Homeಮುಖಪುಟ'ಕಾಂಟ್ರ್ಯಾಕ್ಟ್ ಟು ಕಿಲ್': ನಿಜ್ಜರ್ ಹತ್ಯೆ ಕುರಿತ ಸಿಬಿಸಿ ಡಾಕ್ಯುಮೆಂಟರಿಗೆ ಭಾರತದಲ್ಲಿ ನಿಷೇಧ

‘ಕಾಂಟ್ರ್ಯಾಕ್ಟ್ ಟು ಕಿಲ್’: ನಿಜ್ಜರ್ ಹತ್ಯೆ ಕುರಿತ ಸಿಬಿಸಿ ಡಾಕ್ಯುಮೆಂಟರಿಗೆ ಭಾರತದಲ್ಲಿ ನಿಷೇಧ

- Advertisement -
- Advertisement -

ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಕುರಿತ CBCಯ ಡಾಕ್ಯುಮೆಂಟರಿಯನ್ನು ಭಾರತದಲ್ಲಿ ಪ್ರಸಾರ ಮಾಡದಂತೆ YouTubeಗೆ ನಿರ್ಬಂಧಿಸಲಾಗಿದೆ. ಮಾಹಿತಿ ತಂತ್ರಜ್ಞಾನ ಕಾಯಿದೆಯಡಿಯಲ್ಲಿ ಕೇಂದ್ರ ಸರಕಾರ ನಿರ್ಬಂಧಿಸಿರುವ ಬಗ್ಗೆ ಯ್ಯೂಟ್ಯೂಬ್‌ ಮತ್ತು ಎಕ್ಸ್‌ ಮಾಹಿತಿ ನೀಡಿದೆ ಎಂದು ಸಿಬಿಸಿ ಹೇಳಿಕೊಂಡಿದೆ.

‘ಕಾಂಟ್ರ್ಯಾಕ್ಟ್ ಟು ಕಿಲ್’ ಎಂಬ ಶೀರ್ಷಿಕೆಯ ಸಾಕ್ಷ್ಯಚಿತ್ರದಲ್ಲಿ ಜೂನ್ 18, 2023ರಂದು ನಿಜ್ಜರನ್ನು ಹತ್ಯೆ ಕುರಿತ ವೀಡಿಯೊವನ್ನು ಸಿಬಿಸಿ ವರದಿ ಮಾಡಿದೆ. ನಾವು ಈ ಕುರಿತು ಯ್ಯೂಟ್ಯೂಬ್‌ನಿಂದ ಇ-ಮೇಲ್‌ ಸ್ವೀಕರಿಸಿದ್ದೇವೆ, ಅದರಲ್ಲಿ ವೀಡಿಯೊಗೆ ನಿರ್ಬಂಧಿಸಲು ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಆದೇಶ ನೀಡಿದೆ. ಯೂಟ್ಯೂಬ್‌ನಲ್ಲಿ ಭಾರತದಲ್ಲಿ ಈ ಸಾಕ್ಷ್ಯಚಿತ್ರವನ್ನು ಪ್ರಸಾರಕ್ಕೆ ನಿರ್ಬಂಧಿಸಲಾಗಿದೆ ಎಂದು ಯುಟ್ಯೂಬ್‌ ಹೇಳಿಕೊಂಡಿದೆ. ಸಾಮಾಜಿಕ ಜಾಲತಾಣ ‘ಎಕ್ಸ್‌’ ಕೂಡ ಇದೇ ರೀತಿಯ ಮಾಹಿತಿಯನ್ನು ನೀಡಿದ್ದು, ಈ ವಿಡಿಯೋವನ್ನು ಎಕ್ಸ್‌  ಪ್ಲಾಟ್‌ಪಾರ್ಮ್‌ನಿಂದ ತೆಗೆದು ಹಾಕುವಂತೆ ಭಾರತ ಸರ್ಕಾರದಿಂದ ಸೂಚನೆ ಬಂದಿದೆ ಎಂದು ಸಿಬಿಸಿಗೆ ಮಾಹಿತಿ ನೀಡಿದೆ. ಭಾರತದಲ್ಲಿ ಈ ವಿಷಯಕ್ಕೆ ನಿರ್ಬಂಧಿಸುವಂತೆ ಸೂಚಿಸಲಾಗಿದೆ, ಆದರೆ ಈ ವಿಡಿಯೋ ಬೇರೆ ದೇಶಗಳಲ್ಲಿ ಲಭ್ಯವಿರುತ್ತದೆ ಎಂದು ಎಕ್ಸ್ ವರದಿಯು ಸಿಬಿಸಿಗೆ ತಿಳಿಸಿದೆ. ನಾವು ಈ ಕ್ರಮವನ್ನು ಒಪ್ಪುವುದಿಲ್ಲ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ಈ ಪೋಸ್ಟ್‌ಗಳಿಗೆ ಕೂಡ ವಿಸ್ತರಿಸಬೇಕು ಎಂದು ನಾವು ಹೇಳುತ್ತೇವೆ. ಭಾರತೀಯ ಕಾನೂನು ಪ್ರಕ್ರಿಯೆಯನ್ನು ಅನುಸರಿಸಿ, ನಾವು ಭಾರತೀಯ ಅಧಿಕಾರಿಗಳೊಂದಿಗೆ ಈ ಬಗ್ಗೆ ಸಂವಹನದಲ್ಲಿದ್ದೇವೆ ಎಂದು ಹೇಳಿಕೊಂಡಿದೆ.

