ಮುಂದಿನ ಎರಡು ತಿಂಗಳಲ್ಲಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ನಡೆಯಲಿದ್ದು, ಸ್ವಾತಂತ್ಯ್ರ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ತಮ್ಮವರನ್ನಾಗಿ ಮಾಡಲು ಬಿಜೆಪಿ ಮತ್ತು ಆಡಳಿತರೂಢ ಟಿಎಂಸಿ ಪಕ್ಷಗಳು ಪರಸ್ಪರ ಕೆಸೆರೆಚಾಟದಲ್ಲಿ ತೊಡಗಿದ್ದಾರೆ. ನೇತಾಜಿಯ 125 ನೇ ಜನ್ಮ ದಿನಾಚರಣೆಯ ಗೌರವಾರ್ಥವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರಧಾನಿಯು ಪಾಲ್ಗೊಳ್ಳುವುದಕ್ಕಿಂತಲೂ ಮುಂಚೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ವಿರುದ್ದ ಟೀಕಾಪ್ರಹಾರ ಮಾಡಿದ್ದಾರೆ.
“ನೇತಾಜಿಯ ಜನ್ಮ ದಿನಾಚರಣೆಯನ್ನು ಇನ್ನೂ ರಾಷ್ಟ್ರೀಯ ರಜಾದಿನವೆಂದು ಘೋಷಿಸದಿರುವ ಕೇಂದ್ರದ ನಿರ್ಧಾರವನ್ನು ನಾನು ವಿರೋಧಿಸುತ್ತೇನೆ. ನೀವು ಹೊಸ ಸಂಸತ್ತನ್ನು ನಿರ್ಮಿಸುತ್ತಿದ್ದೀರಿ ಮತ್ತು ಹೊಸ ವಿಮಾನಗಳನ್ನು ಖರೀದಿಸುತ್ತಿದ್ದೀರಿ, ಆದರೆ ನೇತಾಜಿಗೆ ಸ್ಮಾರಕ ನಿರ್ಮಿಸುತ್ತಿಲ್ಲವೇಕೆ?” ಎಂದು ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿಯು ಮಾವೋವಾದಿಗಳಿಗಿಂತ ಅಪಾಯಕಾರಿಯಾಗಿದೆ – ಮಮತಾ ಬ್ಯಾನರ್ಜಿ ವಾಗ್ದಾಳಿ
ಭಾರತೀಯ ಜನ ಸಂಘದ (ಬಿಜೆಪಿಯ ಹಿಂದಿನ ಹೆಸರು) ಸ್ಥಾಪಕ ಶ್ಯಾಮಾ ಪ್ರಸಾದ್ ಮುಖರ್ಜಿಯ ಹೆಸರನ್ನು ಕಲ್ಕತ್ತಾ ಬಂದರಿಗೆ ಮರುನಾಮಕರಣ ಮಾಡುವಂತಹ ನಿರ್ಧಾರವನ್ನು ಕಳೆದ ವರ್ಷ ಜೂನ್‌ನಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡಿತ್ತು. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ನೇತಾಜಿ ರೂಪಿಸಿರುವ ಯೋಜನಾ ಆಯೋಗದ ಹೆಸರನ್ನು ನೀತಿ ಆಯೋಗ ಎಂದು ಮರುನಾಮಕರಣ ಮಾಡಿರುವ ಕೇಂದ್ರದ ನಡೆಯನ್ನು ಅವರು ಟೀಕಿಸಿದರು. ಅಲ್ಲದೆ, “ಕೇಂದ್ರ ಸರ್ಕಾರವು ಯೋಜನಾ ಆಯೋಗವನ್ನು ಮರಳಿ ತರಬೇಕು” ಎಂದು ಅವರು ಒತ್ತಾಯಿಸಿದರು. ಅಲ್ಲದೆ ನೇತಾಜಿ ಜನ್ಮ ದಿನವನ್ನು ದೇಶನಾಯಕ್ ದಿವಸ್ ಬದಲಿಗೆ ಪರಾಕ್ರಮಂ ದಿವಸ್ ಎಂದು ಹೆಸರಿಟ್ಟ ಕೇಂದ್ರ ಸರ್ಕಾರವನನ್ನು ಅವರು ಖಂಡಿಸಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನೆ ಸ್ಪರ್ಧೆ
A monument, named after Azad Hind Fauj, will be built at Rajarhat. A university named after Netaji is also being set up which shall be funded entirely by the state, and will have tie-ups with foreign universities. #DeshNayakDibas (2/3)
— Mamata Banerjee (@MamataOfficial) January 23, 2021
ಇಂದು ನರೇಂದ್ರ ಮೋದಿ ಕೋಲ್ಕತ್ತಾಗೆ ಭೇಟಿ ನೀಡುತ್ತಿದ್ದಾರೆ. ಅದಕ್ಕೂ ಮುನ್ನವೇ ಮಮತಾ ಬ್ಯಾನರ್ಜಿ ಬೃಹತ್ ರ್ಯಾಲಿ ನಡೆಸಿ ಬಿಜೆಪಿ ಮತ್ತು ಮೊದಿ ವಿರುದ್ಧ ಕಿಡಿಕಾರಿದ್ದಾರೆ.
ಇದನ್ನೂ ಓದಿ: TMC ಯ ಮತ್ತೋರ್ವ ಸಚಿವ ರಾಜೀನಾಮೆ – ಅಪಾರ್ಥ ಬೇಡ ಎಂದ ಮಮತಾ ಬ್ಯಾನರ್ಜಿ
