Homeಮುಖಪುಟಬುಡಕಟ್ಟು ನಾಯಕ ಬಿರ್ಸಾ ಮುಂಡಾಗೆ ಅಮಿತ್ ಶಾ ಅವಮಾನ: ಟಿಎಂಸಿ ಆಕ್ರೋಶ

ಬುಡಕಟ್ಟು ನಾಯಕ ಬಿರ್ಸಾ ಮುಂಡಾಗೆ ಅಮಿತ್ ಶಾ ಅವಮಾನ: ಟಿಎಂಸಿ ಆಕ್ರೋಶ

- Advertisement -
- Advertisement -

ಮುಂದಿನ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಬಿಜೆಪಿ ಸಿದ್ಧತೆಗಳನ್ನು ಆರಂಭಿಸಿದ್ದು, 2 ದಿನಗಳ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮೇಲೆ ತೃಣಮೂಲ ಕಾಂಗ್ರೆಸ್ ಹರಿಹಾಯ್ದಿದೆ. ಬುಡಕಟ್ಟು ನಾಯಕನ ವಿಚಾರದಲ್ಲಿ ಅಮಿತ್ ಶಾ ಮಾಡಿದ ಎಡವಟ್ಟು ಇದಕ್ಕೆ ಕಾರಣವಾಗಿದೆ.

ನವೆಂಬರ್ 5 ರ ಗುರುವಾರ ಬಂಕುರಾಕ್ಕೆ ಭೇಟಿ ನೀಡಿದ್ದ, ಬಿಜೆಪಿಯ ಅಮಿತ್ ಶಾ ಬುಡಕಟ್ಟು ಸಮುದಾಯದ ಜೊತೆಗಿನ ಕಾರ್ಯಕ್ರಮದ ಸಂದರ್ಭದಲ್ಲಿ ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದರು. ಅದು ಈಗ ಆಡಳಿತರೂಢ ಟಿಎಂಸಿಯ ಕೆಂಗಣ್ಣಿಗೆ ಗುರಿಯಾಗಿದೆ.

ನಡೆದಿದ್ದು ಏನೆಂದರೆ, ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಅವರ ಪ್ರತಿಮೆ ಎಂದುಕೊಂಡ ಕೇಂದ್ರ ಗೃಹ ಸಚಿವರು ಅನಾಮಧೇಯ ಬುಡಕಟ್ಟು ಬೇಟೆಗಾರನ ಪ್ರತಿಮೆಗೆ ಹೂಮಾಲೆ ಹಾಕಿ ಬಿರ್ಸಾ ಮುಂಡಾ ಎಂದಿದ್ದಾರೆ. ಬಿರ್ಸಾ ಮುಂಡಾ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತಮ್ಮ 25 ನೇ ವಯಸ್ಸಿನಲ್ಲಿ ವೀರಮರಣ ಹೊಂದಿದ ಬುಡಕಟ್ಟು ನಾಯಕರಾಗಿದ್ದಾರೆ.

ಬಂಕುರಾದ ಬುಡಕಟ್ಟು ಮುಖಂಡರು ಬಿಜೆಪಿ ನಾಯಕರು ಹಾರ ಹಾಕಿದ ಪ್ರತಿಮೆ ಅವರ ನಾಯಕ ಬಿರ್ಸಾ ಮುಂಡಾದದ್ದಲ್ಲ, ಮತ್ತೊಬ್ಬ ಬುಡಕಟ್ಟು ಬೇಟೆಗಾರರದ್ದು ಎಂದು ಹೇಳಿದ್ದಾರೆ.

ಬಂಕುರಾ ಭೇಟಿಯ ನಂತರ, ಅಮಿತ್ ಶಾ  ತಮ್ಮ ಟ್ವಿಟರ್‌ನಲ್ಲಿ ಕಾರ್ಯಕ್ರಮದ ಬಗ್ಗೆ ಪೋಸ್ಟ್ ಮಾಡಿದ್ದು, “ಪಶ್ಚಿಮ ಬಂಗಾಳದ ಬಂಕುರಾದಲ್ಲಿ ಬುಡಕಟ್ಟು ಮುಖಂಡ ಭಗವಾನ್ ಬಿರ್ಸಾ ಮುಂಡಾ ಜಿ ಅವರಿಗೆ ಇಂದು ಹೂವಿನ ಗೌರವ ಸಲ್ಲಿಸಲಾಗಿದೆ. ನಮ್ಮ ಬುಡಕಟ್ಟು ಸಹೋದರಿ ಮತ್ತು ಸಹೋದರರ ಹಕ್ಕುಗಳು ಮತ್ತು ಉನ್ನತಿಗಾಗಿ ಬಿರ್ಸಾ ಮುಂಡಾ ತಮ್ಮ ಜೀವನವನ್ನು ಸಮರ್ಪಿಸಿದರು. ಅವರ ಧೈರ್ಯ, ಹೋರಾಟಗಳು ಮತ್ತು ತ್ಯಾಗಗಳು ನಮ್ಮೆಲ್ಲರಿಗೂ ಸ್ಫೂರ್ತಿ ನೀಡುತ್ತಿವೆ” ಎಂದಿದ್ದಾರೆ.

ಘಟನೆ ನಡೆದ ಕೂಡಲೇ ಟಿಎಂಸಿ ನಾಯಕರು ಅಮಿತ್ ಶಾ ಮತ್ತ ಅವರ ಬೆಂಬಲಿಗರ ಮೇಲೆ ವಾಗ್ದಾಳಿ ನಡೆಸಿದ್ದಾರೆ.

“ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂಗಾಳದ ಸಂಸ್ಕೃತಿಯನ್ನು ಅರಿಯದ ಕಾರಣ ಭಗವಾನ್ ಬಿರ್ಸಾ ಮುಂಡಾ ಎಂದು ಬೇರೆಯೆ ವಿಗ್ರಹವನ್ನು ಆರಿಸಿ ಅವಮಾನಿಸಿದ್ದಾರೆ. ಅಲ್ಲದೆ  ಅವರ ಫೋಟೋವನ್ನು ಬೇರೊಬ್ಬರ ಪಾದದ ಮೇಲೆ ಇಟ್ಟಿದ್ದಾರೆ. ಅವರು ಎಂದಾದರೂ ಬಂಗಾಳವನ್ನು ಗೌರವಿಸುತ್ತಾರೆಯೇ? ” ಎಂದು ತೃಣಮೂಲ ಕಾಂಗ್ರೆಸ್ ಅಧಿಕೃತ ಖಾತೆ ಟ್ವೀಟ್ ಮಾಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಹುಲ್ ಗಾಂಧಿಯನ್ನು ರಾಯ್ ಬರೇಲಿ ಜನರಿಗೆ ಕೊಡುತ್ತಿದ್ದೇನೆ; ಅವನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ: ಸೋನಿಯಾ ಗಾಂಧಿ

0
'ನನ್ನ ಮಗನನ್ನು ರಾಯ್ ಬರೇಲಿಯ ಜನರಿಗೆ ನೀಡುತ್ತಿದ್ದೇನೆ; ರಾಹುಲ್ ಗಾಂಧಿ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ' ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ. 20 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ...