Homeಮುಖಪುಟ'ಜನರ ಮೇಲಿನ ಹಿಂದಿ ಹೇರಿಕೆಯನ್ನು ವಿರೋಧಿಸುತ್ತೇವೆ': ಕೇಂದ್ರದ ವಿರುದ್ಧ ಗುಡುಗಿದ ಸ್ಟಾಲಿನ್

‘ಜನರ ಮೇಲಿನ ಹಿಂದಿ ಹೇರಿಕೆಯನ್ನು ವಿರೋಧಿಸುತ್ತೇವೆ’: ಕೇಂದ್ರದ ವಿರುದ್ಧ ಗುಡುಗಿದ ಸ್ಟಾಲಿನ್

- Advertisement -
- Advertisement -

ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು, ಬಿಜೆಪಿ ನೇತೃತ್ವದ ಕೇಂದ್ರವು ಹಿಂದಿ ಹೇರಿಕೆ ಮೂಲಕ ‘ಬೆದರಿಕೆ’ ಹಾಕುತ್ತಿದೆ ಎಂದು ಆರೋಪಿಸಿದ್ದಾರೆ. ತಮ್ಮ ಆಡಳಿತಾರೂಢ ಡಿಎಂಕೆ ಪಕ್ಷ, ಜನರು ಅಥವಾ ಜನರ ಮೇಲೆ ಭಾಷೆಯನ್ನು ಹೇರುವ ಯಾವುದೇ ಪ್ರಯತ್ನಗಳನ್ನು ವಿರೋಧಿಸುವುದನ್ನು ಮುಂದುವರಿಸುತ್ತದೆ ಎಂದು ಪ್ರತಿಪಾದಿಸಿದರು.

ಈ ಹಿಂದೆ ರಾಜ್ಯದಲ್ಲಿ ನಡೆದ ಹಿಂದಿ ವಿರೋಧಿ ಆಂದೋಲನದ ಅಂಗವಾಗಿ ಮಡಿದವರ ಗೌರವಾರ್ಥವಗಿ ನಡೆದ ಭಾಷಾ ಹುತಾತ್ಮರ ದಿನಾಚರಣೆಯ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಂ.ಕೆ.ಸ್ಟಾಲಿನ್, ಕೇಂದ್ರದ ಆಡಳಿತಾರೂಢ ಬಿಜೆಪಿ ಹಿಂದಿ ಹೇರುವುದನ್ನು ಅಭ್ಯಾಸ ಮಾಡಿಕೊಂಡಿದೆ ಎಂದರು.

“ಭಾರತೀಯ ಒಕ್ಕೂಟದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರವು ಹಿಂದಿ ಹೇರುವುದನ್ನು ಪರಿಪಾಠ ಮಾಡಿಕೊಂಡಿದೆ. ಆಡಳಿತದಿಂದ ಶಿಕ್ಷಣದವರೆಗೆ ಅವರು ಹಿಂದಿಯನ್ನು ಹೇರಲು ಅಧಿಕಾರಕ್ಕೆ ಬಂದಿದ್ದಾರೆಂದು ಅವರು ಭಾವಿಸಿದ್ದಾರೆ” ಎಂದರು.

ಒಂದು ರಾಷ್ಟ್ರ, ಒಂದು ಧರ್ಮ, ಒಂದು ಚುನಾವಣೆ, ಒಂದು (ಪ್ರವೇಶ) ಪರೀಕ್ಷೆ, ಒಂದು ಆಹಾರ, ಒಂದು ಸಂಸ್ಕೃತಿಯಂತೆ ಇದರಿಂದ ಅವರು ಒಂದೇ ಭಾಷೆಯಿಂದ ಇತರ ರಾಷ್ಟ್ರೀಯ ಜನಾಂಗಗಳ ಸಂಸ್ಕೃತಿಯನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಡಿಎಂಕೆ ಅಧ್ಯಕ್ಷ ಸಿಎಂ ಸ್ಟಾಲಿನ್ ಆರೋಪಿಸಿದ್ದಾರೆ.

