Homeಮುಖಪುಟಸಂಸತ್ತಿನ ಭದ್ರತಾ ಲೋಪ: ಅವಲೋಕನ ಮಾಡಬೇಕಾದ ಅಂಶಗಳಿವು..

ಸಂಸತ್ತಿನ ಭದ್ರತಾ ಲೋಪ: ಅವಲೋಕನ ಮಾಡಬೇಕಾದ ಅಂಶಗಳಿವು..

- Advertisement -
- Advertisement -

ಭಾರತದ ಸಂಸತ್ತಿಗೆ ಡಿ.13ರಂದು ಇಬ್ಬರು ಯುವಕರು ನುಗ್ಗಿದ್ದರು. ಸಂಸತ್ತಿನಲ್ಲಿ ನಡೆದ ಭದ್ರತಾ ಲೋಪ ದೇಶದಲ್ಲಿ ಭಾರೀ ಸುದ್ದಿಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಸಂಸತ್ತಿನ ಒಳಗೆ ಇಬ್ಬರು ಮತ್ತು ಹೊರಗೆ ಇಬ್ಬರು ಸೇರಿ ಈವರೆಗೆ 6 ಮಂದಿಯನ್ನು ಬಂಧಿಸಲಾಗಿದೆ. ಆರು ಆರೋಪಿಗಳ ಪೈಕಿ ನಾಲ್ವರ ವಿರುದ್ಧ ಕಠಿಣ ಭಯೋತ್ಪಾದನಾ ವಿರೋಧಿ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಕೆಲವು ಮುಖ್ಯವಾಹಿನಿಯ ಮಾಧ್ಯಮಗಳು ಈ ಘಟನೆಯನ್ನು ಭಯೋತ್ಪಾದನಾ ದಾಳಿ ಎಂದು ಹೇಳಿಕೊಂಡಿದೆ. ಅದರೆ ಅವರ ಕುಟುಂಬಗಳು ಮತ್ತು ಸ್ನೇಹಿತರ ಮಾಧ್ಯಮ ಸಂದರ್ಶನಗಳನ್ನು ಗಮನಿಸಿದಾಗ ಈ ನಾಲ್ವರು ನಿರುದ್ಯೋಗ ಸಮಸ್ಯೆಯಿಂದ ಬೇಸತ್ತಿದ್ದರು ಎನ್ನುವುದು ಕಂಡು ಬರುತ್ತದೆ. ಸಂಸತ್ತಿನಲ್ಲಿ ನಡೆದ ಭದ್ರತಾಲೋಪವು ಸಮರ್ಥನೀಯವಲ್ಲ. ಆದರೆ ಅದಕ್ಕೆ ಕಾರಣವಾಗಿ ಆರೋಪಿಗಳು ಮುಂದಿಟ್ಟಿರುವ ವಿಚಾರಗಳ ಬಗ್ಗೆ ಅವಲೋಕನ ಕೂಡ ನಡೆಸಬೇಕಿದೆ.

ಹೊಗೆ ಡಬ್ಬಿಗಳನ್ನು ಹಿಡಿದುಕೊಂಡು ಸಂಸತ್ತಿನ ಕಟ್ಟಡದ ಹೊರಗೆ ಸರ್ವಾಧಿಕಾರ ಧೋರಣೆಯ ವಿರುದ್ಧ ಘೋಷಣೆಗಳನ್ನು ಕೂಗಿದ ಆರೋಪಿಗಳಲ್ಲಿ ಒಬ್ಬರಾದ ನೀಲಂ ಆಜಾದ್, ನಾವು ನಮ್ಮ ಹಕ್ಕುಗಳಿಗಾಗಿ ಹೋರಾಡಲು ಪ್ರಯತ್ನಿಸಿದಾಗಲೆಲ್ಲಾ ಲಾಠಿ ಚಾರ್ಜ್ ಮಾಡಿ ಬಂಧಿಸಲಾಗುತ್ತದೆ. ನಮಗೆ ಬೇರೆ ದಾರಿ ಇರಲಿಲ್ಲ. ನಾವು ಯಾವುದೇ ಸಂಘಟನೆಯಿಂದ ಬಂದವರಲ್ಲ, ನಾವು ಸಾಮಾನ್ಯ ಜನರು, ವಿದ್ಯಾರ್ಥಿಗಳು, ನಿರುದ್ಯೋಗಿ ಯುವಕರು. ನಮ್ಮ ಪೋಷಕರು ಕಷ್ಟಪಟ್ಟು ದುಡಿಯುವ ಕಾರ್ಮಿಕರು, ರೈತರು.  ನಮ್ಮ ಧ್ವನಿಯನ್ನು ಹತ್ತಿಕ್ಕಲಾಗಿದೆ ಎಂದು ಹೇಳಿದ್ದರು.

