HomeUncategorized'ನಿಮಗೆ ದೈತ್ಯ ಗಾತ್ರದ ವಾಷಿಂಗ್ ಮೆಷಿನ್ ಅಗತ್ಯವಿದೆ..'; ನವೀನ್ ಜಿಂದಾಲ್ ಬಿಜೆಪಿ ಸೇರ್ಪಡೆಗೆ ಜೈರಾಮ್ ಲೇವಡಿ

‘ನಿಮಗೆ ದೈತ್ಯ ಗಾತ್ರದ ವಾಷಿಂಗ್ ಮೆಷಿನ್ ಅಗತ್ಯವಿದೆ..’; ನವೀನ್ ಜಿಂದಾಲ್ ಬಿಜೆಪಿ ಸೇರ್ಪಡೆಗೆ ಜೈರಾಮ್ ಲೇವಡಿ

- Advertisement -
- Advertisement -

ಕೈಗಾರಿಕೋದ್ಯಮಿ ಮತ್ತು ಮಾಜಿ ಕಾಂಗ್ರೆಸ್ ಸಂಸದ (ಎಂಪಿ) ನವೀನ್ ಜಿಂದಾಲ್ ಅವರು ಭಾನುವಾರ ಸಂಜೆ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಿದ್ದಾರೆ. ಕಮಲ ಹಿಡಿದ ಕೆಲವೇ ಗಂಟೆಗಳಲ್ಲಿ ಅವರು ಮುಂಬರುವ ಲೋಕಸಭೆ ಚುನಾವಣೆ 2024ರ ಐದನೇ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಿಜೆಪಿಯು ಹರಿಯಾಣದ ಕುರುಕ್ಷೇತ್ರದಿಂದ ಜಿಂದಾಲ್ ಅವರನ್ನು ಕಣಕ್ಕಿಳಿಸಿದೆ. ಅವರು 2004 ಮತ್ತು 2009 ರಲ್ಲಿ ಎರಡು ಅವಧಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರತಿನಿಧಿಸಿದ್ದ ಕ್ಷೇತ್ರವಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹರಿಯಾಣದ ಎಲ್ಲ ಹತ್ತು ಸ್ಥಾನಗಳನ್ನು ಗೆದ್ದಿತ್ತು.

‘ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ನಂತರ ಜಿಂದಾಲ್‌ಗೆ “ದೈತ್ಯ ಗಾತ್ರದ ವಾಷಿಂಗ್ ಮೆಷಿನ್” ಅಗತ್ಯವಿದೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಜಿಂದಾಲ್ ವಿರುದ್ಧ ಕಿಡಿಕಾರಿದರು.

“ನಿಮಗೆ ದೈತ್ಯ ಗಾತ್ರದ ವಾಷಿಂಗ್ ಮೆಷಿನ್ ಅಗತ್ಯವಿದ್ದಾಗ ಇದು ಸಂಭವಿಸಬೇಕಾಗಿತ್ತು. ಕಳೆದ ಹತ್ತು ವರ್ಷಗಳಲ್ಲಿ ಪಕ್ಷಕ್ಕೆ ಶೂನ್ಯ ಕೊಡುಗೆಗಳನ್ನು ನೀಡಿದ ನಂತರ, ನಾನು ಅದಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳುವುದು ದೊಡ್ಡ ತಮಾಷೆಯಾಗಿದೆ” ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಭ್ರಷ್ಟ-ಮುಕ್ತ ಕಾಂಗ್ರೆಸ್

ನವೀನ್ ಜಿಂದಾಲ್ ಮತ್ತು ಅವರ ಕಂಪನಿ ಜಿಂದಾಲ್ ಸ್ಟೀಲ್, ಜಿಂದಾಲ್ ಪವರ್ ಲಿಮಿಟೆಡ್ (ಜೆಎಸ್ಪಿಎಲ್) ಮೇಲಿನ ದಾಳಿಯನ್ನು ರಮೇಶ್ ಉಲ್ಲೇಖಿಸಿದ್ದಾರೆ. ಜಾರ್ಖಂಡ್ ಕಲ್ಲಿದ್ದಲು ಬ್ಲಾಕ್ ಹಂಚಿಕೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ವಿಚಾರಣೆ ನಡೆಸುತ್ತಿದೆ.

