Homeಮುಖಪುಟತಲೆಕೆಳಗಾಗಿರುವುದು ನಾನಲ್ಲ; ನಿಮ್ಮ ಶಿಕ್ಷಣ ವಿಧಾನ: ಕಲಾವಿದನ ಕಲ್ಪನೆ ವೈರಲ್!

ತಲೆಕೆಳಗಾಗಿರುವುದು ನಾನಲ್ಲ; ನಿಮ್ಮ ಶಿಕ್ಷಣ ವಿಧಾನ: ಕಲಾವಿದನ ಕಲ್ಪನೆ ವೈರಲ್!

- Advertisement -
- Advertisement -

ಕೊರೊನಾದಿಂದ ಎಲ್ಲವೂ ತಲೆಕೆಳಗಾಗಿದೆ. ಪ್ರತಿಭಟನೆಯಿಂದ ಹಿಡಿದು ಶಿಕ್ಷಣದವರೆಗೂ ಎಲ್ಲವೂ ಆನ್‌ಲೈನಿನಲ್ಲಿ ಪ್ರಾರಂಭವಾಗಿದೆ. ಶಿಕ್ಷಣ ತಜ್ಞರು ಆನ್‌ಲೈನ್‌ ಶಿಕ್ಷಣ ಪುಟ್ಟ ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಸಾರಿ ಸಾರಿ ಹೇಳುತ್ತಿದ್ದರೂ ಅದನ್ನು ಕಿವಿಗೆ ಹಾಕದೆ ಅದನ್ನೇ ಮುಂದುವರೆಸುತ್ತಿದ್ದಾರೆ.

ಕೇರಳದಲ್ಲೂ ಇದೇ ಪರಿಸ್ಥಿತಿ ಇದ್ದು, ಅಜ್ಜಿಯ ಜೊತೆ ಕುಳಿತು ಆನ್‌ಲೈನ್ ಕ್ಲಾಸ್‌‌ನಲ್ಲಿ ಭಾಗವಹಿಸಿದ್ದ ಪುಟ್ಟ ಬಾಲಕ, ಕ್ಲಾಸ್ ಬಿಟ್ಟು ತಲೆಕೆಳಗಾಗಿ ಬೇರೆಯೆ ಲೋಕದಲ್ಲಿ ವಿಹರಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿತ್ತು.

ವೈರಲಾದ ಚಿತ್ರವನ್ನು ವರ್ಣಚಿತ್ರ ಕಲಾವಿದ ಪ್ರಸೆಲ್ ದಿವಾಕರನ್ ಎಂಬವರು ತನ್ನ ಕಲ್ಪನೆಯನ್ನು ನೀಡಿ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

 

ಚಿತ್ರಕಲಾವಿದ ಈ ಚತ್ರಕ್ಕೆ ’ತಲೆಕೆಳಗಾಗಿರುವುದು ನಾನಲ್ಲ, ನಿಮ್ಮ ಶಿಕ್ಷಣ ವಿಧಾನ’ ಎಂದು ಶಿರ್ಷಿಕೆಯನ್ನೂ ನೀಡಿದ್ದಾರೆ. ಕಲಾವಿದ ಬಿಡಿಸಿರುವ ಚಿತ್ರದಲ್ಲಿ ಬಾಲಕನೂ ಆನ್‌ಲೈನ್ ಕ್ಲಾಸನ್ನು ಬಿಟ್ಟು ತನ್ನದೇ ಲೋಕದಲ್ಲಿ ವಿಹರಿಸುತ್ತಿರುವಂತೆ ಮನೋಜ್ಞವಾಗಿ ಚಿತ್ರಿಸಿದ್ದಾರೆ.

ಪ್ರಸ್ತುತ ಚಿತ್ರವೂ ವೈರಲಾಗಿದ್ದು “ಕಲಾವಿದನ ಕಲ್ಪನೆಗೆ ಮಿತಿ ಎಲ್ಲಿದೆ, ಬಾಲ್ಯದ ಕನಸಿಗೆ ಎಲ್ಲೆ ಎಲ್ಲಿದೆ” ಎಂದು ನೆಟ್ಟಿಗರು ಕಲಾವಿದನ ಕಲ್ಪನೆಯನ್ನು ಪ್ರಶಂಸಿದ್ದಾರೆ.


ಓದಿ: ಕೀಲಾರ ಟೆಂಟ್ ಹೌಸ್-2: ಟೇಸ್ಟ್ ಆಫ್‌ ಚೆರ್ರಿ: ಸಾವು, ನೋವು, ವಿಷಾದಗಳ ಶೋಧದ ಜೊತೆಗೆ ಉದುರಿದ ಚೆರ್ರಿ ಹಣ್ಣುಗಳ.


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋಲ್ಕತ್ತಾ: ನಾಪತ್ತೆಯಾಗಿದ್ದ ಬಾಂಗ್ಲಾದೇಶದ ಸಂಸದನ ಮೃತದೇಹ ತುಂಡರಿಸಿದ ಸ್ಥಿತಿಯಲ್ಲಿ ಪತ್ತೆ

0
ಬಾಂಗ್ಲಾದೇಶದ ಜೆನೈದಾ-4 ಕ್ಷೇತ್ರದ ಸಂಸದ ಅನ್ವರುಲ್ ಅಝೀಂ ಅನಾರ್ ಭಾರತದಲ್ಲಿ ನಾಪತ್ತೆಯಾದ ಎಂಟು ದಿನಗಳ ನಂತರ ಕೊಲ್ಕತ್ತಾ ಪೊಲೀಸರು ಅವರ ಚಿದ್ರಗೊಂಡ ಮೃತದೇಹವನ್ನು ವಶಪಡಿಸಿಕೊಂಡಿದ್ದಾರೆ. ಕೋಲ್ಕತ್ತಾ ಪೊಲೀಸರು ಹತ್ಯೆಯು ಪೂರ್ವ ನಿಯೋಜಿತ ಎಂದು ಹೇಳಿಕೊಂಡಿದ್ದಾರೆ....