ಸಂಸತ್ತಿನಲ್ಲಿ ನಡೆದ ಭದ್ರತಾ ಲೋಪದ ಕುರಿತು ತನಿಖೆಯ ಅಧಿಕೃತ ವರದಿಗಳು ಇನ್ನೂ ಬಹಿರಂಗವಾಗಿಲ್ಲ. ಆದರೆ ನಾಲ್ವರು ಆರೋಪಿಗಳು ನಿರುದ್ಯೋಗ ಸಮಸ್ಯೆಯಿಂದ ತತ್ತರಿಸಿದ್ದರು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಸರಕಾರಗಳು ಯುವ ಸಮುದಾಯಕ್ಕೆ ಉದ್ಯೋಗ ಸೃಷ್ಟಿ ವಿಚಾರದಲ್ಲಿ ನಿರ್ಲಕ್ಷ್ಯ ತೋರಿರುವುದು ಸುಳ್ಳಲ್ಲ. ಇತ್ತೀಚೆಗೆ ದೇಶದಲ್ಲಿ ಯುವ ಸಮುದಾಯಗಳು ಉದ್ಯೋಗ ಸಿಗದೆ ಅಸಮಾಧಾನಿತರಾಗಿದ್ದಾರೆ. ಜನವರಿ 2022ರಲ್ಲಿ ಸಾವಿರಾರು ಉದ್ಯೋಗಾಕಾಂಕ್ಷಿಗಳು ನೇಮಕಾತಿಯಲ್ಲಿ ಅಕ್ರಮಗಳ ಬಗ್ಗೆ ಆಂದೋಲನಗಳನ್ನು ನಡೆಸಿದ್ದರು. ಬಿಹಾರದಲ್ಲಿ ಹಲವಾರು ರೈಲ್ವೇ ಕೋಚ್‌ಗಳನ್ನು ಸುಟ್ಟುಹಾಕಿ ಪ್ರತಿಭಟನೆ ನಡೆಸಿದ್ದರು.

ಜೂನ್ 2022ರಲ್ಲಿ ಸಶಸ್ತ್ರ ಪಡೆಗಳಿಗೆ ಅಗ್ನಿಪಥ್ ನೇಮಕಾತಿ ಯೋಜನೆಯ ಬಗ್ಗೆ ತೆಲಂಗಾಣ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆದಿದ್ದವು. ಈ ಯೋಜನೆಯಡಿಯಲ್ಲಿ ಅಭ್ಯರ್ಥಿಗಳನ್ನು ನಾಲ್ಕು ವರ್ಷಗಳ ಅವಧಿಗೆ ಮಾತ್ರ ನೇಮಕ ಮಾಡಲಾಗುತ್ತದೆ ಮತ್ತು ಅಭ್ಯರ್ಥಿಗಳ ವಯಸ್ಸಿನ ಮಿತಿ  ಉದ್ಯೋಗಾಕಾಂಕ್ಷಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಪ್ರತಿಭಟನೆಯ ನಂತರ ಸರ್ಕಾರವು ಆ ಗರಿಷ್ಠ ವಯಸ್ಸಿನ ಮಿತಿಯನ್ನು 21 ರಿಂದ 23 ಕ್ಕೆ ಏರಿಸಿತು. ಸಂಸತ್ತಿನಲ್ಲಿ ಭದ್ರತಾ ಲೋಪ ಪ್ರಕರಣದ ಆರೋಪಿಗಳಲ್ಲಿ ಓರ್ವನಾದ ಮಹಾರಾಷ್ಟ್ರದ ಅಮೋಲ್ ಶಿಂಧೆ (25) ಈ ವಯಸ್ಸಿನ ಮಿತಿಯನ್ನು ದಾಟಿದ್ದರಿಂದ ಇತರ ನೇಮಕಾತಿ ಆಯ್ಕೆಗಳನ್ನು ಹುಡುಕುತ್ತಿದ್ದರು ಎಂದು ಲಾತೂರ್‌ನಲ್ಲಿ ಕೃಷಿ ಕೆಲಸಗಾರರಾಗಿರುವ ಅವರ ತಂದೆ ಹೇಳಿದ್ದಾರೆ. ಅಮೋಲ್‌ಗೆ ಸೇನೆ ಅಥವಾ ಪೋಲಿಸ್‌ನಲ್ಲಿ ಕೆಲಸ ನಿರೀಕ್ಷಿಸಿದ್ದ. ಆದರೆ ವಿಫಲ ಪ್ರಯತ್ನಗಳಿಂದ ಹತಾಶನಾಗಿದ್ದ ಎಂದು ಆತನ ತಂದೆ ಟೈಮ್ಸ್ ಆಫ್ ಇಂಡಿಯಾಗೆ ಹೇಳಿದ್ದರು.

