Homeಮುಖಪುಟಭೀಮಾ ಕೋರೆಗಾಂವ್ ಕಾರ್ಯಕರ್ತರ ಬಿಡುಗಡೆಗಾಗಿ ಮಹಾರಾಷ್ಟ್ರ ಸರ್ಕಾರದ ಮೇಲೆ ತೀವ್ರ ಒತ್ತಡ

ಭೀಮಾ ಕೋರೆಗಾಂವ್ ಕಾರ್ಯಕರ್ತರ ಬಿಡುಗಡೆಗಾಗಿ ಮಹಾರಾಷ್ಟ್ರ ಸರ್ಕಾರದ ಮೇಲೆ ತೀವ್ರ ಒತ್ತಡ

ಸಮಾಜದ ಅಂಚಿನಲ್ಲಿರುವ ವರ್ಗಗಳ ಪರವಾಗಿ ಹೋರಾಡುತ್ತಿರುವ ಕಾರ್ಯಕರ್ತರ ವಿರುದ್ಧದ ಪ್ರಕರಣಗಳನ್ನು ರದ್ದುಪಡಿಸುವಂತೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಯವರನ್ನು ಹಲವು ನಾಯಕರು ಕೋರಿದ್ದಾರೆ.

- Advertisement -
- Advertisement -

ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಆರೇ ಮತ್ತು ಭೀಮಾ ಕೋರೆಗಾಂವ್ ಪ್ರಕರಣಗಳನ್ನು ಪರಿಶೀಲಿಸಲು ನಿರ್ಧರಿಸಿದ ನಂತರ, ರಾಜ್ಯ ಎನ್‌ಸಿಪಿ ಮುಖಂಡ ಜಿತೇಂದ್ರ ಅವಾದ್ ಸೇರಿದಂತೆ ಇತರ ಮುಖಂಡರು ಭೀಮಾ ಕೊರೆಗಾಂವ್ ಕಾರ್ಯಕರ್ತರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವಂತೆ ಮಹಾರಾಷ್ಟ್ರ ವಿಕಾಸ್ ಅಘಾಡಿ ಸರ್ಕಾರವನ್ನು ಕೋರಿದ್ದಾರೆ.

ಅರುಣ್ ಫೆರೀರಾ, ವೆರ್ನಾನ್ ಗೊನ್ಸಾಲ್ವೆಸ್, ಸುಧಾ ಭಾರದ್ವಾಜ್, ವರವರ ರಾವ್, ಶೋಮಾ ಸೇನ್, ಸುರೇಂದ್ರ ಗ್ಯಾಡ್ಲಿಂಗ್, ರೋನಾ ವಿಲ್ಸನ್ ಮತ್ತು ಸುಧೀರ್ ಧವಾಲೆ ಮತ್ತು ಮಹೇಶ್ ರೌತ್, ಗೌತಮ್ ನವಲಖಾ ಈ ಪ್ರಕರಣದ ಆರೋಪಿಗಳಾಗಿದ್ದು ಇವರಲ್ಲಿ ಕೆಲವರು ವರ್ಷದಿಂದಲೂ ಜೈಲಿನಲ್ಲಿದ್ದಾರೆ.

ಈಗ ಮಹಾರಾಷ್ಟ್ರದಲ್ಲಿ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಒಕ್ಕೂಟದ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹಾಗಾಗಿ ಎನ್‌ಸಿಪಿಯ ಜಿತೇಂದ್ರ ಅವದ್, ಸಮಾಜವಾದಿ ಪಕ್ಷದ ಅಬು ಅಜ್ಮಿ, ಸಿಪಿಐ ಮುಖಂಡ ಡಿ ರಾಜಾ, ಆರ್‌ಜೆಡಿಯ ಮನೋಜ್ ಜಾದು ಸೇರಿದಂತೆ ಹಲವು ಮುಖಂಡರು ಭೀಮಾ ಕೊರೆಗಾಂವ್ ಪ್ರಕರಣವನ್ನು ಮುಚ್ಚಿ, ಕಾರ್ಯಕರ್ತರಿಗೆ ನೆಮ್ಮದಿ ನೀಡುವಂತೆ ಹೊಸ ಸಿಎಂ ಉದ್ಧವ್ ಠಾಕ್ರೆಯವರಲ್ಲಿ ಮನವಿ ಮಾಡಿದ್ದಾರೆ.

ಸತ್ಯವನ್ನು ಬೆಳಕಿಗೆ ತರಲು ಸರ್ಕಾರ ಶರದ್ ಪವಾರ್ ಅವರೊಂದಿಗೆ ಸಮನ್ವಯ ಸಾಧಿಸಲಿದೆ ಎಂದು ಅಬು ಅಜ್ಮಿ ಹೇಳಿದ್ದಾರೆ. ಸಿಪಿಐ ನಾಯಕ ಡಿ ರಾಜಾ ಅವರು, ಅಂಚಿನಲ್ಲಿರುವ ಜನರು ಹಿತಾಸಕ್ತಿಗಾಗಿ ಹೋರಾಡುವ ಮೂಲಕ ತಮ್ಮ ಜೀವನವನ್ನು ಅಪಾಯದ ಸಾಲಿನಲ್ಲಿರಿಸಿಕೊಳ್ಳುವ ಕಾರ್ಯಕರ್ತರ ಹಿತಾಸಕ್ತಿಗಳನ್ನು ಕಾಪಾಡಲು ಈ ಕ್ರಮ ಮುಖ್ಯವಾಗಿದೆ ಎಂದು ಹೇಳಿದ್ದಾರೆ.

