Homeಮುಖಪುಟಅತ್ಯಾಧುನಿಕ ಸೆಂಟರ್ ಆಫ್ ಎಕ್ಸಲೆನ್ಸ್ ಶಾಲೆಗಳನ್ನುಉದ್ಘಾಟಿಸಿದ ಕೇರಳ ಸಿಎಂ ವಿಜಯನ್

ಅತ್ಯಾಧುನಿಕ ಸೆಂಟರ್ ಆಫ್ ಎಕ್ಸಲೆನ್ಸ್ ಶಾಲೆಗಳನ್ನುಉದ್ಘಾಟಿಸಿದ ಕೇರಳ ಸಿಎಂ ವಿಜಯನ್

2016 ರಲ್ಲಿ ಪಿಣರಾಯಿ ಸರ್ಕಾರ ಅಧಿಕಾರಕ್ಕೆ ಬಂದಾಗ, ಅವರು ಮೊದಲ ಹಂತದಲ್ಲಿ 1,000 ಸರ್ಕಾರಿ ಶಾಲೆಗಳನ್ನು ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ನವೀಕರಿಸುವುದು ಸೇರಿದಂತೆ ಸಮಗ್ರ ಶೈಕ್ಷಣಿಕ ಸುಧಾರಣೆಗಳನ್ನು ಪ್ರಸ್ತಾಪಿಸಿದ್ದರು.

- Advertisement -
- Advertisement -

ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸುವ ದೃಷ್ಟಿಯಿಂದ ಸ್ಥಾಪಿಸಲಾದ ಕೇರಳದ 34 ಸೆಂಟರ್ ಆಫ್ ಎಕ್ಸಲೆನ್ಸ್ ಶಾಲೆಗಳನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿದ್ದಾರೆ. ಕೇರಳದಲ್ಲಿ ಸಾಮಾನ್ಯ ಶಿಕ್ಷಣ ಸೌಲಭ್ಯಗಳನ್ನು ಪುನರುಜ್ಜೀವನಗೊಳಿಸುವ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್‌ಡಿಎಫ್) ಸರ್ಕಾರದ ಪ್ರಯತ್ನಗಳ ಭಾಗವಾಗಿ ಈ ಶಾಲೆಗಳು ಆರಂಭವಾಗಿವೆ ಎಂದು ಅವರು ತಿಳಿಸಿದ್ದಾರೆ.

ಸಾರ್ವಜನಿಕ ಶಿಕ್ಷಣ ಪುನರ್ಯೌವನಗೊಳಿಸುವ ಮಿಷನ್ ಅಡಿಯಲ್ಲಿ ಕೇರಳ ಮೂಲಸೌಕರ್ಯ ಮತ್ತು ಶಿಕ್ಷಣಕ್ಕಾಗಿ ತಂತ್ರಜ್ಞಾನ (ಕೈಟ್) ಜಾರಿಗೆ ತಂದಿರುವ ‘ಸೆಂಟರ್ ಆಫ್ ಎಕ್ಸಲೆನ್ಸ್’ ಯೋಜನೆಯ ಭಾಗವಾಗಿ ಈ ಶಾಲೆಗಳನ್ನು ನಿರ್ಮಿಸಲಾಗಿದೆ. ಸರ್ಕಾರದ 100 ದಿನಗಳ ಕ್ರಿಯಾ ಯೋಜನೆಯಡಿ ಶಾಲೆಗಳನ್ನು ಸ್ಥಾಪಿಸಲಾಗಿದೆ.

ಆಗಸ್ಟ್ 30 ರಂದು ಸಿಎಂ ವಿಜಯನ್ ರಾಜ್ಯ ಸರ್ಕಾರದ “100 ದಿನಗಳ 100 ಯೋಜನೆಗಳು” ಯೋಜನೆಯನ್ನು ಘೋಷಿಸಿದ್ದರು. ಯೋಜನೆಯನ್ನು ಪ್ರಕಟಿಸುವಾಗ, 5 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾದ 35 ಶಾಲಾ ಕಟ್ಟಡಗಳು ಮತ್ತು 3 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾದ 14 ಶಾಲಾ ಕಟ್ಟಡಗಳನ್ನು ಮುಂದಿನ 100 ದಿನಗಳಲ್ಲಿ ಉದ್ಘಾಟಿಸಲಾಗುವುದು ಎಂದು ಹೇಳಿದರು. ಇತರ ಶಾಲಾ ಕಟ್ಟಡಗಳ ನಿರ್ಮಾಣ ಪೂರ್ಣಗೊಳ್ಳಲಿದ್ದು, ನಂತರ 250 ಹೊಸ ಶಾಲಾ ಕಟ್ಟಡಗಳ ನಿರ್ಮಾಣವನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಂಗನಾ v/s ಶಿವಸೇನೆ: ಸೋನಿಯಾ ಗಾಂಧಿ ಹೆಸರನ್ನೇಕೆ ಎಳೆದು ತರಲಾಯಿತು?

