Homeಮುಖಪುಟಟಿಪ್ಪು ಸುಲ್ತಾನರ ಖಡ್ಗದಲ್ಲಿ ಬರೆದಿರುವುದೇನು...?

ಟಿಪ್ಪು ಸುಲ್ತಾನರ ಖಡ್ಗದಲ್ಲಿ ಬರೆದಿರುವುದೇನು…?

- Advertisement -
- Advertisement -

ಮೇ 4, 1799ರಂದು ಮೈಸೂರು ಹುಲಿ ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಅಕ್ಷರಶಃ ಹುಲಿಯಂತೆಯೇ ಕಾದಾಡಿ ರಣರಂಗದಲ್ಲಿ ಹುತಾತ್ಮರಾದರು. ಟಿಪ್ಪು ಸುಲ್ತಾನರ ಹುತಾತ್ಮತೆಯೊಂದಿಗೆ ಉಪಖಂಡದಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಅಧಿಪತ್ಯ ಸ್ಥಾಪನೆಗಿದ್ದ ಅಡೆ ತಡೆ ಶಾಶ್ವತವಾಗಿ ಇಲ್ಲವಾಯಿತು. ಟಿಪ್ಪು ಹುತಾತ್ಮರಾಗಿ ರಣರಂಗದಲ್ಲಿ ಬಿದ್ಧಾಗ ಅವರ ಕೈಯಲ್ಲಿದ್ದ ಖಡ್ಗವನ್ನು ಬ್ರಿಟಿಷ್ ಸೈನಿಕರು ಎಳೆದುಕೊಂಡು ಹೋದರು. ಅಂತಹದ್ದೇ ಸಾವಿರಾರು ಖಡ್ಗಗಳು ಟಿಪ್ಪು ಸುಲ್ತಾನರ ಆಯುಧ ಮನೆಯಲ್ಲಿತ್ತು. ಅವುಗಳನ್ನೂ ಬ್ರಿಟಿಷರು ದೋಚಿದರು.

ಟಿಪ್ಪು ಸುಲ್ತಾನರು ಹುತಾತ್ಮರಾದಾಗ ಅವರ ಕೈಯಿಂದ ಬ್ರಿಟಿಷ್ ಸೈನಿಕನೋರ್ವ ಎಳೆದು ತೆಗೆದುಕೊಂಡ ಖಡ್ಗವನ್ನು ಲಂಡನ್‌ನ ಮ್ಯೂಸಿಯಂ‌ನಲ್ಲಿಡಲಾಗಿತ್ತು. ಟಿಪ್ಪು ಹುತಾತ್ಮರಾಗಿ ಸುಮಾರು 205 ವರ್ಷಗಳ ಬಳಿಕ ಅಂದರೆ 2004ರಲ್ಲಿ ಉದ್ಯಮಿ ವಿಜಯ್ ಮಲ್ಯ ಹರಾಜಿನಲ್ಲಿ ಒಂದೂವರೆ ಕೋಟಿ ರೂಪಾಯಿ ಪಾವತಿಸಿ ಆ ಖಡ್ಗವನ್ನು ಖರೀದಿಸಿದ್ದರು.
ಆ ಖಡ್ಗದಲ್ಲಿ “ನನ್ನ ಈ ಖಡ್ಗ ಕಾಫಿರರ ನಾಶಕ್ಕಾಗಿ.. ಹೈದರ್ ನನ್ನ ಸಹಾಯಿ… ಅವರು ಕಾಫಿರರ ಕುತಂತ್ರಗಳನ್ನು ನಾಶಪಡಿಸಿದ……” ಹೀಗೆ ಅರಬಿಕ್‌ನಲ್ಲಿ ಬರೆಯಲಾಗಿತ್ತೆಂದು ಟಿಪ್ಪುವಿನ ಕುರಿತಂತೆ ಅಪಪ್ರಚಾರ ಮಾಡುತ್ತಾ ಬರಲಾಗಿದೆ..

