Homeಮುಖಪುಟಹೊಂಬಾಳೆ - 2: ಕಂದಾಯ ಇಲಾಖೆ ಕೈಯಲ್ಲಿ ರೈತನ ಜುಟ್ಟು - ನಳಿನಿ ಕೋಲಾರ

ಹೊಂಬಾಳೆ – 2: ಕಂದಾಯ ಇಲಾಖೆ ಕೈಯಲ್ಲಿ ರೈತನ ಜುಟ್ಟು – ನಳಿನಿ ಕೋಲಾರ

ಹಕ್ಕು ಪತ್ರಕ್ಕಾಗಿ, ಸಾಗುವಳಿ ಚೀಟಗಾಗಿ, ಖಾತೆ ಬದಲಾವಣೆಗಾಗಿ ಅಂಗಲಾಚುತ್ತಿರುವವರು, ಅಲ್ಲದೆ ಪಹಣಿಯಲ್ಲಿ ಬೆಳೆ ನಮೂದಾತಿಯಿಲ್ಲದೆ ಒದ್ದಾಡುತ್ತಿರುವ ನೂರಾರು ರೈತರನ್ನು ನಾವು ನೋಡಬಹುದು.

- Advertisement -
- Advertisement -
  • ನಳಿನಿ ಕೋಲಾರ. ಯುವ ರೈತ ಹೋರಾಟಗಾರ್ತಿ.

ಅನಾದಿ ಕಾಲದಿಂದಲು ಇಂದಿನ ಕಾಲದವರೆಗೂ ಕಂದಾಯ ಇಲಾಖೆಯು ರೈತನ ಜುಟ್ಟನ್ನು ಬಿಗಿಯಾಗಿ ಹಿಡಿದು ಕುಳಿತಿದೆ ಎಂದರೆ ತಪ್ಪಾಗಲಾರದು. ಈ ವ್ಯವಸ್ಥೆಯಲ್ಲಿರುವ ಲೋಪಗಳನ್ನು ಖಂಡಿಸಿ ಹತಾಶರಾಗಿ ಏನು ಮಾಡಲಾಗದ ಅಸಹಾಯಕರಾಗಿ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನಾವು ನೋಡಬಹುದು. ರಾಮನಗರದ ರೈತನೊಬ್ಬ ಕಂದಾಯ ಇಲಾಖೆಯಿಂದ ತನ್ನ ಕೆಲಸ ಮಾಡಿಸಿಕೊಳ್ಳಲು ಸಾಧ್ಯವಾಗದೆ ಬೇಸತ್ತು, 7-3-2013 ರಂದು ತಾಲ್ಲೂಕು ಕಛೇರಿಯ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ಘಟನೆ ನಡೆದು 7 ವರ್ಷಗಳ ಕಳೆದರೂ ಕಂದಾಯ ಇಲಾಖೆಯ ಪರಿಸ್ಥಿತಿಯಲ್ಲಿ ಏನಾದರೂ ಬದಲಾವಣೆ ಬಂದಿದೆಯೇ? ಇಲ್ಲ ಇನ್ನು ಲೋಪಗಳು ಹೆಚ್ಚಾಗುತ್ತಲೇ ಇವೆ.

ಇದು ಕೇವಲ ಒಬ್ಬ ಗಂಗಯ್ಯನ ವಿಷಯ ಮಾತ್ರವಲ್ಲ. ಅವರ ಹಾಗೆ ಸುಮಾರಷ್ಟು ರೈತರು ಈ ವ್ಯವಸ್ಥೆಯನ್ನು ಸರಿಪಡಿಸಲು ಪ್ರಾಣತ್ಯಾಗ ಮಾಡಿದ್ದಾರೆ. ಆದರೂ ಈ ಸಮಾಜವನ್ನು ಸರಿಪಡಿಸಲು ಆಗಿಲ್ಲ. ಪ್ರಾಣತ್ಯಾಗಕ್ಕೆ ಬೆದರದ ಪಂಚೇಂದ್ರಿಯಗಳಿಲ್ಲದ ದಪ್ಪ ಚರ್ಮದ ಈ ವ್ಯವಸ್ಥೆ ಮತ್ತೆ ಯಾವ ತ್ಯಾಗದಿಂದ ಸರಿಪಡಿಸಲು ಸಾಧ್ಯ?