ಹೊಸದಾಗಿ ಉದ್ಘಾಟನೆಗೊಂಡ ಶಾಲೆಗಳಲ್ಲಿ ಕೋಹಿಕೋಡ್‌ನಲ್ಲಿ 8, ಕಣ್ಣೂರು-5, ಮತ್ತು ತಿರುವನಂತಪುರಂ, ಕೊಲ್ಲಂ ಮತ್ತು ಎರ್ನಾಕುಲಂನಲ್ಲಿ ತಲಾ 4 ಶಾಲೆಗಳಿವೆ. ಕೊಟ್ಟಾಯಂನಲ್ಲಿ 3 ಮತ್ತು ಮಲಪ್ಪುರಂ ಮತ್ತು ಇಡುಕಿಯಲ್ಲಿ ತಲಾ 2, ಆಲಪ್ಪುಳ ಮತ್ತು ತ್ರಿಶೂರ್‌ನಲ್ಲಿ ಒಂದು ಶಾಲೆಗಳನ್ನು ಉದ್ಘಾಟಿಸಲಾಗಿದೆ. ಹೊಸ ಕಟ್ಟಡಗಳಲ್ಲಿ ಹೈಟೆಕ್ ತರಗತಿ ಕೊಠಡಿಗಳು, ಕಿಚನ್ ಬ್ಲಾಕ್‌ಗಳು, ಡೈನಿಂಗ್ ಏರಿಯಾ, ಟಾಯ್ಲೆಟ್ ಬ್ಲಾಕ್‌ಗಳು, ವಿಜ್ಞಾನ ಮತ್ತು ಕಂಪ್ಯೂಟರ್ ಪ್ರಯೋಗಾಲಯಗಳು ಸೇರಿವೆ.

ಶಾಲಾ ಯೋಜನೆಗಳಿಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿ ಪ್ರಸಾರವಾಗುತ್ತಿದೆ ಎಂದು ಮುಖ್ಯಮಂತ್ರಿ ಗಮನಸೆಳೆದರು. “ಎಲ್ಲ ಶಾಲೆಗಳನ್ನು ಉತ್ತರ ಕೇರಳ ಅಥವಾ ಮಲಬಾರ್ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದೆ ಎಂಬುದು ನಕಲಿ ಸುದ್ದಿ. ಆದರೆ ಇದು ನಿಜವಲ್ಲ. ಬಲರಾಮಪುರಂನಿಂದ ಚೆಲಕ್ಕರವರೆಗೆ ನಾವು 19 ಶಾಲೆಗಳನ್ನು ನಿರ್ಮಿಸಿದ್ದೇವೆ ”ಎಂದು ಅವರು ಹೇಳಿದರು.

ಶಾಲೆಗಳಲ್ಲಿ ಮೂಲ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಕೇರಳ ಸರ್ಕಾರ 3,129 ಕೋಟಿ ರೂ. ವ್ಯಯಿಸಿದೆ. ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ 250 ಹೊಸ ಶಾಲಾ ಕಟ್ಟಡಗಳನ್ನು ನಿರ್ಮಿಸಲು ರಾಜ್ಯ ಯೋಜಿಸಿದೆ. ಅಸ್ತಿತ್ವದಲ್ಲಿರುವ 350 ಕ್ಕೂ ಹೆಚ್ಚು ಶಾಲೆಗಳಲ್ಲಿ, ಮೂಲಭೂತ ಸೇವೆಗಳನ್ನು ಲಭ್ಯಗೊಳಿಸಲಾಗುತ್ತಿದೆ. ಈ ಯೋಜನೆಗಳಿಗೆ ಸರ್ಕಾರ ಕೆಐಐಎಫ್‌ಬಿ ಮೂಲಕ ಹಣವನ್ನು ಖರ್ಚು ಮಾಡುತ್ತಿದೆ.

