Homeಕರ್ನಾಟಕದೇವಿಪ್ರಸಾದ್ ಚಟ್ಟೋಪಾಧ್ಯಾಯರ ’ಲೋಕಾಯತ’ವನ್ನು ಏಕೆ ಓದಬೇಕೆಂದರೆ.. : ಯೋಗೇಶ್ ಮಾಸ್ಟರ್‌

ದೇವಿಪ್ರಸಾದ್ ಚಟ್ಟೋಪಾಧ್ಯಾಯರ ’ಲೋಕಾಯತ’ವನ್ನು ಏಕೆ ಓದಬೇಕೆಂದರೆ.. : ಯೋಗೇಶ್ ಮಾಸ್ಟರ್‌

- Advertisement -
- Advertisement -

ಪುಟಕಿಟ್ಟ ಪುಟಗಳು : ಯೋಗೇಶ್ ಮಾಸ್ಟರ್‌

ಇಂದಿನ ರಾಜ್ಯಾಡಳಿತದ ಸಾಂಸ್ಥಿಕತೆಯು ರೂಪುಗೊಂಡಿರುವುದು ಅಂದಿನ ಬುಡಕಟ್ಟು ಸಮುದಾಯಗಳ ಸಮಾಧಿಗಳ ಮೇಲೆ. ಈ ಸ್ಪಷ್ಟತೆಯ ಅರಿವಿನ ಮೇಲೆಯೇ ದೇವಿಪ್ರಸಾದ್ ಚಟ್ಟೋಪಾಧ್ಯಾಯ ಭಾರತದಲ್ಲಿ ಬುಡಕಟ್ಟುಗಳ ಸಂಸ್ಕೃತಿ ಮತ್ತು ಸಮಾಜದ ಆಳ, ಎತ್ತರಗಳನ್ನು ಶೋಧಿಸುತ್ತಾ ಹೋಗುತ್ತಾರೆ.

ಬಹಳ ಮುಖ್ಯವಾಗಿ ವೈದಿಕ ಸಮುದಾಯದಿಂದ ಇಂದು ಅತ್ಯಂತ ಅಪವ್ಯಾಖ್ಯಾನಕ್ಕೊಳಗಾಗಿರುವ ಅನೇಕ ಪರಿಕಲ್ಪನೆಗಳ ಸಾಮಾಜಿಕ ಹಿನ್ನೆಲೆ ಮತ್ತು ಸಾಂಸ್ಕೃತಿಕ ಚರಿತ್ರೆಯನ್ನು ನಿಖರ ಮಾಹಿತಿಗಳ ಮೂಲಕ ಅರಿವಿಗೆ ಗ್ರಾಸ ಒದಗಿಸುತ್ತಾರೆ.

ಲೋಕಾಯತ, ಹೆಸರೇ ಧ್ವನಿಸುವಂತೆ, ಕೃತಿಯು ಬರೀ ಭೌತವಾದಕ್ಕೆ ಸೀಮಿತವಾಗುವುದಿಲ್ಲ. ಇಂದಿನ ಭಾರತದಲ್ಲಿ ಪ್ರಚಲಿತದಲ್ಲಿರುವ ಅನೇಕಾನೇಕ ಪರಿಕಲ್ಪನೆಗಳ ಉಗಮ, ಬೆಳವಣಿಗೆ ಮತ್ತು ರೂಪಾಂತರಗೊಂಡಿರುವುದರ ಬಗ್ಗೆ ಯಾವುದೇ ಸೃಜನಶೀಲ ಕಾದಂಬರಿಗಿಂತ ರೋಚಕತೆಯನ್ನು ನೀಡುತ್ತದೆ. ನಾವು ಯಾವುದನ್ನೋ ತಲೆತಲಾಂತರಗಳಿಂದ ಶ್ರೇಷ್ಠವೆಂದೋ, ಪವಿತ್ರವೆಂದೋ ಶ್ರದ್ಧೆಯಿಂದ ನಂಬಿಕೊಂಡು ಬಂದಿರುವುದು, ಅದೇ ನಾವು ಯಾವುದನ್ನು ಕನಿಷ್ಟ ಅಥವಾ ನೀಚ ಎಂದು ಅಂದುಕೊಂಡಿದ್ದೇವೋ, ಅದೇ ಆ ಪಾವಿತ್ರ‍್ಯತೆಯ ಉಗಮವೆಂದು ತಿಳಿದಾಗ ಅಚ್ಚರಿಯಾಗುತ್ತದೆ.

