Homeದಿಟನಾಗರಫ್ಯಾಕ್ಟ್‌‌ಚೆಕ್‌‌: ’ಇಸ್ಲಾಂ ಜಿಂದಾಬಾದ್’ ಎಂದು ಕೂಗಿದ ಈ ರ್‍ಯಾಲಿ ಕೊಲ್ಕತ್ತಾದ್ದಲ್ಲ, ಬಾಂಗ್ಲಾದೇಶದ್ದು

ಫ್ಯಾಕ್ಟ್‌‌ಚೆಕ್‌‌: ’ಇಸ್ಲಾಂ ಜಿಂದಾಬಾದ್’ ಎಂದು ಕೂಗಿದ ಈ ರ್‍ಯಾಲಿ ಕೊಲ್ಕತ್ತಾದ್ದಲ್ಲ, ಬಾಂಗ್ಲಾದೇಶದ್ದು

ಸರಣಿ ನಕಲಿ ಸುದ್ದಿಯ ಅಪರಾಧಿಯಾಗಿರುವ ಕೆನಡಾದ ಪತ್ರಕರ್ತ ತಾರೆಕ್ ಫತಾಹ್ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಇದನ್ನು ಪ್ರಕಟಿಸಿದ್ದರು.

- Advertisement -
- Advertisement -

ತಲೆಗೆ ಸ್ಕಲ್ ಟೋಪಿ ಮತ್ತು ‘ಸ್ಟಾಪ್ ಕಿಲ್ಲಿಂಗ್ ರೋಹಿಂಗ್ಯಾ ಮುಸ್ಲಿಂ’ ಎಂಬ ಫಲಕಗಳನ್ನು ಹಿಡಿದು ಪ್ರತಿಭಟನಾ ರ್‍ಯಾಲಿ ನಡೆಸುತ್ತಿರುವ ಜನರ ವಿಡಿಯೋವನ್ನು ಸರಣಿ ನಕಲಿ ಸುದ್ದಿಯ ಅಪರಾಧಿಯಾಗಿರುವ ಕೆನಡಾದ ಪತ್ರಕರ್ತ ತಾರೆಕ್ ಫತಾಹ್ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ’ಕೋಲ್ಕತ್ತಾದಲ್ಲಿ ‘ಇಸ್ಲಾಂ ಜಿಂದಾಬಾದ್’ಗೆ ಘೋಷಣೆ ಕೂಗಿದ್ದಾರೆ ಎಂದು ಬರೆದಿದ್ದಾರೆ.

ತಾರೆಖ್ ಫತಾಹ್ ತಮ್ಮ ಟ್ವೀಟ್‌ನಲ್ಲಿ “ಇದು ಕರಾಚಿ, ಕಾಶ್ಮೀರ ಅಥವಾ ಕೇರಳ ಅಲ್ಲ. “ಇಸ್ಲಾಂ ಜಿಂದಾಬಾದ್” ನ ಈ ಘೋಷಣೆ ಕೋಲ್ಕತ್ತಾದಲ್ಲಿ, ಮಮತಾ ಬಾನರ್ಜಿ ಆಳ್ವಿಕೆಯ ವೆಸ್ಟ್ ಬೆಂಗಾಲ್‌ನ ರಾಜಧಾನಿಯಲ್ಲಿ” ಎಂದು ಬರೆದಿದ್ದಾರೆ.

ಇದರ ಆರ್ಕೈವ್ ಇಲ್ಲಿದೆ.

ಈ ಪೋಸ್ಟ್ ಅನ್ನು ಹಲವಾರು ಸಾಮಾಜಿಕ ಜಾಲತಾಣದ ಬಳಕೆದಾರರು ಹಂಚಿಕೊಂಡಿದ್ದಾರೆ.

ಇದರ ಆಕೈವ್ ಇಲ್ಲಿದೆ.
ಇದರ ಆರ್ಕೈವ್ ಇಲ್ಲಿದೆ

ಫ್ಯಾಕ್ಟ್‌‌ಚೆಕ್‌

ಈ ವೀಡಿಯೊವು ಸೆಪ್ಟೆಂಬರ್ 2017 ರದ್ದಾಗಿದ್ದು ಬಾಂಗ್ಲಾದೇಶದ್ದಾಗಿದೆ. ಅಲ್ಲಿನ ಇಸ್ಲಾಮಿಕ್ ಸಂಘಟನೆಯು ಮ್ಯಾನ್ಮಾರ್ ರಾಯಭಾರ ಕಚೇರಿಯತ್ತ ಪ್ರತಿಭಟನಾ ಮೆರವಣಿಗೆ ನಡೆಸಿದ ವಿಡಿಯೋವಾಗಿದೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಬಕ್ರೀದ್‌ಗೆ ತಂದ ಆಡುಗಳನ್ನು ಲೂಟಿ ಮಾಡಿದ್ದು ನಿಜವೆ?

ವೀಡಿಯೊದ ಪ್ರಮುಖ ಫ್ರೇಮ್‌ಗಳ ರಿವರ್ಸ್ ಇಮೇಜ್ ಮೂಲಕ ಹುಡುಕಾಡಿದಾಗ, ‘ಸ್ಪೈಸಿ ಇನ್ಫೋಟ್ಯೂಬ್’ ಎಂಬ ಯೂಟ್ಯೂಬ್ ಚಾನೆಲ್ 13 ಸೆಪ್ಟೆಂಬರ್ 2017 ರಂದು ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದು, “ಇಸ್ಲಾಮಿ ಆಂದೋಲನ್ ಬಾಂಗ್ಲಾದೇಶವು ಮ್ಯಾನ್ಮಾರ್ ರಾಯಭಾರ ಕಚೇರಿಯನ್ನು ಸುತ್ತುವರೆದಿದೆ” ಎಂದು ಬರೆದಿದೆ.

ಇದರ ನಂತರ ಕೆಲವು ಕೀವರ್ಡ್ ಮೂಲಕ ಇನ್ನಷ್ಟು ಹುಡುಕಾಡಿದಾಗ 13 ಸೆಪ್ಟೆಂಬರ್ 2017 ರ ದಿನಾಂಕದ “ರೋಹಿಂಗ್ಯಾಗಳ ಮೇಲಿನ ಕಿರುಕುಳವನ್ನು ವಿರೋಧಿಸಿ ಇಸ್ಲಾಮಿಕ್ ಚಳವಳಿಯ ರ್‍ಯಾಲಿ” ಎಂಬ ಸುದ್ದಿಯನ್ನು ಆನ್‌ಲೈನ್ ಸುದ್ದಿ ಸಂಸ್ಥೆಯಾದ ಬಾಂಗ್ಲೇನ್ಯೂಸ್ 24 ರ ವರದಿ ಮಾಡಿತ್ತು.

ರೋಹಿಂಗ್ಯಾ ಮುಸ್ಲಿಮರ ಚಿತ್ರಹಿಂಸೆ ಮತ್ತು ಹತ್ಯೆಯನ್ನು ಪ್ರತಿಭಟಿಸಲು ಇಸ್ಲಾಮಿಕ್ ರಾಜಕೀಯ ಸಂಘಟನೆಯಾದ ಇಸ್ಲಾಮಿ ಆಂದೋಲನ್ ಬಾಂಗ್ಲಾದೇಶ (ಐಎಬಿ) ಮ್ಯಾನ್ಮಾರ್ ರಾಯಭಾರ ಕಚೇರಿಗೆ ರ್‍ಯಾಲಿಯನ್ನು ನಡೆಸಿತು ಎಂದು ಅದು ಹೇಳಿದೆ.

ಅಷ್ಟೇ ಅಲ್ಲದೆ ಐಎಬಿಯ ವಿದ್ಯಾರ್ಥಿ ಘಟಕವಾದ ಐಎಸ್ಸಿಎಯ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಮೆರವಣಿಗೆಯ ವೀಡಿಯೊವನ್ನು ಕಾಣಬಹುದಾಗಿದೆ.

ಐಎಬಿ ತಮ್ಮ ಫೇಸ್‌ಬುಕ್ ಪುಟದಲ್ಲಿ ರ್‍ಯಾಲಿಯನ್ನು ಘೋಷಿಸಿ, “ಸೆಪ್ಟೆಂಬರ್ 13 ರಂದು ಢಾಕಾದಲ್ಲಿರುವ ಮ್ಯಾನ್ಮಾರ್ ರಾಯಭಾರ ಕಚೇರಿಯನ್ನು ಸುತ್ತುವರಿಯುವಂತೆ” ಜನರಿಗೆ ಕರೆ ನೀಡಿತ್ತು.

ಇದಲ್ಲದೆ, ವೀಡಿಯೊದ ದೃಶ್ಯದಲ್ಲಿರುವ ಇತರ ಸುಳಿವುಗಳು ಇದು ಬಾಂಗ್ಲಾದೇಶದ್ದೇ ಹೊರತು ಭಾರತದ್ದಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ. ವಿಡಿಯೋದಲ್ಲಿ ಹಸಿರು ಹಿನ್ನೆಲೆಯ ಮಧ್ಯದಲ್ಲಿ ಕೆಂಪು ಚುಕ್ಕೆ ಹೊಂದಿರುವ ಬಾಂಗ್ಲಾದೇಶದ ಧ್ವಜವನ್ನು ವೀಡಿಯೊದ ಸ್ಟಿಲ್ ಶಾಟ್‌ನಲ್ಲಿ ಕಾಣಬಹುದು.

ಅಷ್ಟೇ ಅಲ್ಲದೆ ಪೊಲೀಸ್ ಅಧಿಕಾರಿಗಳು ಬಾಂಗ್ಲಾದೇಶದ ಪೊಲೀಸ್ ಸಮವಸ್ತ್ರಕ್ಕೆ ಹೋಲುವ ಸಮವಸ್ತ್ರವನ್ನು ಧರಿಸಿರುವುದನ್ನು ಸಹ ಕಾಣಬಹುದು.

ಈ ಮೂಲಕ ಸ್ಪಷ್ಟವಾಗಿ, ಬಾಂಗ್ಲಾದೇಶದ ಪ್ರತಿಭಟನೆಯನ್ನು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದ ರ್‍ಯಾಲಿಯಾಗಿ ತಪ್ಪಾಗಿ ಹಂಚಿಕೊಳ್ಳಲಾಗಿದೆ.


ಓದಿ: ಕೊರೊನಾ ನೆಪದಲ್ಲಿ ಈ ವೈದ್ಯ ಕಿಡ್ನಿ ಕದಿಯುತ್ತಿದ್ದರೆ? ಏನಿದು ಪ್ರಕರಣ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...