Homeಕರೋನಾ ತಲ್ಲಣಕೊರೊನಾ: 500 ರಿಂದ 2 ಸಾವಿರಕ್ಕೆ ಮಾಸ್ಕ್ ದಂಡ ಹೆಚ್ಚಿಸಿದ ದೆಹಲಿ ಸರ್ಕಾರ

ಕೊರೊನಾ: 500 ರಿಂದ 2 ಸಾವಿರಕ್ಕೆ ಮಾಸ್ಕ್ ದಂಡ ಹೆಚ್ಚಿಸಿದ ದೆಹಲಿ ಸರ್ಕಾರ

"ಇದು ರಾಜಕೀಯದ ಸಮಯವಲ್ಲ, ನಾವು ಕೆಲವು ದಿನಗಳ ಕಾಲ ರಾಜಕೀಯ ಬದಿಗಿಟ್ಟು ಜನರಿಗೆ ಸೇವೆ ಸಲ್ಲಿಸುವ ಸಮಯ ಇದು” ಎಂದು ಕೇಜ್ರೀವಾಲ್ ಹೇಳಿದ್ದಾರೆ.

- Advertisement -
- Advertisement -

ದೆಹಲಿಯಲ್ಲಿ ಮಾಸ್ಕ್ ಧರಿಸದಿದ್ದರೆ 500 ರೂಪಾಯಿಗಳಿಗೆ ಇದ್ದ ದಂಡವನ್ನು  2,000 ರೂಪಾಯಿಗಳಿಗೆ ದೆಹಲಿ ಸರ್ಕಾರ ಹೆಚ್ಚಿಸಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ಪ್ರಕಟಿಸಿದ್ದಾರೆ.

“ಜನರು ಮಾಸ್ಕ್‌ಗಳನ್ನು ಧರಿಸುತ್ತಾರೆ. ಆದರೆ ಕೆಲವರಿಗೆ ಅದರ ಬಗ್ಗೆ ಅಸಡ್ಡೆ ಇದೆ. ಹಾಗಾಗಿ ನಾವು ನಿಯಮಗಳನ್ನು ಬಿಗಿಗೊಳಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ದಂಡವನ್ನು 500 ರಿಂದ 2000 ಕ್ಕೆ ಏರಿಸಲಾಗಿದೆ” ಎಂದು ದೆಹಲಿಯ ಕೊರೊನಾ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ನಡೆದ ಸರ್ವಪಕ್ಷ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಕೇಜ್ರಿವಾಲ್ ತಿಳಿಸಿದ್ದಾರೆ.

ಕೊರೊನಾ ರೋಗಿಗಳಿಗೆ ಆದಷ್ಟು ಗರಿಷ್ಠ ಆರೈಕೆ ನೀಡಲು ಸರ್ಕಾರವು ತುರ್ತು ಪರಿಸ್ಥಿತಿಯ ಶಸ್ತ್ರಚಿಕಿತ್ಸೆ ಬಿಟ್ಟು ಬೇರೆ ಶಸ್ತ್ರಚಿಕಿತ್ಸೆಗಳನ್ನು ಸ್ಥಗಿತಗೊಳಿಸುವಂತೆ ಆಸ್ಪತ್ರೆಗಳನ್ನು ಒತ್ತಾಯಿಸುತ್ತದೆ ಎಂದು ಮುಖ್ಯಮಂತ್ರಿ ಕೇಜ್ರಿವಾಲ್ ಹೇಳಿದರು.

ಎಲ್ಲಾ ಖಾಸಗಿ ಆಸ್ಪತ್ರೆಗಳು ತಮ್ಮ ಐಸಿಯು ಹಾಸಿಗೆಗಳಲ್ಲಿ 80% ಮತ್ತು ಐಸಿಯು ಅಲ್ಲದ ಹಾಸಿಗೆಗಳಲ್ಲಿ 60% ಹಾಸಿಗೆಗಳನನ್ನು ಕೊರೊನಾ ಸೋಂಕಿತ ರೋಗಿಗಳಿಗೆ ಕಾಯ್ದಿರಿಸಲು ತಿಳಿಸಲಾಗಿದೆ.

