Homeಅಂಕಣಗಳುಗೌರಿ ಕಣ್ಣೋಟ | ಮಹಿಳೆಯರ ಪಾಲಿಗೆ ಆಧುನಿಕತೆ ಎಂದರೆ...

ಗೌರಿ ಕಣ್ಣೋಟ | ಮಹಿಳೆಯರ ಪಾಲಿಗೆ ಆಧುನಿಕತೆ ಎಂದರೆ…

- Advertisement -
- Advertisement -

ನಮ್ಮ ಆಫೀಸಿನ ಹತ್ತಿರವೇ ಇರುವ ಮಹಿಳಾ ಕಾಲೇಜಿಗೆ ಬರುವ ಹುಡುಗಿಯರನ್ನು ಪ್ರತಿ ದಿನ ನೋಡುತ್ತಿರುತ್ತೇನೆ. ಬಣ್ಣಬಣ್ಣದ ಚೂಡಿದಾರಗಳು, ಜೀನ್ಸ್ ಮತ್ತು ಟೀ ಶರ್ಟ್ಗಳು, ಹಲವೊಮ್ಮೆ ಮೈ ತುಂಬ ದೊಗಲಾದ ಬಟ್ಟೆ ಧರಿಸಿ ತಲೆ ಕೂದಲನ್ನು ಮಾತ್ರ ಮುಚ್ಚಿರುವ ಉಡುಪುಗಳು, ಅಪರೂಪಕ್ಕೊಮ್ಮೆ ನವಿರಾದ ಸೀರೆ…. ಹೀಗೆ ವಿವಿಧ ಉಡುಪುಗಳನ್ನು ತೊಟ್ಟು ಗೆಳತಿಯರೊಂದಿಗೆ ಚರ್ಚಿಸುತ್ತಾ, ತಮ್ಮ ಸ್ಕೂಟಿಗಳನ್ನು ವೇಗವಾಗಿ ಓಡಿಸುತ್ತಾ, ಬದುಕಿನ ಬಗ್ಗೆ ಕನಸುಗಳನ್ನೂ, ಆಸೆಗಳನ್ನೂ ಹೊತ್ತಿರುವ ಆ ಹುಡುಗಿಯರ ಮುಖಗಳು ಅದೆಷ್ಟು ಲವಲವಿಕೆಯಿಂದ ಕೂಡಿರುತ್ತದೆ ಎಂದರೆ ಅವರನ್ನು ನೋಡುವುದೇ ನೂರಾರು ಬಣ್ಣಬಣ್ಣದ ಚಿಟ್ಟೆಗಳನ್ನು ಒಮ್ಮೆಗೆ ನೋಡಿದಷ್ಟು ಸಂತೋಷ ಕೊಡುತ್ತದೆ. ಆದರೆ ಈ ಸಂತೋಷದ ನಡುವೆಯೇ ಇತ್ತೀಚೆಗೆ ದಿನಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ವರದಿಯೊಂದನ್ನು ಓದಿದೆ.

ಅದರಲ್ಲಿ ಭಾರತೀಯ ಮಹಿಳೆಯರು ಹೇಗಿರಬೇಕು ಎಂದು ವಿವರಿಸಲಾಗಿತ್ತು. “ಭಾರತೀಯ ಹುಡುಗಿಯರು ಪ್ರತ್ಯೇಕ ಶಾಲೆ ಮತ್ತು ಕಾಲೇಜುಗಳಿಗೆ ಹೋಗಬೇಕು. ಇಲ್ಲಿ ಕೋ-ಎಜುಕೇಷನ್ ಪದ್ಧತಿ ಇರಕೂಡದು. ಹುಡುಗರು ಮತ್ತು ಹುಡುಗಿಯರು ಪರಸ್ಪರ ಭೇಟಿ ಯಾಗುವಂತಹ ವ್ಯವಸ್ಥೆ ಇರಬಾರದು. ಮಹಿಳೆಯರಿಗೆ ನೀಡುವ ವಿದ್ಯೆ ಕೂಡ ಅವರು ಮುಂದೆ ಹೆಂಡತಿಯರಾಗಿ, ಗೃಹಸ್ಥೆಯರಾಗಿ ಬಾಳು ನಡೆಸುವುದಕ್ಕೆ ಅನುಗುಣವಾಗಿರಬೇಕು. ಮನೆಯ ನಾಲ್ಕು ಗೋಡೆಗಳೊಳಗೇ ಅವರು ತಮ್ಮ ಬದುಕಿನ ಸಾರ್ಥಕತೆಯನ್ನು ಕಾಣಬೇಕಿರುವುದರಿಂದ ಅವರಿಗೆ ಇತರ ರೀತಿಯ ವಿದ್ಯೆ ಅನಗತ್ಯ’ ಇದಿಷ್ಟು ಆ ವರದಿಯ ಸಾರಾಂಶ. ಇದನ್ನು ಹೇಳಿದ್ದು ರಾಷ್ಟ್ರೀಯ ಸ್ವಯಂ ಸೇವಕರ ಸರಸಂಚಾಲಕ ಕೆ.ಎಸ್. ಸುದರ್ಶನ್.