ಅತಿ ಮುಖ್ಯವಾಗಿ ಯಾವ ರಾಕ್ಷಸರನ್ನು ಕ್ರೂರಿಗಳೆಂದು, ದುಷ್ಟರೆಂದು ಪೌರಾಣಿಕ ಕಥನಗಳು ವಿವರಿಸಿಕೊಂಡು ಮತ್ತು ನಂಬಿಸಿಕೊಂಡು ಬಂದಿದ್ದವೋ ಅದಕ್ಕೆ ವ್ಯತಿರಿಕ್ತವಾಗಿ ಅವರು ಅರಣ್ಯಕರೆಂದು, ಬುಡಕಟ್ಟಿನವರೆಂದು ತಿಳಿದುಬರುತ್ತದೆ. ಜೊತೆಗೆ ಅವರ ಅಸ್ತಿತ್ವಕ್ಕಾಗಿ ಮತ್ತು ಉಳಿವಿಗಾಗಿ ಮಾಡಿದಂತಹ ಅನಿವಾರ್ಯದ ಕದನಗಳು, ಪ್ರತಿಭಟನೆಗಳೆಲ್ಲಾ ಇಂದು ಪೀಡೆಗಳನ್ನಾಗಿ ಬಿಂಬಿಸಿರುವ ಕಾರಣಗಳು ಸ್ಪಷ್ಟವಾಗುತ್ತದೆ.

ಇನ್ನು ಧಾರ್ಮಿಕವಾಗಿ ಗುರುತಿಸಲ್ಪಡುವ ಗೋತ್ರಗಳು ಟೋಟಮ್ ಅಥವಾ ಪ್ರಾಣಿ ಲಾಂಛನದ ಬುಡಕಟ್ಟು ಅಧ್ಯಯನಗಳ ಕಡೆಗೆ ಹೊರಳುತ್ತವೆ. ಅಲ್ಲೇ ಸ್ವಾರಸ್ಯವೂ ಇರುವುದು. ಕಶ್ಯಪ, ಗೌತಮ, ಭಾರಧ್ವಜ ಇತ್ಯಾದಿ ಬ್ರಾಹ್ಮಣ ಗೋತ್ರದವರ ಮೂಲ ಆಮೆ, ಗೂಬೆ ಮತ್ತು ಇತರ ಕಾಡಿನ ಪ್ರಾಣಿ, ಪಕ್ಷಿ ಮತ್ತು ಮರಗಿಡಗಳ ಗುರುತುಗಳನ್ನು ಹೊಂದಿರುವ ಬುಡಕಟ್ಟು ಪಂಗಡಗಳು.

ಹಾಗೆಯೇ ತಾಯಾಳಿಕೆಯ ಜಾಡು ಹಿಡಿದು ಗೌರಿಯ ಸ್ತ್ರೀ ತತ್ವದ ಎಳೆಗಳಿಂದ ವ್ರತ ಮತ್ತು ವ್ರಾತ್ಯ ಇತ್ಯಾದಿಗಳ ತಿಳಿವಳಿಕೆ ನೀಡುತ್ತಾ ಕೃಷಿಯನ್ನು ಆರಂಭ ಮಾಡಿದ್ದು ಹೆಂಗಸು ಎಂಬ ಅಂಶವನ್ನು ಹೊರಗೆಡವುತ್ತಾರೆ.

ಆದಿಪೂಜಿತ ಗಣಪತಿಯ ಗಾಣಪತ್ಯದ ರಹಸ್ಯವನ್ನು ಹೊರಗೆಡವುತ್ತಾರೆ. ವಿನಾಯಕನ ಬಗ್ಗೆ ಏನೆಲ್ಲಾ ಭಯಭಕ್ತಿಗಳನ್ನು ಇಟ್ಟುಕೊಂಡಿರುವ ಜನರಿಗೆ ಇದೇ ವಿನಾಯಕ ದುಃಸ್ವಪ್ನದ ಕುರುಹಾಗಿದ್ದರ ಬಗ್ಗೆ ಬೆಚ್ಚಿಬೀಳಿಸದೇ ಇರದು. ಇಂದು ಗಣಪತಿಯ ಬಗ್ಗೆ ಏನೇನೆಲ್ಲಾ ಶುಭ ಎಂದು ಕಾಣುತ್ತೇವೋ ಅದೆಲ್ಲವೂ ಅರಣ್ಯಕಗಳಲ್ಲಿ, ಯಾಜ್ಞವಲ್ಯ ಸ್ಮೃತಿಯಲ್ಲಿ, ಬ್ರಾಹ್ಮಣಗಳಲ್ಲಿ ಅಷ್ಟೇ ಅಶುಭವಾಗಿ, ಕೀಳಾಗಿ ಕಾಣುತ್ತಿದ್ದ ಉಲ್ಲೇಖಗಳನ್ನು ಕಾಣಿಸುತ್ತಾರೆ.

ಮಾನವಶಾಸ್ತ್ರೀಯ ಅಧ್ಯಯನಕ್ಕೆ ನೆರವಾಗುತ್ತಲೇ ಭಾರತದ ಧಾರ್ಮಿಕ, ಆಧ್ಯಾತ್ಮಿಕ, ತಾತ್ವಿಕ, ಸಾಂಸ್ಕೃತಿಕ ಚರಿತ್ರೆಗಳನ್ನು ಇಂದು ಯಾವ ಪ್ರತಿಕೃತಿಗಳಲ್ಲಿ ಕಾಣುತ್ತಿದ್ದೇವೆ ಎಂಬ ಅರಿವು ಮೂಡಿಸುವ ಮಹಾನ್ ವಿದ್ವಾಂಸ ದೇವಿಪ್ರಸಾದ್ ಚಟ್ಟೋಪಾಧ್ಯಾಯ.

ದೇವಿಪ್ರಸಾದ್ ಚಟ್ಟೋಪಾಧ್ಯಾಯ.

ಬರಿಯ ಪೌರಾಣಿಕತೆಯ ಆಯಾಮದಿಂದಷ್ಟೇ ಧಾರ್ಮಿಕತೆಯ ಶ್ರದ್ಧೆಯನ್ನು ಕಟ್ಟಿಕೊಂಡವರಿಗೆ ಲೋಕಾಯತ ಗಾಬರಿ ಬೀಳಿಸದೇ ಇರದು. ಆದರೆ ಯಾವುದೇ ಸಂಪ್ರದಾಯ, ಆಚರಣೆ ಮತ್ತು ಧಾರ್ಮಿಕ ವಿಧಿವಿಧಾನಗಳ ಜಾಡು ಹಿಡಿದು ಹೊರಟರೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಚರಿತ್ರೆಗಳು ಒಂದಷ್ಟು ಧೂಳೊದರಿಕೊಂಡು ಬೆಳಕಿಗೆ ಬರುತ್ತವೆ. ಅದು ಅದೇ ಪರಿಕಲ್ಪನೆಗಳ ಆಧಾರದಲ್ಲಿ ಇಂದು ನಡೆಯುತ್ತಿರುವ ಶೋಷಣೆಗಳೂ ಅರಿವಿಗೆ ನಿಲುಕುತ್ತವೆ. ಪೌರಾಣಿಕ ಕಥನಗಳ ರೂಪಕಗಳನ್ನು ತಿಳಿಯಲು, ಒಗಟುಗಳನ್ನು ಬಿಡಿಸಲು ನೆರವಾಗುತ್ತವೆ.

ಲೋಕಾಯತದ ಪುಟಪುಟವೂ ಸಾಂಸ್ಕೃತಿಕ ಚರಿತ್ರೆ ಮತ್ತು ಒಳನೋಟಗಳ ಬಳುವಳಿಗಳೇ.

ನವಕರ್ನಾಟಕ ಪ್ರಕಾಶನದಲ್ಲಿ ಈ ಕೃತಿ ಕನ್ನಡದಲ್ಲಿಯೂ ಲಭ್ಯವಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...