Homeಮುಖಪುಟಸರ್ಕಾರಿ ಶಾಲೆಗಳಲ್ಲಿ ಶೇ.40 ರಷ್ಟು ಶೌಚಾಲಯಗಳು ಅಸ್ತಿತ್ವದಲ್ಲೇ ಇಲ್ಲ!

ಸರ್ಕಾರಿ ಶಾಲೆಗಳಲ್ಲಿ ಶೇ.40 ರಷ್ಟು ಶೌಚಾಲಯಗಳು ಅಸ್ತಿತ್ವದಲ್ಲೇ ಇಲ್ಲ!

ನಿರ್ಮಿಸಲಾಗಿದೆ ಎಂದು ವರದಿಯಾಗಿರುವ 200 ಶೌಚಾಲಯಗಳು ಅಸ್ಥಿತ್ವದಲ್ಲೇ ಇಲ್ಲ

- Advertisement -
- Advertisement -

ಶಿಕ್ಷಣ ಹಕ್ಕು ಯೋಜನೆಯ ದೇಶದಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಸುಮಾರು 1.4 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಸಾರ್ವಜನಿಕ ವಲಯದ ಘಟಕಗಳು ಹೇಳಿಕೊಂಡಿವೆ. ಆದರೆ ಸಮೀಕ್ಷೆಯೊಂದರ ಪ್ರಕಾರ ಶೇ.40 ರಷ್ಟು ಶೌಚಾಲಯಗಳು ಅಸ್ತಿತ್ವದಲ್ಲೇ ಇಲ್ಲ ಎನ್ನಲಾಗಿದೆ.

ಕೇಂದ್ರ ಸರ್ಕಾರದ ಈ ಯೋಜನೆಯ ಬಗ್ಗೆ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಫ್ ಇಂಡಿಯಾ (ಸಿಎಜಿ) ಸಮೀಕ್ಷೆ ನಡೆಸಿದ್ದು, ಸುಮಾರು 1.4 ಲಕ್ಷ ಶೌಚಾಲಯಗಳ ಪೈಕಿ ಶೇ.40 ರಷ್ಟು ಶೌಚಾಲಯಗಳು ಅಸ್ತಿತ್ವದಲ್ಲೇ ಇಲ್ಲ ಅಥವಾ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತಿದ್ದು ಬಳಕೆಯಾಗುತ್ತಿಲ್ಲ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.

ಸಂಸತ್ತಿನಲ್ಲಿ ಮಂಡಿಸಲಾದ ಲೆಕ್ಕ ಪರಿಶೋಧನಾ ವರದಿಯಲ್ಲಿ ಸಿಎಜಿ ಸರ್ಕಾರಿ ಶಾಲೆಗಳಲ್ಲಿನ ಶೌಚಾಲಯಗಳ ಪರಿಸ್ಥಿತಿಯನ್ನು ತೆರೆದಿಟ್ಟಿದೆ. ಈ ವರದಿಯ ಪ್ರಕಾರ ಶೇ.70 ಕ್ಕಿಂತಲೂ ಹೆಚ್ಚು ಶಾಲಾ ಶೌಚಾಲಯಗಳು ನೀರಿನ ಸೌಲಭ್ಯಗಳನ್ನು ಹೊಂದಿಲ್ಲ. ಅಲ್ಲದೆ, ಶೇ.75 ರಷ್ಟು ಶೌಚಾಲಯಗಳು ಆರೋಗ್ಯಕರವಾಗಿಲ್ಲ ಎಂದು ವರದಿ ನೀಡುವ ಮೂಲಕ ಶಾಲಾ ಮಕ್ಕಳ ಆರೋಗ್ಯ ಬಗ್ಗೆ ಗಂಭೀರ ಪ್ರಶ್ನೆ ಎತ್ತಿದೆ.

ಇದನ್ನೂ ಓದಿ: ಹೀಗೆ ಮಾಡಿದರೆ ಸರ್ಕಾರಿ ಶಾಲೆಗಳು ಉತ್ತಮವಾಗಬಹುದಲ್ಲವೇ?

2014 ರ ಸೆಪ್ಟೆಂಬರ್​ನಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಶುರು ಮಾಡಿದ ಸ್ವಚ್ ವಿದ್ಯಾಲಯ ಅಭಿಯಾನ, ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಬಾಲಕ ಮತ್ತು ಬಾಲಕಿಯರಿಗಾಗಿ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಬೇಕು ಎಂಬ ಶಿಕ್ಷಣ ಹಕ್ಕು ಕಾಯ್ದೆಯ ಆದೇಶವನ್ನು ಪೂರೈಸುವ ಗುರಿ ಹೊಂದಿತ್ತು.  ಆದರೆ ಯೋಜನೆಗೆ ಮೀಸಲಾದ ನಿಧಿಯ ಕೊರತೆ, ಕಳಪೆ ನಿರ್ವಹಣೆ ಮತ್ತು ಶೌಚಾಲಯಗಳಲ್ಲಿ ನೀರಿನ ಲಭ್ಯತೆಯು ಪ್ರಮುಖ ಸವಾಲುಗಳೆಂದು ಈ ವೇಳೆ ಗುರುತಿಸಲ್ಪಟ್ಟಿತು.

