HomeಮುಖಪುಟOPS ಜಾರಿ ಬಗ್ಗೆ ಹಣಕಾಸು ಇಲಾಖೆಯೊಂದಿಗೆ ಚರ್ಚಿಸುತ್ತೇವೆ: ಮಹಾರಾಷ್ಟ್ರ ಡಿಸಿಎಂ ಫಡ್ನವಿಸ್

OPS ಜಾರಿ ಬಗ್ಗೆ ಹಣಕಾಸು ಇಲಾಖೆಯೊಂದಿಗೆ ಚರ್ಚಿಸುತ್ತೇವೆ: ಮಹಾರಾಷ್ಟ್ರ ಡಿಸಿಎಂ ಫಡ್ನವಿಸ್

- Advertisement -
- Advertisement -

“OPS  ಬಗ್ಗೆ ನಾವು ಅದನ್ನು ಚರ್ಚಿಸುತ್ತೇವೆ, ಆದರೆ ಪರಿಹಾರ ಏನೇ ಇರಲಿ, ಅದು  ದೀರ್ಘಾವಧಿಯದ್ದಾಗಿರಬೇಕು” ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.

ಕಳೆದ ತಿಂಗಳು ಮಹಾರಾಷ್ಟ್ರದ ಶಿವಸೇನೆ-ಬಿಜೆಪಿ ಸರ್ಕಾರವು ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಹೇಳಿತ್ತು. ಆದರೆ ಇದೀಗ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಆ ಬಗ್ಗೆ ಮರುಚಿಂತನೆ ಮಾಡುವುದಾಗಿ ತಿಳಿಸಿದ್ದಾರೆ.

“ನಾವು OPS ಬಗ್ಗೆ ನಕಾರಾತ್ಮಕ ಯೋಚನೆ ಹೊಂದಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತೇನೆ. ನಾವು ಅದನ್ನು ಹಣಕಾಸು ಮತ್ತು ಇತರ ಇಲಾಖೆಗಳೊಂದಿಗೆ ಚರ್ಚಿಸುತ್ತೇವೆ. ಆದರೆ ಪರಿಹಾರ ಏನೇ ಇರಲಿ, ಅದು ದೀರ್ಘಾವಧಿಯದ್ದಾಗಿರಬೇಕು, ಅಲ್ಪಾವಧಿಯಲ್ಲ” ಎಂದು ಅವರು ಹೇಳಿದರು.

ಇದನ್ನೂ ಓದಿ: ಕೊಟ್ಟ ಮಾತು ಉಳಿಸಿಕೊಂಡ ಕಾಂಗ್ರೆಸ್: ಒಪಿಎಸ್ ಜಾರಿಗೆ ಹಿಮಾಚಲ ಕ್ಯಾಬಿನೆಟ್ ಅಸ್ತು

ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನದಂತಹ ರಾಜ್ಯಗಳಲ್ಲಿ ಕಾಂಗ್ರೆಸ್ OPS ಜಾರಿಗೆ ತಂದಿವೆ. ಇತರೆಡೆ ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಆ ಬಗ್ಗೆ ಒಲವು ತೋರುತ್ತಿವೆ. ಆದರೆ ಬಿಜೆಪಿ ಮಾತ್ರ ಸರ್ಕಾರಗಳ ಮೇಲೆ ಭಾರಿ ಆರ್ಥಿಕ ಹೊರೆಯಾಗುತ್ತದೆ ಎಂದು ಹೇಳುತ್ತ OPS ವಿರುದ್ಧವಾಗಿದೆ.

OPS 20 ವರ್ಷಗಳ ಸೇವೆ ಹೊಂದಿರುವ ನೌಕರರಿಗೆ ಅವರ ಕೊನೆಯ ಸಂಬಳದ ಕನಿಷ್ಠ 50 ಪ್ರತಿಶತವನ್ನು ಪಿಂಚಣಿಯಾಗಿ ನೀಡಿತು, ಆದರೆ ಹೊರೆ ಸಂಪೂರ್ಣವಾಗಿ ಸರ್ಕಾರದ ಮೇಲಿತ್ತು ಮತ್ತು ಸಿಬ್ಬಂದಿಯಿಂದ ಯಾವುದೇ ಸಂಬಳದ ಹಣ ಸಂಗ್ರಹಿಸಲಾಗಿಲ್ಲ. ಹೊಸ ಪಿಂಚಣಿ ಯೋಜನೆ (NPS) ಅಡಿಯಲ್ಲಿ, ಸರ್ಕಾರ ಮತ್ತು ಸಿಬ್ಬಂದಿ ಇಬ್ಬರೂ ವೇತನದ 10 ಮತ್ತು 14 ಪ್ರತಿಶತವನ್ನು ಅನುಕ್ರಮವಾಗಿ – ಪಿಂಚಣಿಯನ್ನು ನಂತರ ಪಡೆಯುವ ನಿಧಿಗೆ ನೀಡುತ್ತಾರೆ.

ಜನವರಿ 30 ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯ ಪೂರ್ವಭಾವಿ ರ್ಯಾಲಿಯಲ್ಲಿ ಫಡ್ನವೀಸ್ ಅವರು ಔರಂಗಾಬಾದ್ ವಿಭಾಗದ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿಯ ಕಿರಣ್ ಪಾಟೀಲ್ ಅವರಿಗೆ ಮತ ಯಾಚಿಸಿ ಮಾತನಾಡುತ್ತಿದ್ದರು. ಈ ವೇಳೆ, “ಪ್ರಸ್ತುತ ಪಿಂಚಣಿ ಯೋಜನೆಯನ್ನು OPS ಗೆ ಬದಲಾವಣೆಯಾಗುವುದಾದರೆ, ಅದು ನಮ್ಮಿಂದ (ಬಿಜೆಪಿ) ಮಾತ್ರ ಸಾಧ್ಯವಿದೆ. ಅದನ್ನು ನಾವು ಮಾಡುತ್ತೇವೆ ಬೇರೆಯವರಿಮದ ಸಾಧ್ಯವಿಲ್ಲ” ಎಂದರು.

ಆದರೆ ಡಿಸೆಂಬರ್‌ನಲ್ಲಿ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಫಡ್ನವಿಸ್, “ಸರ್ಕಾರವು ಹಳೆಯ ಪಿಂಚಣಿ ಯೋಜನೆಯನ್ನು ಪುನಶ್ಚೇತನಗೊಳಿಸುವುದಿಲ್ಲ. ಇದು ರಾಜ್ಯದ ಬೊಕ್ಕಸಕ್ಕೆ ₹ 1.1 ಲಕ್ಷ ಕೋಟಿ ಹೆಚ್ಚುವರಿ ಹೊರೆಯಾಗುತ್ತದೆ” ಎಂದು ಹೇಳಿದ್ದರು.

ಜನವರಿ 30 ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿಯು OPS ವಿಚಾರವನ್ನು ದಾಳವಾಗಿಸಿಕೊಳ್ಳುತ್ತಿದೆ ಎನ್ನುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಏಕೆಂದರೆ ಕಳೆದ ತಿಂಗಳಷ್ಟೇ OPS ವಿರುದ್ಧವಾಗಿ ಮಾತನಾಡುತ್ತಿದ್ದ ಬಿಜೆಪಿ ನಾಯಕರು, ಇದೀಗ ಚುನಾವಣೆಯ ರ್ಯಾಲಿಯಲ್ಲಿ OPS ಪರವಾಗಿ ಮಾತನಾಡುತ್ತಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...