ಇದನ್ನೂ ಓದಿ: ಕೊರೊನಾ ಆಸ್ಪತ್ರೆಯಲ್ಲೇ ರೋಗಿಗೆ ಲೈಂಗಿಕ ಕಿರುಕುಳ ನೀಡಿದ BJP ಕಾರ್ಯಕರ್ತ!

ಇನ್ನು ಛತ್ ಪೂಜೆಯ ಮೇಲಿನ ನಿರ್ಬಂಧಗಳ ಕುರಿತು ಟೀಕಿಸಿದ ಬಿಜೆಪಿಗೆ ’ಇದು ರಾಜಕೀಯ ಮತ್ತು ಆರೋಪಗಳನ್ನು ಮಾಡುವ ಸಮಯವಲ್ಲ ಎಂದು ಹೇಳಿದ್ದಾರೆ. “ದೆಹಲಿ ಜನರು ಛತ್ ಪೂಜೆ ಆಚರಿಸಲು ನಾನು ಯಾಕೆ ಬಯಸುವುದಿಲ್ಲ..? ಇದು ಶುಭ ಸಂದರ್ಭ ಮತ್ತು ಜನರು ಅದನ್ನು ಆಚರಿಸಬೇಕು ಆದರೆ ಅವರ ಮನೆಯೊಳಗೆ ಆಚರಿಸಬೇಕು ಅಷ್ಟೆ. ಹೊರಗೆ ಗುಂಪುಗೂಡಿ ಆಚರಿಸಬಾರದು” ಎಂದರು.

“ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವಾಗ ದೆಹಲಿಯ ಜನರಿಗೆ ಇದು ಕಷ್ಟದ ಸಮಯ ಎಂದು ನಾನು ಸಭೆಯಲ್ಲಿ ಎಲ್ಲ ಪಕ್ಷಗಳಿಗೆ ಹೇಳಿದೆ. ಇದು ರಾಜಕೀಯದ ಸಮಯವಲ್ಲ, ರಾಜಕೀಯ ಮಾಡಲು ಸಂಪೂರ್ಣ ಜೀವಿತಾವಧಿ ಇದೆ. ನಾವು ಕೆಲವು ದಿನಗಳ ಕಾಲ ರಾಜಕೀಯ ಮತ್ತು ಆರೋಪಗಳನ್ನು ಬದಿಗಿಡಬೇಕು. ಜನರಿಗೆ ಸೇವೆ ಸಲ್ಲಿಸುವ ಸಮಯ ಇದು” ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಸರ್ವಪಕ್ಷ ಸಭೆಯ ನಂತರ ದೆಹಲಿ ಬಿಜೆಪಿ ಮುಖ್ಯಸ್ಥ ಆದೇಶ್ ಗುಪ್ತಾ ಅವರು “ಎಎಪಿ ಸರ್ಕಾರ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ” ಎಂದು ಹೇಳಿದರು. ’ದೆಹಲಿ ಸರ್ಕಾರವು ಸರಿಯಾದ ಕ್ರಮಗಳನ್ನು ತೆಗೆದುಕೊಂಡಿದ್ದರೆ ಜನರು ಒಟ್ಟಾಗಿ ಛತ್ ಪೂಜೆಯನ್ನು ಆಚರಿಸುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರಲಿಲ್ಲ’ ಎಂದರು.


ಇದನ್ನೂ ಓದಿ: ಛತ್ ಪೂಜೆಗೆ ದೆಹಲಿ ಸರ್ಕಾರ ನಿರ್ಬಂಧ, ಹಸ್ತಕ್ಷೇಪ ಮಾಡಲ್ಲ ಎಂದ ಹೈಕೋರ್ಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಆರೋಪಿ ಪ್ರಜ್ವಲ್ ರೇವಣ್ಣಗೆ ಸಿದ್ದರಾಮಯ್ಯ ಕ್ರಿಮಿನಲ್ ಹಣೆಪಟ್ಟಿ ಕಟ್ಟಿದ್ದಾರೆ: ಕುಮಾರಸ್ವಾಮಿ

0
'ಇನ್ನೂ ಆರೋಪಿಯಾಗಿರುವ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಕ್ರಿಮಿನಲ್ ಎಂಬ ಹಣೆಪಟ್ಟಿ ಕಟ್ಟಿದ್ದಾರೆ' ಎಂದು ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಲೈಂಗಿಕ ಹಗರಣದ...