Homeಮುಖಪುಟಮಾಧ್ಯಮಗಳು ಸುಳ್ಳು ಹೇಳುತ್ತಿವೆ: ರೈತರ ಮಹಾಪಂಚಾಯತ್‌ ವೇದಿಕೆಯಲ್ಲಿ ABP ಚಾನೆಲ್‌ ವರದಿಗಾರನ ರಾಜೀನಾಮೆ!

ಮಾಧ್ಯಮಗಳು ಸುಳ್ಳು ಹೇಳುತ್ತಿವೆ: ರೈತರ ಮಹಾಪಂಚಾಯತ್‌ ವೇದಿಕೆಯಲ್ಲಿ ABP ಚಾನೆಲ್‌ ವರದಿಗಾರನ ರಾಜೀನಾಮೆ!

- Advertisement -
- Advertisement -

“ಸುದ್ದಿ ವಾಹಿನಿಗಳು ಸತ್ಯವನ್ನು, ನಿಜವಾದ ಸುದ್ದಿಯನ್ನು ತೋರಿಸುವುದನ್ನು ನಿಲ್ಲಿಸಿವೆ. ಅವು ಕೇವಲ ಸುಳ್ಳು ಹೇಳುತ್ತಿವೆ. ಸತ್ಯವನ್ನು ತೋರಿಸದಿರುವುದು ಸಹ ಸುಳ್ಳಿಗೆ ಸಮ ಮತ್ತು ನಾನು ಈ ಸುಳ್ಳಿಗೆ ವಿರೋಧಿಯಾಗಿದ್ದೇನೆ, ಹಾಗಾಗಿ ರಾಜೀನಾಮೆ ನೀಡುತ್ತಿದ್ದೇನೆ….” ಇವು ABP ಚಾನೆಲ್‌ ಹಿರಿಯ ವರದಿಗಾರ ರಕ್ಷಿತ್ ಸಿಂಗ್ ರವರ ಮಾತುಗಳು.

ಇಂದು ಮೀರತ್‌ನಲ್ಲಿ ನಡೆಯುತ್ತಿದ್ದ ರೈತರ ಮಹಾಪಂಚಾಯತ್‌ನ ವೇದಿಕೆಯೇರಿ ಮಾತನಾಡಿದ ಅವರು ಸುದ್ದಿ ಚಾನೆಲ್‌ಗಳು ನಿಜವಾದ ಸುದ್ದಿಯನ್ನು ತೋರಿಸುತ್ತಿಲ್ಲ. ನಾನು ರೈತರ ಹೋರಾಟದ ಬಗ್ಗೆ ವರದಿ ಮಾಡಲು ಬಿಡುತ್ತಿಲ್ಲ ಎಂದು ತಮ್ಮ ಚಾನೆಲ್‌ಗೆ ರಾಜೀನಾಮೆ ನೀಡಿದ್ದಾರೆ.

ರಕ್ಷಿತ್ ಸಿಂಗ್‌ರವರು ರೈತರ ಹೋರಾಟ ಬೆಂಬಲಿಸಿ ರಾಜೀನಾಮೆ ನೀಡಿದ್ದಕ್ಕೆ, ಮತ್ತು ರೈತ ಹೋರಾಟದ ಭಾಗವಾಗಿದ್ದಕ್ಕೆ ಟ್ವಿಟರ್ ನಲ್ಲಿ ಬಹಳಷ್ಟು ಜನ ಅವರನ್ನು ಅಭಿನಂದಿಸಿದ್ದಾರೆ.