ವಾಸ್ತವದಲ್ಲಿ ಆ ಖಡ್ಗದ ಹಿಡಿಕೆಯಲ್ಲಿ ಅರಬಿ ಲಿಪಿಯಲ್ಲಿ ಬರೆದಿರುವುದು “ಯಾ ನಸೀರ್, ಯಾ ಫತಾಹ್, ಯಾ ನಸೀರ್, ಯಾ ಮುಈನ್…” ಎಂಬುದಾಗಿದೆ. ಮತ್ತು ಅದರ ಹಿಡಿಕೆಯ ಎರಡೂ ತುದಿಗಳಲ್ಲಿ ಯಾ ಅಲ್ಲಾಹ್..‌ ಯಾ ಅಲ್ಲಾಹ್… ಎಂದು ಬರೆಯಲಾಗಿದೆ. ಅರಬಿಕ್ ಮತ್ತು ಉರ್ದು ಓದಲು ಬಲ್ಲ ಯಾರು ಬೇಕಾದರೂ ಅಂತರ್ಜಾಲದಲ್ಲಿ ಸಿಗುವ ಆ ಖಡ್ಗದ ಫೋಟೋ ಡೌನ್‌ಲೋಡ್ ಮಾಡಿ ಸುಲಭವಾಗಿ ಓದಬಹುದು..

ಟಿಪ್ಪುವಿನ ಖಡ್ಗದ ಮೇಲಿರುವ ಆ ಅರಬಿಕ್ ಪದಗಳು ಅಲ್ಲಾಹನ ತೊಂಬತ್ತೊಂಬತ್ತು ನಾಮ ವಿಶೇಷಣಗಳಲ್ಲಿ ಕೆಲವಾಗಿದೆ.
ಅವುಗಳ ಅರ್ಥ ಈ ರೀತಿಯಾಗಿದೆ.
ಯಾ ನಸೀರ್ = ಓ ಸಹಾಯ ನೀಡುವವನೇ…
ಯಾ ಫತಾಹ್ = ಓ ಯಶಸ್ಸು ನೀಡುವವನೇ…
ಯಾ ಝಹೀರುಲ್ಲಾಹ್ = ಓ ಬೆಳಕು ತೋರುವವನೇ…
ಓ ಅಲ್ಲಾಹ್…ಓ ಅಲ್ಲಾಹ್..
ಅದರಲ್ಲಿ ಎಲ್ಲೂ ಕಾಫಿರ್ ಎಂಬ ಅರಬಿಕ್‌ ಪದ ಬಳಸಲಾಗಿಲ್ಲ.
ಮತ್ತು ಮುಸ್ಲಿಮರ ವಿಶ್ವಾಸದ ಪ್ರಕಾರ ತಂದೆ- ತಾಯಿಯನ್ನು ಯಾರೂ ದೈವತ್ವಕ್ಕೇರಿಸುವುದಿಲ್ಲ. ಹೈದರ್ ನನಗೆ ಸಹಾಯ ನೀಡುವವನು ಎಂದು ಬರೆಯಲಾಗಿದೆ ಎಂದೂ ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ವಾಸ್ತವವಾಗಿ ಅದರಲ್ಲೆಲ್ಲೂ ಹೈದರನ ಹೆಸರೇ ಇಲ್ಲ..

ಅಂತರ್ಜಾಲದಲ್ಲಿ ಟಿಪ್ಪುವಿನ ಖಡ್ಗದಲ್ಲಿ ಬರೆದಿಡಲಾಗಿದೆ ಎನ್ನುವ ವಾಕ್ಯಗಳು ಮೈಸೂರು ಗೆಜೆಟಿಯರ್‌ನದ್ದೆಂದೂ ಇದೆ. ನಿಜಕ್ಕೂ ಮೈಸೂರು ಗೆಜೆಟಿಯರ್‌ನಲ್ಲಿ ಅಂತಹ ವಾಕ್ಯಗಳಿವೆಯೋ ನಾನರಿಯೆ.
………………….

