ಅಸ್ಸಾಂನಲ್ಲಿ ಪಕ್ಷವನ್ನು ಕಣಕ್ಕಿಳಿಸಲು ಆರ್‌ಜೆಡಿಯ ತೇಜಸ್ವಿ ಯಾದವ್ ಸಜ್ಜು..!
PC: Times Of India

ರಾಷ್ಟ್ರೀಯ ಜನತಾದಳ (ಆರ್‌ಜೆಡಿ)ದ ನಾಯಕ ತೇಜಸ್ವಿ ಯಾದವ್ ಅಸ್ಸಾಂ ಚುನಾವಣೆಯಲ್ಲಿ ಪಕ್ಷವನ್ನು ಕಣಕ್ಕಿಳಿಸಲು ಸಜ್ಜಾಗುತ್ತಿದ್ದಾರೆಂಬ ಊಹಾಪೋಹಗಳು ಸುಳಿದಾಡುತ್ತಿದೆ. ಇದಕ್ಕೆ ಪೂರಕವೆಂಬಂತೆ, ಚುನಾವಣಾ ಆಯೋಗ ಅಸ್ಸಾಂ ಚುನಾವಣಾ ದಿನಾಂಕ ಪ್ರಕಟಿಸುತ್ತಿದ್ದಂತೆ, ತೇಜಸ್ವಿ ಯಾದವ್ ಗುವಾಹಟಿಯಲ್ಲಿ ಬೀಡು ಬಿಟ್ಟಿದ್ದಾರೆ.

2020ರ ಅಕ್ಟೋಬರ್-ನವೆಂಬರ್ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿ ಅಧಿಕಾರಕ್ಕೆ ಬರದಿದ್ದರೂ ಒಂದು ಪ್ರಭಲ ಪಕ್ಷವಾಗಿ ಹೊರಹೊಮ್ಮಿದೆ. ಈ ಮೂಲಕ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಸಣ್ಣ ಭಯವನ್ನು ಸೃಷ್ಟಿಸಿರುವುದು ಸುಳ್ಳಲ್ಲ.

ಅಸ್ಸಾಂನಲ್ಲಿ ಮಾರ್ಚ್-ಏಪ್ರಿಲ್‌ನಲ್ಲಿ ಮತದಾನ ನಡೆಯಲಿದೆ. ’ನಮ್ಮದು ರಾಷ್ಟ್ರೀಯ ಪಕ್ಷವಾಗಿತ್ತು. ಈಗ ನಾವದನ್ನು ವಿಸ್ತರಿಸಲು ಬಯಸುತ್ತೇವೆ’ ಎಂದು ತೇಜಶ್ವಿ ಯಾದವ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಪ.ಬಂಗಾಳ, ಕೇರಳ, ಅಸ್ಸಾಂ, ತ.ನಾಡು, ಪುದುಚೇರಿ ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟ

ಆರ್‌ಜೆಡಿ ಮೂಲಗಳ ಪ್ರಕಾರ, ಅಸ್ಸಾಂನಲ್ಲಿ ಸ್ಪರ್ಧಿಸುವ ಸಾಧ್ಯತೆಯಿದ್ದು, ತೇಜಸ್ವಿ ಯಾದವ್ ಮಿತ್ರಪಕ್ಷಗಳನ್ನು ಹುಡುಕುತ್ತಿದ್ದಾರೆ ಎಂದಿದೆ. ಬಿಹಾರದಂತೆಯೇ, ಅಸ್ಸಾಂನಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಆರು ಪಕ್ಷಗಳ ಮಹಾಘಟಬಂಧನ್ ಇದೆ. ಹೀಗಾಗಿ ಅಸ್ಸಾಂನಲ್ಲಿ ಯಾವುದೇ ನೆಲೆ ಇಲ್ಲದಿದ್ದರೂ ಆರ್‌ಜೆಡಿ ಈ ಮಹಾಘಟಬಂಧನ್‌ಗೆ ಸೇರಲಿದೆ ಎಂಬ ಊಹಾಪೋಹಗಳೂ ಹರಿದಾಡುತ್ತಿವೆ.

ಕಾಂಗ್ರೆಸ್ ಪಕ್ಷ ರಾಷ್ಟ್ರೀಯವಾಗಿ ಆರ್‌ಜೆಡಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಬಿಹಾರ ಮೂಲದ ಆರ್‌ಜೆಡಿ ಪಕ್ಷದ ಸಂಸ್ಥಾಪಕ ಲಾಲು ಪ್ರಸಾದ್ ಯಾದವ್ ಅವರ ಕಾಲದಿಂದಲೂ ಉತ್ತಮ ಸಂಬಂಧವನ್ನು ಉಳಿಸಿಕೊಂಡಿದೆ. ಸದ್ಯ ತೇಜಸ್ವಿ ಯಾದವ್ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. “ನಾವು ಕಾಂಗ್ರೆಸ್‌ನೊಂದಿಗೆ ಉತ್ತಮ ಮೈತ್ರಿ ಹೊಂದಿದ್ದೇವೆ. ಮೈತ್ರಿ ಕುರಿತು ನಾವು ಅವರೊಂದಿಗೆ ಮಾತನಾಡಿದ್ದೇವೆ” ಎಂದು ಮಾತುಕತೆ ಬಳಿಕ ಹೇಳಿದ್ದಾರೆ.

