HomeದಿಟನಾಗರFact Check : ಜೆಎನ್‌ಯು ಚುನಾವಣೆಯ ಕುರಿತು ಸುಳ್ಳು ಸುದ್ದಿ ಪ್ರಕಟಿಸಿದ ಸುವರ್ಣ ನ್ಯೂಸ್‌, ಪೋಸ್ಟ್...

Fact Check : ಜೆಎನ್‌ಯು ಚುನಾವಣೆಯ ಕುರಿತು ಸುಳ್ಳು ಸುದ್ದಿ ಪ್ರಕಟಿಸಿದ ಸುವರ್ಣ ನ್ಯೂಸ್‌, ಪೋಸ್ಟ್ ಕಾರ್ಡ್

- Advertisement -
- Advertisement -

ದೆಹಲಿಯ ಜವಹರಲಾಲ್ ನೆಹರು ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಸಂಘ (ಜೆಎನ್‌ಯುಎಸ್‌ಯು) ದ ಚುನಾವಣೆ ಫಲಿತಾಂಶ ಭಾನುವಾರ ಪ್ರಕಟಗೊಂಡಿದೆ.

ಈ ಕುರಿತು “ಜೆಎನ್‌ಯುನಲ್ಲಿ ಚುನಾವಣೆಯಲ್ಲಿ ಎಬಿವಿಬಿ ಕ್ಲೀನ್ ಸ್ವೀಪ್, ಅಧ್ಯಕ್ಷ ಸೇರಿ ನಾಲ್ಕೂ ಸ್ಥಾನದಲ್ಲಿ ಗೆಲುವು!” ಎಂಬ ಶೀರ್ಷಿಕೆಯಲ್ಲಿ ಸುವರ್ಣ ನ್ಯೂಸ್ ಸುದ್ದಿ ಪ್ರಕಟಿಸಿತ್ತು.

ಸುವರ್ಣ ನ್ಯೂಸ್‌ ಸುದ್ದಿಯ ಸ್ಕ್ರೀನ್ ಶಾಟ್ 

ಬಲಪಂಥೀಯ ಮಾಧ್ಯಮ ಪೋಸ್ಟ್ ಕಾರ್ಡ್ ಕೂಡ ” ಜೆಎನ್‌ಯುನಲ್ಲಿ ಬದಲಾವಣೆಯ ಗಾಳಿ ಎಂಬ ಶೀರ್ಷಿಕೆಯಲ್ಲಿ ಪೋಸ್ಟರ್ ಒಂದನ್ನು ಹಂಚಿಕೊಂಡಿತ್ತು. ಅದರಲ್ಲಿ “ಅಧ್ಯಕ್ಷ ಸ್ಥಾನಕ್ಕೆ ನಡೆದ ಜೆಎನ್‌ಯು ವಿದ್ಯಾರ್ಥಿ ಘಟಕದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಎಬಿವಿಪಿ. ದೇಶವನ್ನು ತುಂಡು ತುಂಡು (ತುಕ್ಡೆ ತುಕ್ಡೆ) ಮಾಡುತ್ತೇವೆಂದು ಘೋಷಣೆ ಕೂಗಿದ ಜೆಎನ್‌ಯುನಲ್ಲಿ ‘ಭಾರತ ಮಾತಾ ಕೀ ಜೈ’ ಘೋಷಣೆ. ವಿದ್ಯಾರ್ಥಿ ನಾಯಕರಿಗೆ ಮತ್ತು ಎಲ್ಲಾ ಕಾರ್ಯಕರ್ತರ ಒಗ್ಗಟ್ಟಿನ ಪ್ರಯತ್ನಗಳಿಗೆ ಅಭಿನಂದನೆಗಳು” ಎಂದು ಬರೆಯಲಾಗಿತ್ತು.

