Homeಮುಖಪುಟಎನ್‌ಸಿಇಆರ್‌ಟಿ ಮುಖ್ಯ ಸಲಹೆಗಾರರ ಪಟ್ಟಿಯಿಂದ ತಮ್ಮ ಹೆಸರು ಕೈಬಿಡುವಂತೆ ಯೋಗೇಂದ್ರ ಯಾದವ್, ಸುಹಾಸ್ ಪಾಲ್ಶಿಕರ್ ಒತ್ತಾಯ

ಎನ್‌ಸಿಇಆರ್‌ಟಿ ಮುಖ್ಯ ಸಲಹೆಗಾರರ ಪಟ್ಟಿಯಿಂದ ತಮ್ಮ ಹೆಸರು ಕೈಬಿಡುವಂತೆ ಯೋಗೇಂದ್ರ ಯಾದವ್, ಸುಹಾಸ್ ಪಾಲ್ಶಿಕರ್ ಒತ್ತಾಯ

- Advertisement -
- Advertisement -

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎನ್‌ಸಿಇಆರ್‌ಟಿ) ರಾಜ್ಯಶಾಸ್ತ್ರದ ಪಠ್ಯಗಳನ್ನು “ಗುರುತಿಸಲಾಗದಷ್ಟು ವಿರೂಪಗೊಳಿಸಲಾಗಿದೆ” ಹಾಗಾಗಿ ತಮ್ಮ ಹೆಸರನ್ನು ಮುಖ್ಯ ಸಲಹೆಗಾರರ ಮಂಡಳಿಯಿಂದ ಕೈಬಿಡುವಂತೆ ಶಿಕ್ಷಣ ತಜ್ಞ ಸುಹಾಸ್ ಪಾಲ್ಶಿಕರ್ ಮತ್ತು ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್ ಗುರುವಾರ ಒತ್ತಾಯಿಸಿದ್ದಾರೆ.

ಸ್ವರಾಜ್ ಅಭಿಯಾನದ ರಾಜಕೀಯ ಪಕ್ಷದ ಸಂಸ್ಥಾಪಕರಾದ ಪಾಲ್ಶಿಕರ್ ಮತ್ತು ಯಾದವ್ ಅವರನ್ನು 9 ರಿಂದ 12 ನೇ ತರಗತಿಯ NCERT ಯ ರಾಜ್ಯಶಾಸ್ತ್ರ ಪಠ್ಯಪುಸ್ತಕಗಳಿಗೆ ಮುಖ್ಯ ಸಲಹೆಗಾರರಾಗಿ ಹೆಸರು ಸೇರಿಸಲಾಗಿದೆ.

ಕರೋನವೈರಸ್ ಸಾಂಕ್ರಾಮಿಕ ರೋಗದಿಂದ ಮಕ್ಕಳಿಗೆ ಪಠ್ಯ ಹೊರೆಯಾಗಬಾರದೆಂದು ಕಡಿಮೆ ಮಾಡುವು ಉದ್ದೇಶದಿಂದ ಎನ್‌ಸಿಇಆರ್‌ಟಿಯು ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡಲಾಗಿದೆ. ಅದು ಭಾರತದ ಇತಿಹಾಸದ ಪ್ರಮುಖ ವಿವರಗಳನ್ನು ಕೈಬಿಟ್ಟಿದೆ.

ಮೋಹನ್‌ದಾಸ್ ಕರಮಚಂದ್ ಗಾಂಧಿ ಅವರನ್ನು ಹತ್ಯೆ ಮಾಡಲು ಹಿಂದೂ ಉಗ್ರಗಾಮಿಗಳು ನಡೆಸಿದ ಪ್ರಯತ್ನಗಳು ಮತ್ತು ಅವರ ಹತ್ಯೆಯ ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ವಿಧಿಸಲಾದ ನಿಷೇಧದ ಪ್ಯಾರಾಗಳನ್ನು ಎನ್‌ಸಿಇಆರ್‌ಟಿ ಪಠ್ಯದಿಂದ ಕೈಬಿಡಲಾಗಿದೆ.

ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ: 10ನೇ ತರಗತಿ ಪಠ್ಯದಿಂದ ‘ಪ್ರಜಾಪ್ರಭುತ್ವ’ ಪಾಠವನ್ನೇ ಕೈಬಿಟ್ಟ ಎನ್‌ಸಿಇಆರ್‌ಟಿ

ಕಳೆದ ವರ್ಷ, NCERT 2002ರ ಗುಜರಾತ್ ಗಲಭೆಗಳು, ಭಾರತದಲ್ಲಿ ಮೊಘಲ್ ಆಳ್ವಿಕೆ ಮತ್ತು 1975ರಲ್ಲಿ ಹೇರಲಾದ ರಾಷ್ಟ್ರವ್ಯಾಪಿ ತುರ್ತು ಪರಿಸ್ಥಿತಿಗೆ ಸಂಬಂಧಿಸಿದ ವಿಷಯವನ್ನು ಸಹ ಕೈಬಿಟ್ಟಿತು. ಈಗ NCERT ಪಠ್ಯಪುಸ್ತಕದಲ್ಲಿ ಗುಜರಾತ್ ಗಲಭೆಯ ಬಗ್ಗೆ ಯಾವುದೇ ಉಲ್ಲೇಖಗಳು ಇಲ್ಲದಂತಾಗಿದೆ.

ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್ ಸಕ್ಲಾನಿ ಅವರಿಗೆ ಗುರುವಾರ ಪಾಲ್ಶಿಕರ್ ಮತ್ತು ಯಾದವ್ ಅವರು ಪತ್ರ ಬರೆದಿದ್ದು, ”ತಮ್ಮ ಜೊತೆ ಯಾವುದೇ ಚರ್ಚೆನಡೆಸದೇ ಅಥವಾ ಪಠ್ಯ ಕೈಬಿಡುವ ವಿಚಾರ ತಿಳಿಸಿಲ್ಲ” ಎಂದು ಅವರು ಹೇಳಿದರು.

ಎನ್‌ಸಿಇಆರ್‌ಟಿಯು ಈ ರೀತಿ ಪಠ್ಯ ಕೈಬಿಡುವುದರ ಹಿಂದೆ ಯಾವುದೇ ಶೈಕ್ಷಣಿಕ ತಾರ್ಕಿಕತೆಯನ್ನು ನೋಡಲಾಗಿಲ್ಲ ಎಂದು ಪಾಲ್ಶಿಕರ್ ಮತ್ತು ಯಾದವ್ ಅವರು ಹೇಳಿದ್ದಾರೆ.

”ಪಠ್ಯಪುಸ್ತಕಗಳು ಪಕ್ಷಪಾತದ ರೀತಿಯಲ್ಲಿ ರೂಪಿಸಬಾರದು ಮತ್ತು ಸಮಾಜ ವಿಜ್ಞಾನದ ವಿದ್ಯಾರ್ಥಿಗಳಲ್ಲಿ ವಿಮರ್ಶೆ ಮತ್ತು ಪ್ರಶ್ನಿಸುವ ಮನೋಭಾವವನ್ನು ತಗ್ಗಿಸಬಾರದು” ಎಂದು ಪತ್ರದಲ್ಲಿ ಸೇರಿಸಲಾಗಿದೆ.

“ವಿರೂಪಗೊಂಡ ಮತ್ತು ಶೈಕ್ಷಣಿಕವಾಗಿ ಕಾರ್ಯನಿರ್ವಹಿಸದ ಪಠ್ಯಪುಸ್ತಕಗಳಿಗೆ” ತಮ್ಮ ಹೆಸರುಗಳನ್ನು ಮುಖ್ಯ ಸಲಹೆಗಾರರಾಗಿ ಉಲ್ಲೇಖಿಸಿರುವುದು “ಮುಜುಗರ” ಎಂದು ಶಿಕ್ಷಣತಜ್ಞ ಮತ್ತು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read