Homeಮುಖಪುಟಪೌರತ್ವ ಕಾಯ್ದೆಯ ಕುರಿತು ಹಬ್ಬಿದ ಫೇಕ್‌ನ್ಯೂಸ್‌ಗಳು ಯಾವುವು ಗೊತ್ತೆ? ಇಲ್ಲಿವೆ ನೋಡಿ

ಪೌರತ್ವ ಕಾಯ್ದೆಯ ಕುರಿತು ಹಬ್ಬಿದ ಫೇಕ್‌ನ್ಯೂಸ್‌ಗಳು ಯಾವುವು ಗೊತ್ತೆ? ಇಲ್ಲಿವೆ ನೋಡಿ

- Advertisement -
- Advertisement -

ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದ ನಂತರ ಎಲ್ಲೆಡೆ ಪ್ರತಿಭಟನೆಗಳು ಭುಗಿಲೆದ್ದಿವೆ. ಇದು ಕೇಂದ್ರ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಇಂತಹ ಸಂದರ್ಭದಲ್ಲಿ ಹೋರಾಟವನ್ನು ದಿಕ್ಕುತಪ್ಪಿಸಲು ಕೆಲವರು ಫೇಕ್‌ ನ್ಯೂಸ್‌ಗಳ ಮೊರೆ ಹೋಗಿದ್ದಾರೆ. ಅಂತಹ ಕೆಲವು ಫೇಕ್‌ನ್ಯೂಸ್‌ಗಳನ್ನು ಇಲ್ಲಿ ಕೊಡಲಾಗಿದೆ.

1 ನಾವು ಮುಸ್ಲಿಮರು. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸುತ್ತೇವೆ.

ದೇಶಾದ್ಯಂತ ಭಾರೀ ಹೋರಾಟಗಳಿಗೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ನಾವು ಮುಸ್ಲಿಂರಾದರೂ ಬೆಂಬಲಿಸುತ್ತೇವೆ ಎಂಬ ಸಂದೇಶವನ್ನು ನೂರಾರು ಜನ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಕಾಯ್ದೆಯು ಮುಸ್ಲಿಮರನ್ನು ಹೊರತುಪಡಿಸಿ ಇತರೆ ಧರ್ಮಿಯರು 2015ಕ್ಕೂ ಮುಂಚೆ ಭಾರತಕ್ಕೆ ವಲಸೆ ಬಂದಿದ್ದರೆ ಅವರಿಗೆ ಭಾರತದ ಪೌರತ್ವವನ್ನು ನೀಡುತ್ತದೆ.

ಈ ಕುರಿತು ನಿಜಕ್ಕೂ ಅವರು ಮುಸ್ಲಿಮರೆ ಎಂದು ಫ್ಯಾಕ್ಟ್ಚೆಕ್ ಮಾಡಿದಾಗ ಆಘಾತಕಾರಿ ಅಂಶಗಳು ಬಯಲಾಗಿವೆ. ಈಗ ಯಾರೆಲ್ಲಾ ತಾವು ಮುಸ್ಲಿಮರು ಎನ್ನುತ್ತಿದ್ದಾರೆ ಅದೇ ಅಕೌಂಟ್‌ಗಳು ಕೆಲವು ತಿಂಗಳುಗಳ ಹಿಂದೆಯಷ್ಟೇ ನಾವು ಹಿಂದೂಗಳು. ಹಿಂದೂಗಳಾಗಿದ್ದಕ್ಕೆ ಹೆಮ್ಮೆ ಇದೆ ಎಂದು ಬರೆದುಕೊಂಡಿರುವುದು ಕಂಡುಬಂದಿದೆ.

ಅಂದರೆ ಹಿಂದೂಗಳಾಗಿದ್ದರೂ ಸಹ ಮುಸ್ಲಿಂ ಹೆಸರಿಗೆ ಬದಲಿಸಿಕೊಂಡು ಅಥವಾ ಫೇಕ್ ಐಡಿಗಳನ್ನು ಬಳಸಿಕೊಂಡು ಪೌರತ್ವ ಕಾಯ್ದೆಯನ್ನು ಬೆಂಬಲಿಸಲು ಮುಂದಾಗಿದ್ದಾರೆ. ಅರ್ಥಾತ್ ಮುಸ್ಲಿಂ ವಿರುದ್ಧದ ಕಾನೂನನ್ನು ಮುಸ್ಲಿಮರೆ ಬೆಂಬಲಿಸುತ್ತಿದ್ದಾರೆ ಎಂಬ ಭಾವನೆ ಮೂಡಿಸಲು ಕಿಡಿಗೇಡಿಗಳು ಮುಂದಾಗಿದ್ದಾರೆ.

2 ಟಿಎಂಸಿ ಮುಖಂಡ, ಕೋಲ್ಕತ್ತದ ಮೇಯರ್ ಕೂಡ ಪೌರತ್ವ ಕಾಯ್ದೆಯನ್ನು ಬೆಂಬಲಿಸಿದ್ದಾರೆ?

