HomeUncategorizedಮಿಲಿಟೆಂಟ್‌ ಸ್ಟುಡೆಂಟ್‌ ಲೀಡರ್‌ ’ಜಾರ್ಜ್ ರೆಡ್ಡಿ’ ಕುರಿತ ಸಿನಿಮಾ 'ಅಭಿಮಾನಿ'ಯೊಬ್ಬರ ಕಣ್ಣಲ್ಲಿ

ಮಿಲಿಟೆಂಟ್‌ ಸ್ಟುಡೆಂಟ್‌ ಲೀಡರ್‌ ’ಜಾರ್ಜ್ ರೆಡ್ಡಿ’ ಕುರಿತ ಸಿನಿಮಾ ‘ಅಭಿಮಾನಿ’ಯೊಬ್ಬರ ಕಣ್ಣಲ್ಲಿ

ವಿದ್ಯಾರ್ಥಿಗಳು ಕೇವಲ ತನ್ನ ಸಮಸ್ಯೆಗಳಿಗಾಗಿ ಮಾತ್ರವಲ್ಲದೆ ರೈತರು, ದಲಿತ ದಮನಿತರ ಕಷ್ಟಗಳಿಗೆ ಬೀದಿಗಿಳಿಯುವಂತೆ ಜಾರ್ಜ್ ರೆಡ್ಡಿ ಪ್ರೇರೇಪಿಸುತ್ತಾನೆ.

- Advertisement -
- Advertisement -

ಭಾರತ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ಭಗತ್‌ಸಿಂಗ್‌ ಲಕ್ಷಾಂತರ ಜನರಿಗೆ ಸ್ಫೂರ್ತಿ. ಅವರನ್ನು ಆದರ್ಶವಾಗಿಟ್ಟುಕೊಂಡು ಹೋರಾಟಕ್ಕಿಳಿದವರು ಸಾವಿರಾರು ಜನ. ತನ್ನ ಸಹಪಾಠಿಗಳಿಗೆ ಅನ್ಯಾಯವನ್ನು ಅಸಮಾನತೆಯನ್ನು ಎದುರಿಸುವ ಧೈರ್ಯಕೊಟ್ಟು, ದಿಟ್ಟ ಹೋರಾಟ ಮುನ್ನಡೆಸಿದ ವಿದ್ಯಾರ್ಥಿ ಯುವಜನ ನಾಯಕ ಜಾರ್ಜ್ ರೆಡ್ಡಿ ಕೂಡ ಅಂಥವರಲ್ಲಿ ಒಬ್ಬರು.

ಇಂತಹ ಹೋರಾಟಗಾರನ ಜೀವನದ ಹಲವು ಘಟನೆಗಳ ಎಳೆಗಳನ್ನು ಇಟ್ಟುಕೊಂಡು ತೆಲುಗಿನಲ್ಲಿ ಜಾರ್ಜ್ ರೆಡ್ಡಿ ಸಿನೆಮಾ ನಿರ್ಮಾಣವಾಗಿದೆ. ಆದರೆ ಸಿನೆಮಾದಲ್ಲಿ ತೋರಿಸಿದ್ದಷ್ಟೇ ಜಾರ್ಜ್ ರೆಡ್ಡಿಯಲ್ಲ ಎಂದು ಸಿನೆಮಾ ನಿರ್ದೇಶಕರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಸಿನೆಮಾ ಕಮರ್ಷಿಯಲ್ ನೋಟದಲ್ಲಿ ಯಶಸ್ವಿಯಾಗಿ ಮಾಡಿಬಂದಿದೆ. ಈ ಸಿನೆಮಾ 60/70ರ ದಶಕದ ಕಾಲಕ್ಕೆ ವೀಕ್ಷಕರನ್ನು ಕರೆದುಕೊಂಡು ಹೋಗುವದರಲ್ಲಿ ಸಂದೇಹವೇ ಇಲ್ಲ.

ಜಾರ್ಜ್ ರೆಡ್ಡಿ ಜೀವನವನ್ನು ತಿಳಿಯಲು ಹೊರಟ ನಿರೂಪಕಿ ಜಾರ್ಜ್ ಜೊತೆ ಒಡನಾಟವಿದ್ದವರನ್ನು ಮಾತನಾಡಿಸುತ್ತ ಸಿನೆಮಾ ತೆರೆದುಕೊಳ್ಳುತ್ತದೆ. ಇನ್ನು ಸಿನೆಮಾದಲ್ಲಿ ಬರುವ ಸಂಭಾಷಣೆಗಳು ಕೂಡ ಸಿನೆಮಾವನ್ನು ಹತ್ತಿರವಾಗಿಸುತ್ತವೆ ಮತ್ತು ಪಾತ್ರಗಳನ್ನ ಮನಸ್ಸಿನಲ್ಲಿ ನಿಲ್ಲಿಸುತ್ತವೆ. ಆದರೆ ಜಾರ್ಜ್ ರೆಡ್ಡಿ ಮಾಡುವ ಫೈಟ್ಸ್ ತೆಲುಗು ಸಿನೆಮಾಗಳ ಫ್ಯಾಕ್ಷನ್ ಫೈಟ್‌ಗಳಂತೆಯೂ ತೋರುತ್ತವೆ. ಹಾಗಾಗಿ ಕೆಲವು ಕಡೆ ಜಾರ್ಜ್ ರೆಡ್ಡಿ ಕೂಡ ಒಬ್ಬ ರೌಡಿಯಂತೆ ಕಂಡರೂ ಸಹ ಅಚ್ಚರಿ ಇಲ್ಲ.