ಇದನ್ನೂ ಓದಿ: ತಮಿಳುನಾಡು ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ “ಬೇಷರತ್ ಬೆಂಬಲ” ನೀಡಿದ ಕಮಲ್ ಹಾಸನ್

ಹಿಂದಿ ಹೇರಿಕೆಯ ವಿರುದ್ಧ ಅಕ್ಟೋಬರ್ 2022 ರ ರಾಜ್ಯ ಅಸೆಂಬ್ಲಿ ನಿರ್ಣಯವನ್ನು ನೆನಪಿಸಿಕೊಂಡ ಎಂಕೆ ಸ್ಟಾಲಿನ್, “ಹಿಂದಿ ಹೇರಿಕೆಯ ವಿರುದ್ಧ ನಮ್ಮ ಹೋರಾಟಗಳು ಮುಂದುವರಿಯುತ್ತದೆ. ತಮಿಳನ್ನು ರಕ್ಷಿಸುವ ನಮ್ಮ ಪ್ರಯತ್ನಗಳು ಶಾಶ್ವತವಾಗಿ ಮುಂದುವರಿಯುತ್ತದೆ” ಎಂದು ಗುಡುಗಿದರು.

ಹಿಂದಿ ಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದರಿಂದ ಇತರ ಭಾಷೆಗಳನ್ನು ನಿರ್ಲಕ್ಷಿಸುವುದಲ್ಲದೆ ಅವುಗಳನ್ನು ನಾಶಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.

2017-20ರ ನಡುವೆ ಸಂಸ್ಕೃತ ಭಾಷೆಯನ್ನು ಉತ್ತೇಜಿಸಲು ಕೇಂದ್ರವು ₹ 643 ಕೋಟಿ ಅನುದಾನ ನೀಡಿದೆ ಎಂದು ಅವರು ಹೇಳಿದರು. ತಮಿಳಿಗೆ ಮೀಸಲಿಟ್ಟಿದ್ದು ₹ 23 ಕೋಟಿಗಿಂತ ಕಡಿಮೆಯಾಗಿದೆ.

“ನಾವು ಯಾವುದೇ ಭಾಷೆಗೆ ಶತ್ರುಗಳಲ್ಲ, ಸ್ವಂತ ಆಸಕ್ತಿಯಿಂದ ಯಾರು ಎಷ್ಟು ಭಾಷೆಗಳನ್ನಾದರು ಕಲಿಯಬಹುದು. ಆದರೆ, ಒಂದು ಭಾಷೆಯನ್ನು ಹೇರುವ ಯಾವುದೇ ಕ್ರಮವನ್ನು ನಾವು ವಿರೋಧಿಸುತ್ತೇವೆ” ಎಂದು ಸಿಎಂ ಹೇಳಿದರು.

ಹಲವಾರು ಹಿಂದಿ ವಿರೋಧಿ ಆಂದೋಲನಗಳ ನಂತರ, ಮಾಜಿ ಮುಖ್ಯಮಂತ್ರಿ ಸಿಎನ್ ಅಣ್ಣಾದೊರೈ ಅವರು ತಮಿಳು ಮತ್ತು ಇಂಗ್ಲಿಷ್‌ನ ದ್ವಿಭಾಷಾ ಸೂತ್ರದ ಶಾಸನವನ್ನು ತಂದರು. ಇದರಿಂದಾಗಿ ರಾಜ್ಯದ ಯುವಕರು ವಿಶ್ವದ ಅನೇಕ ಭಾಗಗಳಲ್ಲಿ ಉದ್ಯೋಗ ಪಡೆಯಲು ಯಶಸ್ವಿಯಾಗಿದ್ದಾರೆ ಎಂದು ಸಿಎಂ ಸ್ಟಾಲಿನ್ ಹೇಳಿದರು.

‘ಭಾಷಾ ಹುತಾತ್ಮರ ಬಲಿದಾನ ವ್ಯರ್ಥವಾಗದಂತೆ ನೋಡಿಕೊಳ್ಳಲು ಅಣ್ಣಾ ಹೀಗೆ ಮಾಡಿದ್ದಾರೆ’ ಎಂದು ದ್ವಿಭಾಷಾ ಸೂತ್ರದ ಕುರಿತು ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...