Homeದಿಟನಾಗರಫ್ಯಾಕ್ಟ್‌ಚೆಕ್: ವೈರಲ್ ಚಿತ್ರದಲ್ಲಿರುವ ಮಹಿಳೆ ’ಲವ್‌ ಜಿಹಾದ್’ ಪ್ರಕರಣದಲ್ಲಿ ಹತ್ಯೆ ಆಗಿದ್ದು ನಿಜವೆ?

ಫ್ಯಾಕ್ಟ್‌ಚೆಕ್: ವೈರಲ್ ಚಿತ್ರದಲ್ಲಿರುವ ಮಹಿಳೆ ’ಲವ್‌ ಜಿಹಾದ್’ ಪ್ರಕರಣದಲ್ಲಿ ಹತ್ಯೆ ಆಗಿದ್ದು ನಿಜವೆ?

ಚಿತ್ರದಲ್ಲಿರುವವರು ದಂಪತಿಗಳಾಗಿದ್ದು, ಅವರನ್ನು ಡೆಹ್ರಾಡೂನ್‌ನ ಗೋರಖ್‌ಪುರ್ ಚೌಕ್ ಪ್ರದೇಶದ ಲಾವಿ ಜೋಶಿ ಮತ್ತು ಮೊಹಮ್ಮದ್ ಆದಿಲ್ ಪಾಷಾ ಎಂದು ಗುರುತಿಸಲಾಗಿದೆ.

- Advertisement -
- Advertisement -

ದಂಪತಿಗಳಿಬ್ಬರ ಎರಡು ಚಿತ್ರಗಳ ಜೊತೆಗೆ ಸೂಟ್‌ಕೇಸ್‌ನೊಳಗೆ ಪತ್ತೆಯಾದ ಮೃತದೇಹವನ್ನು ಪೊಲೀಸರು ಪರಿಶೀಲನೆ ಮಾಡುತ್ತಿರುವ ಚಿತ್ರಗಳೊಂದಿಗೆ ಹಂಚಿ, ಇದು ಲವ್ ಜಿಹಾದ್ ಪ್ರಕರಣ ಎಂದು ಹೇಳಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಮೇಲಿನ ಚಿತ್ರಗಳನ್ನು ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಭಾರಿ ಪ್ರಮಾಣದಲ್ಲಿ ಪ್ರಸಾರ ಮಾಡಲಾಗುತ್ತಿದ್ದು, ಅದರಲ್ಲಿ “ಲವ್ ಜಿಹಾದ್ ಯಾವಾಗಲೂ ಹಿಂದೂ ಹುಡುಗಿಯ ಮರಣದಲ್ಲಿ ಕೊನೆಗೊಳ್ಳುತ್ತದೆ” ಎಂಬುದರ ಜೊತೆಗೆ #MuslimsAreJihadi ಎಂಬ ಹ್ಯಾಶ್‌‌ಟ್ಯಾಗ್‌ ಕೂಡಾ ಬಳಸಲಾಗುತ್ತಿದೆ.

ಇದನ್ನೂ ಓದಿ: ಇದುವರೆಗೂ ಯಾವುದೇ ಲವ್‌ ಜಿಹಾದ್‌ ನಡೆದಿಲ್ಲವೆಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ

ಆಗಸ್ಟ್ 27 ರಂದು, “ಬಿಜೆಪಿ ಬಲೂಚಿಸ್ತಾನ್” ಹೆಸರಿನ ಟ್ವಿಟ್ಟರ್ ಖಾತೆಯು ಈ ಚಿತ್ರಗಳನ್ನು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಂಡಿದೆ.

ಇದರ ಆರ್ಕೈವ್ ಇಲ್ಲಿದೆ.
ಇದರ ಆರ್ಕೈವ್ ಇಲ್ಲಿದೆ.
ಇದರ ಲಿಂಕ್ ಇಲ್ಲಿದೆ.

ಫ್ಯಾಕ್ಟ್‌ಚೆಕ್

ವೈರಲ್ ಚಿತ್ರದ 1 ನೆ ಚಿತ್ರ ಹಾಗೂ  ಮತ್ತು 2 ನೇ ಚಿತ್ರವನ್ನು ಗೂಗಲ್ ರಿವರ್ಸ್ ಸರ್ಚ್ ಮಾಡಿದಾಗ, ಚಿತ್ರದಲ್ಲಿರುವವರು ದಂಪತಿಗಳಾಗಿದ್ದು, ಅವರನ್ನು ಡೆಹ್ರಾಡೂನ್‌ನ ಗೋರಖ್‌ಪುರ್ ಚೌಕ್ ಪ್ರದೇಶದ ಲಾವಿ ಜೋಶಿ ಮತ್ತು ಮೊಹಮ್ಮದ್ ಆದಿಲ್ ಪಾಷಾ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಹಜ್‌ ಯಾತ್ರೆಯಲ್ಲಿ ಪಾಕಿಸ್ತಾನಿ ಉಗ್ರಗಾಮಿಗಳನ್ನು ಅಮೀರ್‌ ಖಾನ್‌‌‌ ಭೇಟಿಯಾಗಿಲ್ಲ.

ದಂಪತಿಗಳಿಬ್ಬರು ಇನ್ನೂ ಜೀವಂತವಾಗಿದ್ದಾರೆ ಹಾಗೂ ಇವರು ಅಂತರ್‌ಧರ್ಮಿಯ ವಿವಾಹವಾಗಿದ್ದು, ಇಬ್ಬರೂ ಡೆಹ್ರಾಡೂನ್ ಮೂಲದವರು ಗೋರಖ್‌ಪುರ್‌ ಚೌಕ್‌ ಪ್ರದೇಶದ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಚಿತ್ರದಲ್ಲಿ ಇರುವ ಮಹಿಳೆ ಸುರಭಿ ಚೌಹಾನ್ ಪಾಷಾ ಈ ಬಗ್ಗೆ ಮಾತನಾಡಿ, ಮೊಹಮ್ಮದ್ ಆದಿಲ್ ಪಾಷಾನನ್ನು ಮದುವೆಯಾದ ನಂತರ ಹಲವಾರು ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದ್ದವು ಎಂದು ಅವರು ತಿಳಿಸಿದ್ದಾರೆ.

“ನಮ್ಮ ಮದುವೆಯ ನಂತರ, ನಮ್ಮ ಛಾಯಾಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಅನೇಕ ಸುಳ್ಳು ಪ್ರತಿಪಾದನೆಯೊಂದಿಗೆ ಹರಿದಾಡುತ್ತಿದೆ. ಅದರಲ್ಲಿ ನನ್ನ ಗಂಡ ನನ್ನನ್ನು ಕೊಲೆ ಮಾಡಿದ್ದಾನೆ ಎಂದು ಹೇಳಿದೆ. ಅದೆಲ್ಲವೂ ಸುಳ್ಳು. ನಾವು ಅನ್ಯೋನವಾಗಿದ್ದೇವೆ. ಈ ವದಂತಿಗಳನ್ನು ಭಜರಂಗದಳದ ಸದಸ್ಯರು ಪ್ರಸಾರ ಮಾಡುತ್ತಿದ್ದಾರೆ. ಸಹಾಯಕ್ಕಾಗಿ ನಾವು ಪೊಲೀಸರನ್ನು ಸಂಪರ್ಕಿಸಿದ್ದಾವೆ” ಎಂದು ಸುರಭಿ ಚೌಹಾನ್ ಪಾಷಾ ಹೇಳಿದ್ದಾರೆ.

ಸೂಟ್‌ಕೇಸ್‌ನೊಳಗೆ ಶವ ಪತ್ತೆಯಾದ ಯಾವುದೇ ಪ್ರಕರಣವು ಆ ಪ್ರದೇಶದಲ್ಲಿ ಬೆಳಕಿಗೆ ಬಂದಿಲ್ಲ ಎಂದು ಪೊಲೀಸರು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ’ಇಸ್ಲಾಂ ಜಿಂದಾಬಾದ್’ ಎಂದು ಕೂಗಿದ ಈ ರ್‍ಯಾಲಿ ಕೊಲ್ಕತ್ತಾದ್ದಲ್ಲ, ಬಾಂಗ್ಲಾದೇಶದ್ದು

ನಂತರ ಮೂರನೇ  ಚಿತ್ರವನ್ನು ಗೂಗಲ್ ರಿವರ್ಸ್ ಸರ್ಚ್ ನಡೆಸಿದಾಗ, ಜುಲೈ 27 ರಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಈ ಚಿತ್ರದ ಬಗ್ಗೆ ವರದಿ ಮಾಡಿದ್ದು ಕಾಣಬುದಾಗಿದೆ.

ಚೀಲದೊಳಗೆ ಅಪರಿಚಿತ ಮಹಿಳೆಯ ಶವ ದೆಹಲಿ ಬಳಿಯ ಗಾಜಿಯಾಬಾದ್‌ನಲ್ಲಿ ಪತ್ತೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಬಗ್ಗೆ ಸ್ಫಷ್ಟೀಕರಣ ನೀಡಿದ ಗಾಜಿಯಾಬಾದ್ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಜ್ಞಾನೇಂದ್ರ ಕುಮಾರ್ ಸಿಂಗ್, “ಈ ಚಿತ್ರವು ಚೀಲದ ಒಳಗಿನಿಂದ ಮಹಿಳೆಯ ಮೃತದೇಹ ಪತ್ತೆಯಾಗಿರುವ ಚಿತ್ರವಾಗಿದೆ, ಮಹಿಳೆಯ ಗುರುತು ಪತ್ತೆಗಾಗಿ ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ತನಿಖೆ ಮುಂದುವರೆದಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಅಷ್ಟೇ ಅಲ್ಲದೆ ಚಿತ್ರ 1 ಮತ್ತು ಚಿತ್ರ 2 ರಲ್ಲಿರುವ ಮಹಿಳೆಯು ಗಾಜಿಯಾಬಾದ್‌ನಲ್ಲಿ ಶವವಾಗಿ ಪತ್ತೆಯಾದ ಮಹಿಳೆಯದ್ದಲ್ಲ ಎಂದು ಅವರು ಹೇಳಿದ್ದಾರೆ.

ಸಂಬಂಧವಿಲ್ಲದ ಚಿತ್ರಗಳನ್ನು “ಲವ್ ಜಿಹಾದ್” ಹೆಸರಿನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ ಎಂದು ಈ ಮೂಲಕ ಸ್ಪಷ್ಟವಾಗುತ್ತದೆ.

ಕೃಪೆ: ದಿ ಕ್ವಿಂಟ್


ಇದನ್ನೂ ಓದಿ: ಝಾಕಿರ್‌ ನಾಯಕ್‌ಗೆ ಮಲೇಷಿಯನ್ ಪೌರತ್ವ ನೀಡಲಾಗಿದೆಯೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಂಸತ್ತು ಅಂಗೀಕರಿಸಿರುವ ಹೊಸ ಕ್ರಿಮಿನಲ್ ಕಾನೂನುಗಳ ವಿರುದ್ಧದ ಅರ್ಜಿ: ಸುಪ್ರೀಂ ಕೋರ್ಟಿನಲ್ಲಿ ನಾಳೆ ವಿಚಾರಣೆ

0
"ಹಲವು ದೋಷಗಳು ಮತ್ತು ವ್ಯತ್ಯಾಸಗಳಿವೆ" ಎಂದು, ಭಾರತ ದಂಡ ಸಂಹಿತೆಗಳನ್ನು (ಐಪಿಸಿ) ಕೂಲಂಕಷವಾಗಿ ಪರಿಶೀಲಿಸುವ ಮೂರು ಹೊಸ ಕಾನೂನುಗಳ ಜಾರಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆಗೆ ನಿಗದಿಪಡಿಸಿದೆ. ನ್ಯಾಯಮೂರ್ತಿಗಳಾದ ಬೇಲಾ...