Homeಮುಖಪುಟಆಂಧ್ರಪ್ರದೇಶ: ಜಗನ್‌ ಸರ್ಕಾರ ತನ್ನದೇ ಟಿ.ವಿ. ಚಾನೆಲ್ ಆರಂಭಿಸುತ್ತಿರುವುದೇಕೆ?

ಆಂಧ್ರಪ್ರದೇಶ: ಜಗನ್‌ ಸರ್ಕಾರ ತನ್ನದೇ ಟಿ.ವಿ. ಚಾನೆಲ್ ಆರಂಭಿಸುತ್ತಿರುವುದೇಕೆ?

- Advertisement -
- Advertisement -

ಆಂಧ್ರಪ್ರದೇಶದ ಸರ್ಕಾರಿ ಸ್ವಾಮ್ಯದ ಘಟಕವಾದ ಆಂಧ್ರಪ್ರದೇಶ ಸ್ಟೇಟ್ ಫೈಬರ್‌ನೆಟ್ ಲಿಮಿಟೆಡ್ (APSFL), ಈಗ ಸರ್ಕಾರದ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು, 2024ರ ವಿಧಾನಸಭೆಯಲ್ಲಿ ಜನರನ್ನು ಜಗನ್‌ ಮೋಹನ್‌ ರೆಡ್ಡಿಯವರತ್ತ ಸೆಳೆಯಲು ‘ಎಪಿ ಫೈಬರ್ ನ್ಯೂಸ್’ ಎಂಬ ಟಿವಿ ಚಾನೆಲ್ ಆರಂಭಿಸಲು ಮುಂದಾಗಿದೆ.

ಜನರು ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಈ ಚಾನೆಲ್‌ ಕಾರ್ಯನಿರ್ವಹಿಸಲಿದೆ. ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳು, ಅನುಷ್ಠಾನಗೊಳ್ಳುತ್ತಿರುವ ಅಭಿವೃದ್ಧಿ ಯೋಜನೆಗಳು ಮತ್ತು ಜಗನ್‌ ಅವರ ಕಾರ್ಯಕ್ರಮಗಳನ್ನು ‌ಈ ಚಾನೆಲ್‌ ಪ್ರಸಾರ ಮಾಡಲಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಎಲ್ಲಾ ಸುದ್ದಿಗಳನ್ನು ಚಾನಲ್ ತನ್ನ ಫೈಬರ್-ಟು-ಹೋಮ್ (FTH) ನೆಟ್ವರ್ಕ್ ಮೂಲಕ  ಪ್ರಸಾರ ಮಾಡುತ್ತದೆ” ಎಂದು ಎಪಿಎಸ್‌ಎಫ್‌ಎಲ್‌ ಅಧ್ಯಕ್ಷ ಪಿ. ಗೌತಮ್ ರೆಡ್ಡಿ ಹೇಳಿದ್ದಾರೆ. “ಹೊರಗುತ್ತಿಗೆ ವಿಷಯದ ಅಗತ್ಯತೆಗಳ ನಿರೀಕ್ಷೆಗಳು ಸೇರಿದಂತೆ ನಾವು ಚಾನೆಲ್‌ನ ಪ್ರಸಾರಕ್ಕೆ ಸಂಬಂಧಿಸಿದ ವಿವಿಧ ಅಂಶಗಳನ್ನು ಪರಿಶೀಲಿಸುತ್ತಿದ್ದೇವೆ” ಎಂದು ಆಂಧ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ಎಪಿಎಸ್‌ಎಫ್‌ಎಲ್‌ ತನ್ನ ಟ್ರಿಪಲ್-ಪ್ಲೇ ಸೇವೆಗಳ ಅಸ್ತಿತ್ವದಲ್ಲಿರುವ 1 ಮಿಲಿಯನ್ ಚಂದಾದಾರರಿಗೆ ಸೇರಿಸಲು 5 ಮಿಲಿಯನ್ ಸೆಟ್-ಟಾಪ್ ಬಾಕ್ಸ್‌ಗಳನ್ನು ಖರೀದಿಸುತ್ತಿದೆ. ರಾಜ್ಯದ ಅರ್ಧದಷ್ಟು ಮನೆಗಳಿಗೆ ‘ಎಪಿ ಫೈಬರ್ ನ್ಯೂಸ್’ ತಲುಪಿಸುವುದು ಸರ್ಕಾರದ ಉದ್ದೇಶವಾಗಿದೆ ಎನ್ನಲಾಗಿದೆ.

ಇತ್ತೀಚಿನ ಜನಾಭಿಪ್ರಾಯ ಸಂಗ್ರಹಣೆಗಳು ವೈಎಸ್‌ಆರ್ ಕಾಂಗ್ರೆಸ್‌ಗೆ ಮೇಲುಗೈ ತೋರಿಸಿದ್ದರೂ ಜಗನ್ ಕಣಕ್ಕಿಳಿದಿದ್ದಾರೆ ಎಂದು ವಿಶ್ಲೇಷಕರು ಹೇಳುತ್ತಾರೆ. ಜುಲೈ 9 ಮತ್ತು 10 ರಂದು ನಡೆದ ಪಕ್ಷದ ಸರ್ವಸದಸ್ಯರ ಅಧಿವೇಶನದಲ್ಲಿ ಜಗನ್‌, “ಮಿಷನ್ 175 ಅಸಾಧ್ಯವಲ್ಲ” ಎಂದು ಘೋಷಿಸಿದ್ದಾರೆ.

