Homeಕರ್ನಾಟಕಬಾಳೆಹಣ್ಣು ಅಥವಾ ಚಿಕ್ಕಿ ಅಲ್ಲ; ರಾಜ್ಯದ 80% ಮಕ್ಕಳ ಆಯ್ಕೆ ಮೊಟ್ಟೆ!

ಬಾಳೆಹಣ್ಣು ಅಥವಾ ಚಿಕ್ಕಿ ಅಲ್ಲ; ರಾಜ್ಯದ 80% ಮಕ್ಕಳ ಆಯ್ಕೆ ಮೊಟ್ಟೆ!

ಸಾರ್ವಜನಿಕ ಶಿಕ್ಷಣ ಇಲಾಖೆ ಒದಗಿಸಿದ ಮಾಹಿತಿ ಬಹಿರಂಗ

- Advertisement -
- Advertisement -

ಶಾಲೆಗಳಲ್ಲಿ ಅಕ್ಷರ ದಾಸೋಹದ ಯೋಜನೆಯ ಭಾಗವಾಗಿ ನೀಡುವ ಮೊಟ್ಟೆ ವಿತರಣೆ ಬಗ್ಗೆ ರಾಜ್ಯದಲ್ಲಿ ತೀವ್ರ ವಿವಾದವೇರ್ಪಟ್ಟಿತ್ತು. ರಾಜಕೀಯ ಮತ್ತು ಧಾರ್ಮಿಕ ಮುಖಂಡರಿಂದ ತೀವ್ರ ವಿವಾದಕ್ಕೊಳಗಾಗಿದ್ದ ವಿಚಾರವನ್ನು ರಾಜ್ಯದ ಮಕ್ಕಳೆ ಸ್ಪಷ್ಟಪಡಿಸಿದ್ದು, ಮಧ್ಯಾಹ್ನದ ಊಟದ ವೇಳೆಯಲ್ಲಿ ತಮಗೆ ಮೊಟ್ಟೆಯೆ ಬೇಕು ಎಂದು ಹೇಳಿದ್ದಾರೆ. 80% ದಷ್ಟು ಶಾಲಾ ಮಕ್ಕಳು ತಮಗೆ ಮೊಟ್ಟೆಯೆ ಬೇಕು ಎಂದು ಹೇಳಿದ್ದು, ಉಳಿದ ಮಕ್ಕಳು ಬಾಳೆಹಣ್ಣುಗಳು ಮತ್ತು ಚಿಕ್ಕಿಗಳನ್ನು ಆಯ್ಕೆ ಮಾಡಿದ್ದಾರೆ.

ಡಿಸೆಂಬರ್ 14 ರ ವೇಳೆಗೆ 1 ರಿಂದ 8 ನೇ ತರಗತಿಯ ಸರ್ಕಾರಿ ಶಾಲೆಗಳ 47.97 ಲಕ್ಷ ವಿದ್ಯಾರ್ಥಿಗಳ ಪೈಕಿ 38.37 ಲಕ್ಷ ವಿದ್ಯಾರ್ಥಿಗಳು ಮೊಟ್ಟೆಗೆ ಆದ್ಯತೆ ನೀಡಿದರೆ, 3.37 ಲಕ್ಷ ಮಕ್ಕಳು ಬಾಳೆಹಣ್ಣು ಮತ್ತು 2.27 ಲಕ್ಷ ಮಕ್ಕಳು ಚಿಕ್ಕಿಗೆ ಆದ್ಯತೆ ನೀಡಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಒದಗಿಸಿದ ಮಾಹಿತಿ ಬಹಿರಂಗಪಡಿದೆ. ಈ ಅವಧಿಯಲ್ಲಿ ಉಳಿದ ಮಕ್ಕಳು ಗೈರುಹಾಜರಾಗಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

2022ರ ಜುಲೈ ವೇಳೆಗೆ ಮಕ್ಕಳ ಆಹಾರದ ಭಾಗವಾಗಿ ಮೊಟ್ಟೆಗಳನ್ನು ಸೇರಿಸಿದ ನಂತರ ಒಳ್ಳೆಯ ಫಲಿತಾಂಶಗಳನ್ನು ಕಂಡು ಬಂದಿದೆ ಎಂದು ಪ್ರಾಯೋಗಿಕ ಅಧ್ಯಯನಗಳು ತಿಳಿಸಿದೆ. ಇದರ ನಂತರ ರಾಜ್ಯದ ಶಾಲಾ ಶಿಕ್ಷಣ ಇಲಾಖೆಯು 1 ರಿಂದ 8 ನೇ ತರಗತಿಯ ಮಕ್ಕಳು ಬಿಸಿಯೂಟದ ಜೊತೆಗೆ ಪೂರಕ ಪೋಷಣೆ ಕಾರ್ಯಕ್ರಮದ ಅಡಿಯಲ್ಲಿ ಮೊಟ್ಟೆ, ಬಾಳೆಹಣ್ಣು ಮತ್ತು ಚಿಕ್ಕಿಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು ಎಂದು ಘೋಷಿಸಿತು.