ಟಿಪ್ಪು ಸುಲ್ತಾನರ ಇನ್ನೂ ಕೆಲವು ಖಡ್ಗಗಳನ್ನು ವೀಕ್ಷಿಸಿ ಅವುಗಳಲ್ಲಿ ಬರೆದಿಡಲ್ಪಟ್ಟ ಕೆಲವು ಅರಬಿಕ್ ವಾಕ್ಯಗಳನ್ನು ಓದಿದ ಯೂ ಟ್ಯೂಬರ್ ಒಬ್ಬರು ಅವುಗಳ ಕುರಿತಂತೆ ಯೂ ಟ್ಯೂಬ್‌‌ನಲ್ಲಿ ಉರ್ದು ಭಾಷೆಯ ವೀಡಿಯೋವೊಂದನ್ನು ಅಪ್‌ಲೋಡ್ ಮಾಡಿದ್ದಾರೆ.
ಎರಡು ಬೇರೆ ಬೇರೆ ಖಡ್ಗಗಳಲ್ಲಿ ಖುರ್‌ಆನಿನ ವಾಕ್ಯಗಳನ್ನು ಬರೆದಿಡಲಾಗಿದೆ.
ಒಂದು ಖಡ್ಗದಲ್ಲಿ ಖುರ್‌ಆನಿನ ಎರಡನೇ ಅಧ್ಯಾಯವಾದ ಸೂರಃ ಅಲ್ ಬಕರಾ ಇದರ ನೂರ ಎಂಟನೇ ವಾಕ್ಯದ ಒಂದು ಭಾಗವನ್ನು ಬರೆಯಲಾಗಿದೆ. ಅದರ ಅರ್ಥ “ನಿಶ್ಚಯವಾಗಿಯೂ ಅಲ್ಲಾಹನು ಸರ್ವಶಕ್ತನು…”

ಇನ್ನೊಂದು ಖಡ್ಗದಲ್ಲಿ ಖುರ್‌ಆನ್‌ನ ಅಸ್ಸ್ವಪ್ಫ್ ಎಂಬ ಇಪ್ಪತ್ತೊಂದನೇ ಅಧ್ಯಾಯದ ವಾಕ್ಯವೊಂದನ್ನು ಬರೆದಿಡಲಾಗಿದೆ. ಅದರ ಅರ್ಥ ಇಂತಿದೆ “ಅಲ್ಲಾಹನ ಸಹಾಯದಿಂದ ಯಶಸ್ಸು ಸನಿಹದಲ್ಲೇ ಇದೆ.. ಅಲ್ಲಾಹನ ಮೇಲೆ ಭರವಸೆ ಇಡುವವನಿಗೆ ಅಲ್ಲಾಹನೇ ಸಾಕು…”
………………

ಟಿಪ್ಪು ಬೇರೆ ರಾಜರುಗಳಂತಲ್ಲ, ಸ್ವಯಂ ರಣರಂಗಕ್ಕಿಳಿದು ಹೋರಾಡುತ್ತಿದ್ದವರು, ಹೋರಾಡುತ್ತಲೇ ಮಡಿದವರು. ಟಿಪ್ಪು ಇಸ್ಲಾಂ ಧರ್ಮಾನುಯಾಯಿಯಾಗಿದ್ದುದರಿಂದ ಸಹಜವಾಗಿಯೇ ತನ್ನ ಸ್ವಂತ ಬಳಕೆಯ ಖಡ್ಗಗಳಲ್ಲಿ ಈ ರೀತಿ ಇಸ್ಲಾಮಿಗೆ ಸಂಬಂಧಿಸಿದ ನಂಬಿಕೆಗಳನ್ನು ಬರೆಸಿದ್ದರೇ ಹೊರತು ವಸಾಹತುಶಾಹಿ ಪರ ಇತಿಹಾಸಕಾರರು, ಬಲಪಂಥೀಯ ಇತಿಹಾಸಕಾರರು ಸುಳ್ಳು ಸುಳ್ಳೇ ದಾಖಲಿಸಿದ ಯಾವುದೇ ಮತೀಯ ದ್ವೇಷದ ಬರಹಗಳೂ‌ ಟಿಪ್ಪುವಿನ ಖಡ್ಗದಲ್ಲಿ ಕಾಣಸಿಗದು. ಈ ಲೇಖನದ ಮೊದಲ ಭಾಗದಲ್ಲೇ ಬರೆದಂತೆ ಅದರಲ್ಲಿ‌ ಟಿಪ್ಪು ತನ್ನ ಆರಾಧ್ಯನಾದ ಅಲ್ಲಾಹನಲ್ಲಿ‌ ತನ್ನ ನಂಬಿಕೆಯ ಪ್ರಕಾರ ಸಹಾಯ ಯಾಚಿಸುವ ಬರಹಗಳಿವೆಯೇ ಹೊರತು ಅದರಲ್ಲಾಗಲೀ, ಬೇರೆ ಯಾವ ಖಡ್ಗದಲ್ಲಾಗಲೀ ಕಾಫಿರರ (ಮುಸ್ಲಿಮೇತರರ) ಕುರಿತಂತಾಗಲೀ, ತನ್ನ ತಂದೆ ಹೈದರ್ ಕುರಿತಾಗಲೀ ಯಾವುದೇ ಪ್ರಸ್ತಾಪವಿಲ್ಲ.

