Homeಮುಖಪುಟಭಾರತದಲ್ಲಿ ಕೈಯಿಂದ ಶೌಚಗುಂಡಿ ಸ್ವಚ್ಛಗೊಳಿಸುವ ಪದ್ದತಿಯಿಲ್ಲ; ಆದರೆ ಸ್ವಚ್ಛಗೊಳಿಸುವ ವೇಳೆ 330 ಜನರು ಸಾವಿಗೀಡಾಗಿದ್ದಾರೆ: ಕೇಂದ್ರ...

ಭಾರತದಲ್ಲಿ ಕೈಯಿಂದ ಶೌಚಗುಂಡಿ ಸ್ವಚ್ಛಗೊಳಿಸುವ ಪದ್ದತಿಯಿಲ್ಲ; ಆದರೆ ಸ್ವಚ್ಛಗೊಳಿಸುವ ವೇಳೆ 330 ಜನರು ಸಾವಿಗೀಡಾಗಿದ್ದಾರೆ: ಕೇಂದ್ರ ಸರ್ಕಾರ

ಕಳೆದ ಐದು ವರ್ಷಗಳಲ್ಲಿ ಕೈಯಿಂದ ಶೌಚಗುಂಡಿಗಳ ಸ್ವಚ್ಛಗೊಳಿಸುವಿಕೆಯಿಂದಾಗಿ ಯಾವುದೇ ಸಾವುಗಳು ವರದಿಯಾಗಿಲ್ಲ ಎಂದು ಸರ್ಕಾರ ಹೇಳಿದೆ

- Advertisement -
- Advertisement -

ಭಾರತದಲ್ಲಿ ಕೈಯಿಂದ ಶೌಚಗುಂಡಿಗಳನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ಯಾರೂ ತೊಡಗಿಸಿಕೊಂಡಿಲ್ಲ, ಆದರೆ 2017 ಮತ್ತು 2021 ರ ನಡುವೆ ಒಳಚರಂಡಿ ಮತ್ತು ಶೌಚಗುಂಡಿಗಳನ್ನು ಸ್ವಚ್ಛಗೊಳಿಸುವಾಗ 330 ಜನರು ಮೃತಪಟ್ಟಿದ್ದಾರೆ ಎಂದು ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ಮಂಗಳವಾರ ಲೋಕಸಭೆಗೆ ತಿಳಿಸಿದೆ. ಬಹುಜನ ಸಮಾಜ ಪಕ್ಷದ ಸಂಸದ ಗಿರೀಶ್ ಚಂದ್ರ ಅವರು ಕೇಳಿದ ಪ್ರಶ್ನೆಗೆ ಉತ್ತರವಾಗಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ರಾಮದಾಸ್ ಅಠಾವಳೆ ಅವರು ‘ಮ್ಯಾನುಯಲ್ ಸ್ಕ್ಯಾವೆಂಜಿಂಗ್’ ಕುರಿತ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಒಳಚರಂಡಿ ಅಥವಾ ಶೌಚಗುಂಡಿಯಿಂದ ಕೈಗಳ ಮೂಲಕ ಮಲವನ್ನು ತೆಗೆಯುವ ಪದ್ದತಿಯನ್ನು, ‘ಮ್ಯಾನುಯಲ್ ಸ್ಕ್ಯಾವೆಂಜರ್‍ಸ್‌‌‌ ಉದ್ಯೋಗ ನಿಷೇಧ ಮತ್ತು ಪುನರ್ವಸತಿ ಕಾಯಿದೆ-2013’ ರ ಅಡಿಯಲ್ಲಿ ನಿಷೇಧಿಸಲಾಗಿದೆ. ಅದಾಗಿಯೂ ಈ ಪದ್ದತಿ ಭಾರತದ ಅನೇಕ ಭಾಗಗಳಲ್ಲಿ ಪ್ರಚಲಿತದಲ್ಲಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಗಿರೀಶ್‌ ಚಂದ್ರ ಅವರು, ದೇಶದಲ್ಲಿ ಶೌಚಗುಂಡಿಗಳಲ್ಲಿ ಕೆಲಸ ಮಾಡುವವರು ಗುತ್ತಿಗೆ, ವಲಸೆ ಮತ್ತು ಸಾಂದರ್ಭಿಕ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆಯೇ ಅಥವಾ ಬಂಧಿತ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆಯೇ ಹಾಗೂ ಈ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಕೈಗೊಂಡ ಕ್ರಮಗಳ ಕುರಿತು ವಿವರಗಳನ್ನು ಕೋರಿದ್ದರು.