ಇತ್ತ ಕಾಂಗ್ರೆಸ್ ಮೂಲಗಳು ಹೇಳುವಂತೆ, ಅಸ್ಸಾಂನ ಕೆಲವು ಬೃಹತ್ ಭೋಜ್‌ಪುರಿ ಮತಬ್ಯಾಂಕ್‌ಗಳಲ್ಲಿ ಬಿಜೆಪಿಯತ್ತ ಸಾಗಿರುವ ಮತದಾರರಿರುವ ಕಡೆಗಳಲ್ಲಿ ತೇಜಸ್ವಿ ಅವರನ್ನು ಸ್ಟಾರ್ ಪ್ರಚಾರಕರಾಗಿ ಬಳಸಬಹುದು ಎಂದಿದೆ.

ಇದನ್ನೂ ಓದಿ: ತೈಲ ದರ ಹೆಚ್ಚಳ: ಆಟೋ ಎಳೆದ ಶಶಿ ತರೂರ್, ಸೈಕಲ್ ಸವಾರರಾದ ತೇಜಸ್ವಿ ಯಾದವ್

ಆರ್‌ಜೆಡಿ ನಾಯಕ ಬಿಜೆಪಿಯ ಮಾಜಿ ಪಾಲುದಾರ ಹಗ್ರಾಮ ಮೊಹಿಲಾರಿ ನೇತೃತ್ವದ ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ (BPF) ನೊಂದಿಗೆ ಉತ್ತಮ ಸಂಬಂಧವನ್ನು ಉಳಿಸಿಕೊಂಡಿದ್ದಾರೆ. ಫೆಬ್ರವರಿ 10 ರಂದು,  ಹಗ್ರಾಮಾ ಅವರ ಆಹ್ವಾನದ ಮೇರೆಗೆ ತೇಜಸ್ವಿ ಬೋಡೋಲ್ಯಾಂಡ್ ಅಕಾರ್ಡ್ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಆರ್‌ಜೆಡಿ ಇಷ್ಟಕ್ಕೆ ತನ್ನನ್ನು ನಿರ್ಬಂಧಿಸಿಕೊಳ್ಳುತ್ತಿಲ್ಲ. “ಅಸ್ಸಾಂ ಮಾತ್ರವಲ್ಲ, ನಾವು ಬಂಗಾಳ, ಕೇರಳ ಮತ್ತು ಇತರ ರಾಜ್ಯಗಳಿಗೆ ಹೋಗುತ್ತೇವೆ. ಬಿಜೆಪಿ ಮತ್ತು ಅದರ ಮಿತ್ರ ರಾಷ್ಟ್ರಗಳ ವಿರುದ್ಧ ಚುನಾವಣಾ ಪ್ರಚಾರ ಮಾಡಲು ಈ ರಾಜ್ಯಗಳಿಗೆ ಪ್ರಯಾಣಿಸುವುದಾಗಿ ತಿಳಿಸಿದ್ದಾರೆ.

ಅಸ್ಸಾಂ ವಿಧಾನಸಭೆಯ 126 ಸ್ಥಾನಗಳಲ್ಲಿ ಮಾರ್ಚ್ 27 ರಂದು ಮೊದಲ ಹಂತದಲ್ಲಿ 47 ಸ್ಥಾನಗಳಿಗೆ, ಏಪ್ರಿಲ್ 1 ರಂದು 39 ಮತ್ತು ಏಪ್ರಿಲ್ 6 ರಂದು 40 ಸ್ಥಾನಗಳಿಗೆ ಮತದಾನ ನಡೆಯಲಿದೆ. ಎಲ್ಲಾ ಮೂರು ಹಂತಗಳ ಮತಎಣಿಕೆ ಮೇ 2 ರಂದು ನಡೆಯಲಿದೆ.


ಇದನ್ನೂ ಓದಿ: ಬಂಗಾಳದಲ್ಲಿ 8 ಹಂತದ ಚುನಾವಣೆ: ಮೋದಿ, ಶಾ ತಂತ್ರ ಎಂದು ಮಮತಾ ಬ್ಯಾನರ್ಜಿ ಆಕ್ರೋಶ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here