ಸುದ್ದಿ ಸಂಸ್ಥೆಯ ಪ್ರಕಾರ, ಜೂನ್ 18, 2023ರ ಸಂಜೆ ಸರ್ರೆಯಲ್ಲಿನ ಪೂಜಾ ಸ್ಥಳದ ಪಾರ್ಕಿಂಗ್ ಸ್ಥಳದಲ್ಲಿ ನಿಜ್ಜರ್‌ ಹತ್ಯೆಗೀಡಾಗಿದ್ದರು. ಈ ಕುರಿತ ವಿಡಿಯೋವನ್ನು ಪ್ರಸಾರ ಮಾಡಲಾಗಿದೆ, ವಿಡಿಯೋದಲ್ಲಿ ಗುರುದ್ವಾರದ ಪಾರ್ಕಿಂಗ್ ಸ್ಥಳದಿಂದ ನಿಜ್ಜರ್ ಹೊರಡುವುದನ್ನು ವೀಡಿಯೊ ತೋರಿಸುತ್ತದೆ. ಅವರ ವಾಹನವನ್ನು ತಡೆದು ಇಬ್ಬರು ವ್ಯಕ್ತಿಗಳು ನಿಜ್ಜರ್‌ಗೆ ಗುಂಡು ಹಾರಿಸಿ ಟೊಯೊಟಾ ಕ್ಯಾಮ್ರಿಯಲ್ಲಿ ತಪ್ಪಿಸಿಕೊಳ್ಳುತ್ತಾರೆ ಎಂದು ಸಿಬಿಸಿ ನ್ಯೂಸ್ ವರದಿ ಮಾಡಿದೆ. ಘಟನೆ ನಡೆದಾಗ ಸಮೀಪದ ಮೈದಾನದಲ್ಲಿ ಆಡುತ್ತಿದ್ದ ಇಬ್ಬರು ಪ್ರತ್ಯಕ್ಷದರ್ಶಿಗಳು ಗುಂಡಿನ ಸದ್ದು ಕೇಳಿ ಸ್ಥಳಕ್ಕೆ ಓಡಿ ದಾಳಿಕೋರರನ್ನು ಹಿಂಬಾಲಿಸಲು ಪ್ರಯತ್ನಿಸಿರುವುದು ವಿಡಿಯೋದಲ್ಲಿ ಕಂಡು ಬಂದಿತ್ತು.

ನಿಜ್ಜರ್‌ನ ಹತ್ಯೆಯು ಕೆನಡಾ ಮತ್ತು ಭಾರತದ ನಡುವಿನ ಸಂಬಂಧಗಳಲ್ಲಿ ಬಿರುಕು ಉಂಟು ಮಾಡಿತ್ತು.  ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಹತ್ಯೆಯಲ್ಲಿ ಭಾರತ ಸರ್ಕಾರವು ಭಾಗಿಯಾಗಿದೆ ಎಂದು ಆರೋಪಿಸಿದ್ದರು. ಜೂ.18ರಂದು ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಪಂಜಾಬಿ ಪ್ರಾಬಲ್ಯದ ಸರ್ರೆ ನಗರದಲ್ಲಿರುವ ಗುರುನಾನಕ್ ಸಿಖ್ ಗುರುದ್ವಾರದ ಪಾರ್ಕಿಂಗ್ ಸ್ಥಳದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ನಿಜ್ಜರ್ ಹತ್ಯೆ ನಡೆದಿತ್ತು. ನಿಜ್ಜರ್‌ ಹತ್ಯೆಯಲ್ಲಿ ಭಾರತೀಯ ಏಜೆಂಟರ ಸಂಭಾವ್ಯ ಕೈವಾಡದ ಬಗ್ಗೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಸೆಪ್ಟೆಂಬರ್‌ನಲ್ಲಿ ಆರೋಪಿಸಿದ್ದರು. ಟ್ರುಡೊ ಅವರ ಆರೋಪಗಳನ್ನು ಭಾರತವು ಅಸಂಬದ್ಧ ಎಂದು ತಿರಸ್ಕರಿಸಿತ್ತು. ಆ ಬಳಿಕ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ಹದಗೆಟ್ಟಿದ್ದವು. ಎರಡೂ ದೇಶಗಳ ರಾಜತಾಂತ್ರಿಕ ಅಧಿಕಾರಿಗಳ ಉಚ್ಛಾಟಣೆಯು ನಡೆದಿತ್ತು. ಭಾರತವು ಕೆನಡಾದ ನಾಗರಿಕರಿಗೆ ವೀಸಾಗಳನ್ನು ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು.

ಇದನ್ನು ಓದಿ: ಕೇಂದ್ರ ಚುನಾವಣಾ ಆಯುಕ್ತರಾಗಿ ಜ್ಞಾನೇಶ್‌ ಕುಮಾರ್‌, ಸುಖಬೀರ್‌ ಸಂಧು ಆಯ್ಕೆ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read