Homeಮುಖಪುಟ‘ಗುಜರಾತಿಗಳ ಕುರಿತು ಹೇಳಿಕೆ ಹಿಂತೆಗೆದುಕೊಳ್ಳಿ…’; ತೇಜಸ್ವಿ ಯಾದವ್‌ಗೆ ಸುಪ್ರೀಂ ಸೂಚನೆ

‘ಗುಜರಾತಿಗಳ ಕುರಿತು ಹೇಳಿಕೆ ಹಿಂತೆಗೆದುಕೊಳ್ಳಿ…’; ತೇಜಸ್ವಿ ಯಾದವ್‌ಗೆ ಸುಪ್ರೀಂ ಸೂಚನೆ

- Advertisement -
- Advertisement -

“ಗುಜರಾತಿಗಳು ಮಾತ್ರ ದರೋಡೆಕೋರರಾಗಲು ಸಾಧ್ಯ” ಎಂಬ ತಮ್ಮ ಹೇಳಿಕೆಯನ್ನು ಹಿಂಪಡೆದುಕೊಂಡು ಸರಿಯಾದ ಹೇಳಿಕೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರಿಗೆ ಸೂಚಿಸಿದೆ.

ನ್ಯಾಯಮೂರ್ತಿಗಳಾದ ಎಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ಯಾದವ್ ಅವರ ಹಿಂದಿನ ಅಫಿಡವಿಟ್ ಬಗ್ಗೆ ದೂರುದಾರರು ಆಕ್ಷೇಪಣೆಯನ್ನು ವ್ಯಕ್ತಪಡಿಸಿದ ನಂತರ ಹೊಸ ಹೇಳಿಕೆಯನ್ನು ಸಲ್ಲಿಸಲು ಒಂದು ವಾರ ಕಾಲಾವಕಾಶ ನೀಡಿದರು.

“ಸರಿಯಾದ ಹೇಳಿಕೆಯನ್ನು ಸಲ್ಲಿಸಲು ನಾವು ಅರ್ಜಿದಾರರಿಗೆ ಒಂದು ವಾರದ ಸಮಯವನ್ನು ನೀಡುತ್ತೇವೆ” ಎಂದು ಹೇಳಿದ ಪೀಠವು, ಮುಂದಿನ ವಿಚಾರಣೆಯನ್ನು ಫೆಬ್ರವರಿ 5ಕ್ಕೆ ನಿಗದಿಗೊಳಿಸಿದೆ.

ತೇಜಸ್ವಿ ಯಾದವ್ ಅವರು ಜನವರಿ 19 ರಂದು ಸುಪ್ರೀಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿ ತಮ್ಮ ಆಪಾದಿತ “ಗುಜರಾತಿ ಕೊಲೆಗಡುಕರು” ಹೇಳಿಕೆಯನ್ನು ಹಿಂತೆಗೆದುಕೊಂಡರು. “ಗುಜರಾತಿಗಳು ಮಾತ್ರ ದರೋಡೆಕೋರರು” ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಅಹಮದಾಬಾದ್ ನ್ಯಾಯಾಲಯದಲ್ಲಿ ತಮ್ಮ ವಿರುದ್ಧದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ರಾಜ್ಯದ ಹೊರಗಿನ ಸ್ಥಳಕ್ಕೆ ವರ್ಗಾಯಿಸುವಂತೆ ಕೋರಿ ತೇಜಸ್ವಿ ಯಾದವ್ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.

