Homeಮುಖಪುಟಸತತ 15 ನೇ ದಿನವೂ ಏರಿಕೆ, 2 ವರ್ಷಗಳಲ್ಲೇ ಪೆಟ್ರೋಲ್ ಬೆಲೆ ಅಧಿಕ: ಬೆಂಗಳೂರಿನಲ್ಲಿ 81.44...

ಸತತ 15 ನೇ ದಿನವೂ ಏರಿಕೆ, 2 ವರ್ಷಗಳಲ್ಲೇ ಪೆಟ್ರೋಲ್ ಬೆಲೆ ಅಧಿಕ: ಬೆಂಗಳೂರಿನಲ್ಲಿ 81.44 ರೂ!

- Advertisement -
- Advertisement -

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಭಾನುವಾರವೂ ಹೆಚ್ಚಿಸುವ ಮೂಲಕ ಸತತ 15 ನೇ ದಿನವೂ ಜನಸಾಮಾನ್ಯರ ಮೇಲೆ ಹೊರೆ ಹೆಚ್ಚಿಸಲಾಗಿದೆ. 12 ವಾರಗಳ ವಿರಾಮದ ನಂತರ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ದೈನಂದಿನ ಸಾಮಾನ್ಯ ಅಭ್ಯಾಸಕ್ಕೆ ಮರಳಿದಾಗಿನಿಂದ ಹದಿನೈದನೇ ದಿನದ ನೇರ ಏರಿಕೆ ಕಂಡಿದೆ.

ಇನ್ನು ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 81.44 ರೂ ತಲುಪುವ ಮೂಲಕ ದಾಖಲೆ ಬರೆದಿದೆ. ಡೀಸೆಲ್ ಬೆಲೆಯು ಪೆಟ್ರೋಲ್ ಬೆಲೆಯ ಜಾಗದಲ್ಲಿ ಬಂದು ಕೂತಿದ್ದು 73.86ರೂಗೆ ತಲುಪಿದೆ.

ಇನ್ನು ದೇಶದ ಆರ್ಥಿಕ ರಾಜಧಾನಿ ಎಂದು ಕರೆಸಿಕೊಳ್ಳುವ ಮಹಾರಾಷ್ಟ್ರದ ಮುಂಬೈನಲ್ಲಿ ಪೆಟ್ರೋಲ್ ಬೆಲೆ 86.04ರೂಗೆ ತಲುಪಿದೆ. ಅಲ್ಲಿನ ಜನರಿಗೆ ಕೊರೊನಾ ಜೊತೆಗೆ ಪೆಟ್ರೋಲ್ ಸಹ ಹೊಡೆತ ನೀಡುತ್ತಿದೆ.

ಮಾರ್ಚ್ 14 ರಂದು ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ತಲಾ 3 ರೂ.ಗೆ ಹೆಚ್ಚಿಸಿತ್ತು. ನಂತರ ಮೇ 5 ರಂದು ಪೆಟ್ರೋಲ್‌ಗೆ 10 ರೂ. ಮತ್ತು ಡೀಸೆಲ್‌ಗೆ 13 ರೂ. ಹೆಚ್ಚುವರಿ ತೆರಿಗೆ ವಿಧಿಸಿದೆ.

ಜೂನ್ 7 ರಂದು ತೈಲ ಮಾರುಕಟ್ಟೆ ಕಂಪನಿಗಳು 82 ದಿನಗಳ ವಿರಾಮದ ನಂತರ ನಿರಂತರ ಬೆಲೆ ಏರಿಕೆಗೆ ಮುಂದಾಗಿವೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 41.61 ಡಾಲರ್‌ಗೆ ಏರಿಕೆಯಾಗಿದೆ.


ಇದನ್ನೂ ಓದಿ: ಫ್ಯಾಕ್ಟ್ ಚೆಕ್: ಈ ಚಿತ್ರ ಭಾರತ-ಚೀನಾ ಘರ್ಷಣೆಯಲ್ಲಿ ಗಾಯಗೊಂಡ ಭಾರತೀಯ ಯೋಧನದ್ದೇ ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಆರೋಪಿ ಪ್ರಜ್ವಲ್ ರೇವಣ್ಣಗೆ ಸಿದ್ದರಾಮಯ್ಯ ಕ್ರಿಮಿನಲ್ ಹಣೆಪಟ್ಟಿ ಕಟ್ಟಿದ್ದಾರೆ: ಕುಮಾರಸ್ವಾಮಿ

0
'ಇನ್ನೂ ಆರೋಪಿಯಾಗಿರುವ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಕ್ರಿಮಿನಲ್ ಎಂಬ ಹಣೆಪಟ್ಟಿ ಕಟ್ಟಿದ್ದಾರೆ' ಎಂದು ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಲೈಂಗಿಕ ಹಗರಣದ...