ದಲಿತ ಹಕ್ಕುಗಳ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಮಾಜ ಕಲ್ಯಾಣ ಸಂಸ್ಥೆಯಾದ ರಾಷ್ಟ್ರ ಸೇವಾ ದಳದ ಸತ್ಯ ಶೋಧನೆಗಳ ಪ್ರಕಾರ ಭೀಮಾ ಕೋರೆಂಗಾವ್‌ ವಿಷಯವು ಕೇಸರಿ ಪಕ್ಷದ ಪಿತೂರಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ತೀರಾ ಇತ್ತೀಚೆಗೆ ಮತ್ತೊಂದು ಆಘಾತಕಾರಿ ಸಂಗತಿ ಮುನ್ನೆಲೆಗೆ ಬಂದಿತು. ವಿಶ್ವಾದ್ಯಂತ ತನ್ನ ಬಳಕೆದಾರರನ್ನು ಬೆಚ್ಚಿಬೀಳಿಸಿದ ಕುಖ್ಯಾತ ವಾಟ್ಸಾಪ್ ಸ್ಪೈವೇರ್ ಸಹ ಭೀಮಾ ಕೋರೆಗಾಂವ್ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡಿರುವುದು ಕಂಡುಬಂದಿದೆ. ಕೇಂದ್ರ ಸರ್ಕಾರವು ಈ ಕಾರ್ಯಕರ್ತರ ಫೋನ್‌ಗಳನ್ನು ಹ್ಯಾಕ್ ಮಾಡಲು ಪೆಗಾಸಸ್ ಸಾಫ್ಟ್‌ವೇರ್ ಅನ್ನು ಬಳಸಿದೆ. ಆ ಮೂಲಕ ನಿರಾಪರಾಧಿಗಳನ್ನು ಈ ಸಂಚಿನಲ್ಲಿ ಸಿಕ್ಕಿಸುವ ಹುನ್ನಾರ ನಡೆಸಿದೆ ಎಂದು ಸತ್ಯ ಶೋಧನ ವರದಿ ತಿಳಿಸಿದೆ.

ಒಂದು ವರ್ಷಕ್ಕೂ ಹೆಚ್ಚು ಕಾಲ ಈ ಕಾರ್ಯಕರ್ತರು ಜೈಲಿನಲ್ಲಿ ನರಳುತ್ತಿದ್ದಾರೆ. ಆದರೆ ನಿಜವಾದ ಹಿಂದೂತ್ವ ವಿಭಜನೆಯ ಅಪರಾಧಿಗಳು ಮುಕ್ತವಾಗಿ ವಿಹರಿಸುತ್ತಿದ್ದಾರೆ. ಹಾಗಾಗಿ ಅಘಾಡಿ ನಾಯಕರನ್ನು ಮನವೊಲಿಸಿ ಈ ಕಾರ್ಯಕರ್ತರನ್ನು ಬಿಡುಗಡೆಗೊಳಿಸಲು ಸಾಧ್ಯವೇ? ಆ ಮೂಲಕ ತನ್ನನ್ನು ಜಾತ್ಯತೀತ, ಉದಾರ ಮತ್ತು ಪ್ರಜಾಪ್ರಭುತ್ವ ಸರ್ಕಾರವಾಗಿ ಸ್ಥಾಪಿಸಲು ಉದ್ಧವ್‌ ಠಾಕ್ರೆ ಬಯಸುತ್ತಾರೆಯೇ? ಎಂಬ ಪ್ರಶ್ನೆಗಳು ಎದ್ದಿವೆ.

ಕೃಪೆ: ಸಬ್‌ರಂಗ್‌ ಇಂಡಿಯಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಎಸ್ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, ಹರ್ದೀಪ್ ಸಿಂಗ್‌ ಹತ್ಯೆ ಬಗ್ಗೆ ಉಲ್ಲೇಖ

0
ಯುನೈಟೆಡ್ ಸ್ಟೇಟ್ಸ್ ತನ್ನ 2023ರ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, BBC ಮೇಲೆ ತೆರಿಗೆ ಅಧಿಕಾರಿಗಳ ದಾಳಿ, ಕೆನಡಾದಲ್ಲಿ ಸಿಖ್ ಕಾರ್ಯಕರ್ತ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಂತಹ ಭಾರತಕ್ಕೆ ಸಂಬಂಧಿಸಿದ ಪ್ರಮುಖ...