ಈ ಪೂರಕ ಪೌಷ್ಟಿಕಾಂಶ ಆಹಾರವನ್ನು ಪ್ರಸ್ತುತ ಶೈಕ್ಷಣಿಕ ವರ್ಷ 2022- 23ರಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವರ್ಷಕ್ಕೆ 46 ದಿನಗಳವರೆಗೆ ಒದಗಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ..

ರಾಜ್ಯಾದ್ಯಂತ ಮೊಟ್ಟೆ ಆಯ್ಕೆ ಮಾಡಿದ 38.37 ಲಕ್ಷ ವಿದ್ಯಾರ್ಥಿಗಳ ಪೈಕಿ ಹೆಚ್ಚಿನವರು (15.67 ಲಕ್ಷ) ವಿದ್ಯಾರ್ಥಿಗಳು ಬೆಳಗಾವಿ ವಿಭಾಗದವರಾಗಿದ್ದಾರೆ. ನಂತರದ ಸ್ಥಾನದಲ್ಲಿ ಬೆಂಗಳೂರು ವಿಭಾಗ (8.65 ಲಕ್ಷ), ಕಲಬುರ್ಗಿ ವಿಭಾಗ (8.33 ಲಕ್ಷ), ಮೈಸೂರು ವಿಭಾಗ (5.70 ಲಕ್ಷ) ಇದೆ.

ಸಂಡೇ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, “ಅಪೌಷ್ಟಿಕತೆಯು ಶಿಕ್ಷಣಕ್ಕೆ ಅಡ್ಡಿಯಾಗಬಾರದು ಎಂದು ಖಚಿತಪಡಿಸಿಕೊಳ್ಳಲು ನಾವು ಎಲ್ಲಾ ಜಿಲ್ಲೆಗಳಲ್ಲಿ ಮಧ್ಯಾಹ್ನದ ಊಟದಲ್ಲಿ ಮೊಟ್ಟೆಗಳನ್ನು ವಿಸ್ತರಿಸಿದ್ದೇವೆ. ಆಹಾರವು ಚರ್ಚಾಸ್ಪದ ವಿಷಯವಾಗಿದೆ ಮತ್ತು ಪ್ರತಿಯೊಬ್ಬರೂ ಅದರ ಬಗ್ಗೆ ತಮ್ಮದೇ ಆದ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಆದಾಗ್ಯೂ, ಪ್ರಾಯೋಗಿಕ ಅನುಷ್ಠಾನದ ನಂತರ ಕಲ್ಯಾಣ-ಕರ್ನಾಟಕ ಪ್ರದೇಶದಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದ ನಂತರ, ಇತರ ಜಿಲ್ಲೆಗಳಲ್ಲಿಯೂ ಅಪೌಷ್ಟಿಕತೆಯ ವಿರುದ್ಧ ಹೋರಾಡಲು ಬಿಸಿಯೂಟದಲ್ಲಿ ಮೊಟ್ಟೆಗಳನ್ನು ಸೇರಿಸಲು ನಾವು ನಿರ್ಧರಿಸಿದ್ದೇವೆ” ಎಂದು ಹೇಳಿದ್ದಾರೆ.

ಡಿಸೆಂಬರ್ 2021 ಮತ್ತು ಮಾರ್ಚ್ 2022 ರ ನಡುವೆ, ರಾಜ್ಯ ಸರ್ಕಾರವು ಬೀದರ್, ಕಲ್ಬುರ್ಗಿ, ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನು ಒಳಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಕಲ್ಯಾಣ-ಕರ್ನಾಟಕ ಪ್ರದೇಶದಲ್ಲಿ ಮಧ್ಯಾಹ್ನದ ಊಟ ಯೋಜನೆಯಡಿ ಮೊಟ್ಟೆಗಳನ್ನು ನೀಡಿ ಪ್ರಾಯೋಗಿಕ ಅಧ್ಯಯನವನ್ನು ನಡೆಸಿತು.

ಇದನ್ನೂ ಓದಿ: ಸರ್ಕಾರ v/s ರಾಜ್ಯಪಾಲ | ಚೆನ್ನೈ ಗಣರಾಜ್ಯೋತ್ಸವ ಪರೇಡ್‌ ಮುಂಚೂಣಿಯಲ್ಲಿ ‘ತಮಿಳುನಾಡು ಚಿರಾಯುವಾಗಲಿ’ ಟ್ಯಾಬ್ಲೋ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಡ್ಯ | ಹೆಣ್ಣು ಭ್ರೂಣ ಹತ್ಯೆ ಪ್ರಕರಣ : ಮತ್ತೆ ಮೂವರ ಬಂಧನ

0
ಮಂಡ್ಯ ಜಿಲ್ಲೆಯ ಪಾಂಡವಪುರ, ಬೆಳ್ಳೂರು, ಮೇಲುಕೋಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಭ್ರೂಣ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ರಾಮಕೃಷ್ಣ ಅಲಿಯಾಸ್...