ಸಿಎಬಿ ವಿರುದ್ಧ ದಂಗೆ ಎದ್ದಿರುವವರೆ ಕೇಳಿ. ಅಕಸ್ಮಾತ್ 70% ಇರುವ ಹಿಂದೂಗಳೇನಾದರೂ ಅಮಿತ್ ಶಾ ಬೆಂಬಲಕ್ಕೆ ನಿಂತರೆ ನಾಳೆ ನೀವು ರಸ್ತೆಯಲ್ಲಿಯೂ ಸಹ ಓಡಾಡಲು ಆಗುವುದಿಲ್ಲ ಎಂದು ಫಿರ್ಹಾದ್ ಬಾಬಿ ಹಕೀಂ ಹೇಳಿದ್ದಾರೆ ಎಂಬ ಪೋಸ್ಟರ್ ಅನ್ನು ಢಮರುಗ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಷೇರ್ ಮಾಡಿದ್ದಾರೆ.

ಫಿರ್ಹಾದ್ ಬಾಬಿ ಹಕೀಂ ಮುಸ್ಲಿಂ ಸಮುದಾಯಕ್ಕೆ ಸೇರಿರುವ ಟಿಎಂಸಿ ಪಕ್ಷದ ಕೋಲ್ಕತ್ತಾ ಮೇಯರ್. ಟಿಎಂಸಿ ಪಕ್ಷವೇ ಖಡಾಖಂಡಿತವಾಗಿ ಸಿಎಬಿ ವಿರೋಧಿಸಿರುತ್ತಿರುವಾಗ ಈ ರೀತಿಯ ಹೇಳಿಕೆ ಕೊಟ್ಟಿದ್ದಾರೆ ಎಂದು ಅವರ ವೈಯಕ್ತಿಕ ಫೇಸ್‌ಬುಕ್ ಪೋಸ್ಟ್ ನೋಡಿದರೆ ಇದು ಸುಳ್ಳು ಎಂದು ಗೊತ್ತಾಗುತ್ತದೆ.

ನಿಜವೆಂದರೆ ಅವರ ಪೌರತ್ವ ಕಾಯ್ದೆ ವಿರೋಧಿಸಿ ತಮ್ಮ ವಾಲ್‌ನಲ್ಲಿ ಬರೆದುಕೊಂಡಿದ್ದಾರೆ ಮಾತ್ರವಲ್ಲ ಟಿವಿ ಚರ್ಚೆ ಮತ್ತು ಸಿಎಬಿ ವಿರೋಧಿ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದಾರೆ. ಯಥಾಪ್ರಕಾರ ನೇರವಾಗಿ ಎದುರಿಸಲಾಗದ ಬಿಜೆಪಿ ಕಾರ್ಯಕರ್ತರು ಈ ಸುಳ್ಳು ಸುದ್ದಿಯನ್ನು ಹರಡಿದ್ದಾರೆ.

5 ಅಲಿಘರ್ ವಿವಿಯ ವಿದ್ಯಾರ್ಥಿಗಳು ಹಿಂದೂಗಳಿಂದ ಸ್ವಾತಂತ್ರ ಬೇಕು ಎಂದು ಘೋಷಣೆ ಕೂಗಿದರೆ?

ಪೌರತ್ವ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿವೆ. ಇದು ನರೇಂದ್ರ ಮೋದಿ ಮತ್ತು ಅಮಿತ್ ಶಾರವರ ನಿದ್ದೆಗೆಡಿಸಿವೆ. ಇನ್ನು ಎಲ್ಲಾ ವಿ.ವಿಗಳಲ್ಲಿ ವಿದ್ಯಾರ್ಥಿಗಳು ಬೀದಿಗಿಳಿದಿದ್ದಾರೆ. ಜಾಮೀಯ ವಿವಿ ಮತ್ತು ಅಲಿಘರ್ ವಿವಿಯಲ್ಲಿ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿವೆ. ಇಂತಹ ಸಂದರ್ಭದಲ್ಲಿ ಅಲಿಘರ್ ವಿವಿಯ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಹಿಂದೂಗಳಿಂದ ಸ್ವಾತಂತ್ರ್ಯ ಬೇಕು ಎಂಬ ಘೋಷಣೆ ಕೂಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇದರ ಅಸಲಿ ವಿಡಿಯೋವನ್ನು ನೋಡಿದರೆ ಇದು ಸುಳ್ಳು ಎಂದು ಗೊತ್ತಾಗುತ್ತದೆ. ವಿದ್ಯಾರ್ಥಿಗಳು ಹಿಂದೂತ್ವದಿಂದ ಸ್ವಾತಂತ್ರ್ಯ ಬೇಕು ಎಂದು ಕೂಗಿದ್ದಾರೆ. ಆದರೆ ಹೇಡಿಗಳು ಸುಳ್ಳು ಸುದ್ದಿ ಹರಡಿದ್ದಾರೆ. ಪೂರ್ತಿ ವಿಡಿಯೋ ಇಲ್ಲಿದೆ ನೋಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಬಿಜೆಪಿಗೆ ಮತ ಹಾಕುವಂತೆ...

0
ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹಿರಿಯ ರಾಜಕಾರಣಿ ಅಧೀರ್ ರಂಜನ್ ಚೌಧರಿ ಅವರಿ ಬಿಜೆಪಿ ಪರ ಮಾತನಾಡಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ " ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷಕ್ಕೆ ಮತ...