Homeಮುಖಪುಟಅಯೋಧ್ಯೆ ಕಾರ್ಯಕ್ರಮಕ್ಕೆ ರಂಜನ್ ಗೊಗೊಯ್‌ಗಿಲ್ಲ ಆಹ್ವಾನ: ಅನ್ಯಾಯವೆಂದ ಯಶ್ವಂತ್ ಸಿನ್ಹಾ

ಅಯೋಧ್ಯೆ ಕಾರ್ಯಕ್ರಮಕ್ಕೆ ರಂಜನ್ ಗೊಗೊಯ್‌ಗಿಲ್ಲ ಆಹ್ವಾನ: ಅನ್ಯಾಯವೆಂದ ಯಶ್ವಂತ್ ಸಿನ್ಹಾ

2.7 ಎಕರೆ ಪ್ರದೇಶದಲ್ಲಿ ಹರಡಿರುವ ವಿವಾದಿತ ಭೂಮಿಯಲ್ಲಿ ಭವ್ಯ ದೇವಾಲಯ ನಿರ್ಮಾಣಕ್ಕಾಗಿ ಸರ್ಕಾರ ರಚಿಸಿದ ಟ್ರಸ್ಟ್‌ಗೆ ಹಸ್ತಾಂತರಿಸಬೇಕು ಎಂದು ಗೊಗೊಯ್ ನೇತೃತ್ವದ ಸುಪ್ರೀಂ ಕೋರ್ಟ್ ನ್ಯಾಯಪೀಠ ಹೇಳಿತ್ತು..

- Advertisement -
- Advertisement -

ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ದೇವಾಲಯಕ್ಕೆ ಅಡಿಪಾಯ ಹಾಕುವ ಸಮಾರಂಭಕ್ಕೆ, ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರನ್ನು ಆಹ್ವಾನಿಸದಿರುವುದು ‘ಅತ್ಯಂತ ಅನ್ಯಾಯ’ ಎಂದು ಮಾಜಿ ಹಣಕಾಸು ಸಚಿವ ಯಶ್ವಂತ್ ಸಿನ್ಹಾ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 5 ರಂದು ರಾಮ ದೇವಾಲಯಕ್ಕೆ ಅಡಿಪಾಯ ಹಾಕಲಿದ್ದಾರೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿರುವ ಯಶ್ವಂತ್ ಸಿನ್ಹಾ ಈ ಕುರಿತು ಟ್ವೀಟ್ ಮಾಡಿದ್ದಾರೆ.

ಕಳೆದ ವರ್ಷ ಸಿಜೆಐ ಗೊಗೊಯಿ ನೇತೃತ್ವದ ಐದು ನ್ಯಾಯಾಧೀಶರ ಸುಪ್ರೀಂ ಕೋರ್ಟ್ ಪೀಠವು ಹಿಂದೂಗಳ ಪರವಾಗಿ ತೀರ್ಪು ನೀಡಿತ್ತು. ಆದರೆ ಅವರನ್ನೆ ಕಾರ್ಯಕ್ರಮಕ್ಕೆ ಆಹ್ವಾನಿಸದಿರುವುದು ಸರಿಯಲ್ಲ ಎಂದು ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ.

2.7 ಎಕರೆ ಪ್ರದೇಶದಲ್ಲಿ ಹರಡಿರುವ ವಿವಾದಿತ ಭೂಮಿಯಲ್ಲಿ ಭವ್ಯ ದೇವಾಲಯ ನಿರ್ಮಾಣಕ್ಕಾಗಿ ಸರ್ಕಾರ ರಚಿಸಿದ ಟ್ರಸ್ಟ್‌ಗೆ ಹಸ್ತಾಂತರಿಸಬೇಕು ಎಂದು ಗೊಗೊಯ್ ನೇತೃತ್ವದ ಸುಪ್ರೀಂ ಕೋರ್ಟ್ ನ್ಯಾಯಪೀಠ ಹೇಳಿತ್ತು..

ಗೊಗೊಯ್ ನಿವೃತ್ತಿಯ ನಂತರ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಲಾಗಿದೆ.

ಅಯೋಧ್ಯೆಯಲ್ಲಿನ ವಿವಾದಾತ್ಮಕ ತಾಣದ ಮೊಕದ್ದಮೆಯನ್ನು ಹಿಂದೂಗಳ ಪರವಾಗಿ ತೀರ್ಪು ನೀಡುವಲ್ಲಿ ಅವರ ನೇತೃತ್ವದ ನ್ಯಾಯಪೀಠದ ಪಕ್ಷಪಾತತೆಯ ಬಗ್ಗೆ ಇದು ಅನೇಕರ ಟೀಕೆಗೆ ಗುರಿಯಾಗಿತ್ತು.

ಗೋಗೊಯ್ ಅವರು ಸದಸ್ಯರಾಗಿ ಭಾರತೀಯ ಸಂಸತ್ತಿನ ಮೇಲ್ಮನೆಗೆ ಹೋಗುವುದನ್ನು ವಿರೋಧಿಸಿದವರಲ್ಲಿ ಯಶ್ವಂತ್ ಸಿನ್ಹಾ ಸಹ ಒಬ್ಬರಾಗಿದ್ದರು.

“ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರಿಗೆ ರಾಜ್ಯಸಭಾ ಸ್ಥಾನವನ್ನು ನೀಡಿದಾಗ “ಇಲ್ಲ”ಎಂದು ಹೇಳಲು ಅವರಿಗೆ ಪ್ರಜ್ಞೆ ಇತ್ತು ಎಂದು ನಾನು ಭಾವಿಸುತ್ತೇನೆ” ಎಂದು ಸಿನ್ಹಾ ಟ್ವೀಟ್ ಮಾಡಿದ್ದರು.


ಇದನ್ನೂ ಓದಿ: ಗೊಗೋಯ್ ಬಿಜೆಪಿ ರಾಜಕಾರಣ ಈ ಇಬ್ಬರು ‘ನ್ಯಾಯ’ ಪಟುಗಳು ಏನು ಹೇಳ್ತಾರೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read