“ಪ್ರಧಾನಿ ಕಾಂಗ್ರೆಸ್ ಮುಕ್ತ ಭಾರತ (ಭಾರತ) ಬಯಸಿದ್ದರು; ಬದಲಿಗೆ ಭ್ರಷ್ಟ ಕಾಂಗ್ರೆಸ್ಸಿಗರನ್ನು ತನ್ನ ತೆಕ್ಕೆಗೆ ಪಲಾಯನ ಮಾಡಲು ಇಡಿ ಮತ್ತು ಸಿಬಿಐ ಜೊತೆಗೆ ಹಲವು ವಾಷಿಂಗ್ ಮೆಷಿನ್‌ಗಳನ್ನು ನಿಯೋಜಿಸುವ ಮೂಲಕ ಅವರು ಭ್ರಷ್ಟ-ಮುಕ್ತ ಕಾಂಗ್ರೆಸ್ ಮಾಡಿದ್ದಾರೆ” ಎಂದು ರಮೇಶ್ ಲೇವಡಿ ಮಾಡಿದ್ದಾರೆ.

ಕಲ್ಲಿದ್ದಲು ನಿಕ್ಷೇಪ ಹಂಚಿಕೆಗೆ ಸಂಬಂಧಿಸಿದಂತೆ ಜಿಂದಾಲ್ ಕಂಪನಿಯ ವಿರುದ್ಧದ ಅಕ್ರಮ ಹಣ ವರ್ಗಾವಣೆ ಆರೋಪದ ಬಗ್ಗೆಯೂ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿದೆ. ಏಪ್ರಿಲ್ 2022 ರಲ್ಲಿ, ವಿದೇಶೀ ವಿನಿಮಯ ಉಲ್ಲಂಘನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅನೇಕ ಸ್ಥಳಗಳಲ್ಲಿ ಹುಡುಕಾಟ ನಡೆಸಿತ್ತು.

ಬಿಜೆಪಿಯು ಕಳಂಕಿತ ನಾಯಕರನ್ನು ತಮ್ಮ ಪಾಳಯದಿಂದ ಸೇರಿಸಿಕೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳು ಆಗಾಗ್ಗೆ ಆರೋಪಿಸುತ್ತವೆ. ಅದರ ನಂತರ ಅವರ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ‘ಶುದ್ಧಗೊಳಿಸಲಾಗಿದೆ’ ಮತ್ತು ಆದ್ದರಿಂದ ‘ವಾಷಿಂಗ್ ಮೆಷಿನ್’ ಎಂಬ ಪದವನ್ನು ತನಿಖಾ ಸಂಸ್ಥೆಗಳಿಗೆ ನೀಡಲಾಗಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರವು ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿರುವುದನ್ನು ಪ್ರತಿಭಟಿಸಲು ಇಂಡಿಯಾ ಬಣದಲ್ಲಿನ ವಿರೋಧ ಪಕ್ಷಗಳು ಮಾರ್ಚ್ 31 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ರ್ಯಾಲಿಯನ್ನು ಆಯೋಜಿಸುತ್ತಿವೆ. ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಇಡಿ ಬಂಧಿಸಿದ ಕೆಲವು ದಿನಗಳ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೇಜ್ರಿವಾಲ್ ಅವರನ್ನು ಮಾರ್ಚ್ 28 ರವರೆಗೆ ಇಡಿ ವಶಕ್ಕೆ ನೀಡಲಾಗಿದೆ.

15ನೇ ಅತಿ ದೊಡ್ಡ ಎಲೆಕ್ಟೋರಲ್ ಬಾಂಡ್ ದಾನಿ ಜಿಂದಾಲ್!

