Homeನಿಜವೋ ಸುಳ್ಳೋಗಡಿ ವಿವಾದ: ವಾಟ್ಸಾಪ್‌ ಮೆಸೇಜನ್ನು ನಂಬಿ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ ’ಟೈಮ್ಸ್ ನೌ’

ಗಡಿ ವಿವಾದ: ವಾಟ್ಸಾಪ್‌ ಮೆಸೇಜನ್ನು ನಂಬಿ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ ’ಟೈಮ್ಸ್ ನೌ’

- Advertisement -
- Advertisement -

ಗಾಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಸೈನಿಕರ ನಡುವೆ ನಡೆದ ಹಿಂಸಾತ್ಮಕ ಮುಖಾಮುಖಿಯಲ್ಲಿಕನಿಷ್ಠ 30 ಚೀನೀ ಸೈನಿಕರು ಕೊಲ್ಲಲ್ಪಟ್ಟಿದ್ದಾರೆ ಎಂಬ ವಾಟ್ಸಾಪ್ ಫಾರ್ವರ್ಡ್ ಮೆಸೇಜಿನ ಸುದ್ದಿ ಮೂಲವನ್ನು ಇಟ್ಟುಕೊಂಡು ಇಂಗ್ಲಿಷ್ ಸುದ್ದಿ ಚಾನೆಲ್ “ಟೈಮ್ಸ್ ನೌ” ಸುದ್ದಿ ಮಾಡಿದೆ.

ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ಕೊಲ್ಲಲ್ಪಟ್ಟ ಚೀನೀ ಸೈನಿಕರ ಹೆಸರು ಹಾಗೂ ಸಾವಿಗೀಡಾದ ಸೈನಿಕರನ್ನು ಹೇಳಿದೆ ಎಂದು ಈ ಸುದ್ದಿಯೂ ಉಲ್ಲೇಖಿಸಿದೆ.

ಆದರೆ ಗ್ಲೋಬಲ್ ಟೈಮ್ಸ್‌ ಪತ್ರಿಕೆಯ ಪ್ರಧಾನ ಸಂಪಾದಕ ಚೀನೀ ಸೇನೆಗೆ ಸಾವುನೋವುಗಳಾಗಿದೆ ಎಂದು ದೃಪಡಿಸಿದ್ದಾರಾದರೂ ಯಾವುದೆ ಹೆಸರು ಮತ್ತು ಸಾವುನೋವುಗಳ ಸಂಖ್ಯೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ.

ನಂತರ ಎಚ್ಚೆತ್ತ ಟೈಮ್ಸ್ ನೌ ಚಾನೆಲ್ ”ಬಹುಶಃ ಮಾಹಿತಿಯು ’ನಕಲಿ ಫಾರ್ವರ್ಡ್’ ಆಗಿರಬಹುದು ಎಂದು ಉಲ್ಲೇಖಿಸಿದೆ.

ಆಗಿದ್ದೇನು?

ವೈರಲಾದ ಸಂದೇಶದಲ್ಲಿ ಗ್ಲೋಬಲ್ ಟೈಮ್ಸ್ ಈ ಲೇಖನವನ್ನು ಬುಧವಾರ 0:57:25 ಕ್ಕೆ ಪ್ರಕಟಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.

“ಭಾರತದೊಂದಿಗಿನ ಚೀನಾದ ಗಡಿಯ ರಕ್ಷಣೆಯನ್ನು ನೋಡಿಕೊಳ್ಳುವ ವೆಸ್ಟರ್ನ್ ಥಿಯೇಟರ್ ಕಮಾಂಡ್‌ನ ವಕ್ತಾರರು ಭಾರತೀಯ ಸೈನ್ಯದಿಂದ ಕೊಲ್ಲಲ್ಪಟ್ಟ 30 ಚೀನೀ ಸೈನಿಕರ ಹೆಸರನ್ನು ಬಿಡುಗಡೆ ಮಾಡಿದ್ದಾರೆ” ಎಂದು ಸಂದೇಶದಲ್ಲಿ ಬರೆಯಲಾಗಿದೆ.

