Homeಮುಖಪುಟಸಿಬಿಐ, ಇಡಿ, ಎನ್‌ಐಎ ಕಚೇರಿಗಳಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯ: ಸುಪ್ರೀಂ

ಸಿಬಿಐ, ಇಡಿ, ಎನ್‌ಐಎ ಕಚೇರಿಗಳಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯ: ಸುಪ್ರೀಂ

ಪೊಲೀಸ್ ಠಾಣೆಗಳಲ್ಲಿ ಹಲ್ಲೆಗೊಳಗಾದಾಗ ಅಥವಾ ಲಾಕಪ್ ಡೆತ್ ಸಂಭವಿಸಿದ ಸಂದರ್ಭಗಳಲ್ಲಿ ಸಂತ್ರಸ್ತರು ಸಿಸಿಟಿವಿ ದೃಶ್ಯಾವಳಿಗಳನ್ನು ಸಾಕ್ಷಿಯಾಗಿ ಬಳಸಿಕೊಳ್ಳಬಹುದು.

- Advertisement -
- Advertisement -

ದೇಶಾದ್ಯಂತದ ಪ್ರತಿಯೊಂದು ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆಯೇ ಎಂಬುದನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಖಚಿತಪಡಿಸಿಕೊಳ್ಳುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ.

ಪ್ರತಿ ಪೊಲೀಸ್ ಠಾಣೆಗಳಲ್ಲಿ ನೈಟ್ ವಿಷನ್ ಕ್ಯಾಮೆರಾಗಳೊಂದಿಗೆ, ಆಡಿಯೋ ಮುದ್ರಿಸುವ ಸಿಸಿಟಿವಿ ಅಳವಡಿಸುವಂತೆ ಸುಪ್ರೀಂ ಕೋರ್ಟ್ ಹೇಳಿದ್ದು, ಕ್ಯಾಮೆರಾ ರೆಕಾರ್ಡಿಂಗ್ ಅನ್ನು ಕನಿಷ್ಠ 18 ತಿಂಗಳವರೆಗೆ ಸಂಗ್ರಹಿಸಿಡುವಂತೆ ನ್ಯಾಯಾಲಯ ನಿರ್ದೇಶಿಸಿದೆ.

ಜೊತೆಗೆ ವಿಚಾರಣೆ ನಡೆಸುವ ಮತ್ತು ಬಂಧಿಸುವ ಅಧಿಕಾರವಿರುವ ಸಿಬಿಐ, ಜಾರಿ ನಿರ್ದೇಶಾನಲಯ, ರಾಷ್ಟ್ರೀಯ ತನಿಖಾ ಸಂಸ್ಥೆ ಸೇರಿದಂತೆ ದೇಶದ ಎಲ್ಲಾ ಏಜೆನ್ಸಿಗಳ ಕಚೇರಿಗಳಲ್ಲಿ ಧ್ವನಿಮುದ್ರಣ ಸವಲತ್ತು ಇರುವ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.

ಇದನ್ನೂ ಓದಿ: ವಾರಣಾಸಿ: ಮೋದಿ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸೈನಿಕನ ಮನವಿ ತಿರಸ್ಕರಿಸಿದ ಸುಪ್ರೀಂ!

ಪರಮವೀರ್ ಸಿಂಗ್ ಸೈನಿ ಎನ್ನುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್ 2018ರಲ್ಲಿ ಸಿಸಿಟಿವಿ ಅಳವಡಿಕೆ ಕುರಿತು ತೀರ್ಪು ನೀಡಿತ್ತು. ಸಾಕ್ಷಿಗಳ ಹೇಳಿಕೆಗಳ ಆಡಿಯೋ ಮತ್ತು ವಿಡಿಯೋ ರೆಕಾರ್ಡಿಂಗ್ ಮತ್ತು ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸುವ ವಿಷಯವನ್ನು ಪರಮವೀರ್ ಸಿಂಗ್ ಸೈನಿ ಎತ್ತಿದ್ದರು.

ಈಗ ಮತ್ತೆ ನ್ಯಾಯಮೂರ್ತಿ ಆರ್‌.ಎಫ್‌.ನಾರೀಮನ್ ಅವರ ನೇತೃತ್ವದ ತ್ರಿಸದಸ್ಯ ಪೀಠವು, ಕಚೇರಿಗಳಲ್ಲಿ ಅಳವಡಿಸಲಾದ ಸಿಸಿಟಿವಿಗಳು ನೈಟ್ ವಿಷನ್ ಹೊಂದಿರಬೇಕು ಮತ್ತು ಅಗತ್ಯವಾಗಿ ಆಡಿಯೋ ಮತ್ತು ವಿಡಿಯೋಗಳು ಇರಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ತೀರ್ಪಿನಲ್ಲಿ, ವಿದ್ಯುತ್ ಮತ್ತು ಇಂಟರ್ನೆಟ್ ಸಂಪರ್ಕವಿಲ್ಲದ ಪ್ರದೇಶಗಳಲ್ಲಿ, ಸೌರಶಕ್ತಿ ಮತ್ತು ಪವನ ಶಕ್ತಿ ಸೇರಿದಂತೆ ವಿದ್ಯುತ್ ಒದಗಿಸುವ ಯಾವುದೇ ವಿಧಾನವನ್ನು ಬಳಸಿಕೊಳ್ಳಬೇಕು. ಸಾಧ್ಯವಾದಷ್ಟು ತ್ವರಿತವಾಗಿ ಸಿಸಿಟಿವಿ ಒದಗಿಸುವುದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕರ್ತವ್ಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ: ಸುಪ್ರೀಂ ಹೊರಗೆ ಪ್ರತಿಭಟನೆ: ರೈತರ ಹೋರಾಟಕ್ಕೆ ಸಾಥ್ ನೀಡಿದ ದೆಹಲಿ ವಕೀಲರು!

ಪೊಲೀಸ್ ಠಾಣೆಗಳಲ್ಲಿ ಹಲ್ಲೆಗೊಳಗಾದಾಗ ಅಥವಾ ಲಾಕಪ್ ಡೆತ್ ಸಂಭವಿಸಿದ ಸಂದರ್ಭಗಳಲ್ಲಿ ಸಂತ್ರಸ್ತರು ಮಾನವ ಹಕ್ಕುಗಳ ನ್ಯಾಯಾಲಯಗಳಿಗೆ ದೂರು ನೀಡಬಹುದು. ಆಗ ಸಿಸಿಟಿವಿ ದೃಶ್ಯಾವಳಿಗಳನ್ನು ಸಾಕ್ಷಿಯಾಗಿ ಬಳಸಿಕೊಳ್ಳಬಹುದು. ಮಾನವ ಹಕ್ಕುಗಳ ಉಲ್ಲಂಘನೆಯ ಸಂದರ್ಭದಲ್ಲಿ ದೃಶ್ಯಾವಳಿಯನ್ನು ಸಂತ್ರಸ್ತರಿಗೆ ಲಭ್ಯವಾಗುವಂತೆ ಮಾಡಬೇಕು ಎಂದು ನ್ಯಾಯಾಲಯ ತಿಳಿಸಿದೆ.

ಸಿಸಿಟಿವಿಗಳ ಕೆಲಸ, ನಿರ್ವಹಣೆ ಮತ್ತು ಧ್ವನಿಮುದ್ರಣದ ಜವಾಬ್ದಾರಿ ಸಂಬಂಧಪಟ್ಟ ಪೊಲೀಸ್ ಠಾಣೆಯ ಎಸ್‌ಎಚ್‌ಒಗೆ ಇರುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಪೊಲೀಸ್ ಠಾಣೆಗಳ ಪ್ರವೇಶ ದ್ವಾರ ಮತ್ತು ನಿರ್ಗಮನ ದ್ವಾರಗಳಲ್ಲಿ, ಮುಖ್ಯದ್ವಾರ, ಲಾಬಿಯಲ್ಲಿ, ಎಲ್ಲಾ ಲಾಕ್-ಅಪ್‌ಗಳು, ಇನ್ಸ್‌ಪೆಕ್ಟರ್‌ಗಳ ಕೊಠಡಿ, ಸಬ್ ಇನ್ಸ್‌ಪೆಕ್ಟರ್‌ಗಳ ಕೊಠಡಿ ಸೇರಿ ಎಲ್ಲಾ ಕಡೆ ಕ್ಯಾಮೆರಾ ಅಳವಡಿಸಬೇಕು. ಜೊತೆಗೆ ಇದನ್ನು ತಿಳಿಸುವ ಪೋಸ್ಟರ್‌ಗಳನ್ನು ಪೊಲೀಸ್ ಠಾಣೆಗಳ ಪ್ರವೇಶದ್ವಾರದಲ್ಲಿ ಹಾಕಬೇಕು ಎಂದು ನ್ಯಾಯಾಲಯ ತಿಳಿಸಿದೆ.


ಇದನ್ನೂ ಓದಿ: ರಾಜ್ಯಗಳ ಒಪ್ಪಿಗೆಯಿಲ್ಲದೆ ಕೇಂದ್ರವು ಸಿಬಿಐ ಅಧಿಕಾರ ವ್ಯಾಪ್ತಿ ವಿಸ್ತರಿಸಲು ಸಾಧ್ಯವಿಲ್ಲ: ಸುಪ್ರೀಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೂ ಮತ ಚಲಾಯಿಸಬಹುದೇ?

0
'ಚಾಲೆಂಜ್ ವೋಟ್‌ ಮತ್ತು ಟೆಂಡರ್ಡ್‌ ವೋಟ್‌' (Challenge vote and Tender vote) ಕುರಿತು ವಿವರಿಸಿದ ಚುನಾವಣಾ ಜಾಗೃತಿಯದ್ದು ಎನ್ನಲಾದ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೈರಲ್ ಸಂದೇಶದಲ್ಲಿ ಈ ಕೆಳಗಿನಂತೆ ಬರೆಯಲಾಗಿದೆ.. "ನೀವು ಮತಗಟ್ಟೆಗೆ...