ದೇಶದಲ್ಲಿ 10.8 ಲಕ್ಷ ಸರ್ಕಾರಿ ಶಾಲೆಗಳಿವೆ. ಆದರೆ, ಈವರೆಗೆ ಒಟ್ಟಾರೆಯಾಗಿ 1.4 ಲಕ್ಷಕ್ಕೂ ಹೆಚ್ಚು ಶೌಚಾಲಯಗಳನ್ನು 53 ಸಿಪಿಎಸ್ಇಗಳು ನಿರ್ಮಿಸಿವೆ. ವಿದ್ಯುತ್, ಕಲ್ಲಿದ್ದಲು ಮತ್ತು ತೈಲ ಕಂಪನಿಗಳು ಈ ಕೆಲಸಕ್ಕೆ ಗಮನಾರ್ಹವಾದ ಕೊಡುವೆ ನೀಡಿವೆ. ಈ ನಡುವೆ ಸಿಎಜಿ ಲೆಕ್ಕಪರಿಶೋಧನೆಯು 15 ರಾಜ್ಯಗಳಲ್ಲಿ ಈ ಕಂಪನಿಗಳು ನಿರ್ಮಿಸಿದ 2,695 ಶೌಚಾಲಯಗಳ ಮಾದರಿಯ ಭೌತಿಕ ಸಮೀಕ್ಷೆಯನ್ನು ನಡೆಸಿತ್ತು.

ಇದನ್ನೂ ಓದಿ: ಅತ್ಯಾಧುನಿಕ ಸೆಂಟರ್ ಆಫ್ ಎಕ್ಸಲೆನ್ಸ್ ಶಾಲೆಗಳನ್ನುಉದ್ಘಾಟಿಸಿದ ಕೇರಳ ಸಿಎಂ ವಿಜಯನ್

ಮಾದರಿಯಾಗಿ ಆಯ್ಕೆ ಮಾಡಿಕೊಂಡಿದ್ದ 2,695 ಶೌಚಾಲಯಗಳ ಪೈಕಿ 83 ಶೌಚಾಲಯಗಳನ್ನು ಈವರೆಗೆ ನಿರ್ಮಿಸಿಯೇ ಇಲ್ಲ. PPV. 86 ಶೌಚಾಲಯಗಳು ಭಾಗಶಃ ನಿರ್ಮಾಣವಾಗಿವೆಯೇ ವಿನಃ ಪೂರ್ಣಗೊಂಡಿಲ್ಲ. 691 ಶೌಚಾಲಯಗಳಲ್ಲಿ ಸೂಕ್ತ ನೀರಿನ ವ್ಯವಸ್ಥೆಯೇ ಇಲ್ಲ. ಶೇ.72 ರಷ್ಟು ಶೌಚಾಲಯಗಳು ಸೂಕ್ತ ನೀರಿನ ಸೌಲಭ್ಯವನ್ನು ಹೊಂದಿಲ್ಲ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ. ಆದರೆ ಈ ಪೈಕಿ ಶೇ.55 ಶೌಚಾಲಯಗಳಲ್ಲಿ ಮಕ್ಕಳಿಗೆ ಕೈ ತೊಳೆಯುವ ಸೌಲಭ್ಯವಿಲ್ಲ. ಇನ್ನೂ ಬಾಲಕರ ಮತ್ತು ಬಾಲಕಿಯರಿಗಾಗಿ ಪ್ರತ್ಯೇಕ ಶೌಚಾಲಯಗಳನ್ನು ಒದಗಿಸುವ ಉದ್ದೇಶವು ಶೇ.27 ರಷ್ಟು ಶಾಲೆಗಳಲ್ಲಿ ಈಡೇರಿಲ್ಲ ಎಂದು ಸಿಎಜಿ ತನ್ನ ವರದಿಯಲ್ಲಿ ತಿಳಿಸಿದೆ.

ಇನ್ನೂ ಶೇ.75 ರಷ್ಟು ಶೌಚಾಲಯಗಳನ್ನು ದಿನಕ್ಕೆ ಒಮ್ಮೆಯಾದರೂ ಶುಚಿಗೊಳಿಸುವ ರೂಢಿಯನ್ನು ಅನುಸರಿಸಿಲ್ಲ. ಅನೇಕ ಶೌಚಾಲಯಗಳ ನಿರ್ಮಾಣವಾಗದ ಕಾರಣ, ನಾನಾ ಕಾರಣಗಳಿಂದಾಗಿ ಬಳಕೆಯಲ್ಲೇ ಇಲ್ಲ ಎಂದು ಆಡಿಟ್ ವರದಿ ಸಂಸತ್​ಗೆ ತಿಳಿಸಿದೆ. ಆದ್ದರಿಂದ, ಸುಮಾರು ಶೇ.40 ರಷ್ಟು ಶೌಚಾಲಯಗಳು ಅಸ್ತಿತ್ವದಲ್ಲೇ ಇಲ್ಲ ಎಂಬ ವಿಚಾರ ಬಹಿರಂಗಗೊಂಡಿದೆ.


ಇದನ್ನೂ ಓದಿ: ಕೊರೊನಾ ಕಾಲದಲ್ಲೂ ನಿಲ್ಲದ ಸುಲಿಗೆ; ಖಾಸಗಿ ಶಾಲೆಗಳಲ್ಲಿ ‘ಕೋವಿಡ್ ಫೀಸ್’ ವಸೂಲಿ ಆರಂಭ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read