ಬಳಿಕ, ಸುವರ್ಣ ನ್ಯೂಸ್‌ ತನ್ನ ಸುದ್ದಿಯನ್ನು ತಿದ್ದಿ “ಜೆಎನ್‌ಯುನಲ್ಲಿ ಚುನಾವಣೆಯಲ್ಲಿ ಲೆಫ್ಟ್ ವಿದ್ಯಾರ್ಥಿ ಘಟಕ ಕ್ಲೀನ್ ಸ್ಪೀಪ್, ಎಬಿವಿಪಿಗೆ ಹಿನ್ನಡೆ!” ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದೆ.

ಆದರೆ, ಹೊಸ ಸುದ್ದಿಯಲ್ಲಿ ಡಿಲಿಟ್ ಮಾಡಿರುವ ಹಳೆಯ ಸುದ್ದಿಯ ಫೋಟೋವನ್ನೇ ಹಾಕಿದೆ. ಅಲ್ಲದೆ, ಸುವರ್ಣ ನ್ಯೂಸ್ ಡಿಲಿಟ್ ಮಾಡಿರುವ ಸುದ್ದಿಯ ಲಿಂಕ್ ನಮಗೆ ಲಭ್ಯವಾಗಿದ್ದು, ಅದರಲ್ಲಿ ಎಬಿವಿಪಿಗೆ ಜಯ ಎಂದು ಬರೆದಿರುವುದನ್ನು ನೋಡಬಹುದು.


ಪೋಸ್ಟ್‌ ಕಾರ್ಡ್‌ನ ಸಾಮಾಜಿಕ ಜಾಲತಾಣಗಳಿಂದ ಪೋಸ್ಟರ್‌ನ್ನು ಡಿಲಿಟ್ ಮಾಡಲಾಗಿದೆ. ಆದರೆ, ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಿದಾಗ ಮಾರ್ಚ್‌ 24ರಂದು ಬೆಳಿಗ್ಗೆ 6 ಗಂಟೆ 34 ನಿಮಿಷಕ್ಕೆ ಪೋಸ್ಟ್‌ ಕಾರ್ಡ್ ಇಂಗ್ಲಿಷ್ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪೋಸ್ಟರ್‌ ಅಪ್ಲೋಡ್ ಮಾಡಿರುವುದನ್ನು ತೋರಿಸುತ್ತಿದೆ.

ಫ್ಯಾಕ್ಟ್ ಚೆಕ್ : ಕನ್ನಡದ ಮುಖ್ಯ ವಾಹಿನಿ ಮಾಧ್ಯಮವಾದ ಸುವರ್ಣ ನ್ಯೂಸ್ ಮತ್ತು ಬಲಪಂಥೀಯ ಮಾಧ್ಯಮ ಪೋಸ್ಟ್‌ ಕಾರ್ಡ್‌ ಹಂಚಿಕೊಂಡಿರುವ ಸುದ್ದಿ ಸುಳ್ಳು. ಜೆಎನ್‌ಯು ವಿದ್ಯಾರ್ಥಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಎಡ ವಿದ್ಯಾರ್ಥಿ ಒಕ್ಕೂಟ ಪ್ರಮುಖ ನಾಲ್ಕು ಸ್ಥಾನಗಳನ್ನು ಗೆದ್ದುಕೊಂಡಿದೆ.

ನಾನುಗೌರಿ.ಕಾಂ ನಾವು “ಜೆಎನ್‌ಯು ವಿದ್ಯಾರ್ಥಿ ಸಂಘದ ಚುನಾವಣೆ: ಎಡ ವಿದ್ಯಾರ್ಥಿ ಒಕ್ಕೂಟಕ್ಕೆ ಭರ್ಜರಿ ಗೆಲುವು, ಎಬಿವಿಪಿಗೆ ತೀವ್ರ ಮುಖಭಂಗ” ಎಂಬ ಶೀರ್ಷಿಕೆಯಲ್ಲಿ ವಿವರವಾದ ಸುದ್ದಿಯನ್ನು ಇಂದು (ಮಾ.25) ಪ್ರಕಟಿಸಿದೆ.