ಈ ತಿಂಗಳ ಆರಂಭದಲ್ಲಿ ಭಾರತದ ಚುನಾವಣಾ ಆಯೋಗವು ಬಿಡುಗಡೆ ಮಾಡಿದ ಚುನಾವಣಾ ಬಾಂಡ್‌ಗಳ ದತ್ತಾಂಶದಲ್ಲಿನ ರಾಜಕೀಯ ದಾನಿಗಳ ಪಟ್ಟಿಯಲ್ಲಿ ಜೆಎಸ್‌ಪಿಎಲ್ ಸಹ ಕಾಣಿಸಿಕೊಂಡಿದೆ. ಚುನಾವಣಾ ಆಯೋಗದ ದತ್ತಾಂಶದ ಪ್ರಕಾರ, ಕಂಪನಿಯು 15ನೇ ಅತಿ ದೊಡ್ಡ ದಾನಿಯಾಗಿದೆ. ₹123 ಕೋಟಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದೆ.

ರಮೇಶ್ ಈ ಹಿಂದೆ ‘ಕ್ವಿಡ್ ಪ್ರೊ ಕ್ವೋ’ ಕಂಪನಿಯ ವಿರುದ್ಧವೂ ಆರೋಪ ಮಾಡಿದ್ದರು. ಜೆಎಸ್‌ಪಿಎಲ್ ಅಕ್ಟೋಬರ್ 7, 2022 ರಂದು ಬಿಜೆಪಿಗೆ ₹25 ಕೋಟಿ ಮೌಲ್ಯದ ಬಾಂಡ್‌ಗಳನ್ನು ನೀಡಿತು. ಮೂರು ದಿನಗಳ ನಂತರ, ಕಂಪನಿಯು ಅಕ್ಟೋಬರ್ 10, 2022 ರಂದು ಗರೇ ಪಾಲ್ಮಾ ಐವಿ/6 ಕಲ್ಲಿದ್ದಲು ಗಣಿ ಗುತ್ತಿಗೆಯನ್ನು ಗೆದ್ದುಕೊಂಡಿತು ಎಂದು ರಮೇಶ್ ಅವರು ಮಾರ್ಚ್ 15 ರಂದು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.

ಜೆಎಸ್‌ಪಿಎಲ್ ಗಣಿಗಾರಿಕೆ, ವಿದ್ಯುತ್ ಮತ್ತು ಉಕ್ಕಿನ ವ್ಯವಹಾರವು ಹೆಚ್ಚಾಗಿ ಛತ್ತೀಸ್‌ಗಢ, ಒಡಿಶಾ ಮತ್ತು ಜಾರ್ಖಂಡ್‌ನಲ್ಲಿ ಕೇಂದ್ರೀಕೃತವಾಗಿದೆ. ಕಂಪನಿಯು ಅಕ್ಟೋಬರ್ 2022 ಮತ್ತು ನವೆಂಬರ್ 2023 ರ ನಡುವೆ ಎಲ್ಲಾ ದೇಣಿಗೆಗಳನ್ನು ನೀಡಿದೆ.

ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ ಜಿಂದಾಲ್ ಪಕ್ಷಕ್ಕೆ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಕೃತಜ್ಞತೆ ಸಲ್ಲಿಸಿದರು. “ನಾನು 10 ವರ್ಷಗಳ ಕಾಲ ಕುರುಕ್ಷೇತ್ರದಿಂದ ಸಂಸತ್ತಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಿದ್ದೇನೆ. ನಾನು ಕಾಂಗ್ರೆಸ್ ನಾಯಕತ್ವ ಮತ್ತು ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಧನ್ಯವಾದಗಳು. ಇಂದು ನಾನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ” ಎಂದು ಅವರು ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ  ಓದಿ; ಚುನಾವಣಾ ಬಾಂಡ್‌ ವಿವಾದದ ಗಮನ ಬೇರೆಡೆ ಸೆಳೆಯಲು ಕೇಜ್ರಿವಾಲ್ ಬಂಧನ: ಪಿಣರಾಯಿ ವಿಜಯನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...