ಸರ್ಕಾರದ ಕಾನೂನು ಮತ್ತು ಕಂದಾಯ ಇಲಾಖೆಯ ನಡುವೆ ರೈತರು ದಿನದಿಂದ ದಿನಕ್ಕೆ ನಲುಗುತ್ತಿದ್ದಾರೆ. ಉದಾಹರಣೆಗೆ ಭೂರಹಿತರಿಗೆ ಭೂಮಿಸಿಗಲೆಂದು ಜಾರಿಮಾಡಿದ ನಮೂನೆ 53,57 ವರ್ಷಗಳೇ ಕಳೆದರೂ ಇದುವರೆಗೂ ಕಾರ್ಯಗತವಾಗಿಲ್ಲ. ಅರ್ಜಿ ಸಲ್ಲಿಸಿದ ನಂತರ ರೈತರು ಕಛೇರಿಯಿಂದ ಕಛೇರಿಗೆ ಅಲೆದು ಅಲೆದು ಅವನ ಚಪ್ಪಲಿ ಸವೆಯುತ್ತದೆಯೇ ಹೊರೆತು ಕೆಲಸ ಮಾತ್ರ ಆಗಿರುವುದಿಲ್ಲ. ಇದಕ್ಕಾಗಿ ಸಂಬಂದಪಟ್ಟ ಆಧಿಕಾರಿಗಳನ್ನು ಕೇಳಿದರೆ ನಮಗೆ ಯಾವುದೇ ಆದೇಶ ಬಂದಿಲ್ಲ ಅಥವಾ ಶಾಸಕರಿಂದ ಲೆಟರ್ ಬೇಕು ಎಂಬಂತೆ ಇನ್ನಿತರ ಸಬೂಬುಗಳನ್ನು ಹೇಳುತ್ತಾರೆ. ಈ ಹಿಂದೆ ನಮೂನೆ 50ರಲ್ಲಿ ಜಮೀನು ಮಂಜೂರಾಗಿರುವ ರೈತರು ಸಾಗುವಳಿ ಚೀಟಿ ಪಡೆಯಲು ಇನ್ನಿಲ್ಲದ ಕಷ್ಟ ಎದುರಿಸುತ್ತಿದ್ದಾರೆ.

ಕಂದಾಯ ಇಲಾಖೆ ಮತ್ತು ಸರ್ವೆ ಇಲಾಖೆ ಇವೆರಡೂ ರೈತರಿಗೆ ಎರಡು ಜೊಡೆತ್ತುಗಳಿದ್ದ ಹಾಗೆ. ಆದರೆ ಒಬ್ಬ ರೈತ ತನ್ನ ಜಮೀನನ್ನು ಸರ್ವೆ ಮಾಡಿಸಬೇಕಾದರೆ ಸರ್ಕಾರಿ ಶುಲ್ಕ ಪಾವತಿಸಿ, ಅರ್ಜಿ ಸಲ್ಲಿಸಿದ ನಂತರ ಕನಿಷ್ಠ 6 ತಿಂಗಳಿನಿಂದ ಒಂದು ವರ್ಷವಾದರೂ ಕಾಯಬೇಕಾಗುತ್ತದೆ. ಜೊತೆಗೆ ಸಣ್ಣ ಪುಟ್ಟ ತೊಂದರೆಗಳೇನಾದರೂ ಇದ್ದು ತಿದ್ದುಪಡಿಗಳಿದ್ದರೆ ಆ ರೈತನ ಕಥೆ ಮುಗಿದೇ ಹೋಯಿತು. ಸುಮಾರು 2-3 ವರ್ಷಗಳಾದರೂ ಸರ್ವೆ ಇಲಾಖೆಯಿಂದ ಕಂದಾಯ ಇಲಾಖೆಗೆ ಅಲೆದು ಅಲೆದು ಸುಸ್ತಾಗಿ ಕೈಬಿಟ್ಟ ಪ್ರಕರಣಗಳಿಗೆ ಲೆಕ್ಕವಿಲ್ಲ. ಇನ್ನೂ ಬಡ ರೈತನ ಪಾಡಂತೂ ಕೇಳುವುದೇ ಬೇಡ. ಈ ರೈತರ ಜಮೀನು ಸರ್ವೆ ಮಾಡಿಸುವುದು ಕನಸಾಗಿಯೇ ಉಳಿದಿರುತ್ತದೆ.

ಭೂಗಳ್ಳರ ಮನೆ ಬಾಗಿಲಿಗೆ ಸೇವೆ

ಇಂದು ಅಧಿಕಾರಿಗಳು, ಉಳ್ಳವರು, ಜನಪ್ರತಿನಿಧಿಗಳು, ಅವರ ಹಿಂಬಾಲಕರು ಮತ್ತು ಭೂಗಳ್ಳರ ದಾಖಲೆಗಳು ಅಕ್ರಮವಾಗಿದ್ದರೂ ಸಹ ರಾತ್ರೊ ರಾತ್ರಿ ಸಿದ್ದವಾಗುತ್ತವೆ. ಅವರಿಗೆ ಯಾವುದೇ ಕಾನೂನು ನಿಯಮಗಳು ಅಡ್ಡಿಯಾಗುವುದಿಲ್ಲ. ಇದು ಇಂದಿನ ಕಂದಾಯ ಮತ್ತು ಸರ್ವೆ ಇಲಾಖೆಯ ಪರಿಸ್ಥಿತಿ. ಇನ್ನೂ ಮುಂದುವರೆದು ನೋಡುವುದಾದರೆ ಸರ್ಕಾರದಿಂದ ಬರುವ ಪರಿಹಾರಗಳು ಬಂದರೆ ಅದನ್ನು ರೈತನ ಖಾತೆಗೆ ಜಮಾ ಮಾಡಲು ಇಲಾಖೆಯಲ್ಲಿ ರೈತರ ಮಾಹಿತಿಯೇ ಇರುವುದಿಲ್ಲ. 1947 ಕ್ಕಿಂತ ಹಿಂದಿನಿಂದಲೂ ರೈತರಾಗಿದ್ದರೂ ಸಹ ರೈತರ ಮಾಹಿತಿ ಮಾತ್ರ ಕಂದಾಯ ಇಲಾಖೆಯಲ್ಲಿರುವುದಿಲ್ಲ. ಬೆಳೆ ದರ್ಶಕ್ ಆಪ್‌ನಲ್ಲಿ ಪ್ರತಿ ರೈತನ ವಿವರ, ಬೆಳೆ, ಸರ್ವೆ ನಂಬರ್ ಸಮೇತ Upload ಮಾಡುವುದು ಕಡ್ಡಾಯ. ಆದರೆ ಅಧಿಕಾರಿಗಳು ಸ್ಥಳಪರಿಶೀಲನೆ ಮಾಡಿ ನಿಖರ ದಾಖಲೆಳನ್ನು ನೀಡುವುದರ ಬದಲು ಮನಬಂದಂತೆ ಮಾಹಿತಿಗಳನ್ನು Upload ಮಾಡಿರುತ್ತಾರೆ.

ಸರ್ಕಾರ ಯಾವುದಾದರೂ ಯೋಜನೆ ಜಾರಿ ಮಾಡಿದರೆ ಆಗ ಇಲಾಖೆ ರೈತರಿಂದ ಅರ್ಜಿ ಕರೆಯುತ್ತದೆ. ಕೊರೊನಾ ಸಂದರ್ಭದಲ್ಲಿಯೂ ಹೂಬೆಳೆ, ತರಕಾರಿಗಳಿಗೆ ಪರಿಹಾರ ಘೋಷಣೆ ಮಾಡಿದಾಗ ನಮ್ಮ ಕಣ್ಣು ಮುಂದೆಯೇ ರೈತರು ಅರ್ಜಿ ಫಾರಂ ಹಿಡಿದು ಕಛೇರಿ ಮುಂದೆ ದಿನಗಟ್ಟಲೆ ನಿಂತು ಕಾದಿರುವುದನ್ನು ನೊಡಿದ್ದೇವೆ. ಇದಕ್ಕೆಲ್ಲಾ ಕಾರಣ ಕಂದಾಯ ಇಲಾಖೆ ಸಮರ್ಪಕ ಬೆಳೆ ಸಮೀಕ್ಷೆ ಮಾಡದೇ ಇರುವುದು. ಇದರಿಂದ ಕಟ್ಟಕಡೆಯ ರೈತನಿಗೆ ಪರಿಹಾರ ಸಿಗುವುದಿಲ್ಲ.

ಹಿಂದಿನ ಕಂದಾಯ ಇಲಾಖೆಗೂ ಈಗಿನ ಕಂದಾಯ ಇಲಾಖೆಗೂ ಬಹಳ ವ್ಯತ್ಯಾಸ ಕಂಡುಬರುತ್ತದೆ. ಹೇಗೆಂದರೆ ಹಿಂದಿನ ನಮ್ಮ ತಾತಂದಿರ ಕಾಲದಲ್ಲಿ ಅಧಿಕಾರಿಗಳು ಸ್ವಲ್ಪ ಮಟ್ಟಿಗಾದರೂ ರೈತರ ಕೆಲಸಗಳನ್ನು ಮಾಡುತ್ತಿದ್ದರು. ಆದರೆ ಈಗಿನ ಕಂದಾಯ ಇಲಾಖೆ ಶ್ರೀಮಂತರು, ಉಳ್ಳವರ ಪರವಾಗಿ ಮಾತ್ರ ಕೆಲಸ ಮಾಡುತ್ತಿದೆ. ಬಡ ರೈತರು ಪ್ರತಿದಿನವೂ ಕಛೇರಿಗಳಿಗೆ ಅಲೆದು ಅಲೆದು ಸುಸ್ತಾದರೂ ಅವರ ಮಕ್ಕಳ ಕಾಲಕ್ಕೂ ಸಹ ಕೆಲಸವಾಗಿರುವುದಿಲ್ಲ.

ರಾಜ್ಯದ ಯಾವುದೇ ತಾಲ್ಲೂಕು ಕಛೇರಿ ಬಾಗಿಲಿಗೆ ಹೋಗಿ ನಿಂತರೆ ಸಾಕು, ಹಲವು ತರಹದ ಕತೆಗಳು ಕಣ್ಣಿಗೆ ರಾಚುತ್ತವೆ. ಹಕ್ಕು ಪತ್ರಕ್ಕಾಗಿ, ಸಾಗುವಳಿ ಚೀಟಗಾಗಿ, ಖಾತೆ ಬದಲಾವಣೆಗಾಗಿ ಅಂಗಲಾಚುತ್ತಿರುವವರು, ಅಲ್ಲದೆ ಪಹಣಿಯಲ್ಲಿ ಬೆಳೆ ನಮೂದಾತಿಯಿಲ್ಲದೆ ಒದ್ದಾಡುತ್ತಿರುವ ನೂರಾರು ರೈತರನ್ನು ನಾವು ನೋಡಬಹುದು.

ಹೌದು ಪಹಣಿಯಲ್ಲಿ ಬೆಳೆಯಿಲ್ಲ ಎಂಬುದು ರೈತನ ಪಾಲಿನ ದೊಡ್ಡ ಸಮಸ್ಯೆಯಾಗಿದೆ. ಇದರಿಂದ ಸರ್ಕಾರಿ ಸವಲತ್ತುಗಳನ್ನು ಪಡೆಯಲು ಹರಸಹಾಸ ಪಡಬೇಕಾಗಿದೆ.
ಕಂದಾಯ ಇಲಾಖೆಯಂತೆ ಈಗಿನ ಸರ್ಕಾರಗಳು ಸಹ ದಪ್ಪ ಚರ್ಮದವು. ಕಂದಾಯ ಇಲಾಖೆಯ ತಪ್ಪುಗಳನ್ನು ಪತ್ರಿಕೆಗಳ ಮುಖಾಂತರ ಸರ್ಕಾರದ ಗಮನಕ್ಕೆ ತಂದರೆ ಸಂಬಂಧಪಟ್ಟ ಸರ್ಕಾರಗಳು ನಮಗೂ ಅದಕ್ಕೂ ಸಂಬಂಧವಿಲ್ಲ ಅನ್ನುವ ರೀತಿಯಲ್ಲಿ ವರ್ತಿಸುತ್ತಿವೆ.

ಹಳ್ಳಿಯ ಗ್ರಾಮ ಸಹಾಯಕರಿಂದ ಹಿಡಿದು ಜಿಲ್ಲಾಧಿಕಾರಿಗಳನ್ನು ಕಾಣಲು ದಲ್ಲಾಳಿಗಳ ಮೂಲಕ ಹೋದರೆ ಮಾತ್ರ ಕಾಣಬಹುದು ಪರಿಸ್ಥಿತಿ ಇಂದು ಎಲ್ಲಾ ಜಿಲ್ಲೆಗಳಲ್ಲಿ ನಿರ್ಮಾಣವಾಗಿದೆ. ಪ್ರತಿ ಕೆಲಸಕ್ಕೂ ಮಧ್ಯವರ್ತಿಗಳ ಕಾಟವಿದೆ. ಕೆಲವು ಕಛೇರಿಗಳಂತೂ ದಲ್ಲಾಳಿಗಳೇ ಅಧಿಕಾರಿಗಳಾಗಿರುತ್ತಾರೆ. ಅಧಿಕಾರಿ ಸಹಿ ಮಾಡುವುದು ಬಿಟ್ಟರೆ ಉಳಿದ ಎಲ್ಲವನ್ನು ದಲ್ಲಾಳಿಗಳೇ ಮಾಡುತ್ತಿದ್ದಾರೆ. ದಲ್ಲಾಳಿಗಳು ಹೇಳಿದ ಹಾಗೆ ಅಧಿಕಾರಿಗಳು ಕೇಳುವ ಪರಿಸ್ಥಿತಿ ಇದೆ. ಇವರ ಕಮಿಷನ್ ಕೊಡಲಾಗದೆ ರೈತರು ಕಂಗಾಲಾಗಿದ್ದಾರೆ.

ಈಗ ಕಂದಾಯ ಇಲಾಖೆಯ ಈ ಸರ್ವಾಧಿಕಾರವನ್ನು ಕೊನೆಗಾಣಿಸಬೇಕಾಗಿದೆ. ಇದಕ್ಕಾಗಿ ರೈತರು ಒಗ್ಗಟ್ಟಾಗಬೇಕಿದೆ. ಇಲ್ಲದಿದ್ದಲ್ಲಿ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಕೊಳ್ಳುವುದು ಖಚಿತ. ಸರ್ಕಾರಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲು ದೊಡ್ಡ ಹೋರಾಟದ ಅನಿವಾರ್ಯತೆ ಇದೆ.


ಇದನ್ನೂ ಓದಿ: ಹೊಂಬಾಳೆ-1: ದೇಶದ ಅನ್ನದ ಬಟ್ಟಲನ್ನೇ ಮಾರಲು ಹೊರಟರೆ ಕೊನೆಗೆ ಏನು ಉಳಿದೀತು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ರೈತನನ್ನ ಮಾತಿಗಷ್ಟೆ ದೇಶದ ಬೆನ್ನೆಲುಬು ಎನ್ನುತ್ತಾರೆ ಅದರೆ ಅವನ ಎಲುಬುಗಳನ್ನೆ ಮುರಿದು ಹಾಕುತ್ತಿದ್ದಾರೆ

LEAVE A REPLY

Please enter your comment!
Please enter your name here

- Advertisment -

ಉಪಚುನಾವಣೆ : ಬಿಹಾರದ ಬಂಕಿಪುರದಲ್ಲಿ ಪ್ರಶಾಂತ್ ಕಿಶೋರ್‌ಗೆ ಐತಿಹಾಸಿಕ ಗೆಲುವು; ಇನ್ನೆರಡು ಕ್ಷೇತ್ರಗಳು ಕಾಂಗ್ರೆಸ್-ಬಿಜೆಪಿ ಪಾಲು

ಬಿಹಾರದ ಬಂಕಿಪುರ, ಗುಜರಾತ್‌ನ ಮಂಜಲ್‌ಪುರ ಮತ್ತು ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರಗಳಿಗೆ ಜುಲೈ 30ರಂದು ನಡೆದ ಉಪಚುನಾವಣೆಯ ಫಲಿತಾಂಶ ಸೋಮವಾರ (ಆ.3) ಹೊರಬಿದ್ದಿದ್ದಿದೆ. ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿದ್ದ, ಕಳೆದ 31 ವರ್ಷಗಳಿಂದ ಬಿಜೆಪಿಯೇ...

‘ಪಂಕ್ಚರ್-ತಲಾ ಬನಾನೆ ವಾಲೆಗಳೇ ಹೆಚ್ಚು’: ನೀಟ್ ಅಕ್ರಮಗಳ ವಿರುದ್ಧ ಪ್ರತಿಭಟಿಸಿದವರ ವಿರುದ್ಧ ನಾಲಿಗೆ ಹರಿಬಿಟ್ಟ ಬಿಜೆಪಿ ನಾಯಕ ರಮೇಶ್ ಬಿಧು

ದೆಹಲಿಯ ಜಂತರ್ ಮಂತರ್‌ನಲ್ಲಿ ‘ನೀಟ್’ (NEET) ಪರೀಕ್ಷೆಯ ಅಕ್ರಮಗಳ ವಿರುದ್ಧ ಧ್ವನಿಯೆತ್ತಿದ ಯುವಜನತೆ ಮತ್ತು ವಿದ್ಯಾರ್ಥಿಗಳ ಹೋರಾಟವನ್ನು ದಮನ ಮಾಡಲು ಯತ್ನಿಸುತ್ತಿರುವ ಬಿಜೆಪಿ, ಈಗ ಅವರ ವಿರುದ್ಧವೇ ಅತ್ಯಂತ ಕೀಳುಮಟ್ಟದ ಇಸ್ಲಾಮೋಫೋಬಿಕ್ ಮತ್ತು...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಖುಲಾಸೆ : ಇಡೀ ವ್ಯವಸ್ಥೆಯೇ ಬ್ರಿಜ್ ಭೂಷಣ್‌ರನ್ನು ರಕ್ಷಿಸಿತು ಎಂದ ವಿನೇಶ್ ಫೋಗಟ್; ಮೇಲ್ಮನವಿ ಸಲ್ಲಿಸಲು ಮಹಿಳಾ ಕುಸ್ತಿಪಟುಗಳ ನಿರ್ಧಾರ

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ದೆಹಲಿಯ ರೋಸ್...

ಕರ್ನಾಟಕದಲ್ಲಿ SIR ಬಿಹಾರ-ಬಂಗಾಳಕ್ಕಿಂತ ಭೀಕರ: ಆಗಸ್ಟ್ 4 ರಂದು ಜನಪರ ಸಂಘಟನೆಗಳಿಂದ ಮಹತ್ವದ ಮಾಧ್ಯಮಗೋಷ್ಠಿ

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್‌ಐಆರ್ (SIR) ಪ್ರಕ್ರಿಯೆಯು ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗಿಂತಲೂ ಅತ್ಯಂತ ಭೀಕರ ರೂಪ ಪಡೆದುಕೊಳ್ಳುತ್ತಿದೆ ಎಂದು 'SIR ವಿರೋಧಿ ಜಾತ್ಯತೀತ ಪಕ್ಷಗಳು ಮತ್ತು ಜನಪರ ಸಂಘಟನೆಗಳ ಒಕ್ಕೂಟ'...

“ನೈರ್ಮಲ್ಯ ಕಾರ್ಮಿಕರು ಕೆಲಸ ಬಿಡಲು ಸಾಧ್ಯವಿಲ್ಲ”: ದೇಶಾದ್ಯಂತ ಪ್ರತಿಭಟನೆಗೆ DASAM ಬೆಂಬಲ, ಉದ್ಯೋಗ ಖಾಯಂಗೊಳಿಸಲು ತೀವ್ರ ಒತ್ತಾಯ

ನವದೆಹಲಿ: ಉದ್ಯೋಗ ಕ್ರಮಬದ್ಧಗೊಳಿಸುವಿಕೆ (ಖಾಯಂಗೊಳಿಸುವುದು), ನ್ಯಾಯಯುತ ವೇತನ, ಸಾಮಾಜಿಕ ಭದ್ರತೆ, ಸುರಕ್ಷಿತ ಕೆಲಸದ ವಾತಾವರಣ ಮತ್ತು ಕೆಲಸದ ಸ್ಥಳದಲ್ಲಿ ಮಾನವ ಘನತೆಯನ್ನು ಎತ್ತಿಹಿಡಿಯುವಂತೆ ಒತ್ತಾಯಿಸಿ ದೇಶದ ನಾನಾ ಭಾಗಗಳಲ್ಲಿ ನೈರ್ಮಲ್ಯ ಕಾರ್ಮಿಕರು ನಡೆಸುತ್ತಿರುವ...

ದ್ವೇಷ ಭಾಷಣ ಪ್ರಕರಣ: ಬಿಜೆಪಿ ನಾಯಕರಾದ ಅನುರಾಗ್‌ ಠಾಕೂರ್‌, ಪರ್ವೇಶ್‌ ವರ್ಮಾಗೆ ಕ್ಲೀನ್ ಚೀಟ್: ಪುನರ್ ಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂ

ನವದೆಹಲಿ: 2020ರ ದೆಹಲಿಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಉದ್ರೇಕಕಾರಿ ಹಾಗೂ ದ್ವೇಷಪೂರಿತ ಭಾಷಣ ಮಾಡಿದ ಆರೋಪ ಹೊತ್ತಿದ್ದ ಬಿಜೆಪಿ ನಾಯಕರಾದ ಅನುರಾಗ್ ಠಾಕೂರ್ ಮತ್ತು ಪರ್ವೇಶ್‌...

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: ನೂತನ ಸಚಿವರ ಪಟ್ಟಿಗೆ ವರಿಷ್ಠರ ಅನುಮೋದನೆ: ಇಂದು ಸಂಜೆ 4:05 ಕ್ಕೆ ಪ್ರಮಾಣ ವಚನ

ಬಹುನಿರೀಕ್ಷಿತ ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ನೂತನ ಸಚಿವರ ಪಟ್ಟಿಗೆ ಅಧಿಕೃತ ಅನುಮೋದನೆ ನೀಡಿದೆ. ಇದರೊಂದಿಗೆ ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ತೀವ್ರ...

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಪ್ರಕರಣ : WFI ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್‌ ಸಿಂಗ್‌ ಖುಲಾಸೆ

ದೆಹಲಿ ನ್ಯಾಯಾಲಯವು ಸೋಮವಾರ (ಆ.3) ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ನಾಯಕ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಪ್ರಕರಣದಿಂದ...

ಪ್ರಶ್ನೆ ಪತ್ರಿಕೆ ಸೋರಿಕೆ : ಫಾಸ್ಟ್‌ ಟ್ರ್ಯಾಕ್ ಕೋರ್ಟ್ ನ್ಯಾಯಾಧೀಶೆ ಒಂದೇ ವಾರದಲ್ಲಿ ವರ್ಗಾವಣೆ

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ವಿಚಾರಣೆಗಾಗಿ ಸ್ಥಾಪಿಸಲಾದ ತ್ವರಿತಗತಿ (ಫಾಸ್ಟ್‌ ಟ್ರ್ಯಾಕ್) ನ್ಯಾಯಾಲಯದ ನೇತೃತ್ವ ವಹಿಸಲು ನೇಮಕಗೊಂಡ ಕೇವಲ ಒಂದು ವಾರದ ನಂತರ, ದೆಹಲಿ ಹೈಕೋರ್ಟ್ ಶನಿವಾರ (ಆಗಸ್ಟ್ 1) ವಿಶೇಷ ನ್ಯಾಯಾಧೀಶರಾದ...

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...