ಇದನ್ನೂ ಓದಿ: ಚಂದ್ರಯಾನ ಇರಲಿ; ಒಳಚರಂಡಿ ಸ್ವಚ್ಛಗೊಳಿಸುವ ತಂತ್ರಜ್ಞಾನ ಎಲ್ಲಿದೆ? ಗುಜರಾತ್ ಸರಕಾರಕ್ಕೆ ಜಿಗ್ನೇಶ್ ಮೇವಾನಿ ಪ್ರಶ್ನೆ

ಮ್ಯಾನುಯಲ್ ಸ್ಕ್ಯಾವೆಂಜರ್‌ಗಳ ಉದ್ಯೋಗ ನಿಷೇಧ ಮತ್ತು ಪುನರ್ವಸತಿ ಕಾಯಿದೆಯಡಿಯಲ್ಲಿ 20% ಕ್ಕಿಂತ ಹೆಚ್ಚು ಮ್ಯಾನುಯಲ್ ಸ್ಕ್ಯಾವೆಂಜರ್‌ಗಳು ನೋಂದಾಯಿಸಲ್ಪಟ್ಟಿಲ್ಲವೇ ಎಂದು ಅವರು ಕೇಳಿದ್ದರು. ಕಳೆದ ಐದು ವರ್ಷಗಳಲ್ಲಿ ಒಳಚರಂಡಿ ಮತ್ತು ಶೌಚಗುಂಡಿಗಳನ್ನು ಅಪಾಯಕಾರಿಯಾಗಿ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಸಾವನ್ನಪ್ಪಿದ ಮ್ಯಾನುಯಲ್ ಸ್ಕ್ಯಾವೆಂಜರ್‌ಗಳ ಸಂಖ್ಯೆಯ ಕುರಿತು ಚಂದ್ರಾ ಅವರು ರಾಜ್ಯವಾರು ಮಾಹಿತಿಯನ್ನು ಕೋರಿದ್ದರು.

“2013 ರ ಉದ್ಯೋಗ ನಿಷೇಧ ಮತ್ತು ಪುನರ್ವಸತಿ ಕಾಯಿದೆಯ ಸೆಕ್ಷನ್ 2 (1) (ಜಿ) ಅಡಿಯಲ್ಲಿ ವ್ಯಾಖ್ಯಾನಿಸಲಾದ ಕೈಯಿಂದ ಶೌಚಗುಂಡಿಗಳನ್ನು ಸ್ವಚ್ಛಗೊಳಿಸುವ ಪದ್ದತಿಯಲ್ಲಿ ತೊಡಗಿರುವ ಜನರ ಯಾವುದೇ ವರದಿಯಿಲ್ಲ” ಎಂದು ಸಚಿವ ರಾಮದಾಸ್ ಅಠಾವಳೆ ಪ್ರತಿಕ್ರಿಯಿಸಿದ್ದಾರೆ.