ಆರ್‌ಜೆಡಿ ನಾಯಕನ ಮನವಿಯನ್ನು ಆಲಿಸಿದ ಸುಪ್ರೀಂ ಕೋರ್ಟ್, ಈ ಹಿಂದೆ ಕ್ರಿಮಿನಲ್ ಮಾನನಷ್ಟ ದೂರಿನ ವಿಚಾರಣೆಗೆ ತಡೆ ನೀಡಿತ್ತು. ಅರ್ಜಿ ಸಲ್ಲಿಸಿದ್ದ ಗುಜರಾತ್ ನಿವಾಸಿಗೆ ನೋಟಿಸ್ ಜಾರಿ ಮಾಡಿತ್ತು. ಯಾದವ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 499 ಮತ್ತು 500 ಅಡಿಯಲ್ಲಿ ಕ್ರಿಮಿನಲ್ ಮಾನನಷ್ಟ ಆರೋಪದಡಿಯಲ್ಲಿ ದೂರು ದಾಖಲಿಸಲಾಗಿದೆ.

ಗುಜರಾತ್ ನ್ಯಾಯಾಲಯವು ಯಾದವ್ ವಿರುದ್ಧ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 202ರ ಅಡಿಯಲ್ಲಿ ಆಗಸ್ಟ್‌ನಲ್ಲಿ ಪ್ರಾಥಮಿಕ ವಿಚಾರಣೆಯನ್ನು ನಡೆಸಿತು. ಸ್ಥಳೀಯ ಉದ್ಯಮಿ ಮತ್ತು ಕಾರ್ಯಕರ್ತ ಹರೇಶ್ ಮೆಹ್ತಾ ಅವರು ಸಲ್ಲಿಸಿದ ದೂರಿನ ಮೇರೆಗೆ ಅವರಿಗೆ ಸಮನ್ಸ್ ನೀಡಲು ಸಾಕಷ್ಟು ಆಧಾರಗಳನ್ನು ಕಂಡುಕೊಂಡಿದೆ.

ದೂರಿನ ಪ್ರಕಾರ, ಯಾದವ್ ಅವರು ಮಾರ್ಚ್ 2023 ರಲ್ಲಿ ಪಾಟ್ನಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, “ಈಗಿನ ಪರಿಸ್ಥಿತಿಯಲ್ಲಿ ಗುಜರಾತಿಗಳು ಮಾತ್ರ ಕೊಲೆಗಡುಕರಾಗಬಹುದು ಮತ್ತು ಅವರ ವಂಚನೆಯನ್ನು ಕ್ಷಮಿಸಲಾಗುವುದು” ಎಂದು ಹೇಳಿದ್ದರು. ಎಲ್ಐಸಿ ಅಥವಾ ಬ್ಯಾಂಕ್‌ಗಳಿಗೆ ಸೇರಿದ ಹಣವನ್ನು ತೆಗೆದುಕೊಂಡು ಓಡಿಹೋದರೆ ಯಾರು ಹೊಣೆ? ಎಂದು ಆಗಿನ ಬಿಹಾರ ಉಪಮುಖ್ಯಮಂತ್ರಿ ಹೇಳಿದ್ದರು. ತೇಜಸ್ವಿ ಯಾದವ್ ಅವರ ಹೇಳಿಕೆಯು ಎಲ್ಲಾ ಗುಜರಾತಿಗಳನ್ನು ದೂಷಿಸಿದೆ ಎಂದು ಮೆಹ್ತಾ ಆರೋಪಿಸಿದ್ದಾರೆ.

ಇದನ್ನೂ ಓದಿ; ಕೆರಗೋಡು ಧ್ವಜ ವಿವಾದ: ಬಿಜೆಪಿ-ಆರ್‌ಎಸ್‌ಎಸ್‌ ಎಂಬ ದೇಶದ್ರೋಹಿಗಳಿಗೆ ಹೆದರುವುದುಂಟೆ ಎಂದ ಕಾಂಗ್ರೆಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಬಿಜೆಪಿಗೆ ಮತ ಹಾಕುವಂತೆ...

0
ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹಿರಿಯ ರಾಜಕಾರಣಿ ಅಧೀರ್ ರಂಜನ್ ಚೌಧರಿ ಅವರಿ ಬಿಜೆಪಿ ಪರ ಮಾತನಾಡಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ " ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷಕ್ಕೆ ಮತ...