Homeಮುಖಪುಟವಾಟ್ಸಾಪ್ ಸರ್ವರ್ ಡೌನ್: ಒಂದೂವರೆ ಗಂಟೆ ಕಾಲ ಬಳಕೆದಾರರಿಗೆ ಅಡಚಣೆ

ವಾಟ್ಸಾಪ್ ಸರ್ವರ್ ಡೌನ್: ಒಂದೂವರೆ ಗಂಟೆ ಕಾಲ ಬಳಕೆದಾರರಿಗೆ ಅಡಚಣೆ

ಇಂಗ್ಲೆಂಡ್, ಇಟಲಿ ಮತ್ತು ಟರ್ಕಿಯಲ್ಲಿಯೂ ವಾಟ್ಸಾಪ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ವರದಿಯಾಗಿತ್ತು.

- Advertisement -
- Advertisement -

ಭಾರತ ಸೇರಿದಂತೆ ಹಲವು ದೇಶಗಳಲ್ಲಿ ವಾಟ್ಸಾಪ್ ಅಪ್ಲಿಕೇಶನ್ ಸರ್ವರ್ ಡೌನ್‌ ಆಗಿ ಸುಮಾರು ಒಂದೂವರೆ ಗಂಟೆ ಕಾಲ ಬಳಕೆದಾರರಿಗೆ ಅಡಚಣೆಯಾಯಿತು. ಹಾಗಾಗಿ ಯಾವುದೇ ಸಂದೇಶ ಕಳುಹಿಸಲು, ಸ್ವೀಕರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ಏರ್ಪಟ್ಟಿತ್ತು.

ಇಂದು ಮಧ್ಯಾಹ್ನ 12 ಗಂಟೆಯಿಂದ ಪ್ರಾರಂಭವಾದ ವಾಟ್ಸಾಪ್ ಸಮಸ್ಯೆಯು 12.30ರ ಸಮಯಕ್ಕೆ ಬಹುತೇಕ ಕಡೆ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿತ್ತು. ಈ ಕುರಿತು ಆನ್‌ಲೈನ್‌ನಲ್ಲಿ ಬಹಳಷ್ಟು ಮಂದಿ ರಿಪೋರ್ಟ್ ಮಾಡಿದ್ದರು.

ಪ್ರಮುಖ ಮೆಸೇಂಜಿಂಗ್ ಆಪ್ ಆದ ವಾಟ್ಸಾಪ್ ಭಾರತದಲ್ಲಿ ಅತಿಹೆಚ್ಚು ಜನಪ್ರಿಯತೆ ಹೊಂದಿರುವ ಮತ್ತು ಹೆಚ್ಚಿನ ಜನ ಬಳಸುವ ಅಪ್ಲಿಕೇಶನ್ ಆಗಿದೆ. ಇಂಗ್ಲೆಂಡ್, ಇಟಲಿ ಮತ್ತು ಟರ್ಕಿಯಲ್ಲಿಯೂ ಸಹ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬಿಬಿಸಿ ವರದಿ ಮಾಡಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ವಾಟ್ಸಾಪ್ ಮಾತೃಕಂಪನಿಯಾದ ಮೆಟಾ ಕೂಡಲೇ ಸರಿಪಡಿಸಲಾಗುವುದು. ಕೆಲವೇ ನಿಮಿಷಗಳಲ್ಲಿ ಅದು ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿತು.

“ಕೆಲವರು ಪ್ರಸ್ತುತ ಸಂದೇಶಗಳನ್ನು ಕಳುಹಿಸುವಲ್ಲಿ ತೊಂದರೆ ಎದುರಿಸುತ್ತಿದ್ದಾರೆ ಎಂದು ನಮಗೆ ತಿಳಿದಿದೆ ಮತ್ತು ಸಾಧ್ಯವಾದಷ್ಟು ಬೇಗ ಎಲ್ಲರಿಗೂ WhatsApp ಅನ್ನು ಮರುಸ್ಥಾಪಿಸಲು ನಾವು ಕೆಲಸ ಮಾಡುತ್ತಿದ್ದೇವೆ” ಎಂದು WhatsApp, Facebook ಮತ್ತು Instagram ಮಾಲಿಕತ್ವ ಹೊಂದಿರುವ ಕಂಪನಿಯಾದ Meta ವಕ್ತಾರರು ತಿಳಿಸಿದರು.

ವಾಟ್ಸಾಪ್ ಡೌನ್ ಆದ ನಂತರ ಟ್ವಿಟರ್‌ನಲ್ಲಿ ಮೀಮ್‌ಗಳು ಹರಿದಾಡಿದವು. ಶೀಘ್ರದಲ್ಲೇ ಸಮಸ್ಯೆಯನ್ನು ಬಗೆಹರಿಸಲಾಗಿದೆ.

ಇದನ್ನೂ ಓದಿ; ಕೇವಲ 5 ನಿಮಿಷದ ಕಿರು ಚಿತ್ರ ನಿರ್ಮಾಣಕ್ಕೆ 4.5ಕೋಟಿ ರೂ ಖರ್ಚು: KRS ಪಕ್ಷದಿಂದ ಖಂಡನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಹುಲ್ ಗಾಂಧಿಯನ್ನು ರಾಯ್ ಬರೇಲಿ ಜನರಿಗೆ ಕೊಡುತ್ತಿದ್ದೇನೆ; ಅವನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ: ಸೋನಿಯಾ ಗಾಂಧಿ

0
'ನನ್ನ ಮಗನನ್ನು ರಾಯ್ ಬರೇಲಿಯ ಜನರಿಗೆ ನೀಡುತ್ತಿದ್ದೇನೆ; ರಾಹುಲ್ ಗಾಂಧಿ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ' ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ. 20 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ...