Homeಮುಖಪುಟಭಾರತದಲ್ಲಿ 101.3 ಮಿಲಿಯನ್ ಮಧುಮೇಹಿಗಳಿದ್ದಾರೆ: ಸಂಶೋಧನಾ ವರದಿ

ಭಾರತದಲ್ಲಿ 101.3 ಮಿಲಿಯನ್ ಮಧುಮೇಹಿಗಳಿದ್ದಾರೆ: ಸಂಶೋಧನಾ ವರದಿ

- Advertisement -
- Advertisement -

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್‌) ಸಹಯೋಗದ‍ಲ್ಲಿ ನಡೆಸಲಾದ ಅಧ್ಯಯನವು ಭಾರತ ದೇಶದಲ್ಲಿ 101.3 ಮಿಲಿಯನ್ ಜನರು ಅಥವಾ ಜನಸಂಖ್ಯೆಯ 11.4% ಜನರು ಮಧುಮೇಹವನ್ನು ಹೊಂದಿರುತ್ತಾರೆ ಎಂದು ಅಂದಾಜಿಸಿದೆ.

ಭಾರತದಲ್ಲಿ 136 ಮಿಲಿಯನ್ ಜನರು ಅಥವಾ ಜನಸಂಖ್ಯೆಯ 15.3% ಜನರು ಪೂರ್ವ-ಮಧುಮೇಹ (ಪ್ರೀ-ಡಯಾಬಿಟೀಸ್‌) ಹೊಂದಿರಬಹುದು ಎಂದು ಅಧ್ಯಯನ ಬಹಿರಂಗಪಡಿಸಿದೆ.

ವ್ಯಕ್ತಿಯ ರಕ್ತದಲ್ಲಿನ ಸಕ್ಕರೆ ಪ್ರಮಾಣವು ಸಾಮಾನ್ಯಕ್ಕಿಂತ ಹೆಚ್ಚಾಗಿದ್ದರೆ ಪೂರ್ವ ಮಧುಮೇಹ ಎಂದು ಕರೆಯಲಾಗುತ್ತದೆ. ಆದರೆ ಮಧುಮೇಹ ಎಂದು ವರ್ಗೀಕರಿಸಲು ಇಷ್ಟು ಸಾಕಾಗುವುದಿಲ್ಲ.

‘ದಿ ಲ್ಯಾನ್ಸೆಟ್ ಡಯಾಬಿಟಿಸ್ ಅಂಡ್ ಎಂಡೋಕ್ರೈನಾಲಜಿ ಮೆಡಿಕಲ್ ಜರ್ನಲ್‌’ನಲ್ಲಿ ಪ್ರಕಟವಾದ ಈ ಅಧ್ಯಯನವು, “ಭಾರತದಲ್ಲಿ ಚಯಾಪಚಯ ಸಾಂಕ್ರಾಮಿಕವಲ್ಲದ ಕಾಯಿಲೆಗಳ ಹರಡುವಿಕೆ”ಯನ್ನು ಪ್ರಮಾಣೀಕರಿಸಲು ಪ್ರಯತ್ನಿಸಿದೆ.

‘ಮೋಹನ್ ಮಧುಮೇಹ ಸ್ಪೆಷಾಲಿಟೀಸ್ ಸೆಂಟರ್‌’ನ ಅಧ್ಯಯನದ ಮುಖ್ಯ ಲೇಖಕಿ, ವ್ಯವಸ್ಥಾಪಕ ನಿರ್ದೇಶಕಿ ಎಂ.ಅಂಜನಾ ಅವರು ಪ್ರತಿಕ್ರಿಯಿಸಿದ್ದು, “ಪ್ರಸ್ತುತ ಮಧುಮೇಹದ ಹರಡುವಿಕೆ ಕಡಿಮೆ ಇರುವ ರಾಜ್ಯಗಳಲ್ಲಿ ಪ್ರಿ-ಡಯಾಬಿಟಿಸ್ ಮಟ್ಟಗಳು ಹೆಚ್ಚಿವೆ” ಎಂದಿರುವುದಾಗಿ  ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ಇದನ್ನೂ ಓದಿರಿ: ಮಕ್ಕಳಿಗೆ ಮೊಟ್ಟೆ ಬೇಡ ಎನ್ನುವವರು ರಾಜ್ಯದ ‘ಅಪೌಷ್ಟಿಕತೆ’ ತಿಳಿದಿಲ್ಲವೇ? ಬಸವಣ್ಣನವರ ವಚನ ಓದಿಲ್ಲವೇ?

“ಪೂರ್ವ-ಮಧುಮೇಹ ಇದ್ದರೆ, ಅದು ಮಧುಮೇಹಕ್ಕೆ ಅತ್ಯಂತ ವೇಗವಾಗಿ ಪರಿವರ್ತನೆಯಾಗುವ ಸಾಧ್ಯತೆ ಇರುತ್ತದೆ. ಪೂರ್ವ ಮಧುಮೇಹ ಹೊಂದಿರುವ 60% ಕ್ಕಿಂತ ಹೆಚ್ಚು ಜನರು ಮುಂದಿನ ಐದು ವರ್ಷಗಳಲ್ಲಿ ಮಧುಮೇಹಿಗಳಾಗುತ್ತಾರೆ” ಎಂದಿದ್ದಾರೆ ಅಂಜಲಿ.

ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ 39.5% ಜನರು ಹೊಟ್ಟೆಯ ಬೊಜ್ಜು ಹೊಂದಿದ್ದರೆ, 28.6% ಸಾಮಾನ್ಯ ಬೊಜ್ಜು ಹೊಂದಿದ್ದರು ಎಂದು ಸಂಶೋಧನೆ ಹೇಳಿದೆ. ಅಧ್ಯಯನ ಮಾಡಿದವರಲ್ಲಿ 81.2% ರಷ್ಟು ಕೊಲೆಸ್ಟ್ರಾಲ್, ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ ಕೊಲೆಸ್ಟ್ರಾಲ್ ಮತ್ತು ಹೆಚ್ಚಿನ ಸಾಂದ್ರತೆಯ ಲಿಪೊಪ್ರೋಟೀನ್‌ನಂತಹ ಅಸಮತೋಲನವನ್ನು ಹೊಂದಿದ್ದಾರೆ ಎಂದಿದೆ.

ಈ ಅಧ್ಯಯನವು 2008 ಮತ್ತು 2020ರ ನಡುವೆ ನಡೆದಿದೆ. 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 1,13,043 ವ್ಯಕ್ತಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಫಾ ನಿರಾಶ್ರಿತರ ಶಿಬಿರದ ಮೇಲೆ ದಾಳಿ ನಡೆಸಿದ ಇಸ್ರೇಲ್: 40 ಪ್ಯಾಲೆಸ್ತೀನಿಯರು ಸಾವು

0
ಇಸ್ರೇಲಿ ಪಡೆಗಳು ರಫಾದಲ್ಲಿ ವಿನ್ಯಾಸಗೊಳಿಸಲಾದ ಸುರಕ್ಷಿತ ವಲಯದಲ್ಲಿ ಸ್ಥಳಾಂತರಗೊಂಡ ಜನರು ವಾಸಿಸುವ ಟೆಂಟ್ ಕ್ಯಾಂಪ್ ಮೇಲೆ ಬಾಂಬ್ ದಾಳಿ ನಡೆಸಿದ್ದು, ಕನಿಷ್ಠ 40 ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ. ಬಲಿಯಾದವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು...