Homeಮುಖಪುಟನಾಥೂರಾಮ್ ಗೋಡ್ಸೆ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತೇವೆ: ಹಿಂದೂ ಮಹಾಸಭಾ

ನಾಥೂರಾಮ್ ಗೋಡ್ಸೆ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತೇವೆ: ಹಿಂದೂ ಮಹಾಸಭಾ

ಇತ್ತೀಚೆಗೆ ಗೋಡ್ಸೆ ಕುರಿತು ಅಧ್ಯಯನ ಕೇಂದ್ರವನ್ನು ಆರಂಭಿಸಿ ಹಿಂದೂ ಮಹಾಸಭಾ ವಿವಾದಕ್ಕೀಡಾಗಿತ್ತು. ಇದಾದ ನಂತರ ಜಿಲ್ಲಾಡಳಿತ ಮಧ್ಯಪ್ರವೇಶಿಸಿದ್ದರಿಂದ, ಅದು ಆರಂಭವಾದ ಎರಡೇ ದಿನದಲ್ಲಿ ಮುಚ್ಚಲ್ಪಟ್ಟಿತು.

- Advertisement -
- Advertisement -

ಮಹಾತ್ಮ ಗಾಂಧಿಯ ಹಂತಕ ನಾಥುರಾಮ್ ಗೋಡ್ಸೆ ಮತ್ತು ಸಹ-ಸಂಚುಕೋರ ನಾರಾಯಣ್ ಆಪ್ಟೆಯ ಕುರಿತು ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ರ್‍ಯಾಲಿ ಹಮ್ಮಿಕೊಳ್ಳುವುದಾಗಿ ಅಖಿಲ ಭಾರತ ಹಿಂದೂ ಮಹಾಸಭಾ ತಿಳಿಸಿದೆ. ಮಾರ್ಚ್‌ 14 ರಂದು ಗ್ವಾಲಿಯರ್‌ನಿಂದ ದೆಹಲಿಯವರೆಗೆ ಈ ರ್‍ಯಾಲಿಯನ್ನು ನಡೆಸುವುದಾಗಿ ತಿಳಿದುಬಂದಿದೆ.

ಇತ್ತೀಚೆಗೆ ಗೋಡ್ಸೆ ಕುರಿತು ಅಧ್ಯಯನ ಕೇಂದ್ರವನ್ನು ಆರಂಭಿಸಿ ಹಿಂದೂ ಮಹಾಸಭಾ ವಿವಾದಕ್ಕೀಡಾಗಿತ್ತು. ಇದಾದ ನಂತರ ಜಿಲ್ಲಾಡಳಿತ ಮಧ್ಯಪ್ರವೇಶಿಸಿದ್ದರಿಂದ, ಅದು ಆರಂಭವಾದ ಎರಡೇ ದಿನದಲ್ಲಿ ಮುಚ್ಚಲ್ಪಟ್ಟಿತು.

ಇದನ್ನೂ ಓದಿ: ಗೋಡ್ಸೆ ಬಗ್ಗೆ ಸುಳ್ಳು ಹೇಳಿ ತಪ್ಪುದಾರಿಗೆಳೆದಿದ್ದರು: ಕಾಂಗ್ರೆಸ್ ಸೇರಿದ ಹಿಂದೂ ಮಹಾಸಭಾ ಸದಸ್ಯ

ಈಗ, ಗೋಡ್ಸೆ ಮತ್ತು ಆಪ್ಟೆ ಬಗ್ಗೆ ಅರಿವು ಮೂಡಿಸಲು ಮಾರ್ಚ್ 14 ರಂದು ಮಧ್ಯಾಹ್ನ ದೌಲತ್‌ಗಂಜ್‌ನಿಂದ ಯಾತ್ರೆ ಕೈಗೊಳ್ಳಲು ಮಹಾಸಭಾ ಯೋಜಿಸಿದೆ ಎಂದು ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷ ಜೈವೀರ್ ಭರದ್ವಾಜ್ ತಿಳಿಸಿದ್ದಾರೆ.

ಸಂಘಟನೆಯ ಪದಾಧಿಕಾರಿಗಳು ಮಾರ್ಚ್ 15 ರಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಲು ಪ್ರಯತ್ನಿಸುತ್ತಾರೆ ಎಂದು ಅವರು ಹೇಳಿದರು.

“ಭಾರತದ ವಿಭಜನೆಗೆ ಕಾರಣರಾದವರ ಬಗ್ಗೆ ಮತ್ತು ಆ ಸಂದರ್ಭದಲ್ಲಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಯುವಜನರಿಗೆ ತಿಳಿಸುವ ಸಮಯ ಬಂದಿದೆ ಎಂದು ಇತ್ತೀಚೆಗೆ ಮಹಾಸಭಾ ಪದಾಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಗಿದೆ” ಎಂದು ಅವರು ಹೇಳಿದರು.


ಇದನ್ನೂ ಓದಿ: ಗಾಂಧಿ ಅಂದಿಗೂ ಇಂದಿಗೂ ಒಬ್ಬಂಟಿ. ಗೋಡ್ಸೆ ಅಂದಿಗೂ ಒಬ್ಬಂಟಿಯಲ್ಲ, ಇಂದಿಗೂ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಶೀಲ್ಡ್ ಲಸಿಕೆಯ ಅಡ್ಡ ಪರಿಣಾಮಗಳ ಪರೀಕ್ಷೆ, ಸಂತ್ರಸ್ತರಿಗೆ ಪರಿಹಾರ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

0
ಔಷಧೀಯ ಕಂಪನಿ ಅಸ್ಟ್ರಾಜೆನೆಕಾ ತನ್ನ ಕೋವಿಶೀಲ್ಡ್ ಲಸಿಕೆ ಅಪರೂಪದ ಅಡ್ಡ ಪರಿಣಾಮಗಳನ್ನು ಉಂಟು ಮಾಡಬಹುದು ಎಂದು ಒಪ್ಪಿಕೊಂಡ ಹಿನ್ನೆಲೆ, ವಕೀಲರೊಬ್ಬರು ಈ ಲಸಿಕೆಯ ಅಡ್ಡ ಪರಿಣಾಮಗಳು ಮತ್ತು ಅಪಾಯದ ಅಂಶಗಳನ್ನು ಪರೀಕ್ಷಿಸಲು ವೈದ್ಯಕೀಯ...