ವಿರೋಧಿಗಳು ಟಿಪ್ಪುವನ್ನು ಎಷ್ಟು ಹಳಿಯುತ್ತಾರೋ.. ಅಷ್ಟು ಟಿಪ್ಪುವಿನ ನಿಜ ವ್ಯಕ್ತಿತ್ವದ ಕುರಿತ ಅಧ್ಯಯನಗಳು ಆಗುತ್ತಲೇ ಇರುತ್ತವೆ.

ನಾನು ಅನೇಕ ಬಾರಿ ಯೋಚಿಸಿದ್ದಿದೆ, ಇನ್ನು ಟಿಪ್ಪುವಿನ ಜನಪರ ಕೆಲಸಗಳು, ಸುಧಾರಣೆಗಳು ಇತ್ಯಾದಿಗಳ ಕುರಿತಂತೆ ಮಾತ್ರ ಬರೆಯಬೇಕು. ಯಾವುದೇ ಕಾರಣಕ್ಕೂ ಟಿಪ್ಪುವಿನ ಧಾರ್ಮಿಕ ನೀತಿಗಳ ಕುರಿತಂತೆ ಬರೆಯಬಾರದು.. ಆದರೆ ಟಿಪ್ಪು ವಿರೋಧಿ ಹಿತಾಸಕ್ತಿಗಳು ಮತ್ತೆ ಮತ್ತೆ ಟಿಪ್ಪುವಿನ ಕುರಿತಂತೆ ಸುಳ್ಳು ಪ್ರಚಾರ ನಡೆಸುವಾಗ ಮತ್ತೆ ಮತ್ತೆ ಅವರ ಅಪ ಪ್ರಚಾರಗಳಿಗೆ ಉತ್ತರ ನೀಡಲೇ ಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ನನಗೆ ಅನೇಕ ಬಾರಿ ಅನ್ನಿಸುವುದಿದೆ “ಇವರು ದುರುದ್ದೇಶಪೂರ್ವಕವಾಗಿಯೇ ಇಂತಹ ಚರ್ಚೆಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ” ಎಂದು. ಇದರಿಂದ ನಮ್ಮ ಚರ್ಚೆಗಳು ಅಲ್ಲಿಯೇ ಗಿರಕಿ ಹೊಡೆಯುತ್ತಾ ಟಿಪ್ಪು ಮಾಡಿದ ಅಪಾರ ಸುಧಾರಣೆಗಳು, ಜನಪರ ಕೆಲಸಗಳು, ಟಿಪ್ಪುವಿನ ಕೊಡುಗೆಗಳು ಚರ್ಚೆಗೆ ಬರದೇ ಇರಲಿ ಎನ್ನುವುದೂ ಅವರ ಹಿಡನ್ ಅಜೆಂಡಾ…
*****

  • ಇಸ್ಮತ್ ಪಜೀರ್

(ಮಂಗಳೂರಿನ ಯುವ ಲೇಖಕರಾದ ಇಸ್ಮತ್ ಪಜೀರ್ ಬ್ಯಾರಿ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿದ್ದರು. ಆದರೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರರ ಮೇಲಿನ ಹಲ್ಲೆ ಖಂಡಿಸಿ ಅದಕ್ಕೆ ರಾಜೀನಾಮೆ ನೀಡಿ ಹೊರಬಂದವರು. ತಮ್ಮದೇ ಆದ ಪಾಲಿಕ್ಲಿನಿಕ್ ನಡೆಸುತ್ತಿದ್ದಾರೆ.)


ಇದನ್ನೂ ಓದಿ: ಟಿಪ್ಪು ಜನ್ಮ ದಿನಾಚರಣೆ: ಮೈಸೂರು ಹುಲಿ ಟಿಪ್ಪುವಿನ ಪುಸ್ತಕ ಪ್ರೇಮ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಟಿಪ್ಪು ಲೀಡರ್ ಅಷ್ಟೇ ಸ್ವತಂತ್ರ ಹೋರಾಟಗಾರ ಅಲ್ಲ..
    ತುಂಬಾ ಜನ ಸ್ವತಂತ್ರ ಹೋರಾಟಗಾರರು ಇದಾರೆ ಅವ್ರನ್ನ ಗುರ್ತಿಸಿ. ಬೆಂಕಿ ಹಚ್ಚುವ ಕೆಲಸ ಮಾಡಬೇಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...