“ಎಬಿಪಿ ಸುದ್ದಿ ವರದಿಗಾರ ರಕ್ಷಿತ್ ಸಿಂಗ್ ಅವರ ತಂದೆ 10 ವರ್ಷಗಳ ಹಿಂದೆ ನಿಧನರಾದರು. 12 ಲಕ್ಷ ರೂ ವಾರ್ಷಿಕ ಪ್ಯಾಕೇಜ್ ಹೊಂದಿರುವ ಮನೆಯಲ್ಲಿ ದುಡಿಯುವ ಏಕೈಕ ಸದಸ್ಯ ರಕ್ಷಿತ್. ಆದರೆ ರಕ್ಷಿತ್ ತಮ್ಮ ಚಾನೆಲ್‌ನ ಪ್ರಸಾರಕ್ಕೆ ಅಸಮಾಧಾನ ವ್ಯಕ್ತಪಡಿಸಿ ಕಿಸಾನ್ ಮಹಾಪಂಚಾಯತ್‌ನಲ್ಲಿ ರಾಜೀನಾಮೆ ನೀಡಿದರು. ರಕ್ಷಿತ್ ಅವರಂತಹ ಸಂಪಾದಕರು/ನಿರೂಪಕರು ಹೆಚ್ಚಾಗಲಿ ಎಂದು ಹಾರೈಸುತ್ತೇನೆ” ಎಂದು ನಿರ್ದೇಶಕ ವಿನೋದ್ ಕಪಾರಿಯವರು ಟ್ವೀಟ್ ಮಾಡಿದ್ದಾರೆ.

“ನನಗೆ 4 ವರ್ಷದ ಮಗು ಇದೆ. ಅವನು ಮುಂದೆ ದೊಡ್ಡವನಾದಾಗ, 20 ವರ್ಷ ವಯಸ್ಸಿನವನಾದಾಗ ಇವತ್ತಿನ ಅಘೋಷಿತ ತುರ್ತು ಪರಿಸ್ಥಿತಿಯಾಗಿದ್ದಾಗ ನೀವು ಎಲ್ಲಿದ್ದೀರಿ ಎಂದು ನನ್ನನ್ನು ಕೇಳಿದರೆ, ಆಗ ನಾನು ಸತ್ಯ ಮತ್ತು ರೈತರೊಂದಿಗೆ ಇದ್ದೆ ಎಂದು ಹೇಳಬಹುದು” ಎಂದು ರಕ್ಷಿತ್ ಸಿಂಗ್ ಹೇಳಿದ್ದಾರೆ.


ಇದನ್ನೂ ಓದಿ: ಟಿಪ್ಪು ಜಯಂತಿ ಕುರಿತ ಟ್ವೀಟ್: ಅನಂತ್ ಕುಮಾರ್ ಹೆಗಡೆ, ಸಿ.ಟಿ.ರವಿ ವಿರುದ್ಧ ದೂರು ಪರಿಗಣಿಸಲು ಹೈಕೋರ್ಟ್ ಸೂಚನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಬಹುತೇಕ ಎಲೆಕ್ಟ್ರಾನಿಕ್ಸ್ ಮುಖ್ಯ ವಾಹಿನಿಯ ಮಾಧ್ಯಮಗಳು, ಸುಳ್ಳು ಹೇಳುವುದರ ಜೊತೆಗೆ ಆಡಳಿತಾರೂಢರನ್ನು ವಾಚಾಮಗೋಚರವಾಗಿ ಹೊಗಳುತ್ತಾ, ಆಸ್ತಾನ ವಿದೂಶಕರ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿವೆ.

LEAVE A REPLY

Please enter your comment!
Please enter your name here

- Advertisment -

Must Read

ಆಂಧ್ರಪ್ರದೇಶ: 7 ಮತಗಟ್ಟೆಗಳಲ್ಲಿ ಇವಿಎಂ ಧ್ವಂಸ ಮಾಡಿದ ಶಾಸಕ

0
ಆಂಧ್ರಪ್ರದೇಶದ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಶಾಸಕರೊಬ್ಬರು ಮತಗಟ್ಟೆಯಲ್ಲಿ ವಿವಿಪ್ಯಾಟ್‌ ಯಂತ್ರವನ್ನು ನೆಲಕ್ಕೆ ಎಸೆದು ಒಡೆದು ಹಾಕಿರುವ ಘಟನೆಯ ವಿಡಿಯೋ ವೈರಲ್‌ ಆಗಿದೆ. ಇದೇ ರೀತಿ 7 ಮತಗಟ್ಟೆಗಳಲ್ಲಿ ಶಾಸಕ ಇವಿಎಂ ಯಂತ್ರವನ್ನು...