ಇಲ್ಲಿ ಜಾರ್ಜ್ ರೆಡ್ಡಿ (ಸಂದೀಪ್ ಮಾದವ್) ಜೊತೆ ಅವನ ಸ್ನೇಹಿತ ದೌರ್ಜನ್ಯವನ್ನು ಸಹಿಸದೆ ತಿರುಗಿ ಬೀಳುವ ರಾಜನ್ನನ (ಅಭಯ್) ಪಾತ್ರ ಮನಸ್ಸಿನಲ್ಲಿ ಉಳಿಯುತ್ತದೆ. ತೆಲುಗಿನ ಹೊಸ ಪೀಳಿಗೆಗೆ ಜಾರ್ಜ್ ರೆಡ್ಡಿಯನ್ನು ಪರಿಚಯಿಸುವ ಕೆಲಸವನ್ನು ಸಿನೆಮಾ ತಂಡ ಮಾಡಿದೆ. ಈ ಸಿನಿಮಾವನ್ನು ಜೀವನ್ ರೆಡ್ಡಿ ನಿರ್ದೇಶಿಸಿದ್ದು, ಸುರೇಶ್ ಬೊಬ್ಬಿಲಿಯವರ ಸಂಗೀತ, ಜೆ.ಪ್ರತಾಪ್ ಕುಮಾರ್ ಸಂಕಲನ, ಛಾಯಾಗ್ರಹಣ ಸೈರಾಟ್ ಸಿನೆಮಾದ ಯಾಕಂಟಿ ಮತ್ತು ಸುಧಾಕರ್ ರೆಡ್ಡಿ ಮಾಡಿದ್ದಾರೆ. ಈ ಸಿನೆಮಾವನ್ನು ಮಿಕ್ ಮೂವಿಸ್ ಕಂಪನಿ ನಿರ್ಮಾಣ ಮಾಡಿದೆ. ತಾರಾಗಣದಲ್ಲಿ ಸಂದೀಪ್ ಮಾದವ್ (ಜಾರ್ಜ್ ರೆಡ್ಡಿ), ಮುಸ್ಕುನ್ ಕುಬಚಂದಿನಿ(ಮಾಯ), ದೇವಿಕಾ( ಜಾರ್ಜ್ ತಾಯಿ), ಅಭಯ್ ಮುಖ್ಯ ಪಾತ್ರಗಳಲ್ಲಿ ಇದ್ದಾರೆ.

ಸಿನೆಮಾದ ಕಥೆ

ಸಂಘಪರಿವಾರ ಮತ್ತು ಬಿಜೆಪಿ ಪಕ್ಷದ ಕೂಸಾದ ಎಬಿವಿಪಿ (ಎಬಿಸಿಡಿ) ಕಾಂಗ್ರೆಸ್‌ನ ವಿದ್ಯಾರ್ಥಿ ಸಂಘಟನೆ ಎನ್.ಎಸ್.ಯು.ಐ (ಎನ್.ಎಸ್.ಎಲ್) ತಮ್ಮ ಪ್ರಾಬಲ್ಯಕ್ಕಾಗಿ ಉಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿ ಪ್ರಯತ್ನ ಮಾಡುತ್ತಿರುತ್ತವೆ. ಎಬಿವಿಪಿ ಸಂಘಟನೆ ತನ್ನ ಭಾವನಾತ್ಮಕ ಭಾಷಣಗಳಿಂದ ವಿದ್ಯಾರ್ಥಿಗಳ ನಿಜವಾದ ಸಮಸ್ಯೆಗಳನ್ನು ಮರೆಮಾಚಿ ದೇಶಭಕ್ತಿ, ಪಾಕಿಸ್ತಾನ ಎಂಬಂತಹ ವಿಚಾರಗಳನ್ನು ಹೇಳುತ್ತಿರುತ್ತದೆ. ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳ ನಿಜವಾದ ಸಮಸ್ಯೆಗಳನ್ನು ಪ್ರಶ್ನಿಸಲು ಸ್ವತಹ ಜಾರ್ಜ್ ರೆಡ್ಡಿ ಪಿ.ಡಿ.ಎಸ್.ಯು(ಪಿಎಸ್) ಎಂಬ ವಿದ್ಯಾರ್ಥಿ ಸಂಘಟನೆಯನ್ನು ಕಟ್ಟಿ, ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಗೆದ್ದು ಬರುತ್ತಾರೆ.