ನಿಜ, ಇವತ್ತು ಭಾರತದ ಎಲ್ಲಾ ಮಹಿಳೆಯರಿಗೆ ಎಲ್ಲಾ ಹಕ್ಕುಗಳೂ ಸಿಕ್ಕಿಲ್ಲ. ಇವತ್ತಿಗೂ ಸಮಾನತೆಗಾಗಿ, ಸಮಾನ ವೇತನಕ್ಕಾಗಿ, ಸ್ವಾಭಿಮಾನಕ್ಕಾಗಿ, ಆರ್ಥಿಕ ಸ್ವಾತಂತ್ರ‍್ಯಕ್ಕಾಗಿ ಹೋರಾಟ ಮುಂದುವರೆಯುತ್ತಿದೆ. ಆದರೆ, ಅದೇ ಸಮಯದಲ್ಲಿ ಸತಿ ಪದ್ಧತಿಗೆ ಬಲಿಯಾದ ರೂಪಾ ಕನ್ವರ್‌ಳ ಸಹಗಮನವನ್ನು ವೈಭವೀಕರಿಸುವವರನ್ನು ಅಧಿಕಾರಕ್ಕೆ ತರಲಾಗಿದೆ. ಅಷ್ಟೇ ಅಲ್ಲ, ಮಹಿಳೆಯರಿಗೆ ಶೇ. 33 ಮೀಸಲಾತಿ ನೀಡುತ್ತೇವೆ ಎಂದು ಎಲ್ಲಾ ರಾಜಕೀಯ ಪಕ್ಷದವರೂ ಬಹಳ ವರ್ಷದಿಂದ ಬಡಾಯಿ ಕೊಚ್ಚಿಕೊಳ್ಳುತ್ತಿದ್ದರೂ ಇಲ್ಲಿಯವರೆಗೂ ಯಾವ ಮಸೂದೆಯೂ ಪಾಸಾಗಿಲ್ಲ. ಇದೆಲ್ಲದರ ಮಧ್ಯೆ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ, ದಬ್ಬಾಳಿಕೆ ಹೆಚ್ಚಾಗುತ್ತಲೇ ಇವೆ. ಹೊರಗೆ ಬಂದರೆ ಆಸಿಡ್ ದಾಳಿಯ ಹೆದರಿಕೆ, ಮನೆಯೊಳಗಿದ್ದರೆ ಕೌಟುಂಬಿಕ ಹಿಂಸೆ …….ಇವೆರಡೂ ಅದೆಷ್ಟೋ ಮಹಿಳೆಯರ ದಿನನಿತ್ಯದ ಬದುಕಿನ ಅಂಗಗಳಾಗಿ ಹೋಗಿವೆ. ಇವುಗಳೊಂದಿಗೆ ಈಗ ಧರ್ಮದ ನೆಪದಲ್ಲಿ ಸುದರ್ಶನ್‌ರಂತವರು ಮಹಿಳೆಯನ್ನು ಮತ್ತೊಮ್ಮೆ ಮೌಢ್ಯ, ಫ್ಯೂಡಲ್ ಪದ್ಧತಿ, ಅಸಮಾನತೆಗಳಿಗೆ ಗುರಿಪಡಿಸಲು ಹವಣಿಸುತ್ತಿದ್ದಾರೆ.

ಇಪ್ಪತ್ತೊಂದನೆ ಶತಮಾನದಲ್ಲಿ ನಿಂತಿರುವ ಭಾರತದ ಮಹಿಳೆ ಈಗ ಒಂದು ರೀತಿಯ ಕ್ರಾಸ್ ರೋಡ್ಸ್ನಲ್ಲಿ ಸಾಗುತ್ತಿದ್ದಾಳೆ. ನಮ್ಮ ಸಮಾಜದ ಮಾನಸಿಕ ಸ್ಥಿತಿ ಇನ್ನೂ ಮಧ್ಯ ಯುಗದಲ್ಲಿದ್ದರೆ, ಅದರ ಆರ್ಥಿಕ ಸ್ಥಿತಿ ಆಧುನಿಕ ಯುಗದಲ್ಲಿದೆ. ಆದ್ದರಿಂದಲೇ ಇವತ್ತು ಆಧುನಿಕತೆ ಎಂದರೇನೇ ಸರಕು, ಸುಖ, ತಂತ್ರಜ್ಞಾನ, ಉಪಭೋಗ ವೆಚ್ಚ ಎಂದು ಪರಿಗಣಿಸಲಾಗುತ್ತಿದೆ. ಆದರೆ ಮಹಿಳೆಯರ ಪಾಲಿಗೆ ಆಧುನಿಕತೆ ಎಂಬುದೇ ವೈಯಕ್ತಿಕ ಘನತೆ, ಸಾಮಾಜಿಕ ಸಮಾನತೆ ಮತ್ತು ಆರ್ಥಿಕ ಸ್ವಾತಂತ್ರ‍್ಯಗಳು…..

– ಗೌರಿ ಲಂಕೇಶ್,
ಏಪ್ರಿಲ್ 6, 2005 (`ಕಂಡಹಾಗೆ; ಸಂಪಾದಕೀಯದಿಂದ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತ ವಿದ್ಯಾರ್ಥಿನಿ ಕೊಲೆ ಪ್ರಕರಣ: ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್; ಯೋಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

ನವದೆಹಲಿ: ಜುಲೈ 8 ರಂದು ಮೀರತ್‌ನಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಕಾರ್ಯಕರ್ತರು ಮತ್ತು ಮೃತರ ಕುಟುಂಬ ಸದಸ್ಯರ ಮೇಲೆ ಉತ್ತರ ಪ್ರದೇಶ ಪೊಲೀಸರು ಭೀಕರ ಹಲ್ಲೆ,...

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...