ಇನ್ನೋರ್ವ ಆರೋಪಿ ನೀಲಂ ಆಜಾದ್ ಹರ್ಯಾಣ ರಾಜ್ಯದವರು.  2022ರಲ್ಲಿ ಹರ್ಯಾಣವು ಭಾರತದಲ್ಲಿ ಅತಿ ಹೆಚ್ಚು ನಿರುದ್ಯೋಗ ದರವನ್ನು 37.4% ಹೊಂದಿದೆ ಎಂದು ತಿಂಕ್ ಟ್ಯಾಂಕ್‌ (think tank) ವರದಿಯು ಬಹಿರಂಗಪಡಿಸಿತ್ತು. ಭಾರತದ ನಿರುದ್ಯೋಗ ದರವು 2022-23ರಲ್ಲಿ 10.05% ಕ್ಕೆ ಏರಿಕೆಯಾಗಿದೆ ಎಂದು CMIE ಡೇಟಾವು ಬಹಿರಂಗಪಡಿಸಿತ್ತು. ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗವು 6.2% ರಿಂದ 10.82% ಕ್ಕೆ ಏರಿಕೆಯಾಗಿದೆ ಎಂದು ವರದಿಯು ತಿಳಿಸಿತ್ತು. ಲೋಕನೀತಿ ಸಿಎಸ್‌ಡಿಸಿ ಇತ್ತೀಚಿನ ಅಧ್ಯಯನವು 15 ರಿಂದ 34 ವರ್ಷ ವಯಸ್ಸಿನ 36% ಭಾರತೀಯರು ನಿರುದ್ಯೋಗವನ್ನು ದೇಶದ ಅತಿದೊಡ್ಡ ಸಮಸ್ಯೆಯಾಗಿ ನೋಡುತ್ತಾರೆ ಎಂದು ಹೇಳಿತ್ತು.

ಮಾಧ್ಯಮ ವರದಿಗಳ ಪ್ರಕಾರ, ನೀಲಂ ಆಜಾದ್ (37) ತನ್ನ ಎಂಫಿಲ್ ಶಿಕ್ಷಣ ಮುಗಿಸಿ ಹರ್ಯಾಣ ಶಿಕ್ಷಕರ ಅರ್ಹತಾ ಪರೀಕ್ಷೆ  ಮತ್ತು ರಾಷ್ಟ್ರೀಯ ಅರ್ಹತಾ ಪರೀಕ್ಷೆಯನ್ನು(ನೀಟ್‌) ತೇರ್ಗಡೆ ಹೊಂದಿದ್ದರು. ಆದರೆ ಅವರಿಗೆ ಸರಾಕಾರಿ ಹುದ್ದೆ ಸಿಕ್ಕಿರಲಿಲ್ಲ. ಆಕೆ ಕಳೆದ ಕೆಲವು ತಿಂಗಳುಗಳಿಂದ ದೆಹಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಳು. ಬಂಧನದಲ್ಲಿರುವಾಗ ಮಾಧ್ಯಮಗಳಿಗೆ ಹೇಳಿದಂತೆ ಅವಳು ಸಾಮಾನ್ಯ ಕುಟುಂಬದಿಂದ ಬಂದವಳು, ತಂದೆ ಸಿಹಿತಿಂಡಿ ವ್ಯಾಪಾರ ಮಾಡುತ್ತಾರೆ ಮತ್ತು ಸಹೋದರ ಹಾಲು ಮಾರಾಟಗಾರರಾಗಿದ್ದ. ಮಗಳು ಉದ್ಯೋಗ ಸಿಗದೆ ಖಿನ್ನತೆಯಿಂದಿದ್ದಳು ಎಂದು ಆಕೆಯ ತಾಯಿ ಮಾದ್ಯಮದ ಜೊತೆ ಮಾತನಾಡುವಾಗ ಹೇಳಿದ್ದರು.

ಮತ್ತೊಬ್ಬ ಆರೋಪಿ ಸಾಗರ್ ಶರ್ಮಾ (25) ಅಮೋಲ್ ಶಿಂಧೆಯಂತೆಯೇ 12ನೇ ತರಗತಿಯ ನಂತರ ತನ್ನ ಶಿಕ್ಷಣವನ್ನು ನಿಲ್ಲಿಸಿದ್ದ. ಲಕ್ನೋದಲ್ಲಿನ ಬಡಗಿಯೊಬ್ಬರ ಮಗ, ಸಾಗರ್ 2018ರಲ್ಲಿ ಬೆಂಗಳೂರಿಗೆ ಕೆಲಸಕ್ಕಾಗಿ ತೆರಳಿದ್ದ. ಆದರೆ ಕೋವಿಡ್ ಸಾಂಕ್ರಾಮಿಕದ ವೇಳೆ ಮನೆಗೆ ಮರಳಿದ್ದಾನೆ. ಕಳೆದ ಕೆಲವು ತಿಂಗಳುಗಳಿಂದ ಬಾಡಿಗೆಗೆ ರಿಕ್ಷಾವನ್ನು ಓಡಿಸುತ್ತಿದ್ದ. ಆತನಿಗೆ ಸರಿಯಾದ ಉದ್ಯೋಗ ಇರಲಿಲ್ಲ.

ಸಾಗರ್ ಅವರೊಂದಿಗೆ ಲೋಕಸಭೆಯ ಒಳಗೆ ಡಬ್ಬಿಗಳಿಂದ ಬಣ್ಣದ ಹೊಗೆಯನ್ನು ಬಿಡುಗಡೆ ಮಾಡಿದ ಮನೋರಂಜನ್ ಡಿ(33) ಮೈಸೂರಿನಲ್ಲಿ ಇಂಜಿನಿಯರಿಂಗ್ ಪದವೀಧರನಾಗಿದ್ದಾನೆ. ಈ ಹಿಂದೆ ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಈಗ ಕೆಲಸ ಬಿಟ್ಟು ತಂದೆಗೆ ಫಾರ್ಮ್‌ವರ್ಕ್‌ನಲ್ಲಿ ಸಹಾಯ ಮಾಡುತ್ತಿದ್ದ. ಆತನಿಗೂ ಸೂಕ್ತ ಉದ್ಯೋಗ ಇರಲಿಲ್ಲ.

ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಪ್ರಕಾರ 2010ರಲ್ಲಿ ಭಾರತದಲ್ಲಿ 15 ರಿಂದ 24 ವರ್ಷ ವಯಸ್ಸಿನ ಯುವಕರಲ್ಲಿನ ನಿರುದ್ಯೋಗ ದರ 19% ದಷ್ಟಿತ್ತು. 2022ರಲ್ಲಿ ಇದು 23% ರಷ್ಟು ಹೆಚ್ಚಳವಾಗಿದೆ. ಈ ಅಂಕಿ ಅಂಶಗಳು ಸೂಚಿಸುವಂತೆ ನಿರುದ್ಯೋಗವು ದೇಶದ ಯುವಜನರ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಿದೆ. ಲಕ್ಷಾಂತರ ರೂ. ವೆಚ್ಚಮಾಡಿ ಉನ್ನತ ಶಿಕ್ಷಣವನ್ನು ಪಡೆದರೂ ಉದ್ಯೋಗ ಸಿಗದೆ ಯುವ ಸಮುದಾಯ ಒತ್ತಡಕ್ಕೆ ಒಳಗಾಗಿದೆ. ಆದ್ದರಿಂದ ಸಂಸತ್ತಿನ ಭದ್ರತಾ ಲೋಪದ ಕುರಿತು ಚರ್ಚಿಸುವಾಗ ಅದಕ್ಕೆ ಆರೋಪಿಗಳು ಮುಂದಿಟ್ಟ ಕಾರಣಗಳನ್ನು ಕೂಡ ಪರಿಶೀಲಿಸಬೇಕಾದ ಅಗತ್ಯವಿದೆ.

ಇದನ್ನು ಓದಿ: ಮಧ್ಯಪ್ರದೇಶ: ಹಿಂದುಳಿದ ವರ್ಗದ ನಾಯಕ ಪಟ್ವಾರಿಗೆ ಕಾಂಗ್ರೆಸ್‌ ಸಾರಥ್ಯ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಹುಲ್ ಗಾಂಧಿಯನ್ನು ರಾಯ್ ಬರೇಲಿ ಜನರಿಗೆ ಕೊಡುತ್ತಿದ್ದೇನೆ; ಅವನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ: ಸೋನಿಯಾ ಗಾಂಧಿ

0
'ನನ್ನ ಮಗನನ್ನು ರಾಯ್ ಬರೇಲಿಯ ಜನರಿಗೆ ನೀಡುತ್ತಿದ್ದೇನೆ; ರಾಹುಲ್ ಗಾಂಧಿ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ' ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ. 20 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ...