HomeUncategorizedದೋಷಪೂರಿತ ಜಿಎಸ್‌ಟಿ ದೇಶದ ಆರ್ಥಿಕತೆಯನ್ನು ನಾಶಮಾಡಿದೆ: ರಾಹುಲ್ ಗಾಂಧಿ

ದೋಷಪೂರಿತ ಜಿಎಸ್‌ಟಿ ದೇಶದ ಆರ್ಥಿಕತೆಯನ್ನು ನಾಶಮಾಡಿದೆ: ರಾಹುಲ್ ಗಾಂಧಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೊರೊನಾ ದೇವರ ಕಾರ್ಯವಾಗಿದ್ದು ಇದರಿಂದಾಗಿ ಜಿಎಸ್‌‌ಟಿ ಸಂಗ್ರಹ ಕುಸಿದಿದೆ ಎಂದು ಹೇಳಿದ್ದಾರೆ.

- Advertisement -
- Advertisement -

ಕೇಂದ್ರ ಸರ್ಕಾರದ ಮೇಲಿನ ತನ್ನ ದಾಳಿಯನ್ನು ಮುಂದುವರೆಸಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಜಿಎಸ್‌‌ಟಿಯ ದೋಷಪೂರಿತ ಅನುಷ್ಠಾನವು ಆರ್ಥಿಕತೆಯನ್ನು ನಾಶಪಡಿಸಿದೆ, ಇದು ಆರ್ಥಿಕತೆಯಲ್ಲಿರುವ ಅಸಂಘಟಿತ ವಲಯಕ್ಕೆ ಎರಡನೇ ದೊಡ್ಡ ಹೊಡೆತವಾಗಿದೆ ಎಂದು ಆರೋಪಿಸಿದ್ದಾರೆ.

ಯುಪಿಎ ಸರ್ಕಾರದ ಸುಲಭ ತೆರಿಗೆ ವಿಧಿಸುವ ಕಲ್ಪನೆಯಾದ ಜಿಎಸ್‌ಟಿಯನ್ನು ಬಿಜೆಪಿ ಸರ್ಕಾರ ಸಂಕೀರ್ಣ ಮತ್ತು ಕಷ್ಟಕರವನ್ನಾಗಿ ಮಾಡಿದೆ ಎಂದು ತನ್ನ ಸರಣಿಯ ಮೂರನೇ ವೀಡಿಯೊದಲ್ಲಿ ರಾಹುಲ್ ಗಾಂಧಿ ಹೇಳಿದ್ದಾರೆ.

ಇದನ್ನೂ ಓದಿ: ಜಿಎಸ್‌ಟಿ ಸಂಗ್ರಹ ಕುಸಿತ: ದೇವರ ಕಾರ್ಯ ಎಂದ ಕೇಂದ್ರ ಸರ್ಕಾರ!

“ಎನ್‌ಡಿಎ ಸರ್ಕಾರವು ಜಾರಿಗೆ ತಂದ ಜಿಎಸ್‌ಟಿ ವಿಭಿನ್ನವಾಗಿದೆ. ಯಾಕೆಂದರೆ ನಾಲ್ಕು ಹಂತದ ತೆರಿಗೆಗಳು ಶೇಕಡಾ 28 ರಷ್ಟಿದೆ, ಇದು ತುಂಬಾ ಸಂಕೀರ್ಣವಾಗಿದೆ ಮತ್ತು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ” ಎಂದು ಅವರು ಹೇಳಿದರು.

ದೊಡ್ಡ ಕಂಪನಿಗಳು ಸಾಕಷ್ಟು ಅಕೌಂಟೆಂಟ್‌ಗಳನ್ನು ನೇಮಿಸಬಹುದು, ಆದರೆ ಸಣ್ಣ ಮತ್ತು ಮಧ್ಯಮ ವ್ಯವಹಾರಗಳು ಈ ತೆರಿಗೆ ವಿಧಾನವನ್ನು ಅನುಸರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ದೇಶದಲ್ಲಿ ತೆರಿಗೆ ದರಗಳ ನಾಲ್ಕು ಹಂತಗಳಲ್ಲಿರುವುದು ಏಕೆ ಎಂದು ಪ್ರಶ್ನಿಸಿದ ಅವರು, ಸಂಪನ್ಮೂಲಗಳನ್ನು ಹೊಂದಿರುವವರು ಇದನ್ನು ಅನುಸರಿಸಬಹುದು, ಆದರೆ ಸಣ್ಣ ಮತ್ತು ಅಲ್ಪ ವ್ಯವಹಾರಗಳು ಹೊಂದಿರುವವರು ಇದರಿಂದ ತೊಂದರೆ ಅನುಭವಿಸುತ್ತಾರೆ ಎಂದು ಹೇಳಿದರು.

ಕೇಂದ್ರ ಸರ್ಕಾರವು ಭಾರತದ ದೊಡ್ಡ 15 ರಿಂದ 20 ಕೈಗಾರಿಕೋದ್ಯಮಿಗಳಿಗೆ ಲಾಭ ಆಗುತಂತೆ ಮಾಡಲು ಈ ತೆರಿಗೆ ಪದ್ದತಿಯನ್ನು ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರು ಕಾಳಿ ದೇವಿಯ ಮೂರ್ತಿ ಸುಟ್ಟರೆ; ಫ್ಯಾಕ್ಟ್‌‌ಚೆಕ್‌

“ಜಿಎಸ್‌ಟಿ ಸಂಪೂರ್ಣ ವೈಫಲ್ಯವಾಗಿದೆ, ಅದು ಯಶಸ್ವಿಯಾಗುವುದಿಲ್ಲ, ಇದು ಬಡವರ ಮೇಲೆ ಮತ್ತು ಸಣ್ಣ ಮತ್ತು ಮಧ್ಯಮ ವ್ಯವಹಾರಗಳ ಮೇಲಿನ ಆಕ್ರಮಣವಾಗಿದೆ. ಜಿಎಸ್‌ಟಿ ತೆರಿಗೆ ವ್ಯವಸ್ಥೆಯಲ್ಲ, ಇದು ಭಾರತದ ಬಡವರ ಮೇಲಿನ ಆಕ್ರಮಣವಾಗಿದೆ. ಇದು ಒಂದು ಸಣ್ಣ ಅಂಗಡಿಯವರು, ಸಣ್ಣ ಮತ್ತು ಮಧ್ಯಮ ವ್ಯವಹಾರಗಳು, ರೈತರು ಮತ್ತು ಕಾರ್ಮಿಕರ ಮೇಲೆ ದಾಳಿ” ಎಂದು ಅವರು ತೀವ್ರ ದಾಳಿ ಮಾಡಿದ್ದಾರೆ.

ಈ ದಾಳಿಯನ್ನು ಗುರುತಿಸಿ ಮತ್ತು ಅದರ ವಿರುದ್ಧ ಒಟ್ಟಾಗಿ ನಿಲ್ಲಬೇಕು ಎಂದು ರಾಹುಲ್ ಗಾಂಧಿ ಕರೆ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರ ತಂದಿರುವ ಜಿಎಸ್‌ಟಿಯ ಫಲಿತಾಂಶವೇನು ಎಂದು ಕೇಳಿರುವ ಅವರು, ಇಂದು ಭಾರತ ಸರ್ಕಾರಕ್ಕೆ ಜಿಎಸ್‌ಟಿ ಪರಿಹಾರದ ಹಣವನ್ನು ರಾಜ್ಯಗಳಿಗೆ ನೀಡಲು ಸಾಧ್ಯವಾಗುತ್ತಿಲ್ಲ. ಸರ್ಕಾರಿ ನೌಕರರಿಗೆ ಹಣವನ್ನು ನೀಡಲು ರಾಜ್ಯಗಳಿಗೆ ಸಾಧ್ಯವಾಗುತ್ತಿಲ್ಲ ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಮಾನವ ನಿರ್ಮಿತ ವಿಪತ್ತುಗಳಿಗಾಗಿ ದೇವರನ್ನು ದೂಷಿಸಬೇಡಿ: ಪಿ.ಚಿದಂಬರಂ

ಜಿಎಸ್‌ಟಿ ಸಂಗ್ರಹ ಕುಸಿತದ ಬಗ್ಗೆ ಆಗಸ್ಟ್‌ 27 ರಂದು ಮಾತನಾಡಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೊರೊನಾ ದೇವರ ಕಾರ್ಯವಾಗಿದ್ದು ಇದರಿಂದಾಗಿ ಜಿಎಸ್‌‌ಟಿ ಸಂಗ್ರಹ ಕುಸಿದಿದೆ ಎಂದು ಅಸಹಾಯಕತೆ ಪ್ರದರ್ಶಿಸಿದ್ದರು.

ರಾಹುಲ್ ಗಾಂಧಿ ಕಳೆದ ಬುಧವಾರ ಪ್ರಸಾರ ಮಾಡಿದ್ದ ವಿಡಿಯೋದಲ್ಲಿ ನೋಟ್‌ಬ್ಯಾನ್‌ ವಿಷಯವೆತ್ತಿ ಕೇಂದ್ರ ಸರ್ಕಾರದ ವಿರುದ್ದ ದಾಳಿ ಮಾಡಿದ್ದರು. ನೋಟ್‌ಬ್ಯಾನ್‌ ಭಾರತದ ಬಡವರು, ರೈತರು, ಕಾರ್ಮಿಕರು ಮತ್ತು ಸಣ್ಣ ಅಂಗಡಿಯವರ ಮೇಲಿನ ದಾಳಿ ಎಂದಿದ್ದ ಅವರು ಇದು ಭಾರತದ ಅಸಂಘಟಿತ ಆರ್ಥಿಕತೆಯ ಮೇಲಿನ ದಾಳಿ ಎಂದು ಆರೋಪಿಸಿದ್ದರು.

ಇದನ್ನೂ ಓದಿ: ಐತಿಹಾಸಿಕ ಕುಸಿತಕ್ಕೆ ಸಾಕ್ಷಿಯಾದ ಭಾರತದ ಆರ್ಥಿಕತೆ; ವರ್ಷದ ಮೊದಲ ತ್ರೈಮಾಸಿಕದಲ್ಲೇ ಶೇ.-23.9 ರಷ್ಟು ಕುಸಿತ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಲೋಕಸಭಾ ಅಭ್ಯರ್ಥಿಗಳ ಪೈಕಿ ಶೇ. 25ರಷ್ಟು ಮಂದಿ ಇತರ ಪಕ್ಷಗಳಿಂದ ವಲಸೆ ಬಂದವರು

0
ಈ ಬಾರಿಯ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪೈಕಿ ಶೇ 25ರಷ್ಟು ಮಂದಿ ಬೇರೆ ಪಕ್ಷಗಳಿಂದ ವಲಸೆ ಬಂದವರು ಎಂದು ವರದಿಗಳು ಹೇಳಿವೆ. ಬಿಜೆಪಿ ಕಣಕ್ಕಿಳಿಸಿರುವ 435 ಅಭ್ಯರ್ಥಿಗಳ ಪೈಕಿ 106 ಮಂದಿ...