Homeಕರ್ನಾಟಕಸನಾತನ ಧರ್ಮ ಎಂದರೇನು?: ಚಿಂತಕ ಕೆ.ಪಿ. ಸುರೇಶ್ ವಿಶ್ಲೇಷಣೆ ಇಲ್ಲಿದೆ..

ಸನಾತನ ಧರ್ಮ ಎಂದರೇನು?: ಚಿಂತಕ ಕೆ.ಪಿ. ಸುರೇಶ್ ವಿಶ್ಲೇಷಣೆ ಇಲ್ಲಿದೆ..

- Advertisement -
- Advertisement -

”ವರ್ಣಾಶ್ರಮ ವ್ಯವಸ್ಥೆಯನ್ನು ಜೀವಂತವಾಗಿ ಇರಿಸುವ ಉದ್ದೇಶ ಸನಾತನ ಧರ್ಮ ಹೊಂದಿದೆ. ಅದಕ್ಕಾಗಿ ರಾಜಕೀಯ ಹೊಂದಾಣಿಕೆ ಮಾಡಿಕೊಳ್ಳುವ ಮನಸ್ಥಿತಿಯ ಮುಖಂಡರು ಮುಂದಾಗಿದ್ದಾರೆ. ಈ ಕಾರಣದಿಂದ ದೇಶದ ಬಹುಸಂಖ್ಯಾತ ಶೂದ್ರ ಸಮುದಾಯ ಅಪಾಯಕ್ಕೆ ಸಿಲುಕಲಿದೆ” ಎಂದು ವಿಮರ್ಶಕ, ಚಿಂತಕ ಕೆ.ಪಿ. ಸುರೇಶ್ ಹೇಳಿದರು.

ಸಾಗರದ ಸರಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ಸನಾತನ ಧರ್ಮ ಎಂದರೇನು? ಎಂಬ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ”ಮಹಾಭಾರತ, ಭಗವದ್ಗೀತೆ ಇವುಗಳನ್ನು ಅಧ್ಯಯನ ಮಾಡಿದರೆ ಸನಾತನ ಧರ್ಮದ ಉದ್ದೇಶಗಳು ತಿಳಿಯುತ್ತವೆ. ಅದರೊಳಗಿನ ಆಂತರ್ಯ ಅರಿಯಲು ನಾವೆಲ್ಲರೂ ಮುಂದಾಗಬೇಕು. ಸನಾತನ ಧರ್ಮದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರನೆಂಬ ವರ್ಣಾಶ್ರಮ ವ್ಯವಸ್ಥೆ ಇದ್ದು, ಶೂದ್ರರು ಕನಿಷ್ಠವಾಗಿ ಕಾಣಲ್ಪಡುತ್ತಾರೆ. ಅವರು ಸಹ ನಮ್ಮಂತೆ ಮನುಷ್ಯರೆಂಬ ಅಂಬೇಡ್ಕರ್ ರಚಿತ ಸಂವಿಧಾನವನ್ನು ಇಂದಿನ ಬಿಜೆಪಿ ಸರ್ಕಾರ ತಿದ್ದುಪಡಿ ತರದೆ ನಿಷ್ಪಲಗೊಳಿಸುವ ಕೆಲಸಕ್ಕೆ ಮುಂದಾಗುತ್ತಿರುವುದು ಖೇದಕರ ವಿಚಾರ. ಅದಕ್ಕೆ ವಿಚಾರವಾದಿಗಳು ಒಂದಾಗಿ ಸೇರಿ ಜನತೆಯನ್ನು ಜಾಗೃತಿಗೊಳಿಸಬೇಕಿದೆ” ಎಂದು ಹೇಳಿದರು.

