Homeಮುಖಪುಟಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ತನ್ನ ಕ್ಷೇತ್ರದ 8 ರೈಲು ನಿಲ್ದಾಣಗಳಿಗೆ ದೇವಾಲಯ, ವಿಗ್ರಹದ ಹೆಸರು ಮರುನಾಮಕರಣ...

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ತನ್ನ ಕ್ಷೇತ್ರದ 8 ರೈಲು ನಿಲ್ದಾಣಗಳಿಗೆ ದೇವಾಲಯ, ವಿಗ್ರಹದ ಹೆಸರು ಮರುನಾಮಕರಣ ಮಾಡಿಸಿದ ಸ್ಮೃತಿ ಇರಾನಿ

- Advertisement -
- Advertisement -

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಅಮೇಥಿ ಜಿಲ್ಲೆಯ 8 ರೈಲು ನಿಲ್ದಾಣಗಳಿಗೆ ಸ್ಥಳೀಯ ದೇವಾಲಯಗಳು, ಸಂತರು, ವಿಗ್ರಹಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಸ್ಮೃತಿ ಇರಾನಿ ಮರು ನಾಮಕರಣ ಮಾಡಿಸಿದ್ದಾರೆ. ಮರುನಾಮಕರಣ ಮಾಡುವ ಯುಪಿ ಸರ್ಕಾರದ ಪ್ರಸ್ತಾವನೆಗೆ ಕೇಂದ್ರ ಗೃಹ ಸಚಿವಾಲಯವು ಮಂಗಳವಾರ ನಿರಾಕ್ಷೇಪಣಾ ಪ್ರಮಾಣಪತ್ರವನ್ನು (ಎನ್‌ಒಸಿ) ನೀಡಿದೆ.

ಅಮೇಥಿಯ ಸಾಂಸ್ಕೃತಿಕ ಗುರುತು ಮತ್ತು ಪರಂಪರೆಯನ್ನು ಕಾಪಾಡುವ ದೃಷ್ಟಿಯಿಂದ ತಮ್ಮ ಕ್ಷೇತ್ರದ ಎಂಟು ರೈಲು ನಿಲ್ದಾಣಗಳ ಹೆಸರನ್ನು ಬದಲಾಯಿಸಲಾಗಿದೆ ಎಂದು ಸ್ಮೃತಿ ಇರಾನಿ ಬುಧವಾರ ಹೇಳಿದ್ದಾರೆ.

ವಿರಾಸತ್ ಭೀ, ವಿಕಾಸ್ ಭಿ… ಅಮೇಥಿ ಲೋಕಸಭಾ ಕ್ಷೇತ್ರದ ಎಂಟು ರೈಲು ನಿಲ್ದಾಣಗಳ ಹೆಸರನ್ನು ಬದಲಾಯಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಲು ನನಗೆ ಸಂತೋಷವಾಗಿದೆ. ಈ ನಿರ್ಧಾರವು ಅಮೇಥಿಯ ಸಾಂಸ್ಕೃತಿಕ ಅಸ್ಮಿತೆ ಮತ್ತು ಪರಂಪರೆಯನ್ನು ಉಳಿಸುವಲ್ಲಿ ಉಪಯುಕ್ತವಾಗಿದೆ ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ ಸ್ಮೃತಿ ಇರಾನಿ ಹೇಳಿದ್ದಾರೆ.

