Homeಮುಖಪುಟಭಾರತ್ ಜೋಡೋ ವರ್ಷಾಚರಣೆ: ದ್ವೇಷ ಅಳಿದು, ದೇಶ ಒಗ್ಗೂಡಿಸುವವರೆಗೂ ಯಾತ್ರೆ ಮುಂದುವರಿಯುತ್ತದೆ; ರಾಹುಲ್

ಭಾರತ್ ಜೋಡೋ ವರ್ಷಾಚರಣೆ: ದ್ವೇಷ ಅಳಿದು, ದೇಶ ಒಗ್ಗೂಡಿಸುವವರೆಗೂ ಯಾತ್ರೆ ಮುಂದುವರಿಯುತ್ತದೆ; ರಾಹುಲ್

- Advertisement -
- Advertisement -

ಭಾರತ್ ಜೋಡೋ ಯಾತ್ರೆಯ ಪ್ರಾರಂಭವಾಗಿ ಇಂದಿಗೆ ಒಂದು ವರ್ಷವಾಯಿತು. ಈ ಮೊದಲ ಭಾರತ್ ಜೋಡೋ ವಾರ್ಷಿಕೋತ್ಸವದಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದ್ವೇಷವನ್ನು ತೊಡೆದುಹಾಕಲು ಮತ್ತು ಭಾರತವನ್ನು ಒಗ್ಗೂಡಿಸುವವರೆಗೂ ಈ ಯಾತ್ರೆ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.

”ಕಳೆದ ವರ್ಷ ಇದೇ ದಿನದಂದು ಪ್ರಾರಂಭವಾದ ಭಾರತ್ ಜೋಡೋ ಯಾತ್ರೆಯು ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ 4,000 ಕಿಮೀ ಪೂರ್ಣಗೊಳಿಸಿತು” ಎಂದು ರಾಹುಲ್ ಗಾಂಧಿ ಅವರು ವೀಡಿಯೋ ಮಾಂಟೇಜ್ ಹಂಚಿಕೊಂಡಿದ್ದಾರೆ.

”ಭಾರತ ಜೋಡೋ ಯಾತ್ರೆಯ ಕೋಟ್ಯಾಂತರ ಹೆಜ್ಜೆಗಳು ಏಕತೆ ಮತ್ತು ಪ್ರೀತಿಯ ಕಡೆಗೆ ಸಾಗಿವೆ. ಈ ಹೆಜ್ಜೆಗಳು ದೇಶಕ್ಕೆ ಉತ್ತಮ ನಾಳೆಯ ಅಡಿಪಾಯವಾಗಿವೆ” ಎಂದು ಹೇಳಿದರು.

”ಈ ಪಯಣ ಮುಂದುವರಿಯುತ್ತದೆ – ದ್ವೇಷವನ್ನು ನಿರ್ಮೂಲನೆ ಮಾಡುವವರೆಗೆ, ಭಾರತವು ಒಂದಾಗುವವರೆಗೆ. ಇದು ನನ್ನ ಭರವಸೆ!” ಎಂದು ಹೇಳಿದರು.

ಯಾತ್ರೆಯ ಅವಧಿಯಲ್ಲಿ, ರಾಹುಲ್ ಗಾಂಧಿಯವರು 12 ಸಾರ್ವಜನಿಕ ಸಭೆಗಳು, 100 ಕ್ಕೂ ಹೆಚ್ಚು ಬೀದಿ ಸಭೆಗಳು ಮತ್ತು 13 ಪತ್ರಿಕಾಗೋಷ್ಠಿಗಳನ್ನು ಉದ್ದೇಶಿಸಿ ಮಾತನಾಡಿದರು. ಅವರು 275ಕ್ಕೂ ಹೆಚ್ಚು ಯೋಜಿತ ವಾಕಿಂಗ್ ಸಂವಹನಗಳನ್ನು ಮತ್ತು 100ಕ್ಕೂ ಹೆಚ್ಚು ಕುಳಿತುಕೊಂಡು ಸಂವಹನಗಳನ್ನು ಮಾಡಿದ್ದಾರೆ.