ಸುದ್ದಿ ಲಿಂಕ್ ಇಲ್ಲಿದೆ

ಹಿಂದಿ, ಇಂಗ್ಲಿಷ್, ಕನ್ನಡ ಸೇರಿದಂತೆ ದೇಶದ ಬಹುತೇಕ ಎಲ್ಲಾ ಮಾಧ್ಯಮಗಳು ಜೆಎನ್‌ಯು ಚುನಾವಣೆ ಕುರಿತು ಸುದ್ದಿ ಪ್ರಕಟಿಸಿದ್ದು, ಎಡ ವಿದ್ಯಾರ್ಥಿ ಒಕ್ಕೂಟ ಪ್ರಮುಖ ನಾಲ್ಕು ಸ್ಥಾನಗಳನ್ನು ಗೆದ್ದು ಕೊಂಡಿದೆ ಎಂದಿದೆ.

ಕೆಲವೊಂದಿಷ್ಟು ಸುದ್ದಿಗಳ ಲಿಂಕ್ ಕೆಳಗಡೆ ಇದೆ

ಎಎನ್‌ಐ ಎಕ್ಸ್ ಪೋಸ್ಟ್ ಲಿಂಕ್ 

ಎನ್‌ಡಿಟಿವಿ ಸುದ್ದಿ ಲಿಂಕ್

ಹಿಂದುಸ್ಥಾನ್ ಟೈಮ್ಸ್ ಸುದ್ದಿ ಲಿಂಕ್

ಟೈಮ್ಸ್ ಆಫ್ ಇಂಡಿಯಾ ಸುದ್ದಿ ಲಿಂಕ್

ಮತ್ತೊಂದು ಮಹತ್ವದ ವಿಷಯವೆಂದರೆ ಪೋಸ್ಟ್ ಹಂಚಿಕೊಂಡಿರುವ ಪೋಸ್ಟರ್‌ನಲ್ಲಿರುವುದು ಕೂಡ ಹಳೆ ಫೋಟೋ ಆಗಿದೆ. ಆ ಫೋಟೋ ಕಳೆದ ವರ್ಷ ದೆಹಲಿ ವಿಶ್ವ ವಿದ್ಯಾಲಯಲ್ಲಿ ನಡೆದ ವಿದ್ಯಾರ್ಥಿ ಸಂಘದ ಚುನಾವಣೆಯದ್ದು, ಈ ಕುರಿತ ಸುದ್ದಿ ಕೆಳಗಿದೆ.

ಸುದ್ದಿ ಲಿಂಕ್ ಇಲ್ಲಿದೆ 

ಹಾಗಾಗಿ, ಸುವರ್ಣ ನ್ಯೂಸ್ ಮತ್ತು ಪೋಸ್ಟ್‌ ಕಾರ್ಡ್ ಜೆಎನ್‌ಯು ವಿದ್ಯಾರ್ಥಿ ಸಂಘದ ಚುನಾವಣೆಯ ಕುರಿತು ಪ್ರಕಟಿಸಿರುವ ಸುದ್ದಿ ಸುಳ್ಳು. ಜೆಎನ್‌ಯು ಚುನಾವಣೆಯಲ್ಲಿ ಎಡ ವಿದ್ಯಾರ್ಥಿಗಳ ಒಕ್ಕೂಟ ಯುನೈಟೆಡ್ ಲೆಫ್ಟ್‌ಗೆ ಭರ್ಜರಿ ಜಯ ಸಾಧಿಸಿದೆ. ಆರ್‌ಎಸ್‌ಎಸ್‌, ಬಿಜೆಪಿಯ ವಿದ್ಯಾರ್ಥಿಯ ಸಂಘಟನೆ ಎಬಿವಿಪಿಗೆ ತೀವ್ರ ಮುಖಭಂಗವಾಗಿದೆ.

ಇದನ್ನೂ ಓದಿ : Fact Check : ಬೆಂಗಳೂರಿನಲ್ಲಿ ನಡೆದಿರುವುದು ಪಾರ್ಕಿಂಗ್ ಜಗಳವೇ ಹೊರತು ‘ಕೋಮು ಗಲಾಟೆಯಲ್ಲ’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...