ಚುನಾವಣಾ ಸಮರಕ್ಕೆ ಸಿದ್ಧರಾಗಿರಲು ಕಾರ್ಯಕರ್ತರನ್ನು ಕೋರಿದ್ದಾರೆ. ಏಪ್ರಿಲ್ 2019ರ ವಿಧಾನಸಭಾ ಚುನಾವಣೆಯಲ್ಲಿ ವೈಎಸ್ಆರ್ ಕಾಂಗ್ರೆಸ್ 175 ಸ್ಥಾನಗಳಲ್ಲಿ 151 ಸ್ಥಾನಗಳನ್ನು ಗೆದ್ದಿದೆ. ಮುಂದಿನ ಚುನಾವಣೆಯಲ್ಲಿ ಪಕ್ಷವು ಉತ್ತಮ ಪ್ರದರ್ಶನ ನೀಡಬೇಕೆಂದು ಜಗನ್ ಬಯಸಿದ್ದಾರೆ.

ಇದನ್ನೂ ಓದಿರಿ: Watch: ಕೋಮುವಾದ ತಡೆಗೆ ಪ್ರತಿಪಕ್ಷಗಳು ಜಾತಿ ಸಮಾವೇಶಗಳನ್ನು ನಡೆಸಬೇಕಿದೆ- ನವೀನ್‌ ಸೂರಿಂಜೆ

ಈಗಾಗಲೇ ಎನ್. ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿಯನ್ನು ಗುರಿಯಾಗಿಸಿಕೊಂಡು ಜಗನ್ ತನ್ನ ಪಕ್ಷದ ಕಾರ್ಯಕರ್ತರಿಗೆ ಸೂಚನೆಗಳನ್ನು ನೀಡಿದ್ದಾರೆ. ನಾಯ್ಡು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಅಭಿವೃದ್ಧಿ ಯೋಜನೆಗಳನ್ನು ನಿಲ್ಲಿಸುತ್ತಾರೆ ಎಂದು ಪ್ರತಿ ಹಳ್ಳಿಯಲ್ಲೂ ಪ್ರಚಾರ ಮಾಡಲು ಸೂಚಿಸಿದ್ದಾರೆ. ಪ್ರತಿಪಕ್ಷದ ಕಡೆಗೆ ಜನರ ಗಮನ ಹರಿದಂತೆ ನೋಡಿಕೊಳ್ಳಲು ಟಿ.ವಿ.ಚಾನೆಲ್‌ ಆರಂಭಿಸಿದ್ದಾರೆಂದು ವಿಶ್ಲೇಷಣೆಗಳು ಬರುತ್ತಿವೆ.

ಮುಖ್ಯಮಂತ್ರಿಯವರು ಪ್ರಸ್ತುತ ಸಾಕ್ಷಿ ಟೆಲಿವಿಷನ್‌ ಸುದ್ದಿ ವಾಹಿನಿ, ಸಾಕ್ಷಿ ತೆಲುಗು ಪತ್ರಿಕೆಯನ್ನು ತಮ್ಮ ಒಡೆತನದಲ್ಲಿ ಹೊಂದಿದ್ದಾರೆ. ಆಡಳಿತರೂಢ ಸರ್ಕಾರವನ್ನು ಮೂರು ಪ್ರಮುಖ ತೆಲುಗು ಸುದ್ದಿ ವಾಹಿನಿಗಳು ಹೆಚ್ಚು ಟೀಕಿಸುತ್ತಿವೆ. ಈ ಚಾನೆಲ್‌ಗಳು ಪ್ರಮುಖ ವಿರೋಧ ಪಕ್ಷವಾದ ಟಿಡಿಪಿಯತ್ತ ಒಲವು ತೋರುತ್ತಿವೆ ಎಂಬ ವಿಶ್ಲೇಷಣೆಗಳು ಬಂದಿವೆ. ಆದಾಗ್ಯೂ, ಎರಡು ಇತರ ಪ್ರಮುಖ ತೆಲುಗು ಟಿವಿ ಸುದ್ದಿ ವಾಹಿನಿಗಳು ಜಗನ್ ಮೋಹನ್ ರೆಡ್ಡಿ ಕಡೆಗೆ ಒಲವು ತೋರಿಸುತ್ತಿವೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಜನರಿಗೆ ತನ್ನದೇ ಆದ ವರದಿಗಳನ್ನು ಹೇಳಲು ಮಾಧ್ಯಮ ಕ್ಷೇತ್ರಕ್ಕೆ ಕಾಲಿಡಲು ಸರ್ಕಾರ ನಿರ್ಧರಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...