ವಿದ್ಯಾರ್ಥಿಗಳು ಕೇವಲ ತನ್ನ ಸಮಸ್ಯೆಗಳಿಗಾಗಿ ಮಾತ್ರವಲ್ಲದೆ ರೈತರು, ದಲಿತ ದಮನಿತರ ಕಷ್ಟಗಳಿಗೆ ಬೀದಿಗಿಳಿಯುವಂತೆ ಜಾರ್ಜ್ ರೆಡ್ಡಿ ಪ್ರೇರೇಪಿಸುತ್ತಾನೆ. ಕೊನೆಗೆ ರಾಜಕಾರಣಿಗಳು, ಸ್ಥಳೀಯ ಪಟ್ಟಭದ್ರ ಸಂಘಟನೆಗಳ ಕೈಯಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿಯೇ ಕೊಲೆಯಾಗಿ ಜಾರ್ಜ್ ರೆಡ್ಡಿ ಹುತಾತ್ಮರಾಗುತ್ತಾರೆ.

ಯಾರು ಈ ಜಾರ್ಜ್ ರೆಡ್ಡಿ?

ಕೇರಳದ ಪಾಲಕ್ಕಾಡ್‌ನಲ್ಲಿ ಹುಟ್ಟಿ ಉನ್ನತ ವಿದ್ಯಾಭ್ಯಾಸಕ್ಕಾಗಿ ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯಕ್ಕೆ ಬಂದು ಭೌತಶಾಸ್ತ್ರದಲ್ಲಿ ಚಿನ್ನದ ಪದಕವನ್ನು ಗೆಲ್ಲುವ ವಿದ್ಯಾರ್ಥಿ ಜಾರ್ಜ್ ರೆಡ್ಡಿ. ಬಾಕ್ಸಿಂಗ್‌ಪಟುವಾಗಿದ್ದ ಜಾರ್ಜ್ ರೆಡ್ಡಿ ಭಗತ್‌ಸಿಂಗ್, ಚೆಗುವೆರಾರಂತಹವರ ಹುತಾತ್ಮರ ಸ್ಫೂರ್ತಿಯಿಂದ ಉಸ್ಮಾನಿಯದಲ್ಲಿ ನಡೆಯುತ್ತಿದ್ದ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯವನ್ನು ಕೊನೆಗಾಣಿಸುವ ಹೋರಾಟಕ್ಕೆ ಧುಮುಕುತ್ತಾರೆ.

ಸಮಾನ ಓದುವ ಅವಕಾಶಗಳ ಸೃಷ್ಟಿಗಾಗಿ ವಿದ್ಯಾರ್ಥಿ ಸಂಘಟನೆಯನ್ನು ಸ್ಥಾಪಿಸಿ, ವಿದ್ಯಾರ್ಥಿಗಳನ್ನು ಜನಸಾಮಾನ್ಯರ ಸಮಸ್ಯೆಗಳಿಗಾಗಿ ದನಿ ಎತ್ತುವಂತೆ ಮಾಡಿದ್ದು ಆತನ ಸಾಧನೆ. ಆ ಕಾಲದಲ್ಲಿ ಎಷ್ಟೋ ಜನ ವಿದ್ಯಾರ್ಥಿ ಯುವಜನರಿಗೆ ಸ್ಪೂರ್ತಿದಾಯಕ. ಈತನನ್ನು ಸೆಳೆಯಲು ರಾಜಕೀಯ ಪಕ್ಷಗಳ ಮುಖಂಡರು ಸಹ ಪ್ರಯತ್ನಿಸಿದ್ದರು. ಆದರೆ ಯಾರ ಜೊತೆಗೆ ರಾಜಿ ಮಾಡಿಕೊಳ್ಳದೆ, ತಾನು ನಂಬಿದ್ದ ಸಿದ್ದಾಂತಕ್ಕಾಗಿ ಹೋರಾಟವನ್ನು ಮುನ್ನಡೆಸಿ, ಚರಿತ್ರೆ ಮರೆತರು ಜನ ಮರೆಯಾದ ನಾಯಕನಾದರು ಜಾರ್ಜ್ ರೆಡ್ಡಿ. ಈಗಲೂ ಸಹ ಆತ ಸ್ಥಾಪಿಸಿದ ಮತ್ತು ಆತನಿಂದ ಪ್ರಭಾವಿತವಾದ ವಿದ್ಯಾರ್ಥಿ ಸಂಘಟನೆಗಳು ಆಂಧ್ರ, ತೆಲಂಗಾಣದಲ್ಲಿ ಉತ್ತಮ ಸಮಾಜಕ್ಕಾಗಿ ದುಡಿಯುತ್ತಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...