ಈ ಸಂದೇಶವನ್ನು ಹಲವಾರು ಸಾಮಾಜಿಕ ಜಾಲತಾಣ ಬಳಕೆದಾರರು ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ವೈರಲಾದ ಸಂದೇಶದಲ್ಲಿ ಇರುವಂತೆ ಗ್ಲೋಬಲ್ ಟೈಮ್ಸ್ ಪತ್ರಿಕೆಯೂ ಈ ರೀತಿಯ ಯಾವುದೇ  ಸುದ್ದಿಯನ್ನು ಮಾಡಲಿಲ್ಲ ಎಂದು ಪತ್ರಿಕೆಯ ವೆಬ್‌ಸೈಟ್‌ನಲ್ಲಿ ನಮಗೆ ನೋಡಬಹುದಾಗಿದೆ. ಅಲ್ಲದೆ ಈ ಪತ್ರಿಕೆಯ ಟ್ವಿಟ್ಟರ್ ಖಾತೆಯಲ್ಲೂ ಅಂತಹ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.

ಗ್ಲೋಬಲ್ ಟೈಮ್ಸ್‌ನ ಪ್ರಧಾನ ಸಂಪಾದಕ ಹೂ ಕ್ಸಿಜಿನ್ ಜೂನ್ 16 ರ ಮಂಗಳವಾರ ಟ್ವೀಟ್ ಮಾಡಿ “ಈ ಘಟನೆಯಲ್ಲಿ ಸಂಭವಿಸಿದ ಸಾವುನೋವುಗಳ ಅಧಿಕೃತ ಸಂಖ್ಯೆಯನ್ನು ಚೀನಾ ಸರ್ಕಾರ ಬಿಡುಗಡೆ ಮಾಡಿಲ್ಲ” ಎಂದು ಉಲ್ಲೇಖಿಸಿದ್ದಾರೆ.

ಟ್ವಿಟ್ಟರ್ ಆರ್ಕೈವ್‌ನಲ್ಲೂ ಗ್ಲೋಬಲ್‌ ಟೈಮ್ಸ್‌ ಈ ಸುದ್ದಿ ಹಾಕಿರುವ ದಾಖಲೆಗಳು ಲಭ್ಯವಿಲ್ಲ. ಆದರೆ ಪ್ರತೀ ಖಾತೆಯ ಪ್ರತೀ ವಿಷಯವೂ ಈ ಆರ್ಕೈವ್‌ನಲ್ಲಿ ದಾಖಲಾಗಿ ಇರುವುದಿಲ್ಲ ಎಂಬುವುದನ್ನು ನಾವು ಇಲ್ಲಿ ನೆನಪಿಟ್ಟುಕೊಳ್ಳಬೇಕಾಗಿದೆ.

ಘಟನೆಯಲ್ಲಿ ಇಂತಿಷ್ಟು ಚೀನಾ ಸೈನಿಕರು ಗಾಯಗೊಂಡಿದ್ದಾರೆ ಎಂಬ ಸುದ್ದಿ ಕೂಡಾ ಇತರ ಸುದ್ದಿ ಮೂಲದಿಂದಾಗಿದೆ, ಇದಕ್ಕೆ ಯಾವುದೇ ಯಾವುದೇ ಅಧಿಕೃತ ಅಂಕಿ ಅಂಶಗಳಿರುವ ಸುದ್ದಿ ಮೂಲಗಳಿಲ್ಲ.


ಓದಿ: ಫ್ಯಾಕ್ಟ್ ಚೆಕ್: ಎಐಎಂಐಎಂ ಸದಸ್ಯರು ಭಾರತದ ಧ್ವಜಗಳನ್ನು ಸುಟ್ಟರೆ? ವಾಸ್ತವವೇನು?


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಹಾರ: ಪೊಲೀಸ್‌ ಕಸ್ಟಡಿಯಲ್ಲಿದ್ದ ಇಬ್ಬರು ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆ; ಠಾಣೆಗೆ ಬೆಂಕಿ ಹಚ್ಚಿದ ಗುಂಪು

0
ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಬಾಲ್ಯ ವಿವಾಹದ ಆರೋಪದಲ್ಲಿ ಬಂಧಿತ ಯುವಕ ಮತ್ತು ಆತನ ಅಪ್ರಾಪ್ತ 'ಪತ್ನಿ' ಕಸ್ಟಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲಿ ಕೋಪಗೊಂಡ ಗ್ರಾಮಸ್ಥರು ಪೊಲೀಸ್‌ ಠಾಣೆಯನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದಾರೆ. ಉದ್ರಿಕ್ತರು,...