HomeದಿಟನಾಗರFact Check: ತುಮಕೂರಿನ ಪುರದಲ್ಲಿ ರಥಕ್ಕೆ ಬೆಂಕಿ ಇಟ್ಟ ಆರೋಪಿ ಮುಸ್ಲಿಂ ಅಲ್ಲ

Fact Check: ತುಮಕೂರಿನ ಪುರದಲ್ಲಿ ರಥಕ್ಕೆ ಬೆಂಕಿ ಇಟ್ಟ ಆರೋಪಿ ಮುಸ್ಲಿಂ ಅಲ್ಲ

- Advertisement -
- Advertisement -

ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ನಿಟ್ಟೂರು ಬಳಿಯ ಪುರ ಗ್ರಾಮದ ಕಲ್ಲೇಶ್ವರ ರಥಕ್ಕೆ ಬೆಂಕಿ ಇಟ್ಟ ಘಟನೆ ಮಾರ್ಚ್‌ 11ರಂದು ಸೋಮವಾರ ನಡೆದಿತ್ತು. ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಮುಸ್ಲಿಂ ಸಮುದಾಯಕ್ಕೆ ಸೇರಿದವನು ಎಂಬ ರೀತಿಯಲ್ಲಿ ಸುದ್ದಿ ಹರಿಬಿಟ್ಟು ಘಟನೆಗೆ ಕೋಮು ಬಣ್ಣ ಬಳಿಯುವ ಪ್ರಯತ್ನವನ್ನು ಬಿಜೆಪಿ ಹಾಗೂ ಬಲಪಂಥೀಯ ಮಾಧ್ಯಮಗಳು ಮಾಡಿವೆ.

ಬಲಪಂಥೀಯ ಮಾಧ್ಯಮ ‘ಪೋಸ್ಟ್ ಕಾರ್ಡ್’ ಘಟನೆ ಕುರಿತು ಪೋಸ್ಟರ್ ಒಂದನ್ನು ಹರಿಬಿಟ್ಟಿದ್ದು, ಅದರಲ್ಲಿ “ತುಮಕೂರು ಜಿಲ್ಲೆಯ ನಿಟ್ಟೂರಿನ 800 ವರ್ಷಗಳ ಇತಿಹಾಸ ಇರುವ ಶ್ರೀ ಕಲ್ಲೇಶ್ವರ ಸ್ವಾಮಿ ದೇವಸ್ಥಾನದ ರಥಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ಹಿಂದುಗಳು ಮೌನವಾದಷ್ಟು ಅವರ ಅಟ್ಟಹಾಸ ಜಾಸ್ತಿಯಾಗುತ್ತದೆ” ಎಂದು ಬರೆಯಲಾಗಿದೆ.

ಇದೇ ಪ್ರತಿಪಾದನೆಯನ್ನು ರಾಜ್ಯ ಬಿಜೆಪಿಯ ಅಧಿಕೃತ ಎಕ್ಸ್ ಖಾತೆಯಲ್ಲೂ ಮಾಡಲಾಗಿದ್ದು, “ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಹಿಂದೂ ಧರ್ಮೀಯರ ಮೇಲೆ ಹಾಗೂ ಹಿಂದೂ ದೇವಾಲಯಗಳ ಮೇಲೆ ದಾಳಿ ನಿತ್ಯ ನಿರಂತರ. ಮತಾಂಧ ಖಿಲ್ಜಿ, ಘಜ್ನಿ, ಘೋರಿ ಕಾಲದಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆದ ಮಾದರಿಯಲ್ಲಿ ತುಮಕೂರಿನ ಗುಬ್ಬಿಯ ನಿಟ್ಟೂರುಪುರದ 800 ವರ್ಷಗಳ ಇತಿಹಾಸ ಹೊಂದಿರುವ ಕಲ್ಲೇಶ್ವರ ಸ್ವಾಮಿಯ ರಥಕ್ಕೆ ಮಟ ಮಟ ಮಧ್ಯಾಹ್ನವೇ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರೇ, ಇದು ನಿಮ್ಮ ಓಲೈಕೆ ಹಾಗೂ ಅರಾಜಕತೆಯ ಆಡಳಿತದ ದುಷ್ಪರಿಣಾಮ. ಹಿಂದೂ ಧರ್ಮ, ಹಿಂದೂ ದೇವಾಲಯ, ಹಿಂದೂಗಳ ಮೇಲಿನ ನಿಮಗೇಕೆ ಈ ಪರಿ ಅಸಡ್ಡೆ. ಹಿಂದೂಗಳಿಗೆ ನಿಮ್ಮ ಆಡಳಿತದಲ್ಲಿ ರಕ್ಷಣೆ ಇಲ್ಲವೇ..?” ಎಂದು ಬರೆದುಕೊಳ್ಳಲಾಗಿದೆ.