ಇದನ್ನೂ ಓದಿ: ಸರ್ಕಾರದ ಸೇವೆಗಳು ನಮ್ಮ ಭಾಷೆಯಲ್ಲಿಯೇ ಇರಲಿ: #ServeInMyLanguage ಟ್ವಿಟ್ಟರ್‌ ಟ್ರೆಂಡ್‌‌

‘ಪೊಥುವಿದ್ಯಾಭ್ಯಾಸಸಂಸ್ಕರಣ ಯಜ್ಞಂ’ (ಸಾರ್ವಜನಿಕ ಶಿಕ್ಷಣವನ್ನು ರಕ್ಷಿಸುವ ಮಿಷನ್) ಅಡಿಯಲ್ಲಿ ಸರ್ಕಾರದ ಯೋಜನೆಗಳು ರಾಜ್ಯದ ಸಾರ್ವಜನಿಕ ಶಿಕ್ಷಣವನ್ನು ವಿಶ್ವದಾದ್ಯಂತ ಸಹ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಲು ಸಜ್ಜುಗೊಳಿಸುವ ಕೌಶಲ್ಯಗಳೊಂದಿಗೆ ಗುಣಮಟ್ಟದ ಶಿಕ್ಷಣವನ್ನು ಖಾತರಿಪಡಿಸುವ ಉದ್ದೇಶವನ್ನು ಹೊಂದಿವೆ.

ಕೇರಳದ ಭವಿಷ್ಯದ ಹೂಡಿಕೆಯಾದ ಈ ಮಿಷನ್ ಸರ್ಕಾರಿ ಮತ್ತು ರಾಜ್ಯ-ಅನುದಾನಿತ ಶಾಲೆಗಳ ಮೇಲೆ ಕಳೆದುಹೋದ ಸಾರ್ವಜನಿಕ ನಂಬಿಕೆಯನ್ನು ಮರಳಿ ಪಡೆಯುವುದರ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ರಾಜ್ಯದ ಇಡೀ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಉಚಿತವಾಗಿ ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.

2016 ರಲ್ಲಿ ಪಿಣರಾಯಿ ಸರ್ಕಾರ ಅಧಿಕಾರಕ್ಕೆ ಬಂದಾಗ, ಅವರು ಮೊದಲ ಹಂತದಲ್ಲಿ 1,000 ಸರ್ಕಾರಿ ಶಾಲೆಗಳನ್ನು ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ನವೀಕರಿಸುವುದು ಸೇರಿದಂತೆ ಸಮಗ್ರ ಶೈಕ್ಷಣಿಕ ಸುಧಾರಣೆಗಳನ್ನು ಪ್ರಸ್ತಾಪಿಸಿದ್ದರು.

ರಾಜ್ಯದಲ್ಲಿ ಸುಮಾರು 13,000 ಸರ್ಕಾರಿ ಮತ್ತು ರಾಜ್ಯ ಅನುದಾನಿತ ಶಾಲೆಗಳಿವೆ. ಮಿಷನ್ ಮೂಲಕ, 1,000 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಪ್ರತಿ ಸರ್ಕಾರಿ ಶಾಲೆಗೆ ಮೂಲಸೌಕರ್ಯ ಅಭಿವೃದ್ಧಿಗೆ 3 ಕೋಟಿ ರೂ. ರಾಜ್ಯ-ಅನುದಾನಿತ ಶಾಲೆಗಳಿಗೆ ಇದಕ್ಕಾಗಿ 1 ಕೋಟಿ ರೂ.ಗಳವರೆಗೆ ಸರ್ಕಾರದ ಬೆಂಬಲ ದೊರೆಯುತ್ತದೆ ಎಂದು ಅವರು ತಿಳಿಸಿದ್ದಾರೆ.


ಇದನ್ನೂ ಓದಿ: ಪ್ರವಾಸೋದ್ಯಮಕ್ಕೆ ಚಾಲನೆ: ಅಕ್ಟೋಬರ್‌ನಿಂದ ಕೈಬೀಸಿ ಕರೆಯಲಿದೆ ಕೇರಳ..!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...