”ಈ ದೇಶದಲ್ಲಿ ಆಳಬೇಕಾದ ಸಮುದಾಯ ಆಳಿಸಿಕೊಳ್ಳುತ್ತಿದೆ. ರೈತರು ಸಂಘಟಿತರಾದರೆ ಅವರೇ ಚುಕ್ಕಾಣಿ ಹಿಡಿಯಬಹುದು. ದಲಿತರು, ಹಿಙದುಳಿದವರು ತುಂಡುಗಳಾಗಿ ಒಡೆದು ಹೋಗುತ್ತಿರುವ ದಿನಗಳಲ್ಲಿ ಈ ಸಮುದಾಯಗಳಿಂದ ರಾಜಕಾರಣಿಗಳಿಗೆ ಲಾಭವಾಗುತ್ತಿದೆ. ದೇಶದಲ್ಲಿ ಅಲ್ಪಸಂಖ್ಯಾತರಾದ ಮುಸಲ್ಮಾನರು ಮೀಸಲಾತಿ ಎಷ್ಟು ಪಡೆದಿದ್ದಾರೆ. ಸಣ್ಣ ಸಮುದಾಯವಾದ ಬ್ರಾಹ್ಮಣ ಸಮುದಾಯ ಎಷ್ಟು ಮೀಸಲಾತಿ ಪಡೆದಿದೆ. ಇದನ್ನು ಹೆಚ್ಚಾಗಿ ಪ್ರಚಾರ ನೀಡದೆ ಅಲ್ಲಿಯೇ ಒತ್ತುತ್ತಿರುವುದು ವಿಷಾದನೀಯ. ಯಾರಾದರೂ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರೆ ಅವರನ್ನು ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳುವವರು ವಿಶ್ವದಲ್ಲಿರುವ ಬೇರೆ ದೇಶಗಳ ಹೆಸರನ್ನಕ್ಕೆ ಹೇಳುವುದಿಲ್ಲ” ಎಂದರು.

”ಇಲ್ಲಿ ಧರ್ಮವನ್ನು ಹಿಡಿದುಕೊಂಡು ರಾಜಕಾರಣ ಮಾಡಲಾಗುತ್ತಿದೆ ಬದಲಿಗೆ ಆಳುವವರು ರಾಜಧರ್ಮ ಪಾಲಿಸದೆ ಶೂದ್ರರನ್ನು ತುಳಿಯುತ್ತಿರುವುದು ಎಷ್ಟು ಸರಿ ಇದೆ ಎಂದು ಹೇಳಿದರು. ವಿಶ್ವದಲ್ಲಿ ಪಾಕಿಸ್ತಾನವನ್ನು ಭಯೋತ್ಪಾದಕ ದೇಶ ಎಂದು ಹೇಳುವ ನಮ್ಮ ಸರಕಾರಗಳು ಅವರೊಂದಿಗೆ ಏಕೆ ರಾಜ್ಯ ತಾಂತ್ರಿಕ ಭಾಂದವ್ಯವನ್ನು ಮುರಿದುಕೊಂಡಿಲ್ಲ ಎಂಬುದನ್ನು ಈ ದೇಶದ ಜನತೆ ಅರ್ಥಮಾಡಿಕೊಳ್ಳಬೇಕು” ಎಂದು ಎಚ್ಚರಿಸಿದರು.

”ದೇಶದಲ್ಲಿ ಮುಸಲ್ಮಾನ ಸಮುದಾಯ ಬೆರಳು ತೋರಿಸಿ ಅಧಿಕಾರ ಹಿಡಿಯುವ ಪಕ್ಷ ಒಂದು ಅವರ ಹೆಸರಿನಲ್ಲಿ ಶೂದ್ರ ಸಮುದಾಯವನ್ನು ಲೆಕ್ಕಕ್ಕಿಲ್ಲದಂತೆ ಮಾಡುತ್ತಿದ್ದಾರೆ ಮೀಸಲಾತಿಯ ಬಗ್ಗೆ ಮಾತನಾಡುವ ನೇತಾರರು 3% ಇರುವ ಸಮುದಾಯಕ್ಕೆ ಏಕೆ 10% ಮೀಸಲಾತಿ ನೀಡಿದರು. ಇದು ವಿಚಾರ ಮಾಡುವಂಥದ್ದು” ಎಂದರು.

”ನಾವುಗಳು ಇಂದು ಚಿರತೆಯೊಂದು ಜಿಂಕೆಯ ಗುಂಪನ್ನು ದೂರದಿಂದ ನೋಡುತ್ತದೆ. ಮರದ ಮೇಲಿನ ಮುಷಿಯ ಇದನ್ನು ನೋಡಿ ಜೋರಾಗಿ ಕಿರುಚುತ್ತದೆ. ಆಗ ಜಿಂಕೆ ಹಿಂಡು ಅಪಾಯದಿಂದ ಪಾರಾಗಲು ಕೊಡುವ ಸೂಚನೆಯ ಹೊರತು ಇದರಿಂದ ಮರದ ಮೇಲಿನ ಮುಶಿಯಕ್ಕೇನು ಅಪಾಯವಿಲ್ಲ. ಇಂದಿನ ದಿನಮಾನಕ್ಕೆ ಜಾಗೃತರಾಗುವ ಪ್ರಜೆಗಳು ಮುಶಿಯಾದ ಪಾತ್ರ ವಹಿಸಬೇಕು” ಎಂದು ಹೇಳಿದರು.