“ಡಿಸೆಂಬರ್ 6, 2013 ರಿಂದ ಜಾರಿಗೆ ಬರುವಂತೆ ಕೈಯಿಂದ ಶೌಚಗುಂಡಿಗಳನ್ನು ಸ್ವಚ್ಛಗೊಳಿಸುವ ಪದ್ದತಿಯನ್ನು ನಿಷೇಧಿಸಲಾಗಿದೆ. ಹೇಳಿದ ದಿನಾಂಕದಿಂದ ಯಾವುದೇ ವ್ಯಕ್ತಿ ಅಥವಾ ಏಜೆನ್ಸಿಯು ಯಾವುದೇ ವ್ಯಕ್ತಿಯನ್ನು ಕೈಯಿಂದ ಶೌಚಗುಂಡಿಗಳನ್ನು ಸ್ವಚ್ಛಗೊಳಿಸುವಂತೆ ತೊಡಗಿಸಿಕೊಳ್ಳಲು ಅಥವಾ ಬಳಸಿಕೊಳ್ಳಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮ್ಯಾನ್ಯುಯಲ್‌ ಸ್ಕ್ಯಾವೆಂಜಿಂಗ್‌: ಪ್ರಶ್ನಿಸಿದ್ದಕ್ಕೆ ‘ಈ ಕೆಲಸ ಮಾಡಲೆಂದೇ ಜಾತಿಗಳಿವೆ’ ಎಂದ ಇಂಜಿನಿಯರ್‌‌‌!

ಕಳೆದ ಮೂರು ವರ್ಷಗಳಲ್ಲಿ ದೇಶದಲ್ಲಿ 58,098 ಮ್ಯಾನುವಲ್ ಸ್ಕ್ಯಾವೆಂಜರ್‌ಗಳನ್ನು ಸರ್ಕಾರ ಗುರುತಿಸಿದೆ ಎಂದು ಜುಲೈ 26 ರಂದು ಅಠಾವಳೆ ಲೋಕಸಭೆಗೆ ತಿಳಿಸಿದ್ದರು. ಜುಲೈ 19 ರಂದು, 2017 ರಿಂದ ಭಾರತದಾದ್ಯಂತ 347 ನೈರ್ಮಲ್ಯ ಕಾರ್ಮಿಕರು ಒಳಚರಂಡಿ ಮತ್ತು ಶೌಚಗುಂಡಿಗಳನ್ನು ಸ್ವಚ್ಛಗೊಳಿಸುವಾಗ ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ಲೋಕಸಭೆಗೆ ತಿಳಿಸಿತ್ತು.

ಮಂಗಳವಾರ, 2017 ರಿಂದ 2021 ರವರೆಗೆ ದೇಶದಲ್ಲಿ ಕೈಯಿಂದ ಶೌಚಗುಂಡಿಗಳ ಸ್ವಚ್ಛಗೊಳಿಸುವಿಕೆಯಿಂದಾಗಿ ಯಾವುದೇ ಸಾವುಗಳು ವರದಿಯಾಗಿಲ್ಲ ಎಂದು ಅಠವಾಲೆ ಹೇಳಿದ್ದಾರೆ.

“ಆದಾಗ್ಯೂ, ಕಳೆದ ಐದು ವರ್ಷಗಳಲ್ಲಿ ಒಳಚರಂಡಿ ಮತ್ತು ಶೌಚಗುಂಡಿಗಳನ್ನು ಅಪಾಯಕಾರಿಯಾಗಿ ಸ್ವಚ್ಛಗೊಳಿಸುವ ಸಂದರ್ಭ 330 ಜನರು ಸಾವನ್ನಪ್ಪಿದ್ದಾರೆ” ಎಂದು ಸಚಿವ ಅಠಾವಳೆ ಹೇಳಿದ್ದಾರೆ.

2017 ಮತ್ತು 2021 ರ ನಡುವೆ ಉತ್ತರ ಪ್ರದೇಶದಲ್ಲಿ ಇಂತಹ 47 ಸಾವುನೋವುಗಳು ವರದಿಯಾಗಿವೆ ಎಂದು ಅವರು ತಿಳಿಸಿದ್ದಾರೆ. ತಮಿಳುನಾಡಿನಲ್ಲಿ 43 ಮತ್ತು ದೆಹಲಿಯಲ್ಲಿ 42, ಹರಿಯಾಣದಲ್ಲಿ 36 ಮತ್ತು ಮಹಾರಾಷ್ಟ್ರದಲ್ಲಿ 30 ಸಾವುಗಳು ವರದಿಯಾಗಿವೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಮ್ಯಾನ್‌ಹೋಲ್‌ಗೆ ಇಳಿದ ಪರಿಣಾಮ ಗಂಭೀರ ಆರೋಗ್ಯ ಸಮಸ್ಯೆ: ಪೌರಕಾರ್ಮಿಕ ICU ಗೆ ದಾಖಲು