ಪೋಸ್ಟ್ ಲಿಂಕ್ ಇಲ್ಲಿದೆ

ಹಿಂದುತ್ವ ಮುಖಂಡ ಪುನೀತ್ ಕೆರೆಹಳ್ಳಿ “ನಿನ್ನೆ ರಾಮೇಶ್ವರ ಕೆಫೆ, ಇಂದು ಕಲ್ಲೇಶ್ವರ ಸ್ವಾಮಿ ರಥ. ಗುಬ್ಬಿ ತಾಲೂಕು ಪುರ ಗ್ರಾಮದ ಕಲ್ಲೇಶ್ವರ ದೇವಾಲಯದ ರಥಕ್ಕೆ ಬೆಂಕಿ ಹಾಕಿದ ಜಿಹಾದಿ ಮನಸ್ಥಿತಿಗಳು” ಎಂದು ಶೀರ್ಷಿಕೆ ಕೊಟ್ಟು ಘಟನೆಯ ವಿಡಿಯೋ ಹಂಚಿಕೊಂಡಿದ್ದ.


ಪೋಸ್ಟ್ ಲಿಂಕ್ ಇಲ್ಲಿದೆ

ಮೇಲಿನ ಮೂರೂ ಪೋಸ್ಟ್‌ಗಳಲ್ಲಿ ರಥಕ್ಕೆ ಬೆಂಕಿ ಹಚ್ಚಿದವರು ಮುಸ್ಲಿಮರು ಎಂದು ಪರೋಕ್ಷವಾಗಿ ಬಿಂಬಿಸುವ ಪ್ರಯತ್ನ ಮಾಡಲಾಗಿದೆ.

ಫ್ಯಾಕ್ಟ್‌ಚೆಕ್ : ರಥಕ್ಕೆ ಬೆಂಕಿ ಹಚ್ಚಿರುವ ಆರೋಪಿಯ ಬಂಧನದ ಕುರಿತು ತುಮಕೂರು ಪೊಲೀಸರು ಮಾರ್ಚ್‌ 11ರಂದು ಪ್ರಕಟನೆ ಹೊರಡಿಸಿದ್ದು, “11 ಮಾರ್ಚ್ 2024ರಂದು ತುಮಕೂರಿನ ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿ ಪುರ ಗ್ರಾಮದ ದೇವಾಲಯ ಶ್ರೀ ಕಲ್ಲೇಶ್ವರ ಸ್ವಾಮಿ ರಥಕ್ಕೆ ಉದಾರಿ ಬಿನ್ ರಾಧೇಶಾಂ ಘೋರಕಪುರ ಎಂಬ ವ್ಯಕ್ತಿಯು ಮಧ್ಯಾಹ್ನ 12 ಗಂಟೆ ಸುಮಾರಿಗೆ ಬೆಂಕಿ ಹಚ್ಚಿದ್ದಾನೆ. ಈ ಘಟನೆಯಿಂದಾಗಿ ರಥವು ಬೆಂಕಿಯಲ್ಲಿ ಸಂಪೂರ್ಣ ಸುಟ್ಟು ಹೋಗಿದೆ. ರಥವು ಇದ್ದ ಜಾಗದಲ್ಲೇ ಬೆಂಕಿ ಹಚ್ಚಿರುವ ಉದಾರಿ ಬಿನ್ ರಾಧೇಶಾಂ ಎಂಬ ವ್ಯಕ್ತಿಯನ್ನು ಪುರ ಗ್ರಾಮಸ್ಥರು ಮತ್ತು ಭಕ್ತಾದಿಗಳು ವಶಕ್ಕೆ ಪಡೆದಿದ್ದಾರೆ ಮತ್ತು ಪೋಲಿಸರಿಗೆ ಒಪ್ಪಿಸಿದ್ದಾರೆ. ಈ ರಥವು ಸುಟ್ಟಿರುವುದರಿಂದ 20 ಲಕ್ಷದಷ್ಟು ನಷ್ಟವಾಗಿದೆ” ಎಂದು ಹೇಳಿದ್ದಾರೆ.

ಉದಾರಿ ಬಿನ್ ರಾಧೇಶಾಂ 35 ವಯಸ್ಸಿನವರಾಗಿದ್ದು, ಉತ್ತರ ಪ್ರದೇಶದ ಘೋರಕಪುರದವರಾಗಿದ್ದಾರೆ. ಸದ್ಯ ಪೋಲಿಸರು ಅವರನ್ನು ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿರುವುದಾಗಿ ತುಮಕೂರು ಜಿಲ್ಲಾ ಪೋಲಿಸ್ ಕಛೇರಿ ಸ್ಪಷ್ಟಪಡಿಸಿದೆ.

ಮಾರ್ಚ್ 12ರಂದು ತುಮಕೂರು ಎಸ್‌ಪಿ ಕೂಡ ಆರೋಪಿಯ ಬಂಧನದ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದು, “ಜಿಲ್ಲೆಯ ಗುಬ್ಬಿ ತಾಲೂಕಿನ ಪುರ ಗ್ರಾಮದ ಶ್ರೀಕಲ್ಲೇಶ್ವರ ಸ್ವಾಮಿ ರಥಕ್ಕೆ ಬೆಂಕಿ ಹಚ್ಚಿದವನ ಬಂಧನದ ಬಗ್ಗೆ ಪತ್ರಿಕಾ ಪ್ರಕಟಣೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದ್ದರು.

ಪೊಲೀಸರ ಸ್ಪಷ್ಟನೆ ಪ್ರಕಾರ, ರಥಕ್ಕೆ ಬೆಂಕಿ ಹಚ್ಚಿದ ಆರೋಪಿ ಹಿಂದೂ ಧರ್ಮಕ್ಕೆ ಸೇರಿದವನೇ ಹೊರತು ಮುಸ್ಲಿಮನಲ್ಲ ಎಂಬುವುದು ಖಚಿತವಾಗಿದೆ.

ಇದನ್ನೂ ಓದಿ : Fact Check: ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ರಾ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಧಾರವಾಡ ಅಖಾಡ: ಕೇಸರಿ ಕೋಟೆಯಲ್ಲೇ ಸಂಘೀ ಸೇನಾಧಿಪತಿ ಪ್ರಹ್ಲಾದ್ ಜೋಶಿಗೆ ನಡುಕ!!

0
ಪೇಡಾ ನಗರಿ, ಸಾಂಸ್ಕೃತಿಕ ರಾಜಧಾನಿ, ಕರ್ನಾಟಕದ ಆಕ್ಸ್‌ಫರ್ಡ್ ಎಂದೆಲ್ಲ ಗುರುತಿಸಲ್ಪಡುವ ಧಾರವಾಡ ನಗರ ಕೇಂದ್ರವಾಗಿರುವ ಧಾರವಾಡ ಲೋಕಸಭಾ ಕ್ಷೇತ್ರ ಮಲೆನಾಡು, ಅರೆಮಲೆನಾಡು ಮತ್ತು ಬಯಲುನಾಡುಗಳ ವಿಭಿನ್ನ ನೈಸರ್ಗಿಕ ಗುಣ-ಧರ್ಮದ ಸೀಮೆ. ಖಡಕ್ ಜವಾರಿ...