”ಉದಯ ನಿಧಿ ಸ್ಟಾಲಿನ್ ಹೇಳಿದ ಸನಾತನ ಧರ್ಮದ ಹೇಳಿಕೆಗೆ ಆರಂಭದಲ್ಲಿ ವಿರೋಧ ಉಂಟಾಯಿತು. ಹಿಂದೂಪರ ಸಂಘಟನೆಗಳು ಪ್ರತಿರೋಧ ತೋರಿಸಿದವು. ಆದರೆ ಸನಾತನ ಧರ್ಮದ ಬಗ್ಗೆ ಹೆಚ್ಚಿಗೆ ವಿರೋಧಿಸಿದರೆ ಅಲ್ಲಿ ಇತರ ಸಮುದಾಯಗಳು ನಮ್ಮಿಂದ ದೂರವಾಗಿ ವೋಟ್ ಬ್ಯಾಂಕ್ ಇಲ್ಲದಂತಾಗಬಹುದು ಎಂಬ ಕಾರಣಕ್ಕೆ ಒಂದು ರಾಜಕೀಯ ಪಕ್ಷ ಸುಮ್ಮನಾಗಿದೆ. ಸನಾತನ ಧರ್ಮದ ಬಗ್ಗೆ ಮಾತನಾಡಿದಾಗ ಪ್ರತಿಭಟನೆ ಇಳಿಯುವ ಧರ್ಮರಕ್ಷಕರು ಮಣಿಪುರದಲ್ಲಿ ಕುಕ್ಕಿ ಮತ್ತು ಮೈತೆಯಿ ಈ ಸಮುದಾಯದ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿ ರಸ್ತೆಯಲ್ಲಿ ಮೆರವಣಿಗೆ ಮಾಡುವಾಗ ಎಲ್ಲಿ ಹೋಗಿದ್ದರೆಂದು ಪ್ರಶ್ನಿಸಿದರು. ಈಗಾಗಲೇ ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿ ಹೋರಾಟ ಭುಗಿಲೆದ್ದಿದೆ. ಈ ಕಾರಣದಿಂದ ಸನಾತನ ಧರ್ಮದ ಉದಯ ನಿಧಿ ಸ್ಟಾಲಿನ್ ಹೇಳಿಕೆ ಮೂಲೆಗುಂಪಾಗಿದೆ. ಇವುಗಳ ಬಗ್ಗೆ ಚರ್ಚೆ ನಡೆಯಬೇಕು” ಎಂದರು.

”ಸನಾತನ ಧರ್ಮದ ಕಿರುಕುಳದಿಂದ ಜೈನ ಧರ್ಮ ಉದಯವಾಯಿತು. ಲಿಂಗಾಯತ ಧರ್ಮ ಉದಯವಾಯಿತು. ಅನೇಕರು ಹಿಂದೂ ಧರ್ಮವನ್ನು ತೊರೆದು ಬೌದ್ಧ ಮತ್ತು ಕ್ರಿಶ್ಚಿಯನ್ ಧರ್ಮದ ಕಡೆ ಮುಖ ಮಾಡಿದರು. ಇದಕ್ಕೆಲ್ಲ ಕಾರಣ ಧರ್ಮದಲ್ಲಿ ಇರುವ ತಾರತಮ್ಯ ಇವುಗಳ ಬಗ್ಗೆ ಪ್ರಶ್ನಿಸಿದರೆ ಅವರು ಧರ್ಮವಿರೋಧಿಗಳೆಂಬ ಹಣೆಪಟ್ಟಿ ಕಟ್ಟುತ್ತಾರೆ. ಕೋರ್ಟು, ಕೇಸುಗಳೆಂದು ಅಲೆಯುವಂತೆ ಮಾಡುತ್ತಾರೆ. ಆದರೂ ಸತ್ಯವಾದ ಮಾತನ್ನು ಜನತೆಗೆ ತಿಳಿಸುವ ಕೆಲಸ ಮಾಡಬೇಕಿದೆ. ಅದಕ್ಕಾಗಿ ನಾವೆಲ್ಲರೂ ಸೇರಿ ಮುನ್ನಡೆಯೋಣ” ಎಂದು ಹೇಳಿದರು.

ಇದನ್ನೂ ಓದಿ: ಸನಾತನ ವಿವಾದ: ಉದಯನಿಧಿ ಸ್ಟಾಲಿನ್ ವಿರುದ್ಧ ಮುಂಬೈನಲ್ಲಿ FIR ದಾಖಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read