HomeಮುಖಪುಟINDIA vs ಭಾರತ: ವಿರೋಧ ಪಕ್ಷಗಳ ಒಕ್ಕೂಟಕ್ಕೆ ಹೊಸ ಹೆಸರು ಸೂಚಿಸಿದ ಶಶಿ ತರೂರ್

INDIA vs ಭಾರತ: ವಿರೋಧ ಪಕ್ಷಗಳ ಒಕ್ಕೂಟಕ್ಕೆ ಹೊಸ ಹೆಸರು ಸೂಚಿಸಿದ ಶಶಿ ತರೂರ್

- Advertisement -
- Advertisement -

INDIA ಮೈತ್ರಿಕೂಟ ರಚನೆ ಬಳಿಕ ದೇಶದ ಹೆಸರನ್ನೇ ಬದಲಾಯಿಸುತ್ತಿರುವುದಕ್ಕೆ ಕಾಂಗ್ರೆಸ್‌ನ ಹಿರಿಯ ನಾಯಕ ಶಶಿ ಬುಧವಾರ ಆಡಳಿತಾರೂಢ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.

”ವಿರೋಧ ಪಕ್ಷಗಳು ಇದೀಗ ಅಲಯನ್ಸ್ ಫಾರ್ ಅಲೈಯನ್ಸ್ ಫಾರ್ ಟುಮಾರೊ, ಸೌಹಾರ್ದತೆ ಮತ್ತು ಜವಾಬ್ದಾರಿಯುತ ಪ್ರಗತಿಗಾಗಿ (ಭಾರತ್) [ Betterment, Harmony And Responsible Advancement for Tomorrow(BHARAT)] ಎಂದು ಮರುನಾಮಕರಣ ಮಾಡಿದರೆ ಆಗಲಾದರೂ ಹೆಸರುಗಳನ್ನು ಬದಲಾಯಿಸುವ ದುರಾಸೆಯ ಆಟವನ್ನು ಬಿಜೆಪಿ ನಿಲ್ಲಿಸಬಹುದು” ಎಂದು ತರೂರ್ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ”ನಾವು ಉತ್ತಮ, ಸಾಮರಸ್ಯ ಮತ್ತು ನಾಳೆಯ ಜವಾಬ್ದಾರಿಯುತ ಪ್ರಗತಿಗಾಗಿ (ಭಾರತ್) [ Betterment, Harmony And Responsible Advancement for Tomorrow(BHARAT)] ಎಂದು ಕರೆಯಬಹುದು. ಆನಂತರ ಆಡಳಿತ ಪಕ್ಷವು “ಹೆಸರು ಬದಲಾಯಿಸುವ ದುರಾಸೆಯ ಆಟವನ್ನು ನಿಲ್ಲಿಸಬಹುದು” ಎಂದಿದ್ದಾರೆ.

ಸರ್ಕಾರವು ಸಾಮಾನ್ಯ ‘ಭಾರತದ ರಾಷ್ಟ್ರಪತಿ’ ಬದಲಿಗೆ ‘ಭಾರತದ ಅಧ್ಯಕ್ಷ’ ಹೆಸರಿನಲ್ಲಿ ವಿಶ್ವ ನಾಯಕರಿಗೆ G20 ಔತಣಕೂಟದ ಆಹ್ವಾನಗಳನ್ನು ಕಳುಹಿಸಿದ ನಂತರ ದೇಶದ ಹೆಸರಿನ ಮೇಲೆ ರಾಜಕೀಯ ಗದ್ದಲ ಭುಗಿಲೆದ್ದಿದೆ.

INDIAವನ್ನು “ಭಾರತ್” ಎಂದು ಕರೆಯಲು ಯಾವುದೇ ಸಾಂವಿಧಾನಿಕ ಆಕ್ಷೇಪಣೆ ಇಲ್ಲ. ಆದರೆ INDIAವನ್ನು ಸಂಪೂರ್ಣವಾಗಿ ತ್ಯಜಿಸುವುದು ಮೂರ್ಖತನ. ದೇಶವನ್ನು ಉಲ್ಲೇಖಿಸಲು ‘INDIA ಮತ್ತು ಭಾರತ ಎರಡನ್ನೂ ಬಳಸಲಿ ಎಂದು ತರೂರ್ ಹೇಳಿದರು.

”ದೇಶದ ಎರಡು ಅಧಿಕೃತ ಹೆಸರುಗಳಲ್ಲಿ ಒಂದಾಗಿರುವ INDIAವನ್ನು “ಭಾರತ್” ಎಂದು ಕರೆಯಲು ಯಾವುದೇ ಸಾಂವಿಧಾನಿಕ ಆಕ್ಷೇಪಣೆ ಇಲ್ಲದಿದ್ದರೂ, “INDIA” ಎನ್ನುವ ಸಾಕಷ್ಟು ಬ್ರ್ಯಾಂಡ್‌ಗಳಿಗೆ ಆದರೂ ಅದನ್ನು ಸಂಪೂರ್ಣವಾಗಿ ತ್ಯಜಿಸುವಷ್ಟು ಸರ್ಕಾರವು ಮೂರ್ಖನಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ” ಎಂದು X ನಲ್ಲಿ ಬರೆದಿದ್ದಾರೆ.

”ಇತಿಹಾಸದಲ್ಲಿ ದಾಖಲಾಗಿರುವ ಹೆಸರು, ಪ್ರಪಂಚದಾದ್ಯಂತ ಗುರುತಿಸಲ್ಪಟ್ಟಿರುವ ಹೆಸರಿನ ನಮ್ಮ ಹಕ್ಕನ್ನು ಬಿಟ್ಟುಬಿಡುವ ಬದಲು ನಾವು ಎರಡೂ ಪದಗಳನ್ನು ಬಳಸುವುದನ್ನು ಮುಂದುವರಿಸಬೇಕು” ಎಂದು ಅವರು ಹೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read