯಲಲಿತಾ ಅವರನ್ನು “ಅಮ್ಮ” ಎಂದು ಕರೆಯುತ್ತಿದ್ದ ಎಐಎಡಿಎಂಕೆ ಕಾರ್ಯಕರ್ತರು ಶಶಿಕಲಾರನ್ನು “ಚಿನ್ನಮ್ಮ (ಚಿಕ್ಕಮ್ಮ)” ಎಂದು ಕರೆಯುತ್ತಾರೆ. ಈ ಚಿನ್ನಮ್ಮನೊಂದಿಗೆ ಸಿಎಂ ಪಳಿನಿಸ್ವಾಮಿ ಹೊಂದಾಣಿಕೆ ಮಾಡಿಕೊಳ್ಳಬಹುದು ಎಂಬ ಊಹಾಪೋಹಗಳು ಹರಿದಾಡುತ್ತಿವೆ.

ಪಕ್ಷದ ವಿರೋಧವಿದ್ದರೂ ಕೂಡ, ತಾನು ಹೋದಲ್ಲೆಲ್ಲಾ ಎಐಎಡಿಎಂಕೆ ಧ್ವಜವನ್ನು ತಮ್ಮ ಕಾರಿನ ಮೇಲೆ ಹಾರಿಸುವ ಮೂಲಕ ಶಶಿಕಲಾ ತಮ್ಮ ಉದ್ದೇಶಗಳನ್ನು ಸ್ಪಷ್ಟಪಡಿಸಿದ್ದಾರೆ.
2017 ರಲ್ಲಿ ಚುನಾವಣಾ ಆಯೋಗವು ಇಪಿಎಸ್-ಒಪಿಎಸ್ ಬಣಕ್ಕೆ ನೀಡಿದ್ದ ಎಐಎಡಿಎಂಕೆ ಪಕ್ಷದ ಎರಡು ಎಲೆಗಳ ಚಿಹ್ನೆ ಮತ್ತು ಹೆಸರನ್ನು ಪಡೆಯಲು ಶಶಿಕಲಾ ಅರ್ಜಿ ಸಲ್ಲಿಸಲಿದ್ದಾರೆ ಎನ್ನಲಾಗಿದೆ.

ಶಶಿಕಲಾ ಮೇಲೆ ಈ ಹಿಂದೆ ಇಡಿ ದಾಳಿ ಮಾಡಿಸಿದ್ದ ಬಿಜೆಪಿ ಶಶಿಕಲಾ ಎಐಎಡಿಎಂಕೆಗೆ ಸೇರುವುದನ್ನು ಸದ್ಯ ವಿರೋಧಿಸುತ್ತಿದೆ.


ಇದನ್ನೂ ಓದಿ: ತಪ್ಪು ಮಾಡದೆ ಜೈಲಿನಲ್ಲಿದ್ದಾರೆ: ದಿಶಾ ರವಿಯನ್ನು ಬೆಂಬಲಿಸಿದ ಪತ್ರಕರ್ತೆ ಪ್ರಿಯಾ ರಮಣಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...