ಕಾಸಿಂಪುರ ರೈಲ್ವೇ ನಿಲುಗಡೆಯನ್ನು ‘ಜೈಸ್ ಸಿಟಿ’ ಎಂದು ಮರುನಾಮಕರಣ ಮಾಡಲು ಮತ್ತು ಜೈಸ್‌ನ್ನು  ಗುರು ಗೋರಖ್‌ನಾಥ್ ಧಾಮ್ ಎಂದು ಮರುನಾಮಕರಣ, ಬನಿ ರೈಲ್ವೇ ಬಿಲ್ಧಾಣವನ್ನು ಸ್ವಾಮಿ ಪರಮಹಂಸ್ ಎಂದು, ಮಿಸ್ರೌಲಿಯನ್ನು ಮಾ ಕಾಲಿಕನ್ ಧಾಮ್ ಎಂದು, ನಿಹಾಲ್‌ಗಢವನ್ನು ಮಹಾರಾಜ ಬಿಜ್ಲಿ ಪಾಸಿ ಎಂದು, ಅಕ್ಬರ್‌ಗಂಜ್‌ನ್ನು ಮಾ ಅಹೋರ್ವಾ ಭವಾನಿ ಧಾಮ್ ಆಗಿ, ವಾರಿಸ್‌ಗಂಜ್‌ನ್ನು ಅಮರ್ ಶಾಹಿದ್ ಭಲೇ ಸುಲ್ತಾನ್ ಎಂದು ಮತ್ತು ಫರ್ಸತ್‌ಗಂಜ್‌ನ್ನು ತಪೇಶ್ವರನಾಥ್ ಧಾಮ್ ಆಗಿ ಮರುನಾಮಕರಣ ಮಾಡಲು ಫೆಬ್ರವರಿ 12ರಂದು ಸರ್ಕಾರವು MHAಗೆ ಪ್ರಸ್ತಾವನೆಯನ್ನು ರವಾನಿಸಿತ್ತು. ಇದೀಗ ಮರುನಾಮಕರಣ ಮಾಡುವ ಯುಪಿ ಸರ್ಕಾರದ ಪ್ರಸ್ತಾವನೆಗೆ ಕೇಂದ್ರ ಗೃಹ ಸಚಿವಾಲಯವು ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನೀಡಿದೆ.

ಬಿಜೆಪಿಯ ಅಮೇಥಿ ಘಟಕದ ಜಿಲ್ಲಾಧ್ಯಕ್ಷ ರಾಮ್ ಪ್ರಸಾದ್ ಮಿಶ್ರಾ ಅವರು ಈ ಬಗ್ಗೆ ಮಾತನಾಡುತ್ತಾ, ಸ್ಥಳೀಯ ದೇವಾಲಯಗಳು, ಸಂತರು, ವಿಗ್ರಹಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಅಮೇಥಿಯಲ್ಲಿ ರೈಲು ನಿಲ್ದಾಣಗಳಿಗೆ ಮರುನಾಮಕರಣ ಮಾಡಬೇಕೆಂಬ ಬೇಡಿಕೆ ಬಹುಕಾಲದಿಂದ ಇತ್ತು ಎಂದು ಮಾಹಿತಿ ನೀಡಿದ್ದಾರೆ.

ಮುಸ್ಲಿಂ ಬಾಹುಳ್ಯ ಇರುವ ಕಾಸಿಂಪುರ ಗ್ರಾಮದ ಹೆಸರನ್ನು ಕಾಸಿಂಪುರ ಹಾಲ್ಟ್ ರೈಲ್ವೆ ನಿಲ್ದಾಣಕ್ಕೆ ಹೆಸರಿಸಲಾಗಿತ್ತು‌. ಇದನ್ನು ಜೈಸ್ ಸಿಟಿ ಎಂದು ಮರುನಾಮಕರಣ ಮಾಡಬೇಕೆಂದು ಸಲಹೆ ನೀಡಲಾಯಿತು. ಪ್ರಸ್ತುತ ಜೈಸ್ ರೈಲು ನಿಲ್ದಾಣವು ಅದರ ಸಮೀಪದಲ್ಲಿ ಅನೇಕ ಆಶ್ರಮಗಳನ್ನು ಹೊಂದಿದೆ. ಇದರಲ್ಲಿ ಪ್ರಮುಖವಾದದ್ದು ಗುರು ಗೋರಖನಾಥ ಧಾಮ್ ಆಶ್ರಮ, ಆದ್ದರಿಂದ ನಿಲ್ದಾಣಕ್ಕೆ ಆಶ್ರಮದ ಹೆಸರನ್ನು ಮರುನಾಮಕರಣ ಮಾಡಲು ಪ್ರಸ್ತಾಪಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಗೋಹತ್ಯೆ ವದಂತಿಯಿಂದ ಮುಸ್ಲಿಂ ವ್ಯಾಪಾರಿಯ ಗುಂಪು ಹತ್ಯೆ: ಪೊಲೀಸರು ಕೂಡ ತಪ್ಪಿತಸ್ಥರೆಂದು ಕೋರ್ಟ್‌ ಹೇಳಿದ್ದೇಕೆ?

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...