ಈ ಭಾರತ್ ಜೋಡೋ ಯಾತ್ರೆಯಿಂದ ಕಾಂಗ್ರೆಸ್‌ಗೆ ಒಂದು ದೊಡ್ಡ ಟೇಕ್‌ವೇ ಸಿಕ್ಕಂತಾಗಿದೆ. ಇದುರಾಹುಲ್ ಗಾಂಧಿಯವರ ಇಮೇಜ್‌ನ್ನು ಹೆಚ್ಚಿಸಿದೆ. ಅರೆಕಾಲಿಕ ರಾಜಕಾರಣಯಿಂದ ಪ್ರಬುದ್ಧ ಮತ್ತು ವಿರೋಧಿಗಳು ಗಂಭೀರವಾಗಿ ಪರಿಗಣಿಸುವ ವ್ಯಕ್ತಿಯಾಗಿ ರಾಹುಲ್ ಗುರುತಿಸಿಕೊಳ್ಳುವಲ್ಲಿ ಈ ಯಾತ್ರೆ ಸಹಕಾರಿಯಾಗಿದೆ ಎಂದು ಹಲವು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಯಾತ್ರೆ ಮೂಲಕ 4,000 ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರ ಕ್ರಮಿಸಿದ ಗಾಂಧಿಯವರು, ತಮ್ಮ ಬೆಂಬಲಿಗರು ಮತ್ತು ವಿರೋಧಿಗಳ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಕಮಲ್ ಹಾಸನ್, ಪೂಜಾ ಭಟ್, ರಿಯಾ ಸೇನ್, ಸ್ವರಾ ಭಾಸ್ಕರ್, ರಶ್ಮಿ ದೇಸಾಯಿ, ಆಕಾಂಕ್ಷಾ ಪುರಿ ಮತ್ತು ಅಮೋಲ್ ಪಾಲೇಕರ್ ಅವರಂತಹ ಚಲನಚಿತ್ರ ಮತ್ತು ಟಿವಿ ಸೆಲೆಬ್ರಿಟಿಗಳು ಅವರೊಂದಿಗೆ ಹೆಜ್ಜೆಹಾಕಿದರು.

ಅಲ್ಲದೆ, ಮಾಜಿ ಸೇನಾ ಮುಖ್ಯಸ್ಥ ಜನರಲ್ (ನಿವೃತ್ತ) ದೀಪಕ್ ಕಪೂರ್ ಮತ್ತು ಮಾಜಿ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ (ನಿವೃತ್ತ) ಎಲ್ ರಾಮದಾಸ್ ಸೇರಿದಂತೆ ಬರಹಗಾರರು ಮತ್ತು ಮಿಲಿಟರಿ ಯೋಧರು ಮತ್ತು ಮಾಜಿ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಮತ್ತು ಮಾಜಿ ಹಣಕಾಸು ಕಾರ್ಯದರ್ಶಿ ಅರವಿಂದ್ ಮಾಯಾರಾಮ್ ಸಹ ಯಾತ್ರೆಯಲ್ಲಿ ಭಾಗವಹಿಸಿದ್ದರು.

ನ್ಯಾಷನಲ್ ಕಾನ್ಫರೆನ್ಸ್‌ನ ಫಾರೂಕ್ ಅಬ್ದುಲ್ಲಾ ಮತ್ತು ಒಮರ್ ಅಬ್ದುಲ್ಲಾ, ಪಿಡಿಪಿಯ ಮೆಹಬೂಬಾ ಮುಫ್ತಿ, ಶಿವಸೇನೆಯ ಆದಿತ್ಯ ಠಾಕ್ರೆ, ಪ್ರಿಯಾಂಕಾ ಚತುರ್ವೇದಿ ಮತ್ತು ಸಂಜಯ್ ರಾವುತ್ ಮತ್ತು ಎನ್‌ಸಿಪಿಯ ಸುಪ್ರಿಯಾ ಸುಳೆ ಅವರಂತಹ ವಿರೋಧ ಪಕ್ಷದ ನಾಯಕರೂ ಮೆರವಣಿಗೆಯಲ್ಲಿ ಸಮಯಗಳಲ್ಲಿ ರಾಹುಲ್ ಗಾಂಧಿಯವರೊಂದಿಗೆ ನಡೆದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read