‘ಸ್ವಚ್ಛ ಭಾರತ್ ಮಿಷನ್  ಕೈಯಿಂದ ಶೌಚಗುಂಡಿಗಳ ಸ್ವಚ್ಛಗೊಳಿಸುವಿಕೆ ಪದ್ದತಿಯನ್ನು ಕೊನೆಗೊಳಿಸಿದೆ’ ಎಂದು ಅಠಾವಳೆ ಪ್ರತಿಪಾದಿಸಿದ್ದಾರೆ. ಅಕ್ಟೋಬರ್ 2014 ರಿಂದ, ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ 10.99 ಕೋಟಿಗೂ ಹೆಚ್ಚು ಮತ್ತು ನಗರ ಪ್ರದೇಶಗಳಲ್ಲಿ 62.65 ಲಕ್ಷಕ್ಕೂ ಹೆಚ್ಚು ನೈರ್ಮಲ್ಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೈಯಿಂದ ಶೌಚವನ್ನು ಸ್ವಚ್ಛಗೊಳಿಸುವ ಪದ್ದತಿಯನ್ನು ಕೊನೆಗೊಳಿಸಲು ಈ ಸ್ವಚ್ಛ ಭಾರತ್‌ ಮಿಷನ್‌ ದೊಡ್ಡ ಕೊಡುಗೆ ನೀಡಿದೆ ಎಂದು ಅವರು ಹೇಳಿದ್ದಾರೆ. “ಈ ಪದ್ದತಿಯ ಮುಂದುವರಿಕೆಯ ಬಗ್ಗೆ ಸಾಮಾಜಿಕ ಸಂಸ್ಥೆಗಳಿಂದ ವರದಿಗಳನ್ನು ಪಡೆದ ನಂತರ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಇನ್ನೂ ಅಸ್ತಿತ್ವದಲ್ಲಿರುವ ಈ ಪದ್ದತಿಯ ಮಾಹಿತಿ ಪಡೆಯಲು ಡಿಸೆಂಬರ್ 24, 2020 ರಂದು ‘ಸ್ವಚ್ಛತಾ ಅಭಿಯಾನ’ ಎಂಬ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಆದರೆ, ಇದುವರೆಗೆ ಒಂದೇ ಒಂದು ಪ್ರಕರಣ ದೃಢಪಟ್ಟಿಲ್ಲ” ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತರೊಬ್ಬರು, “ಒಂದು ಕಡೆ ಸರ್ಕಾರವೇ ಶೌಚಗುಂಡಿ ಶುಚಿಕೊಳಿಸುವಾಗ 330 ಜನರು ಸಾವಿಗೀಡಾಗಿದ್ದಾರೆ ಎಂದು ಹೇಳುತ್ತಿದೆ. ಇನ್ನೊಂದು ಕಡೆ ಕೈಯಿಂದ ಸ್ವಚ್ಛಗೊಳಿಸುವ ಪದ್ದತಿಯಿಲ್ಲ ಎಂದು ಹೇಳುತ್ತಿದೆ. ಆದರೆ ಇವೆಲ್ಲಾ ಸುಳ್ಳು ಹೇಳಿಕೆಯಾಗಿದ್ದು, ದೇಶದಾದ್ಯಂತ ಕೈಯಿಂದ ಸ್ವಚ್ಛಗೊಳಿಸುವ ಎಷ್ಟೊ ಪ್ರಕರಣಗಳು ಪತ್ರಿಕೆಗಳಲ್ಲಿ ವರದಿಯಾವೆ. ಆದರೆ ಈ ಸರ್ಕಾರ ಅಂಕಿ ಅಂಶ ನೀಡಲು ಹೆದರಿಕೊಳ್ಳುತ್ತಿವೆ” ಎಂದು ಹೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...